Breaking News
Home / featured / ಬಸವಣ್ಣನವರನ್ನೂ ಬ್ರಾಹ್ಮಣೀಕರಣಿಗೊಳಿಸುವ ಹುನ್ನಾರ !

ಬಸವಣ್ಣನವರನ್ನೂ ಬ್ರಾಹ್ಮಣೀಕರಣಿಗೊಳಿಸುವ ಹುನ್ನಾರ !

ಬಸವಣ್ಣನವರನ್ನೂ ಬ್ರಾಹ್ಮಣೀಕರಣಿಗೊಳಿಸುವ ಹುನ್ನಾರ !

ಯಾದಗಿರಿ : ಬಸವಾದಿ ಶರಣರ ವಚನಗಳನ್ನು ಜನ ಸಾಮಾನ್ಯರಿಗೆ ತಲುಪದಂತೆ ನೋಡಿಕೊಂಡದ್ದು ಈ ದೇಶದ ಸನಾತನ ಪರಂಪರೆ. ವಚನ ಸಾಹಿತ್ಯದ ಬೆಳಕು ಜನ ಸಾಮಾನ್ಯನಲ್ಲಿ ಮೂಡಿ ಬಿಟ್ಟರೆ ತಮ್ಮ ಕೊಳಕು, ವಂಚನೆಗಳೆಲ್ಲ ಬಟಾಬಯಲಾಗುತ್ತವೆಂಬ ದಿಗಿಲು ಪುರೋಹಿತಶಾಯಿಗಳಿಗೆ. ಆದ್ದರಿಂದ ಸಾಧ್ಯವಾದಾಗಲೆಲ್ಲ ಪುರೋಹಿತಶಾಹಿ ಮತ್ತು ಪಟ್ಟಭದ್ರ ಶಕ್ತಿಗಳು ವಚನಕಾರರ ಮೇಲೆ ಆಗಾಗ ಗದಾಪ್ರಹಾರ ಮಾಡುತ್ತಲೆ ಇರುತ್ತವೆ. ಇದು ಕೇವಲ ಇಂದಿನ ಮಾತಲ್ಲ. ಶತ ಶತಮಾನಗಳಿಂದ ವಚನಗಳ ಮೇಲೆ ವಚನಕಾರರ ಮೇಲೆ ನಡೆದ ಹಲ್ಲೆಗಳು ಮಾರಣಾಂತಿಕ. ಸಕಲ ಜೀವಪ್ರೆÃಮವನ್ನು ಇಂಬಿಟ್ಟುಕೊಂಡಿರುವ ವಚನ ಸಾಹಿತ್ಯ ಮತ್ತು ವಚನಕಾರರು ಯಾರೆಷ್ಟೆÃ ತಿಪ್ಪರಲಾಗ ಹಾಕಿದರು ಬಸವ ಪ್ರಭೆಯನ್ನು ತಡೆಯುವ ತಾಕತ್ತು ಯಾರಿಗೂ ಇಲ್ಲ. ಆದರೆ ಬಸವ ಬೆಳಕು ಹರಿಯುವುದನ್ನು ಸ್ವಲ್ಪ ಹೊತ್ತು ತಡೆ ಹಿಡಿಯಬಹುದು. ಜನರನ್ನು ಧಾರ್ಮಿಕತೆಯ ಹೆಸರಿನ ಮೇಲೆ ಗೊಂದಲದಲ್ಲಿಟ್ಟು ಆಟ ಆಡಬಹುದು. ಒಂದಲ್ಲ ಒಂದು ದಿನ ನಾಟಕ ಮುಗಿಯಲೆ ಬೇಕು. ಆಗ ಇವರ ನಿಚ್ಚಳ ಬಣ್ಣ ಜನಕ್ಕೆ ಗೊತ್ತಾದಾಗ ಅಟ್ಟಾಡಿಸಿಕೊಂಡು ಬಾರಿಸಲು ತೊಡಗುತ್ತಾರೆ.

