Breaking News
Home / featured / ಪೇಜಾವರ ಶ್ರೀಗಳು ಹಿಂದೂ ಸಂಸ್ಕೃತಿಯ ಆರಾಧಕರೊ? ಅಥವಾ ವೈದಿಕ ಧರ್ಮದವರೊ ಮೊದಲು ಸ್ಪಷ್ಟಪಡಿಸಲಿ.- ಬಸವಪ್ರಭು ಸ್ವಾಮೀಜಿ

ಪೇಜಾವರ ಶ್ರೀಗಳು ಹಿಂದೂ ಸಂಸ್ಕೃತಿಯ ಆರಾಧಕರೊ? ಅಥವಾ ವೈದಿಕ ಧರ್ಮದವರೊ ಮೊದಲು ಸ್ಪಷ್ಟಪಡಿಸಲಿ.- ಬಸವಪ್ರಭು ಸ್ವಾಮೀಜಿ

ಒಂದು ಧರ್ಮದೊಳಗೆ ಇನ್ನೊಂದು ಧರ್ಮ ಇದೆ ಎಂದು ಹೇಳುವ ಪೂಜ್ಯ ಪೇಜಾವರ ಶ್ರೀಗಳ ಹೇಳಿಕೆ ಬಾಲಿಶತನದಿಂದ ಕೂಡಿದೆ, ಪೂರ್ವಾಗ್ರಹ ಪೀಡಿತದಿಂದ ಕೂಡಿದೆ ಎಂದು ಹೇಳಲು ಗತ್ಯಂತರವಿಲ್ಲ.

ಮಾನವ ಧರ್ಮಕ್ಕೆ ಜಯವಾಗಲಿ ಎಂದು ಹೇಳಿ ಮಾನವರ ಹೆಗಲ ಮೇಲೆ ಕುಳಿತು ಮೆರೆಯುವ ಪಂಚಾಚಾರ್ಯರಂತೆ ಇವರು ಹಿಂದೂ ಧರ್ಮವಲ್ಲ ಅದು ಸಂಸ್ಕೃತಿ ಎಂದು ಹೇಳುತ್ತಲೇ ಲಿಂಗಾಯತರನ್ನು ಹೈಜಾಕ್ ಮಾಡುವ ಷಡ್ಯಂತ್ರ ನಿಲ್ಲಿಸಬೇಕು.

ಜೈನ್, ಬೌದ್ಧ, ಸಿಖ್, ಲಿಂಗಾಯತ ಧರ್ಮಗಳು ಹಿಂದೂ ಸಂಸ್ಕೃತಿಯ ಧರ್ಮಗಳು ಎಂದು ಲಿಂಗಾನಂದ ಅಪ್ಪಾಜಿ ಮಾತಾಜಿಯವರು ಐದು ದಶಕದಿಂದ ಈ ತಾತನಿಗೆ ಹೇಳುತ್ತಾ ಬಂದರು ಆ ಸತ್ಯ ಈಗ ತಡವಾದರೂ ಅರ್ಥ ಮಾಡಿಕೊಂಡಿರುವಿರಲ್ಲಾ ಎಂಬ ಅಭಿನಂದನೆಗಳು ಒಂದು ಕಡೆಯಾದರೆ ಇನ್ನೊಂದು ಕಡೆ ಸತ್ಯ ಅರ್ಥವಾದರೂ ತಲೆಯೊಳಗೆ ವೈದಿಕ ಧರ್ಮದ ಭೂಯಿಷ್ಟ ತುಂಬಿ ಹೋಗಿರುವುದರಿಂದ ವೈದಿಕ ಧರ್ಮವೇ ಹಿಂದೂ ಸಂಸ್ಕೃತಿ ಎಂದು ಹೇಳುವ ಮನು ಬುದ್ದಿಯನ್ನು ಮತ್ತೊಮ್ಮೆ ಸಾಬೀತು ಪಡಿಸುತ್ತಿರುವುದಕ್ಕೆ ನಿಮ್ಮ ವಿಚಾರವನ್ನು ಖಂಡಿಸುತ್ತೇವೆ.

