Breaking News
Home / featured / ಜೀವದಯಾಪರ ಲಿಂಗಾಯತ ಧರ್ಮದ ಉಳಿವಿಗೆ ಕರೆ

ಜೀವದಯಾಪರ ಲಿಂಗಾಯತ ಧರ್ಮದ ಉಳಿವಿಗೆ ಕರೆ

ಬಸವ ಧರ್ಮ ಅಸ್ತಿತ್ವಕ್ಕೆ ಲಿಂಗಾಯತ ಮಹಾಸಭಾ ಅವಶ್ಯ: ಜಾಮದಾರ

ವರದಿ ಗುರುರಾಜ ಕನ್ನೂರ
ಬಸವನಬಾಗೇವಾಡಿ: ಬಸವ ಧರ್ಮ ಅಸ್ತತ್ವಕ್ಕಾಗಿ ಜಾಗತಿಕ ಲಿಂಗಾಯತ ಮಹಾಸಭಾ  ಸಂಸ್ಥೆ ಅವಶ್ಯವಾಗಿ ಬೇಕು,  ವಿನ: ಯಾವುದೇ ರಾಜಕೀಯಕ್ಕಾಗಿ ಅಲ್ಲ   ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟೀಯ ಮಹಾಪ್ರಧಾನ ಕಾರ್‍ಯದರ್ಶಿ ಡಾ. ಶಿವಾನಂದ ಎಂ. ಜಾಮದಾರ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಶ್ರೀ ವಿರಕ್ತಮಠದ ಸಭಾ ಭವನದಲ್ಲಿ ಜುಲೈ ೧೪ರಂದು ಹಮ್ಮಿಕೊಂಡಿದ್ದ  ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕಾ ಘಟಕದ ಉದ್ಘಾಟನೆಯ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಬಸವ ನೆಲದಲ್ಲಿ ಲಿಂಗಾಯತ ಧರ್ಮದ ಕುರಿತಾಗಿ ತಡವಾಗಿ ಘಟಕ ಚಾಲನೆ ಸಿಕ್ಕಿರುವುದು  ತುಂಬಾ ನೋವಿನ  ಸಂಗತಿ. ಅದರಲ್ಲೂ ಬಸವಣ್ಣನವರು ಜನಿಸಿದ  ನೆಲದಲ್ಲಿ ಅಡ್ಡ ಪಲ್ಲಕ್ಕಿ ಉತ್ಸವ ನಡೆದಿರುವುದು ಬಸವ ಧರ್ಮಕ್ಕೆ ಅವಮಾನದ ಸಂಗತಿ. ನಮಗೆ ನಾವೇ ಆತ್ಮ ಪರೀಕ್ಷೆ ಮಾಡಿಕೊಳ್ಳಬೇಕಾಗಿದೆ. ವೀರಶೈವ ಹಾಗೂ ಲಿಂಗಾಯತ ಬೇರೆ ಬೇರೆ ಎಂದು ಅನೇಕರು ಸಮಾಜದಲ್ಲಿ ವಿಷ ಬೀಜ ಬಿತ್ತುತ್ತಿದ್ದಾರೆ. ವೀರಶೈವರನ್ನು ನಾವೇನು ಹೊರ ಹಾಕಿಲ್ಲ.  