ವಚನಗಳಲ್ಲಿ ಶರಣರ ಆಶಯಗಳೆ ಎಕ್ಕುಟ್ಟಿ ಹೋಗುವಂತೆ ಸಂಸ್ಕೃತ ಪದವನ್ನು ತುರುಕಲಾಯಿತು. ಇಲ್ಲದೆ ಇರುವ ವೀರಶೈವ ಪದವನ್ನು ಅಲ್ಲಲ್ಲಿ ತುಂಬಿ ಗೊಂದಲವನ್ನುಂಟು ಮಾಡಲಾಯಿತು. ಬಸವಾದಿ ಶರಣರ ಆಶಯಗಳ ಮೇಲೆ ಕಟ್ಟಲಾಗಿದ್ದ ಲಿಂಗಾಯತ ಧರ್ಮವನ್ನು ಆ ಸಮುದಾಯದ ಜನ ಅರಿತು ಆಚರಿಸುವ ಮೊದಲೆ ಭಯಾನಕ, ಘನಘೋರವಾದ ಹತ್ಯೆಗಳ ಮೂಲಕ ಭಯವನ್ನು ಉಂಟುಮಾಡಲಾಯಿತು. ಹರಳಯ್ಯ ಮತ್ತು ಮಧುವರಸ ದಂಪತಿಗಳು ಶರಣರ ಆಶಯಗಳಿಗೆ ಮೊದಲ ಬಲಿಯಾದರು. ಇನ್ನುಳಿದ ಶರಣರೆಲ್ಲ ತಮ್ಮ ಜೀವದ ಹಂಗುತೊರೆದು ವಚನ ಸಾಹಿತ್ಯವನ್ನು ರಕ್ಷಿಸುತ್ತ ಕಲ್ಯಾಣ ಬಿಟ್ಟು ಹೊರಟು ಹೋದರು. ಅದುವರೆಗೆ ಹೊತ್ತಿಕೊಂಡಿದ್ದ ಕಲ್ಯಾಣದ ಜ್ಯೊÃತಿ ಒಮ್ಮಿಂದೊಮ್ಮೆ ಆರಿಬಿಟ್ಟಿತು.
ಲಿಂಗಾಯತ ಧರ್ಮಿಯರು ಸಹಜವಾಗಿ ಕಂಗಾಲಾದರು. ಅಸಹಾಯಕತೆ ಅವರನ್ನು ಸುತ್ತುವರೆದಂತೆ ಕಂಡ ಕಂಡವರನ್ನು ಅಂಗಲಾಚತೊಡಗಿದರು. ತನ್ನದಲ್ಲದ ಸಂಸ್ಕೃತಿಯನ್ನು ತನ್ನದೆಂದು ಅಪ್ಪಿಕೊಳ್ಳುವ, ಒಪ್ಪಿಕೊಳ್ಳುವ ಮನಸ್ಥಿತಿ ಇದಿರಾಯಿತು. ಅನಿವಾರ್ಯವಾಗಿ ಮತ್ತದೆ ಕಂದಾಚಾರ ಮೂಢನಂಬಿಕೆಗಳಿಗೆ ಬಲಿಯಾದರು. ತಾವು ಯಾರು ? ತಮ್ಮ ಮೂಲ ಯಾವುದು ? ತಮ್ಮ ಧರ್ಮ ಯಾವುದು ? ತಮ್ಮ ಗೋತ್ರ ಪುರುಷ ಯಾರು ? ತಮ್ಮ ಧರ್ಮ ಗುರು ಯಾರು ? ಎಂಬ ಸಾಮಾನ್ಯ ಸಂಗತಿಗಳು ಸಹ ಕ್ರಮೇಣ ಮರೆತು ಎಲ್ಲಾ ಧರ್ಮದ ಕಂದಾಚಾರ, ಮೌಢ್ಯಗಳನ್ನು ತನ್ನದೆಂದು ಅಪ್ಪಿಕೊಂಡು ನಡೆದು ಬಿಟ್ಟರು. ಕೊರಳಲ್ಲಿ ಲಿಂಗವನ್ನು ಕಟ್ಟಿಕೊಂಡರು. ಸ್ಥಾವರ ದೇಗುಲಗಳನ್ನೂ ಕಟ್ಟಿಸಿ ಪೂಜಿಸಿದರು. ಕರ್ಮಠ ಆಚರಣೆಗಳು ಲಿಬಿ ಲಿಬಿಗುಟ್ಟುವಷ್ಟು ಬೆಳೆಸಿಕೊಂಡು ತಾವು ಲಿಂಗಾಯತರು ಎಂಬುದನ್ನೆ ಮರೆತು ಬಿಟ್ಟರು.
