ರಾಮದುರ್ಗ/ಪೂನಾ: ಕರ್ನಾಟಕ ರಾಯಕೀಯದಲ್ಲಿ ಸದಾ ವಾದ ವಿವಾದ ಸುದ್ಧಿಯಲ್ಲಿರುವ ಎಲ್ಲ ಪಕ್ಷಗಳ ಜೊತೆಗೆ ಒಳಗೊಳಗೇ ನಂಟಿರುವ ಕಾಂಗ್ರೆಸಿನ ಹಿರಿಯ ನಾಯಕ ಡಿ ಕೇಶಿ ಹೇಗಾದರೂ ಮಾಡಿ ಉತ್ತರ ಕರ್ನಾಟಕದ ನಾಯಕತ್ವದ ಮಾಲೀಕತ್ವವನ್ನು ಪಡೆಯಬೇಕೆಂದು ಹಪಹಪಿಸುತ್ತಿರುವುದು ತಾವು ಕರ್ನಾಟಕದ ಮುಂದಿನ ಮುಖ್ಯಮತ್ರಿ ಆಗಲು ಹೊರಟ ನಿರ್ಧಾರಕ್ಕೆ ಉತ್ತರಕರ್ನಾಟಕದ ನಾಯಕತ್ವವನ್ನು ಹೇಗಾದರೂ ಮಾಡಿ ತಮ್ಮಾಗಿಸಿಕೊಳ್ಳಬೇಕೆಂದು ಹಗಲುಕನಸು ಕಾಣುತ್ತಿದ್ದಾರೆ.
ಇನ್ನು ಬಾದಾಮಿಯ ವಿಷಯಕ್ಕೆ ಬಂದರೆ ಎಸ ನಿಜಲಿಂಗಪ್ಪನವರು ಸ್ಟೆಫೆನ್ ಮೊದಲು ಮಾಡಿ ಅನೇಕರು ತಮ್ಮ ರಾಜಕೀಯ ಜೀವನದ ಎರಡನೆಯ ಜೇವನ ಪಡೆದದು ಉತ್ತರ ಕರ್ನಾಟಕದಿಂದ ಮಾತ್ರ .ಉತ್ತರ ಕರ್ನಾಟಕದಲ್ಲಿ ಕುರುಬರು ಲಿಂಗಾಯತರು ಭೇದ ಭಾವವಿಲ್ಲ ,ಶ್ರೀ ಸಿದ್ಧರಾಮಯ್ಯನವರು ಕೇವಲ ಕುರುಬರ ಮತಗಳಿಂದ ಗೆದ್ದವರಲ್ಲ ಅಲ್ಲಿ ಎಸ ಆರ್ ಪಾಟೀಲ್ ಎಂ ಬಿ ಪಾಟೀಲರು ಪ್ರಯತ್ನದಿಂದ ಎಂದರೆ ತಪ್ಪಾಗದು.ಲಿಂಗಾಯತರು ಸಿದ್ಧರಾಮಯ್ಯನವರನ್ನು ಒಪ್ಪಿಕೊಂಡವು ಅಪ್ಪಿಕೊಂಡದ್ದು ಅವರಿಗಿರುವ ಬಸವ ತತ್ವದ ಮೇಲಿನ ಪ್ರೇಮದಿಂದ ಮಾತ್ರ . ಸಿದ್ಧರಾಮಯ್ಯನವರು ಉತ್ತರ ಕರ್ನಾಟಕದಲ್ಲಿ ಪ್ರಭಾವ ಹೊಂದಿದ್ದಾರೆ ಆದರೆ ಈ ಹಿಂದೆ ರಾಮಕೃಷ್ಣ ಹೆಗಡೆ ಅವರಿಗೆ ಬೆಂಬಲ ಕೊಟ್ಟಂತೆ ಲಿಂಗಾಯತರು ಸಿದ್ಧರಾಮಯ್ಯನವರಿಗೆ ಬೆಂಬಲ ಸೂಚಿಸಿದ್ದಾರೆ .
