Breaking News
Home / featured / ಸತ್ಯವಿಶ್ವಾಸಿಗಳ ತ್ಯಾಗಬಲಿದಾನಗಳ ಮೊಹರಂ

ಸತ್ಯವಿಶ್ವಾಸಿಗಳ ತ್ಯಾಗಬಲಿದಾನಗಳ ಮೊಹರಂ

ವಚನದೀಪ್ತಿ ಎಸ್ ಪಾಟೀಲ್
ಬಸವಪ್ರಿಯಳು

ಊರುಗಳಲ್ಲಿ ಮಾಡುವ ಮೊಹರಂ ಗೂ ಇಸ್ಲಾಂ ಗೂ ಯಾವ ಸಂಬಂಧವೂ ಇಲ್ಲ, ಇದನ್ನು ಇಸ್ಲಾಂ ಸುತಾರಾಂ ಒಪ್ಪುವುದಿಲ್ಲ. ಇದು ಕೇವಲ ಕುಡಿದು ಕೇಕೆ ಹೊಡೆಯುವವರ ಪಾಲಿಗೆ ಒಂದು ನೆಪಮಾತ್ರ.

ಇದರ ಹಿತಿಹಾಸ ಬೇರೆ ಇದೆ. ಶಿಯಾಗಳ ಈ ಹಾರಾಟ ಮತ್ತು ಹುಚ್ಚುತನ ನಿಜ ಇಸ್ಲಾಮಿಗರನ್ನು ಮುಜುಗರಗೊಳಿಸುತ್ತಲೇ ಇರುತ್ತದೆ.

ಹೌದು ಪವಿತ್ರ ಖುರಾನಿನ ಪ್ರಕಾರ ಈ ರೀತಿಯ ಮೂರ್ತಿ ಆರಾಧನೆ ಅಥವಾ ಮೆರವಣಿಗೆ ಖಡಾ ಖಂಡಿತವಾಗಿಯೂ ನಿಷಿದ್ಧ.

ಮೊಹರಂ ಎನ್ನುವುದು ಇಸ್ಲಾಂ ವರ್ಷದಲ್ಲಿ (ಹಿಜರಿ ಶಕೆ) ಬರುವ ಒಂದು ತಿಂಗಳ ಹೆಸರು. ಇದೇ ಮೊದಲ ತಿಂಗಳು (ಚೈತ್ರ ಮಾಸದಂತೆ) ಈ ತಿಂಗಳ ಮೊದಲ ದಿನವೇ ಅವರಿಗೆ ಹೊಸವರ್ಷ.

ಆದರೆ ಪ್ರವಾದಿಗಳು(ಸ ಅ) ಇಹಲೋಕ ತೆಜಿಸಿದ ನಂತರದ ದಿನಗಳಲ್ಲಿ ಇಸ್ಲಾಂ ನ ಹೊಸಹಾತುಗಳು ಬಹಳ ಪ್ರಕರವಾಗಿ ತೀವ್ರಗತಿಯಲ್ಲಿ ಬೆಳೆಯುತ್ತಾ ಹೋಗುತ್ತವೆ. ಆಗ ಹಜ್ರತ್ ಅಲಿ ಮತ್ತು ಫಾತೀಮಾ(ನಬಿ ಮುಹಮ್ಮದ್‌(ಸ ಅ)ಯವರ ಪ್ರೀತಿಯ ಮಗಳು ಫತೀಮಾ) ಇವರು ಧರ್ಮಪ್ರಸಾರದಲ್ಲಿ ಪ್ರಮುಖಪಾತ್ರ ವಹಿಸುತ್ತಾರೆ.

ಇವರಿಬ್ಬರ ಯುವ ಮಕ್ಕಳೇ ಹುಸೈನೆ ಮತ್ತು ಹಸನ್. ಇವರು ಬಹಳ ಚಾಣಕ್ಷರು , ದಕ್ಷರು ಮತ್ತು ಧಾರ್ಮಿಕ ನೈತಿಕತೆ ಉಳ್ಳವರೂ ಆಗಿದ್ದರು . ಅವರ ಧರ್ಮಪ್ರಸಾರದ ಸಂದರ್ಭದಲ್ಲಿ ನಡೆದ ಕಾಳಗದಲ್ಲಿ ಒಂದು ಮಹಾ ಯುದ್ದವೇ ನಡೆದುಹೋಗುತ್ತದೆ.