ಇದಕ್ಕೆಲ್ಲ ಮೂಲ ಕಾರಣ ಲಿಂಗಾಯತರು ವಚನ ಅಭ್ಯಾಸಿಗಳಲ್ಲ. ವಚನಗಳ ಓದು ಮಾತ್ರ ಅವರ ಮನದ ಕಸವನ್ನು ಸುಡಬಲ್ಲದು. ಅವರ ಲಿಂಗಾಯತ ಧರ್ಮದ ಮೂಲವನ್ನು ತಿಳಿಸಿಕೊಡಬಲ್ಲುದು. ಆದರೆ ವಚನ ಓದುವ ವ್ಯವಧಾನ ಲಿಂಗಾಯತರಿಗೆ ಅನಿವಾರ್ಯವಾಗುತ್ತಿಲ್ಲ. ಹೀಗಾಗಿ ಲಿಂಗಾಯತ ಜನಾಂಗ ಕಂಡ ಕಂಡವರ ಕೈಗೊಂಬೆಯಾಗಿ ಕರಗಿ ಹೋಗುತ್ತಿದ್ದಾರೆ. ವೇದ ಶಾಸ್ತç ಆಗಮ ಪುರಾಣಗಳು ಬೇಕಾದಷ್ಟು ಪಾಂಡಿತ್ಯ ಪೂರ್ಣವಾಗಿರಬಹುದು. ಆದರೆ ಅವುಗಳು ಬದುಕಿಗೆ ಹತ್ತಿರವಾಗಿಲ್ಲದವುಗಳು. ಆದ್ದರಿಂದಲೆ ಶರಣರು ವೇದವೆಂಬುದು ಓದಿನ ಮಾತು, ಶಾಸ್ತçವೆಂಬುದು ಸಂತೆಯ ಸುದ್ದಿ , ಪುರಾಣವೆಂಬುದು ಪುಂಡರಗೋಷ್ಠಿ ಎಂದು ಜರಿದರು.
ಕಳವಳದ ಸಂಗತಿಯೆಂದರೆ ಈಗ ಲಿಂಗಾಯತರಲ್ಲಿಯೂ ವೇದಮೂರ್ತಿಗಳು, ಶಾಸ್ತಿçಗಳು, ಪುರಾಣಿಕರು ಸಿಗುತ್ತಿದ್ದಾರೆ. ಈ ಮಹಾಶಯರುಗಳೆ ಲಿಂಗಾಯತ ಧರ್ಮದ ಗುರುಗಳು ಎಂದು ಬೇರೆ ಕರೆಯಿಸಿಕೊಳ್ಳುತ್ತಿದ್ದಾರೆ. ಸಹಜವಾಗಿ ಲಿಂಗಾಯತರು ಕರ್ಮಠರಾಗಿದ್ದಾರೆ. ಅವರ ಮನೆ ಮನೆಯಲ್ಲಿ ಯಜ್ಞಯಾಗಗಳು ಯಾವ ಎಗ್ಗಿಲ್ಲದೆ ನಡೆದಿವೆ. ಹೋಮ ಹವನಗಳು ನಿತ್ಯ ಸಂಗತಿಗಳಾಗಿವೆ. ಜಗತ್ತಿಗೆ ಮಾದರಿಯಾಗಬೇಕಾದ ಜನಾಂಗ ದಿಕ್ಕು ತಪ್ಪಿದ ನಾವೆಯಂತೆ ವೈದಿಕತ್ವದ ಬಿರುಗಾಳಿಗೆ ಸಿಲುಕಿ ನುಚ್ಚು ನೂರಗುತ್ತಿದೆ.
ಕೊಂಡಿ ಮಂಚಣ್ಣ, ಕಪಟರಾಳ ಕೃಷ್ಣರಾಯರಿಂದ ಹಿಡಿದು ಇಂದಿನ ಬಾಲಗಂಗಾಧರ, ಡಂಕಿನ ಝಳಕಿವರೆಗೂ ವಚನಕಾರರ ಆಶಯಗಳನ್ನು ಮರೆ ಮಾಚುವ ಯತ್ನ ನಡೆದೇ ಇದೆ. ಆದರೆ ಲಿಂಗಾಯತರಿಗೆ ಈ ಬಗ್ಗೆ ಖಬರೆ ಇಲ್ಲ. ಊರು ಸುಟ್ಟರೂ ಹನುಮಪ್ಪ ಹೊರಗೆ ಎಂಬಂತಹ ವರ್ತನೆ ಲಿಂಗಾಯತರದಾಗಿದೆ. ಇದರಿಂದ ಪ್ರೆÃರಿತರಾದ ಮನುವಾದಿಗಳು ಲಿಂಗಾಯತರ ಗಮನಕ್ಕೆ ಬಾರದಷ್ಟು ತಮ್ಮ ಬಲೆಗಳನ್ನು ಸೂಕ್ಷö್ಮವಾಗಿ ಹೆಣೆದು ಲಿಂಗಾಯತ ಧರ್ಮಿಯರ ಕೊರಳಿಗೆ ಉರುಳು ಹಾಕುತ್ತಿದ್ದಾರೆ. ಮೊನ್ನೆ ಮೊನ್ನಿನ ಬಸವ ಜಯಂತಿಯ ಸಂದರ್ಭದಲ್ಲಿ ಬಸವಣ್ಣನವರನ್ನ ಆಚಾರ್ಯ ತ್ರಯರ ಸಾಲಿನಲ್ಲಿ ನಿಲ್ಲಿಸಿ, ಬಸವಣ್ಣನವರ ಭಾವ ಚಿತ್ರಕ್ಕೂ ಕುಂಕುಮ ಲೇಪಿಸಿಬಿಟ್ಟರು. ಬಸವಣ್ಣನವರಿಗೂ ಕಾವಿ ತೊಡಿಸಿ ಕಾವಿಧಾರಿಯನ್ನಾಗಿ ಮಾಡಿದರು.