ಅವರು ಲಿಂಗಾಯತ ಧರ್ಮದ  ಅವಿಭಾಜ್ಯ ಅಂಗ. ಜಂಗಮರು ಲಿಂಗಾಯತ ಧರ್ಮದಿಂದ ಬೇರಿಲ್ಲ ಎಂದು ಸ್ಪಷ್ಟಪಡಿಸಿದರು. ಬಸವ ಧರ್ಮವು ಅಂಧ ಶೃದ್ದೆ ಅಂಧಕಾರವನ್ನು ಹೋಗಲಾಡಿಸುವುದೇ ಆಗಿದೆ. ಇಷ್ಟ ಲಿಂಗ ಕಟ್ಟಿಕೊಂಡವರು ಯಾವ ಗುಡಿ ಗುಂಡಾರಕ್ಕೆ, ಹೋಗಲಾರ. ಇಂದು ಗುಡಿ ಕಟ್ಟದಷ್ಟು ಮನ ಕಟ್ಟುವ ಕೆಲಸ ಆಗುತ್ತಿಲ್ಲ. ಆ ಕಾರ್‍ಯ ಲಿಂಗಾಯತ ಮಹಾ ಸಭಾ ಮಾಡುತ್ತದೆ. ಮನುಷ್ಯರನ್ನಾಗಿ ಮಾಡುವುದೇ ಈ ಮಹಾಸಭಾದ ಪ್ರಮುಖ ಉದ್ದೇಶ. ಧರ್ಮದ ಕುರಿತಾಗಿ ಪ್ರಚಾರ ಮಾಡಬೇಕಾಗಿರುವುದು ಹಾಗೂ ತಮ್ಮ ಮಕ್ಕಳ ಜಾತಿ ಕಾಲಂ ನಲ್ಲಿ ಹಾಗೂ ಜನ ಗಣತಿಯಲ್ಲಿ ಲಿಂಗಾಯತ ಎಂದು ಬರೆಸುವುದು ಅತ್ಯತವಶ್ಯವಾಗಿದೆ ಎಂದರು.in
ಬೈಲೂರಿನ ನಿಜಗುಣಪ್ರಭು ತೊಂಟದಾರ್‍ಯ ಸ್ವಾಮೀಜಿ ಮಾತನಾಡಿ, ಲಿಂಗಾಯತ ಧರ್ಮ ಮಾಡಿದಷ್ಟು ಶಿಕ್ಷಣ ಕ್ರಾಂತಿ, ದಾನ ಧರ್ಮ ಧರ್ಮವನ್ನು  ಯಾವ ಧರ್ಮ ಮಾಡಿಲ್ಲ. ಮಕ್ಕಳ ಭವಿಷ್ಯ ನಿರ್ಮಾಣಕ್ಕಾಗಿ ಧರ್ಮ ಉಳಿಸುವ ಕೆಲಸವನ್ನು ನಾವೆಲ್ಲಾ ಮಾಡಬೇಕಾಗಿದೆ. ಬರುವ ದಿನಗಳಲ್ಲಿ ಲಿಂಗಾಯತ ಧರ್ಮದ ಕುರಿತಾಗಿ ಮ್ಯೂಜಿಯಂನಲ್ಲಿ ನೋಡುವ ಕಾಲ ದೂರವಿಲ್ಲ. ಮನುಷ್ಯರನ್ನು ದೇವರನ್ಮನಾಗಿಸಿದ ಧರ್ಮವು ನಾಶವಾಗುತ್ತಿರುವುದು ಶೋಚನೀಯ ಸಂಗತಿ. ಬರುವ ದಿನಗಳಲ್ಲಿ ರಾಜ್ಯದ ಒಂದು ಜಿಲ್ಲೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ವತಿಯಿಂದ ಪ್ರಥಮ ಸಮ್ಮೇಳನ ಹಮ್ಮಿಕೊಳ್ಳುವುದರ ಮೂಲಕ ಲಿಂಗಾಯತರನ್ನು ಒಂದೆಡೆ ಸೇರಿಸುವ ಕೆಲಸ ಮಾಡಬೇಕು ಎಂದು ವೇದಿಕೆಯ ಗಣ್ಯರಿಗೆ ಹಾಗೂ ಶ್ರೀಗಳಿಗೆ ಮನವಿ ಮಾಡಿಕೊಂಡರು.
ದಿವ್ಯ ಸಾನಿಧ್ಯವನ್ನು ಗದಗ ಡಂಬಳ ತೋಂಟದಾರ್‍ಯ ಮಠದ ಜಗದ್ಗುರು ಡಾ. ತೊಂಟದ ಸಿದ್ಧರಾಮ ಮಹಾಸ್ವಾಮೀಜಿ ಮಾತನಾಡಿ, ಲಿಂಗಾಯತ ಧರ್ಮ ಅವೈದಿಕ ಧರ್ಮವಾಗಿದ್ದು. ಶೈವ ಧರ್ಮದಲ್ಲಿ ಮೇಲು ಕೀಳು, ಅಸಮಾನತೆ ಇದ್ದು. ಸಮಾನತೆ ಸಾರುವ ಜಗತ್ತಿನ ಏಕೈಕ ಧರ್ಮ ಲಿಂಗಾಯತ ಧರ್ಮವಾಗಿದ್ದು,. ಧರ್ಮವನ್ನು ಉಳಿಸಲು ಹೋರಾಟದ ಅನಿವಾರ್‍ಯತೆ ಇದೆ ಎಂದರು.
ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಪ್ರಸ್ತಾವಿಕವಾಗಿ ಮಾತನಾಡಿದರು. ಬೀಳೂರು ಹಾಗೂ ಸಂಖದ ಮುರುಘೇಂದ್ರ ಸ್ವಾಮೀಜಿ, ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಾನಿದ್ಯವಹಿಸಿ ಮಾತನಾಡಿದರು. ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್‍ಯದರ್ಶಿ ಗುರನಗೌಡ ಪಾಟೀಲ,  ಅಧ್ಯಕ್ಷತೆ ವಹಿಸಿದ್ದ ಜಾಗತಿಕ ಲಿಂಗಾಯತ ಮಹಾಸಭಾದ ನೂತನ ಅಧ್ಯಕ್ಷ ಎಫ್.ಡಿ ಮೇಟಿ ಮಾತನಾಡಿದರು.
ಇಂಗಳೇಶ್ವರ ವಿರಕ್ತಮಠದ ಚನ್ನಬಸವ ಸ್ವಾಮೀಜಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಮಸಬಿನಾಳ ವಿರಕ್ತಮಠದ ಸಿದ್ಧರಾಮ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಲಿಂಗಾಯತ ಮುಖಂಡರಾದ ಈರಣ್ಣ ಪಟ್ಟಣಶೆಟ್ಟಿ, ಬಿ.ಕೆ ಕಲ್ಲೂರ ಶಿವನಗೌಡ ಪಾಟೀಲ, ಡಾ. ರವಿಕುಮಾರ ಬಿರಾದಾರ ಇದ್ದರು.  ವಿವೇಕಾನಂದ ಕಲ್ಯಾಣಶೆಟ್ಟಿ ಸ್ವಾಗತಿಸಿದರು. ಎಚ್ಬಿ ಬಾರಿಕಾಯಿ ಹಾಗೂ ಗಿರಿಜಾ ಸಂತೋಷ ಪಾಟೀಲ ನಿರೂಪಿಸಿದರು. ಶರಣು ಬಸ್ತಾಳ ವಂದಿಸಿದರು.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಡೊಂಗಿ ಮಂತ್ರವಾದಿ ಲಪಟಾಯಿಸಿದ್ದು 6 ಕೋಟಿ

  ಬೆಳಗಾವಿ: ಖ್ಯಾತ ಸಂಗೀತ ಸಂಯೋಜಕ ಕೆ.ಕಲ್ಯಾಣ ಅವರ ದಾಂಪತ್ಯ ವಿವಾದ ಹೊಸ ತಿರುವು ಪಡೆದುಕೊಂಡಿದ್ದು, ಡೊಂಗಿ ಮಂತ್ರವಾದಿ ಲಪಟಾಯಿಸಿದ …

One comment

  1. Shivanand mallikarjun ganagi

    I will saporated

Leave a Reply

Your email address will not be published. Required fields are marked *

error: Content is protected !!