ಪೇಜಾವರ ಶ್ರೀ ಗಳು ಹೇಳಿದಂತೆ ಜೈನ್ ಬೌದ್ಧ ಸಿಖ್ ಧರ್ಮದಂತೆ ಲಿಂಗಾಯತ ಹಿಂದೂದೊಳಗೆ ಒಂದು ಧರ್ಮವೆನ್ನುವ ಸತ್ಯ ಅರ್ಥವಾದ ಮೇಲೆ ಜೈನ್ ಬೌದ್ಧ ಸಿಖ್ ಅವರಿಗೆ ಅಲ್ಪಸಂಖ್ಯಾತ ಮಾನ್ಯತೆ ಹೇಗೆ ಸಿಕ್ಕಿದೆಯೋ ಅದರಂತೆ ನಮಗೆ ಸಿಗಲು ಯಾಕೆ ಸಹಕರಿಸುತ್ತಿಲ್ಲ. ಇಷ್ಟು ತಿಳಿಯದ ಮಂದ ಬುದ್ದಿಯವರಾದರೆ? ಇಲ್ಲವೆ ಲಿಂಗಾಯತರ ಯುವಕರನ್ನ ಕೃತಕ ದೇಶ ಪ್ರೇಮದ ಹೆಸರಲ್ಲಿ ದಿಕ್ಕು ತಪ್ಪಿಸುವ ಹುನ್ನಾರವೆ?…

ಬಸವೇಶ್ವರರ ಮೇಲೆ ಅಪಾರ ಭಕ್ತಿ ಕಳಕಳಿಯಿದ್ದರೆ ನಮ್ಮ ಹೋರಾಟಕ್ಕೆ ಬಲ ತುಂಬಿ ಮಾನ್ಯತೆ ಕೊಡಿಸಲು ಪ್ರಯತ್ನಿಸಲಿ ನಾವೆಲ್ಲರೂ ಬಾರತೀಯರು ಸಮಾನ ಹಕ್ಕು ಪಡೆದುಕೊಳ್ಳೋಣ, ಸೌಹಾರ್ಧತೆಯಿಂದ ಬಾಳೋಣ. ಏಕೆಂದರೆ ಎಷ್ಟೇ ಆಗಲಿ ನಮ್ಮ ಅಣ್ಣನಲ್ಲವೆ?

ವಯೋವೃದ್ಧರಾಗಿ ಅರವು ಮರೆವಿನಲ್ಲಿರುವ ಪೇಜಾವರ ಶ್ರೀಗಳು ನಮ್ಮ ಲಿಂಗಾಯತ ಧರ್ಮದ ಹೈಕಮಾಂಡಾ? ಏನು ಹಿಂದೂ ಸಂಸ್ಕೃತಿಯ ಹೈಕಮಾಂಡಾ? ನೀವೂ ಸಹಿತ ನಮ್ಮಂತೆ!! ಹಿಂದೂ ಸಂಸ್ಕೃತಿಯ ಧರ್ಮಗಳಲ್ಲೊಂದಾದ ವೈದಿಕ ಧರ್ಮವನ್ನು ಆಚರಿಸುವ ಪೀಠಾಧಿಪತಿ. ಅಂದ ಮೇಲೆ ನಿಮಗೇಗೆ ನಮ್ಮ ಧರ್ಮದ ಸಾರ ಅರ್ಥವಾದೀತು. ನಮ್ಮ ಧರ್ಮ ಸ್ವತಂತ್ರ ಧರ್ಮವೆಂದು ಸಿದ್ಧ ಮಾಡಲು ನೀವ್ಯಾರು? ನಮಗೀಗಾಲೇ ಪೂಜ್ಯ ಫಗು ಹಳಕಟ್ಟಿ, ಪೂಜ್ಯ ಹರ್ಡೇಕರ್ ಮಂಜಪ್ಪ, ಉತ್ತಂಗಿ ಚೆನ್ನಪ್ಪ, ಪೂಜ್ಯ ಲಿಂಗಾನಂದ ಸ್ವಾಮಿಗಳು, ಪೂಜ್ಯ ಮಾತೆ ಮಹಾದೇವಿಯವರು, ಇಲಕಲ್ ಅಪ್ಪಗಳು, ಸಿದ್ಧಗಂಗ ಅಪ್ಪಗಳು, ಗದುಗಿನ ಸಿದ್ದಲಿಂಗ ಅಪ್ಪಗಳು, ನಿವೃತ್ತ ನ್ಯಾಯಾಧೀಶರಾದ ನಾಗಮೋಹನ್ ದಾಸ ವರದಿ, ಎಸ್ ಎಮ್ ಜಾಮದಾರ ಇವರಿಂದ ಲಿಂಗಾಯತ ಧರ್ಮ ಸ್ವತಂತ್ರ ಧರ್ಮವೆಂದು ಸಿದ್ಧವಾಗಿದೆ. ಅದನ್ನು ಎಂಟು ರಾಜ್ಯದ ಎಂಟು ಕೋಟಿ ಲಿಂಗಾಯತರು ಒಪ್ಪಿಕೊಂಡಿದ್ದಾರೆ.