ಆನು ಹಾರುವನೆಂದರೆ ಕೂಡಲ ಸಂಗಮ ನಗುವನಯ್ಯಾ, ಅಡ್ಡ ದೊಡ್ಡ ನಾನಲ್ಲಯ್ಯ. ದೊಡ್ಡ ಬಸಿರು ಎನಗಿಲ್ಲವಯ್ಯ. ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ, ಎನಗಿದೆ ದಿಬ್ಯ ಕೂಡಲಸಂಗಮದೇವಾ. ಕಾವಿ ವಿಷ್ಟವಿಸುವ ಹೊನ್ನ ಕಳಸವಾಗುವುದಕ್ಕಿಂತ ಒಡೆಯರು ಜೋಗೈಸುವ ಚಮ್ಮಾವುಗೆ ಮಾಡಯ್ಯ. ಅಪ್ಪನು ನಮ್ಮ ಮಾದಾರ ಚೆನ್ನಯ್ಯ, ಬೊಪ್ಪನು ನಮ್ಮ ಡೋಹರ ಕಕ್ಕಯ್ಯ, ಅಣ್ಣನು ನಮ್ಮ ಕಿನ್ನರಿ ಬೊಮ್ಮಯ್ಯ ಎಂದು ತಳ ಸಮುಹದೊಂದಿಗೆ ತನ್ನನ್ನು ಸಮೀಕರಿಸಿಕೊಂಡಿದ್ದ ಬಸವಣ್ಣನವರನ್ನು ಮತ್ತದೆ ಬ್ರಾಹ್ಮಣ್ಯಕ್ಕೆ ಜೋತು ಹಾಕುವ ಕೆಲಸವನ್ನು ಮಾಡಿ, ಲಿಂಗಾಯತರನ್ನು ವ್ಯವಸ್ಥಿತವಾಗಿ ಹಳ್ಳಕ್ಕೆ ದೂಡುವ ಪಿತೂರಿ ನಡೆದಿದೆ. ಈ ಬ್ರಾಹ್ಮಣ್ಯವನ್ನು ನಂಬಿದವರಿಗೆ ಏನೇನು ಕತೆಯಾಯಿತು ಎಂಬುದನ್ನು ಬಸವಣ್ಣನವರು ತಮ್ಮ ಒಂದು ವಚನದಲ್ಲಿ ಹೀಗೆ ಹೇಳಿದ್ದಾರೆ. ಇದನ್ನು ಅರಿತುಕೊಂಡು ಮುನ್ನಡೆಯಬೇಕಾದವರು ಲಿಂಗಾಯತ ಧರ್ಮಿಯರು.

ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ ಗೌತಮಮುನಿಗೆ
ಗೋವಧೆಯಾಯಿತ್ತು.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ಬಲಿಗೆ ಬಂಧನವಾಯಿತ್ತು.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ಕರ್ಣನ ಕವಚ ಹೋಯಿತ್ತು.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ದಕ್ಷಂಗೆ ಕುರಿದಲೆಯಾಯಿತ್ತು.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ಪರಶುರಾಮ ಸಮುದ್ರಕ್ಕೆ ಗುರಿಯಾದನು.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ನಾಗಾರ್ಜುನನ ತಲೆ ಹೋಯಿತ್ತು.
ದೇವಾ, ಭಕ್ತನೆಂದು ನಂಬಿದ ಕಾರಣ
ನಮ್ಮಕೂಡಲ ಸಂಗನ ಶರಣರು ಕೈಲಾಸವಾಸಿಗಳಾದರು

೦ ವಿಶ್ವಾರಾಧ್ಯ ಸತ್ಯಂಪೇಟೆ

About Shivanand

Admin : Lingayat Kranti Monthly news paper 8884000008 [email protected]

Check Also

ಮಠಾಧೀಶರಿಗೆ ರಾಜಕಾರಣದ ಉಸಾಬರಿ ಏಕೆ?

  ಬೆಂಗಳೂರು: ರಾಜ್ಯದಲ್ಲಿನ ಸ್ವಾಮೀಜಿಗಳ ಪೈಕಿ ಕೆಲವರು ರಾಜಕೀಯ ನಾಯಕರಂತೆ ವರ್ತಿಸುತ್ತಿರುವುದು ಅವರು ಪ್ರತಿನಿಧಿಸುವ ಸ್ಥಾನಗಳಿಗೆ ಶೋಭೆ ತರುವಂತಹದ್ದಲ್ಲ. ಸಮಾಜಕ್ಕೆ …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಯಾರಿಗೆ? ಹಾಗೂ ಮಹಾ ಮಾದರಿ ಶೇ.16ರ ವಿಶೇಷ ಮೀಸಲಾತಿ ಬೇಡವೇ….?

    ಬಸವಣ್ಣ ಬರುವಾಗ | ಬಿಸಿಲು ಬೆಳದಿಂಗಳು || ಮೊಗ್ಗು ಮಲ್ಲಿಗೆ | ಅರಳ್ಯಾವ || ಯಾಲಕ್ಕಿ ಗೊನೆಬಾಗಿ …

ಕರ್ನಾಟಕದ ಮ್ಯಾಕ್ಸ್ ಮುಲ್ಲರ್ ‘ವಚನ ಪಿತಾಮಹ’ ಡಾ. ಫ.ಗು.ಹಳಕಟ್ಟಿ

  ರಾಮದುರ್ಗ: ೧೯೫೬ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಪದವಿ ಪ್ರದಾನ ಸಮಾರಂಭ. ಡಾ.ಪಾವಟೆಯವರು ಕುಲಪತಿಗಳಾಗಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯದ …

ರಾಣಿ ಚನ್ನವೀರಮ್ಮ

  ಲಿಂಗಾಯತ ಕ್ರಾಂತಿ: ಚನ್ನಮ್ಮ ಮತ್ತು ವೀರಮ್ಮ ಇವರಿಬ್ಬರು ಕಿತ್ತೂರ ದೇಸಾಯಿಣಿಗಳು. ಇವರಿಬ್ಬರ ಹೆಸರು ಒಂದಾಗಿರುವ ಚನ್ನವೀರಮ್ಮಾಜಿ ಎನ್ನುವ ಕೆಳದಿಯ …