ಆಗ ಹುಸೈನೆ ಎಂಬ ಹಜ್ರತ್ ಅಲಿಯವರ ಮಗನನ್ನು ಮೊಸದಿಂದ ಒಂದೆಡೆ ಬರಮಾಡಿ ಅನ್ಯಾಯದ ಮಾರ್ಗದಲ್ಲಿ ಮುತ್ತಿಗೆ ಹಾಕುತ್ತಾರೆ. ಅನಾಥವಾಗಿ ಧರ್ಮದ ತತ್ವನಿಷ್ಠೆಗಳ ಪ್ರತಿಪಾದಿಸಲು ಹೋರಾಡುತ್ತಿದ್ದ ಹುಸೈನ ಆ ಕೊನೆಯದಿನಗಳು ಎಂತವರ ಎದೆಯ ತಲ್ಲಣಗೊಳಿಸದಿರದು.

ಆ ಎಳೆಯ ಯುವ ಜೀವವನ್ನು ಬರ್ಬರವಾಗಿ ಕೊಲೆಮಾಡುವಾಗ ಆ ಹುಸೈನ್ ರ ಆಕ್ರಾಂದನ ಮುಗಿಲ ಮುಟ್ಟುತ್ತದೆ. ನೋಡುಗರ ಹೊಟ್ಟೆ ತಳಿಸಿದಂತಾಗುತ್ತದೆ.

ಹೇ ನನ್ನ ಬಂಧು ಭಾಂದವರೇ ನಾವು ನಂಬಿದ ಧಾರ್ಮಿಕ ನಂಬಿಕೆಯ ಉಳಿಸಿಕೊಳ್ಳಲು ನಮಗೆ ಸ್ವಾತಂತ್ರ ಇಲ್ಲದಂತಾಗಿದೆ.‌ ಮತ್ತು ಸತ್ಯ ವಿಶ್ವಾಸಿಗಳಾದ ನಮಗೆ ಇಲ್ಲಿ ಯಾರೂ ಸಹಾಯ ಮಾಡಲು ಬರುವುದಿಲ್ಲವಾ.?

ಪ್ರಪಂಚವನ್ನೇ ಪ್ರೀತಿಸಿದ ನಬಿ(ಸ ಅ) ರ ಮೊಮ್ಮಗನಾದ ನನ್ನನ್ನು ಅನಾಥವಾಗಿ ಕೊನೆಗೊಳಿಸುತ್ತಿದ್ದಾರೆ. ಅಯ್ಯೋ ಸರ್ವಶಕ್ತನೇ ಇದೆಂತಹ ಅಂತ್ಯ ಈ ಮೋಸದ ಆಟವ ಕೇಳುವವರಾರೂ ಇಲ್ಲವಾ ಎಂದು ಗೋಗರೆದ ಬಗೆಯ ಕಂಡು ಆ ಅತಿಕರುಣಾಮಯಿಯಾದ ಅಲ್ಲಾಹುನ ಮನವೇ ಕರಗುತ್ತದೆ.

ಕೊನೆಗೂ ಇಮಾಮ್ ಹುಸೈನ್ ಅಲಿಯವರು ದಾರುಣವಾಗಿ ಕೊಲೆಯಾಗುತ್ತಾರೆ.

ಇದರ ನೆನಪಿಗಾಗಿ ವಿಶ್ವದಲ್ಲಿ ಇಸ್ಲಾಂ ಧರ್ಮದ ಜನರು ಈ ಮೊಹರಂ ನ ಹತ್ತನೇದಿನವನ್ನು ಶೋಕದ ದಿನವಾಗಿ ಉಪವಾಸ/ರೋಜಾ ನಮಾಜ಼್ ಮಾಡುವುದರ ಮೂಲಕ ಆ ತ್ಯಾಗಮಹಿಗೆ ಶಾಂತವಾಗಿ ಸಂತಾಪ ಅರ್ಪಿಸುತ್ತಾರೆ.

ಇಂತಹ ದುಃಖದ ಸನ್ನಿವೇಶವನ್ನು ಅರಿಯದ ಹಲವು ಇಸ್ಲಾಮ್ ಹೆಸರಿನ ಜನರು ಈ ರೀತಿ ಹುಚ್ಚು ಆಚರಣೆಗಳ ಮಾಡಿ ಕುಡಿದು ಕುಪ್ಪಳಿಸಿ ಬ್ಯಾಂಡು ಬಜಂತ್ರಿಗಳ ಮೆರವಣಿಗೆ ಮಾಡಿ ಕೇಕೆ ಹಾಕಿ ಆ ದುಃಖದ ದಿನವನ್ನು ವಿಚಿತ್ರವಾಗಿ ಆಚರಿಸಿ ಇದನ್ನು ಹಬ್ಬವೆಂದು ಮಾಡುವುದ ಕಂಡು ಇಸ್ಲಾಂ ನ ನಿಜಪಾಲಕರು ಒಳಗೊಳಗೇ ಮರುಗಿ ಸುಮ್ಮನಾಗುತ್ತಾರೆ.