ಪೇಜಾವರ ಶ್ರೀಗಳ ಇನ್ನೊಂದು ಬಾಲಿಶತನದ ಹೇಳಿಕೆ ಏನೆಂದರೆ ಒಂದು ಮನೆಯೊಳಗಿನ ಅಣ್ಣ ತಮ್ಮಂದಿರ ಬೇರೆಯಾಗುವ ಉದಾಹರಣೆ ಹೇಳಿದ್ದೀರಿ. ಹಾಗಾದರೆ ಅಣ್ಣನಿಗೆ ಸಿಗಬೇಕಾದ ಎಲ್ಲಾ ರೀತಿ ಸ್ಥಾನಮಾನಗಳು, ಹಕ್ಕುಗಳು ತಮ್ಮನಿಗೆ ಬೇಡವೆ? ಆ ಹಕ್ಕುಗಳು ಸಿಗದಿದ್ದರೆ ಅವನು ಯಾಕೆ ಮನೆಯೊಳಗೆ ಇರಬಯಸುತ್ತಾನೆ ಹೇಳಿ. ಹಾಗೆಯೇ ವೈದಿಕ ಧರ್ಮದಲ್ಲಿ ನೀವು ಹೇಳುವ ತತ್ವಕ್ಕೂ ನಡೆದುಕೊಳ್ಳುವ ರೀತಿಗೂ ಅಜಗಜಾಂತರ ವ್ಯತ್ಯಾಸ ಇದೆ. ಅದನ್ನು ಕಂಡೇ ಗುರು ಬಸವಣ್ಣನವರು ಏನಯ್ಯಾ ವಿಪ್ರರು ನುಡಿದಂತೆ ನಡೆಯರು ತಮಗೊಂದು ಬಟ್ಟೆ ಶಾಸ್ರ್ತಕ್ಕೊಂದು ಬಟ್ಟೆ ಎಂದು ಟೀಕಿಸಿದ್ದಾರೆ. ನಿಮ್ಮ ಕರ್ಮಕಾಂಡದಲ್ಲಿ ಜಾತಿಯತೆ, ಮೂಢನಂಬಿಕೆ, ಅಸ್ಪೃಶ್ಯತೆ ಆಚರಣೆ ತುಂಬಿ ವೈದಿಕ ಧರ್ಮ ತನ್ನ ತಾತ್ವಿಕ ಸಿದ್ಧಾಂತ ಉಳಿಸಿಕೊಳ್ಳದೆ ಈಗಾಗಲೇ ಎಂತೆಂಥವರನ್ನ ಕಳೆದುಕೊಂಡಿದೆ. (ಬುದ್ಧ, ಮಹಾವೀರ, ಬಸವೇಶ್ವರ, ದಯಾನಂದ ಸರಸ್ವತಿ, ಅಂಬೇಡ್ಕರ್, ವಿವೇಕಾನಂದ, ಹೀಗೆ ಮುಙತಾದವರು) ಅದ್ದರಿಂದ ಅದನ್ನು ಒಪ್ಪದ ತಮ್ಮನಾದವನು ನಿಮ್ಮ ಉಸಿರುಗಟ್ಟಿಸುವ ಧರ್ಮದಲ್ಲಿ ಏಕಿರಬೇಕು?

ಪೂಜ್ಯರು ವಿನಾಕಾರಣ ಲಿಂಗಾಯತ ಧರ್ಮದಲ್ಕಿ ಮೂಗು ತೂರಿಸಿ ಗೊಂದಲ ಮೂಡಿಸದೆ, ಲಿಂಗಾಯತ ಧರ್ಮದ ಮೇಲೆ ಹೈಜಾಕ್ ಮಾಡುವ ತಂತ್ರ ನಿಲ್ಲಿಸಬೇಕು. ಜೈನರನ್ನ, ಬೌದ್ಧರನ್ನ ಸಿಖ್ ರನ್ನ ಸ್ವತಂತ್ರ ಧರ್ಮದವರನ್ನಾಗಿ ಬಿಟ್ಟಂತೆ ನಮ್ಮ ಪಾಡಿಗೆ ನಮಗೆ ಬಿಟ್ಟುಬಿಡಿ ಎಂದು ಪೂಜ್ಯರಲ್ಲಿ ನಮ್ರತೆಯ ಮನವಿ.

