Breaking News
Home / featured / ಕಾದರವಳ್ಳಿಯ ಶರಣರ ಬಳ್ಳಿ- ಅಪ್ಪಶಿವಯೋಗೀಶ್ವರರು

ಕಾದರವಳ್ಳಿಯ ಶರಣರ ಬಳ್ಳಿ- ಅಪ್ಪಶಿವಯೋಗೀಶ್ವರರು

ವರದಿ:ಮಹೇಶ ಹುಲ್ಲೂರ

ಕಾದರವಳ್ಳಿ  ೯೯೦೧೬೬೧೩೯೯

12 ಶತಮಾನದಲ್ಲಿ ಗುರು ಬಸವಣ್ಣನವರಿಂದ ಸರ್ವ ಸಮಾನತೆ ಹಾಗೂ ವೈಚಾರಿಕತೆಗಾಗಿ ನಡೆದಂತಹ ಕಲ್ಯಾಣ ಕ್ರಾಂತಿಯ ಕೊನೆಯ ಯುದ್ಧ ನಡೆದ (ಕಾದಾಡಿದ ಹಳ್ಳಿ) ಕಾದರವಳ್ಳಿ ಇಲ್ಲಿ ಅಪ್ಪ ಶಿವಯೋಗಿಗಳು ನೆಲೆನಿಂತು ಗುರು ಬಸವಣ್ಣನವರ ವಚನ ಸಾರವನ್ನು  ಜಗತ್ತಿಗೆ ಹಾಡುಗಳ ಮೂಲಕ ಪರಿಚಿಸಿದ ಪೂಜ್ಯರ ಪಾವನ ಕ್ಷೇತ್ರವಿದು.ಇಂದು ಶಾಂತಿಯ ಸಾಗರ, ಆತ್ಮತೃಪ್ತ, ಶರಣ ಪ್ರಭು ಪೂಜ್ಯ ಸದ್ಗುರು ಅಪ್ಪಶಿವಯೋಗೀಶ್ವರರ ಪುಣ್ಯಾರಾಧನೆ ಕಾರ್ಯಕ್ರಮ.

೧೮ ನೆಯ ಶತಮಾನದಲ್ಲಿ ಕಾದರವಳ್ಳಿ  ಕ್ಷೇತ್ರವನ್ನು ೧೨ ಶತಮಾನದ ಗುರು ಬಸವಣ್ಣನವರು ನಿರ್ಮಿಸಿದ ಅನುಭವ ಮಂಟಪವನ್ನು ಪುನರ ಪ್ರಚಾರಗೈದ ಕೀರ್ತಿ ಪೂಜ್ಯರಿಗೆ ಸಲ್ಲುತ್ತದೆ.

ವಚನಗಳನ್ನು ಅನೇಕ ಅನಕ್ಷರಸ್ಥ ಬಾಯಿಯಲ್ಲಿ ರಾಗ, ತಾಳ, ಲಯ ಬದ್ದವಾಗಿ ಹಾಡುವಂತೆ ಮಾಡಿ ಶರಣರ ನಂತರ ವಚನಗಳ ಪ್ರಚಾರಕ್ಕೆ ಮಹತ್ವ ನೀಡಿದರು. ಎಲೆ ಮರೆಯ ಕಾಯಿಯಂತೆ ತ್ರಿವಿಧ ದಾಸೋಹ ನಡೆಸುತ್ತ ಅಪ್ಪಾಜಿ ಅನೇಕ ಭಕ್ತ ವೃಂದವನ್ನು ತಯಾರಿಸಿ ನೂರಕ್ಕೂ ಹೆಚ್ಚು ಹಳ್ಳಿಗಳಲ್ಲಿ ಭಜನಾ ಮನೆಗಳನ್ನು ಸ್ಥಾಪಿಸಿದರು ಅಲ್ಲಿ ಅನೇಕ ಭಕ್ತ ವೃಂದಕ್ಕೆ ಯಾವುದೇ ಜಾತಿ, ಧರ್ಮ, ಬಡವ, ಶ್ರೀಮಂತರೆಂಬ ಭಾವನೆ ಬಾರದಹಾಗೆ ಅನೇಕರಲ್ಲಿ ವಚನಗಳ ಮಹತ್ವ ತಿಳಿಸಿದರು. ಅನುಭವ ಮಂಟಪದ ಶರಣರ ಜೀವನ ಶೈಲಿಯನ್ನು ತಮ್ಮ ಶಿಷ್ಯ ಪರಂಪರೆಯಲ್ಲಿ ಜೀವನದಲ್ಲಿ ಪ್ರತಿನಿತ್ಯ ಜೀವಿಸುವ ಹಾಗೆ ಕಾಯಕ ನಿಷ್ಠೆಯನ್ನು ರೂಢಿಗೆ ತಂದರು.

ಪೂಜ್ಯರು  ಬಸವಾಯತರಿಗೆ ಕಲ್ಪವೃಕ್ಷ ತಮ್ಮ ಸನ್ಮಾರ್ಗದಲ್ಲಿ ಶಿಷ್ಯವೃಂದವನ್ನು ಮುನ್ನಡೆಸಿ “ಶರಣರ ವಚನ ಸಾಹಿತ್ಯವನ್ನು ” ನಾಡಿಗೆ ನೀಡಿದ ಕೀರ್ತಿ ಪೂಜ್ಯ ಸದ್ಗುರು ಅಪ್ಪಶಿವಯೋಗೀಶ್ವರರು.

ಪೂಜ್ಯ ಅಪ್ಪಾಜಿಯವರ ಪಾದ ಕಮಲಗಳಿಗೆ ನನ್ನ ಅನಂತ ಕೋಟಿ ನಮನಗಳು….





About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

Leave a Reply

Your email address will not be published. Required fields are marked *

error: Content is protected !!