ಆಚರಣೆಗಳೇನೆ ಇರಲಿ ಅದರ ಮೂಲ ಅರಿತಲ್ಲಿ ಅದೊಂದು ಸತ್ಯ ನ್ಯಾಯದ ಪರ ಮಾಡಿದ ಕ್ರಾಂತಿಗಳೇ ಆಗಿರುತ್ತವೆ. ಮೌಢ್ಯ ಅಂಧಕಾರದಲ್ಲಿ ಮುಳುಗುವ ಮುನ್ನ ಮನಸ್ಸನ್ನು ಜಾಗೃತಿಗೊಳಿಸಿಕೊಂಡು ಅರಿವಿನ ದಾರಿಯಲ್ಲಿ ಸಮರಸ ಸಮಸತ್ವದಿಂದ ಬಾಳಬೇಕಾದದು ಈ ಸಮಾಜದ ಪ್ರತಿಯೊಬ್ಬನ ಹೊಣೆಗಾರಿಕೆ ಮತ್ತು ಕರ್ತವ್ಯವಾಗಿದೆ.

ಮಡಿಸ್ನಾನ ಪಂಕ್ತಿಬೇಧ, ಮಸೀದಿ ನಿರ್ನಾಮದ ನಾಯಕತ್ವ, ಅನ್ಯಧರ್ಮಗಳ ಬಗೆಗಿರುವ ಅಂಧವಿರೋಧ, ಅನಮಾನತೆ ಜಾತಿಯತೆ ಎಂಬ ಸಾಮಾಜಿಕ ಪಿಡುಗುಗಳ ಒಳಮನಸ್ಸಿನಲ್ಲಿ ತುಂಬಿಕೊಂಡು ಮೇಲೆ ಮಾತ್ರ ಉಡುಪಿಯ ಕೃಷ್ಣ ಕೃಷ್ಣಾ . ಎಂದು ದೇಹವ ಅನವರತ ಸವೆಸಿದ ಪೇಜಾಡುವ ಸ್ವಾಮಿಗಳಿಗೂ ಈ ಮೌಢ್ಯದಲ್ಲಿ ಬಿದ್ದು ಬಳಲುವ ಜನರಿಗೂ ಯಾವ ದಯೆಯೂ ಇರದಿರಲಿ.

ಸಮಾಜದಲ್ಲಿ ಸಮಾನತೆ, ಸರಳ ಸಮರಸ ಸಹಬಾಳ್ವೆಗಳನ್ನೇ ಧಾರ್ಮಿಕ ತತ್ವವಾಗಿಸಿ ಸಕಲ ಜೀವಾತ್ಮರಿಗೂ ಲೇಸ ಬಯಸಿದ ಎನ್ನೊಡೆಯ ಅಪ್ಪ ಬಸವರಾಜರ ನೆನೆದು ಶರಣೆಂದು ಬಸವಪ್ಪನ ಆಶಯಗಳ ಈಡೇರಿಸಲೆಂದೇ ಬಂದು ನವಭಾರತಕ್ಕೆ ಕಾನೂನಿ ಬುನಾದಿ ಹಾಕಿ ಸಲಹಿದ ಅಪ್ಪ ಅಂಬೇಡ್ಕರ್ ಅವರ ನೆನೆದು ಶರಣೆಂದು

ಧರ್ಮದ ಸತ್ಯ ವಿಶ್ವಾಸಗಳಿಗಾಗಿ ಮಿಡಿದು ಹೋರಾಡಿ ವೀರಮರಣವನ್ನಪ್ಪಿದ ಇಮಾಮ್ ಹುಸೈನ್ ಅಲಿ ಅವರ ನೆನೆದು ಆ ಸರ್ವಶಕ್ತನಾದ ದೇವನಲ್ಲಿ ಸಂತಾಪದ ಪ್ರಾರ್ಥನೆಯನಿರಿಸಿ.

ಮೌಡ್ಯ ಕಂದಾಚಾರಗಳ ಕಂಡಾಗಲೆಲ್ಲಾ ಪ್ರಶ್ನಿಸಿ ವೈಚಾರಿಕ ನೆನೆಗಟ್ಟಿನ ಸಮಾಜಕ್ಕಾಗಿ ಪಣತೊಟ್ಟ ನಿಮ್ಮೆಲ್ಲರಿಗೂ ಶರಣು ಶರಣಾರ್ಥಿಗಳು.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!