ನಾವೆಲ್ಲ ಭಾರತಿಯರೆಂಬ ಅರಿವು ಈ ಭಾರತ ಮುಸ್ಲೀಂರಲ್ಲಿ ಕ್ರಿಶ್ಚಿಯನ್ ರಲ್ಲಿಯೂ ಇದೆ ಅದೇಗೆ ಪೂಜ್ಯರು ಅಸಂವಿಧಾನಿಕವಾಗಿ ಮಾತಾನಾಡುತ್ತಿರುವರು ತಿಳಿಯದು. ಹಿಂದೂ ಸಂಸ್ಕೃತಿಯೇ ಭಾರತ ಎನ್ನುವುದಾರೆ, ಈ ದೇಶದ ಮುಸ್ಲಿ ಮತ್ತು ಕ್ರಿಶ್ಚಿಯನ್‌ ಧರ್ಮದವರನ್ನು ಬಿಟ್ಟು ಓಡಿಸುವ ಹುನ್ನಾರವೇನಾದರೂ ಇರಬಹುದೇ? ಅದು ಪೇಜಾವರ ಶ್ರೀಗಳಿಂದ ಸಾಧ್ಯವೇ?

ಜೈನ್, ಬೌದ್ಧ, ಮುಸ್ಲೀಂ, ಸಿಖ್, ಕ್ರೈಸ್ತ ಧರ್ಮದವರು ಅಲ್ಪಸಂಖ್ಯಾತರಾಗಿ ಈ ದೇಶದ ಸಾಂವಿಧಾನಿಕ ಹಕ್ಕು ಪಡೆದುಕೊಂಡಂತೆ ನಿಮ್ಮ ಮನೆಯ ತಮ್ಮನು ಸ್ವತಂತ್ರನಾಗಿ ಆ ಹಕ್ಕು ಪಡೆದುಕೊಂಡರೆ ನಿಮಗೇನು ಹಾನಿ? ಎಂಬ ಪ್ರಶ್ನೆಗೆ ಉತ್ತರ ಕೊಡಲಿ.

ಪೂಜ್ಯರು ತಮ್ಮ ಧರ್ಮದಲ್ಲಿದ್ದ ಲೋಪದೋಷವನ್ನು ಸರಿಪಡಿಸಿ ಅಲ್ಲಿರುವ ಮೂಢಾಚರಣೆಗಳನ್ನು ಕೈಬಿಟ್ಟು ಸಮಾನತೆಯ ವೈದಿಕ ಧರ್ಮಕ್ಕೆ ಪ್ರಯತ್ನಸಲಿ. ಇಲ್ಲವೆ ಬಸವೇಶ್ವರರ ತತ್ವಗಳು ನಿಮಗೆ ಆಕರ್ಷಿಸುವುದಾದರೆ, ಅಲ್ಲಿನ ಉಸಿರುಗಟ್ಟಿಸುವ ವಾತಾವರಣದಲ್ಲಿ ನಿಮ್ಮಂತ ಮಾನವೀಯ ಕಳಕಳಿ ಹೊಂದಿದವರು ಅಲ್ಲಿರುವುದಕ್ಕಿಂತ ಲಿಂಗಾಯತ ಧರ್ಮವನ್ನು ಸ್ವೀಕರಿಸಿ ಕೊನೆ ಉಸಿರಿರುವರೆಗೂ ಲಿಂಗಾಯತ ಧರ್ಮ ಪ್ರಚಾರ ಮಾಡಿ.

ಅಷ್ಟಕ್ಕೂ ಯಾವೊಬ್ಬ ವೈದಿಕ ಮಠಾಧೀಶ ಲಿಂಗಾಯತ ಧರ್ಮದ ಬಗ್ಗೆ ಮಾತಾನಡದೇ ಇರುವಾಗ ನೀವು ಕೊನೆಗೂ ಇದೊಂದು ಸ್ವತಂತ್ರ ಧರ್ಮ ಎಂಬ ಸತ್ಯ ಒಪ್ಪಿಕೊಂಡಿದ್ದು ನಿಮ್ಮ ನಡೆ ಮೆಚ್ಚಲೇಬೇಕು ಇದರಿಂದ ನಿಮ್ಮ ಬಗ್ಗೆ ನಮಗೆ ಗೌರವ ಇಮ್ಮಡಿಗೊಂಡಿದೆ.

ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ
ಬಸವಧರ್ಮಪೀಠ, ಬಸವ ಮಹಾಮನೆ ಬಸವಕಲ್ಯಾಣ. 

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಜಾತಿ ಲಿಂಗಾಯತರು ಮತ್ತು ಬೇಡ ಜಂಗಮ ಪಂಚಾಚಾರ್ಯರು ಸತ್ಯವೆಂದು ನಂಬಿ ಲಿಂಗಾಯತ ಧರ್ಮದ ಮಾನ್ಯತೆ ತಪ್ಪಿಸುತ್ತಿದ್ದಾರೆ. ಬಸವಕಲ್ಯಾಣ: 12ನೇ …

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

Leave a Reply

Your email address will not be published. Required fields are marked *

error: Content is protected !!