ಜನಪದವೇ ಲಿಂಗಾಯತ ಧರ್ಮ ಉಳಿವಿಗೆ ಆಧಾರ

  ಬೀದರ್: 12ನೆ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿ ನಂತರ ಲಿಂಗಾಯತ ಧರ್ಮದ ಶರಣರು ಚೆಲ್ಲಾಪಿಲ್ಲಿ ಆದರು, ಹಲವಾರು ಶರಣರು …

ಸಂವಿಧಾನ ಮತ್ತು ಕಾನೂನುಗಳ ಸಮರ್ಪಕ ಬಳಕೆಯೇ ಈ ದೇಶದ ಎಲ್ಲ ಸಮಸ್ಯೆಗಳಿಗೆ ಪರಿಹಾರ

  ~ ಡಾ. ಜೆ ಎಸ್ ಪಾಟೀಲ. ವಿಜಯಪುರ: ಭಾರತವು ಧಾರ್ಮಿಕ ಮೂಢನಂಬಿಕೆಗಳ ತವರು ಮನೆ. ಇಲ್ಲಿ ಧಾರ್ಮಿಕ ನಂಬಿಕೆಗಳ …

ಗ್ರಾಮ ಸ್ವರಾಜ್ಯ ಸಾಕಾರಗೊಳಿಸಿದ: ರಾಮಪ್ಪ ಬಿದರಿ

ವಿಜಯಪುರ: 1952-1962 ಹತ್ತು ವರ್ಷಗಳ ಕಾಲ ಲೋಕಸಭಾ ಸದಸ್ಯರಾಗಿದ್ದ ರಾಮಪ್ಪ ಬಿದ್ರಿ ಈ ಹುದ್ದೆಯನ್ನು ಎಂದೂ ತಮ್ಮ ಸ್ವಂತದ ಲಾಭಕ್ಕಾಗಿ …

ಲಿಂಗಾಯತ ಧರ್ಮದ ಹೋರಾಟ ಸರಣಿ-2 ಭಾಗ-4

  ಲಿಂಗಾಯತ ಧರ್ಮ ಮಾನ್ಯತೆಯ ಹೊರಾಟದಲ್ಲಿ ಲಿಂಗಾಯತ ಸಮನ್ವಯದ ಸಮಿತಿ ಪಾತ್ರ. ಬಸವಕಲ್ಯಾಣ: ಬೆಂಗಳೂರಿನ ಕುಂಬಳಗೋಡಿನ ಬಸವ ಗಂಗೋತ್ರಿಯಲ್ಲಿ ಜೂನ್ …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಜಾತಿ ಲಿಂಗಾಯತರು ಮತ್ತು ಬೇಡ ಜಂಗಮ ಪಂಚಾಚಾರ್ಯರು ಸತ್ಯವೆಂದು ನಂಬಿ ಲಿಂಗಾಯತ ಧರ್ಮದ ಮಾನ್ಯತೆ ತಪ್ಪಿಸುತ್ತಿದ್ದಾರೆ. ಬಸವಕಲ್ಯಾಣ: 12ನೇ …

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

ರವಿ ಬೆಳಗೆರೆ ಒಂದು ಕನಸು ನನಸು ಮಾಡಲು ಆಗಲಿಲ್ಲ..!

  ಚನ್ನಮ್ಮನ ಕಿತ್ತೂರು: ಪಿ. ಲಂಕೇಶರ ನಂತರ ಕನ್ನಡ ಪತ್ರಿಕೋದ್ಯಮ ಮತ್ತೊಂದು ರೀತಿ ಕಲ್ಪನೆ ಮೀರಿ ಮುನ್ನಡಿಸಿದ್ದ ಕೀರ್ತಿ ರವಿಗೆ …

Leave a Reply

Your email address will not be published. Required fields are marked *

error: Content is protected !!