ಚಿಕ್ಕೊಪ್ಪ ಗುರುಬಸವಾನುಭ ಮಂಟಪದಲ್ಲಿ ನಡೆದ ಉಚಿತ ಸಾಮೊಹಿಕ ವಚನ ಕಲ್ಯಾಣ ಮಹೋತ್ಸವ ಸಂದರ್ಭದಲ್ಲಿ ಪೋಟೋಗಳು.
ಹಾವನ್ನವರ ಹಾಗೂ ಕಡಕೋಳ ಶರಣರು ಷಟಸ್ಥಲ ಧ್ವಜಾರೋಹಣ ನೇರವೆರಿಸಿದರು.
ವಿಶ್ವಗುರು ಬಸವಾನುಭವ ಮಂಟಪದ ಅದ್ಯಕ್ಷ ಚನ್ನಪ್ಪ ನರಸಣ್ಣವರ ಶರಣರು ಪ್ರತಿಯೊಬ್ಬರನ್ನೂ ಸ್ವಾಗತಿಸಿದರು.
ಬೆಳಗಾವಿ ಜಿಲ್ಲಾ ರಾಷ್ಟ್ರೀಯ ಬಸವ ಸೇನಾ ಅದ್ಯಕ್ಷ ಶಂಕರ ಗುಡಸ ಕಾರ್ಯಕ್ರಮದ ಕುರಿತು ಪ್ರಾಸ್ಥಾವಿಕವಾಗಿ ಮಾತನಾಡಿದರು.
ವಚನ ಕಲ್ಯಾಣ ಮಹೋತ್ಸವ ನಡೆಸಿಕೊಟ್ಟ ಸರ್ವ ಪೂಜ್ಯರನ್ನು ಸತ್ಕರಿಸಿದರು.
ನಿರಂತರ ಬಸವಾನುಭವ ಗೋಷ್ಠಿಗಳನ್ನು ಯಶಸ್ವಿಯಾಗಿ ನಡೆಸಲು ಸಹಕರಿಸುತ್ತಿರುವ ಶಿಕ್ಷಕ ಶಿವಾನಂದ ಕೋಳಿ ಗುರುಗಳನ್ನು ಸತ್ಕರಿಸುತ್ತಿರುವುದು.
ವಿಶ್ವಗುರು ಬಸವಾನುಭವ ಮಂಟಪದ ಅದ್ಯಕ್ಷ ಚನ್ನಪ್ಪ ನರಸಣ್ಣವರ ತಂದೆತಾಯಿಗಳಿಗೆ ಸತ್ಕಕರಿಸಲಾಯಿತು.
ಶರಣ ದಂಪತಿಗಳಿಗೆ ರುದ್ರಾಕ್ಷಿ ದಾರಣ ಮಾಡಿಸುತ್ತಿರುವ ಶ್ರೀಗಳು.
ಬಸವ ಜಯಂತಿ ಅಂಗವಾಗಿ ಸವದತ್ತಿ ತಾಲೂಕಿನ ಚಿಕ್ಕೊಪ್ಪ ಗ್ರಾಮದ ವಿಶ್ವಗುರು ಬಸವಾನುಭವ ಮಂಟಪದಲ್ಲಿ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಚನ ಕಲ್ಯಾಣ ಮಹೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಹುಕ್ಕೇರಿ ತಾಲೂಕಿನ ಬಸವ ಬೆಳವಿಯ ಶರಣ ಬಸವದೇವರ ನೇತೃತ್ವದಲ್ಲಿ ಬಸವತತ್ವದ ವಚನಗಳ ತಳಹದಿಯ ಮೇಲೆ ಎರಡು ಜೊಡಿಗಳ ಉಚಿತ ಸಾಮೂಹಿಕ ಕಲ್ಯಾಣ ಅತ್ಯಂತ ವಿಶೇಷವಾಗಿ ನಡೆಯಿತು.
ಹಾವನ್ನವರ ಶರಣ ಬಂಧುಗಳು ಷಟಸ್ಥಲ ಧ್ವಜಾರೋಹಣ ನೇರವೇರಿಸಿದರು. ಸಿರಸಂಗಿ ಬಸವ ಮಹಾಂತ ಸ್ವಾಮೀಜಿಯವರು ದಿವ್ಯ ಸಾನಿದ್ಯವಹಿಸಿ ಆರ್ಶೀವಚನ ನೀಡಿದರು. ಹಾರೂಗೆರಿ ಶ್ರೀ ಗುರು ಬಸವ ವಿಚಾರ ವಾಹಿನಿ ಅದ್ಯಕ್ಷರಾದ ಶರಣ ಈರಯ್ಯಾ ಆರ್ ಮಠಪತಿ, ರಾಷ್ಟ್ರೀಯ ಬಸವ ಸೇನಾ ಜಿಲ್ಲಾದ್ಯಕ್ಷ ಶರಣ ಶಂಕರ ಗುಡಸ, ಜಾಗತಿಕ ಲಿಂಗಾಯತ ಮಹಾಸಭಾ ಅದ್ಯಕ್ಷ ಅರವಿಂದ ಪರುಶಟ್ಟಿ, ರಾಜು ಪದ್ಮಣವರ ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.
ವಿಶ್ವಗುರು ಬಸವಾನುಭವ ಮಂಟಪದ ಅದ್ಯಕ್ಷ ಚನ್ನಪ್ಪ ನರಸನ್ನವರ ಸ್ವಾಗತಿಸಿದರು. ಶಿಕ್ಷಕ ಶಿವಾನಂದ ಕೋಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.