Breaking News
Home / featured / ಎಂ.ಬಿ.ಪಾಟೀಲ್ ರ ವಿರುದ್ಧ ನಕಲಿ ಲೆಟರ್ ಹೆಡ್ ಬಳಸಿದ ‘ಪೋಸ್ಟ್ ಕಾರ್ಡ್’ ಸ್ಥಾಪಕ ಮಹೇಶ್ ವಿಕ್ರಂ ಹೆಗ್ಡೆ ಸಿಐಡಿ ವಶಕ್ಕೆ?

ಎಂ.ಬಿ.ಪಾಟೀಲ್ ರ ವಿರುದ್ಧ ನಕಲಿ ಲೆಟರ್ ಹೆಡ್ ಬಳಸಿದ ‘ಪೋಸ್ಟ್ ಕಾರ್ಡ್’ ಸ್ಥಾಪಕ ಮಹೇಶ್ ವಿಕ್ರಂ ಹೆಗ್ಡೆ ಸಿಐಡಿ ವಶಕ್ಕೆ?

ನಕಲಿ ಲೆಟರ್ ಹೆಡ್ ಬಳಸಿ ಎಂ.ಬಿ.ಪಾಟೀಲ್ ವಿರುದ್ಧ ಅಪಪ್ರಚಾರ ಆರೋಪ

‘ಪೋಸ್ಟ್ ಕಾರ್ಡ್’ ಸ್ಥಾಪಕ ಮಹೇಶ್ ವಿಕ್ರಂ ಹೆಗ್ಡೆ ಸಿಐಡಿ ವಶಕ್ಕೆ?

ಬೆಂಗಳೂರು, ಎ.24: ವಿಜಯಪುರದ ಬಿಎಲ್ ಇಡಿ ಸಂಸ್ಥೆಯ ನಕಲಿ ಲೆಟರ್ ಹೆಡ್ ಸೃಷ್ಟಿಸಿ, ನಕಲಿ ಸಹಿ ಬಳಸಿ ಅಪಪ್ರಚಾರ ನಡೆಸಿದ ಆರೋಪದಲ್ಲಿ ನಕಲಿ ಸುದ್ದಿಗಳಿಂದ ಕುಖ್ಯಾತಿ ಪಡೆದಿರುವ ವೆಬ್ ಸೈಟ್ ‘ಪೋಸ್ಟ್ ಕಾರ್ಡ್’ ಸ್ಥಾಪಕ ಮಹೇಶ್ ವಿಕ್ರಂ ಹೆಗ್ಡೆಯನ್ನು ಸಿಐಡಿ ಸೈಬರ್ ವಿಂಗ್‌ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

2017ರ ಜುಲೈ 10ರಂದು ಸೋನಿಯಾ ಗಾಂಧಿಯವರಿಗೆ ಎಂ.ಬಿ. ಪಾಟೀಲ್ ಪತ್ರ ಬರೆದು ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ತಿಳಿಸಿದ್ದರು ಎಂದು ಪತ್ರಿಕೆಯೊಂದರಲ್ಲಿ ಪ್ರಕಟಗೊಂಡ ಲೇಖನದಲ್ಲಿ ಆರೋಪಿಸಲಾಗಿತ್ತು. ಈ ಬಗ್ಗೆ ಎಂ.ಬಿ. ಪಾಟೀಲ್ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ್ದರು.

ಗೃಹ ಸಚಿವರ ವಿರುದ್ಧ ಷಡ್ಯಂತ್ರ ರೂಪಿಸುವುದಕ್ಕಾಗಿ ನಕಲಿ ಲೆಟರ್ ಹೆಡ್ ಮತ್ತು ನಕಲಿ ಸಹಿ ಬಳಸಲಾಗಿದೆ ಎಂದು ಆರೋಪಿಸಲಾಗಿದ್ದು, ಈ ವಿಚಾರ ಭಾರೀ ವಿವಾದ ಸೃಷ್ಟಿಸಿತ್ತು. ಗೃಹ ಸಚಿವರ ದೂರಿನ ನಂತರ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿತ್ತು ಎನ್ನಲಾಗಿದ್ದು, ಇದೀಗ ಮಹೇಶ್ ವಿಕ್ರಂ ಹೆಗ್ಡೆಯನ್ನು ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

‘ಶರಣಾರ್ಥಿ’ ಗುರು ಪ್ರವೇಶ..!

  ಗಜೇಂದ್ರಗಡದ ಶರಣದಂಪತಿಗಳು ನೂತನ ಮನೆಗೆ ‘ಶರಣಾರ್ಥಿ’ ಎಂದು ವಿಶಿಷ್ಟ ರೀತಿಯಲ್ಲಿ ಮನೆ ನಾಮಕರಣ ಮಾಡಿ ಗುರುಪ್ರವೇಶ, ಅನುಭಾವ ಹಾಗೂ …

Leave a Reply

Your email address will not be published. Required fields are marked *

error: Content is protected !!