ಇದನ್ನು ಹೊರತು ಪಡಿಸಿದರೆ ಕರ್ನಾಟಕದ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಲಿಂಗಾಯತರ ಏಕಮೇವ ನಾಯಕನಾಗುವ ಎಲ್ಲಾ ಸಾಧ್ಯತೆಗಳು ಡಾ ಎಂ ಬಿ ಪಾಟೀಲರಿಗಿದೆ .ನೇರ ನಡೆ ನುಡಿ ಅವಸರ ತೀವ್ರತೆ ಸೂಕ್ಷ್ಮ ಅಷ್ಟೇ ಸಿಟ್ಟು ಮತ್ತು ಮೃದು ಸ್ವಭಾವದ ಪ್ರಗತಿಪರ ರಾಜಕಾರಣಿ .Diamond Needs little refinement ಎನ್ನುವ ಹಾಗೆ ಅಲ್ಪ ಸ್ವಲ್ಪ ಚಿಕ್ಕಪುಟ್ಟ ದೋಷಗಳಿದ್ದರೆ ತಿದ್ದಿಕೊಳ್ಳುವ ಮತ್ತು ಎಲ್ಲರನ್ನೂ ಕರೆದೊಯ್ಯುವ ಚಾಣಕ್ಷತನ .
ಉದಾರಿ ಸ್ನೇಹಪರ ಜೀವಿ ಡಾ ಎಂ ಬಿ ಪಾಟೀಲರು. ಆದರೆ ತಮ್ಮ ಸುತ್ತಲಿರುವ ಕೆಲ ಮಾರ್ಗದರ್ಶಕರನು ನಿವೃತ್ತ ಅಧಿಕಾರಿಗಳನ್ನು ದೂರವಿಟ್ಟು ಅವರನ್ನೇ ಪ್ರೀತಿಸುವ ನಿಷ್ಪಕ್ಷಪಾತವಾಗಿ ಸ್ವಾರ್ಥವಿಲ್ಲದೆ ದುಡಿಯುವ ಯುವ ಜನಾಂಗದವರನ್ನು ಹಚ್ಚಿಕೊಂಡರೆ ಮುಂದಿನ ದಿನಗಳಲ್ಲಿ ಡಾ ಎಂ ಬಿ ಪಾಟೀಲರು ಕರ್ನಾಟಕದಲ್ಲಿ 29 ವರುಷಗಳ ನಂತರ ವೀರೇಂದ್ರ ಪಾಟೀಲರ ನಂತರ ಆ ಎತ್ತರಕ್ಕೆ ನಿಲ್ಲುವ ದಿಟ್ಟ ಹೋರಾಟಗಾರ . ಎಲ್ಲವೂ ಕಾಲವೇ ನಿರ್ಧರಿಸುತ್ತದೆ . ಅವರ ಮಾತಿನಲ್ಲಿ ಗಟ್ಟಿತನವಿದೆ ಕುತಂತ್ರ ಸ್ವಾರ್ಥ ಗುಂಪುಗಾರಿಕೆಯಿಂದ ದೂರವಿದ್ದು ಜನನಾಯಕನಾದ ಡಾ ಎಂ ಬಿ ಪಾಟೀಲರು ದೂರದೃಷ್ಟಿವುಳ್ಳವರು .ಅವರ ನಾಯಕತ್ವದಲ್ಲಿ ಕಾಂಗ್ರೆಸ ಪಕ್ಷ ಲಿಂಗಾಯತ ಸಮಾಜಕ್ಕೆ ಭವಿಷ್ಯವಿದೆ . ಇದರ ಜೊತೆಗೆ ಸಮಗ್ರ ಕರ್ನಾಟಕದ ಅಭಿವೃದ್ಧಿಯಾಗುವದರಲ್ಲಿ ಎರಡು ಮಾತಿಲ್ಲ . ಡಿಕೆಶಿ ಇನ್ನೂ ಸಾವಿರ ಸ್ವಾಮಿಗಳ ಮಠಗಳ ಸುತ್ತಿದರೂ ಪ್ರಯೋಜನವಿಲ್ಲ,ಅದು ಹಗಲು ಕನಸಿನ ಮಾತು….
ಡಾ ಶಶಿಕಾಂತ ಪಟ್ಟಣ ರಾಮದುರ್ಗ