Breaking News
Home / General News / ಐಕ್ಯ ಮಂಟಪದ ನವೀಕರಣದ ನೇತೃತ್ವ ಬರವಸೆ ನೀಡಿದ ಎಂ ಬಿ ಪಾಟೀಲರು.

ಐಕ್ಯ ಮಂಟಪದ ನವೀಕರಣದ ನೇತೃತ್ವ ಬರವಸೆ ನೀಡಿದ ಎಂ ಬಿ ಪಾಟೀಲರು.

ವಿಜಯಪುರ : ಗುರು ಬಸವಣ್ಣನವರ ಐಕ್ಯ ಕ್ಷೇತ್ರ ಹಾಗೂ ಲಿಂಗಾಯತರ ಧರ್ಮಕ್ಷೇತ್ರವಾದ ಕೂಡಲಸಂಗಮದ ಐಕ್ಯಮಂಟಪದ ರಕ್ಷಣೆಗಾಗಿ ಸುತ್ತಲೂ ನಿರ್ಮಿಸಿರುವ ತಡೆಗೋಡೆಯಲ್ಲಿ ಬಿರುಕು ಕಂಡಿರುವ ಕುರಿತು ಎರಡು ದಿನಗಳಿಂದ ಹಲವಾರು ಪತ್ರಿಕಾ ಮಾದ್ಯಮಗಳು ವರದಿ ಮಾಡಿದ್ದವು. ಇದನ್ನು ಗಮನಿಸಿದ ಲಿಂಗಾಯತ ನಾಯಕ ಹಾಗೂ ಕರ್ನಾಟಕ ಸರಕಾರದ ಗೃಹ ಮಂತ್ರಿಗಳಾದ ಎಂ.ಬಿ ಪಾಟೀಲರು ಧರ್ಮ ಕ್ಷೇತ್ರ ಕೂಡಲಸಂಗಮದಲ್ಲಿರುವ ಬಸವಣ್ಣನವರ ಐಕ್ಯ ಮಂಟಪವು ದುರಸ್ತಿಯಾಗಬೇಕಿದ್ದು, ಶೀಘ್ರವಾಗಿ ಇದರ ಕಾರ್ಯವನ್ನು ಕೈಗೆತ್ತಿಕೊಳ್ಳಲು ಸರಕಾರದ ಮುಂದೆ ಇಡುವುದಾಗಿ ಹಾಗೂ ಅದರ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಪ್ರಾಮಾಣಿಕವಾಗಿ ಕೆಲಸ ಮಾಡುವೆ ಎಂದು ಸಕಾರಾತ್ಮಕವಾಗಿ ಸ್ಪಂದಿಸಿ ಅದರ ನೇತೃತ್ವ ವಹಿಸುವುದಾಗಿ ಭರವಸೆ ನೀಡಿದ್ದಾರೆ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಡೊಂಗಿ ಮಂತ್ರವಾದಿ ಲಪಟಾಯಿಸಿದ್ದು 6 ಕೋಟಿ

  ಬೆಳಗಾವಿ: ಖ್ಯಾತ ಸಂಗೀತ ಸಂಯೋಜಕ ಕೆ.ಕಲ್ಯಾಣ ಅವರ ದಾಂಪತ್ಯ ವಿವಾದ ಹೊಸ ತಿರುವು ಪಡೆದುಕೊಂಡಿದ್ದು, ಡೊಂಗಿ ಮಂತ್ರವಾದಿ ಲಪಟಾಯಿಸಿದ …

Leave a Reply

Your email address will not be published. Required fields are marked *

error: Content is protected !!