Breaking News
Home / featured / ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯೋತ್ಸವ ಎಂದು ಆಚರಿಸೋಣ

ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯೋತ್ಸವ ಎಂದು ಆಚರಿಸೋಣ

ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ.

ಬಸವಧರ್ಮ ಪೀಠ ಬಸವಕಲ್ಯಾಣ

ಬೀದರ : ಹನ್ನೆರಡನೆಯ ಶತಮಾನದಲ್ಲಿ ಗುರು ಬಸವಾದಿ ಪ್ರಮಥರ ತತ್ವ ಸಿದ್ಧಾಂತಗಳಲ್ಲಿ ಹುಟ್ಟಿಕೊಂಡ ಆತ್ಮಕಲ್ಯಾಣ, ವ್ಯಕ್ತಿ ಕಲ್ಯಾಣ, ಸಮುಷ್ಟಿ ಕಲ್ಯಾಣ, ಧರ್ಮ ಕಲ್ಯಾಣ, ಆಧ್ಯಾತ್ಮ ಕಲ್ಯಾಣ, ರಾಷ್ಟ್ರ ಕಲ್ಯಾಣ, ವಿಶ್ವಕಲ್ಯಾಣ ಎಂದು ಹಲವು ವಿಧದಲ್ಲಿ ಬಳಕೆಯಾಗುವ ಕಲ್ಯಾಣ ಪದ ಒಂದು ಸೀಮಿತ ವಲಯಕ್ಕೆ ಉಪಯೋಗಿಸಿ ಕುಬ್ಜಗೊಳಿಸುವುದು ಅಷ್ಟೊಂದು ಸಮಂಜಸವಾಗದೇ ಇದ್ದರೂ ಸಹಿತ ಒಂದು ತತ್ವ ಸಿದ್ಧಾಂತ ಹುಟ್ಟಿಕೊಂಡ ಆ ನಾಡಿಗೆ ಅನ್ವಯಿಸಿ ಕರೆದರೆ ಮುಂದಿನ ಪೀಳಿಗೆಗೆ ಶರಣ ಸಂಸ್ಕೃತಿಯ ವಿಚಾರಧಾರೆಗಳು ಅಭಿವ್ಯಕ್ತಿಗೊಳ್ಳಬೇಕೆಂಬ ಸದುದ್ದೇಶದ ಫಲವೆ ಕಲ್ಯಾಣ ಕರ್ನಾಟಕದ ನಾಮಧ್ಯೇಯ.

ಆಳುವ ಸರಕಾರಕ್ಕೆ ಈ ನಾಡಿನ ಅನೇಕ ಸಾಹಿತಿಗಳು, ಮಠಾಧೀಶರು ಮತ್ತು ಜನ ಸಾಮಾನ್ಯರು ಹಲವು ದಿನಗಳಿಂದ ಕಲ್ಯಾಣ ಕರ್ನಾಟಕದ ಬೇಡಿಕೆ ಇಟ್ಟಿದ್ದರೂ ಹೈದರಾಬಾದ-ಕರ್ನಾಟಕ ಹೆಸರಿನಿಂದ ಇರುವ ಮುಸ್ಲೀಂರ ಮತ ಭೇಟೆಗಾಗಿ ಬದಲಾಯಿಸುವ ಒಲವು ತೋರದಿರುವುದು ಒಂದು ಕಡೆಯಾದರೆ ಇನ್ನೊಂದಡೆ ಹೈದರಾಬಾದ-ಕರ್ನಾಟಕ ವಿಮೋಚನೆಗಾಗಿ ಹೋರಾಡಿದ ಬಹಳಷ್ಟು ಪುಡಾರಿಗಳು ಆ ಹೊರಾಟದ ನೆನಪಿಗಾಗಿ ಮತ್ತು ಪ್ರಾದೇಶಿಕವಾಗಿ ಜನರ ವ್ಯವಹಾರದ ಅನುಕೂಲಕ್ಕಾಗಿ ಹೈ-ಕರ್ನಾಟಕವೇ ಸೂಕ್ತವೆಂದು ಬದಲಾಯಿಸಲು ಒಪ್ಪಿರಲಿಲ್ಲ.

ಕೇವಲ ಹೋರಾಟ ಮತ್ತು ವ್ಯವಹಾರಕ್ಕಾಗಿಯೇ ಒಂದು ಪ್ರದೇಶಕ್ಕೆ ಆ ಹೆಸರನ್ನು ಬಳಸುವ ವಾದ ಎಷ್ಟು ಸರಿ? ಹಾಗಾದರೆ ಇಡೀ ವಿಶ್ವಕ್ಕೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ನೀಡಿ ಸಮತಾ ಧ್ವಜವನ್ನು ಆರಿಸಿದ ಶರಣ ಸಂಸ್ಕೃತಿ ಸಾಮಾನ್ಯವೆ? ಸತ್ಯ ತಳಹದಿಯ ಮೇಲೆ ಪ್ರತಿಷ್ಟಾಪನೆಗೊಂಡ ಒಂದು ಸಂಸ್ಕೃತಿಗೆ ವಿಶ್ವವನ್ನು ಪರಿವರ್ತಿಸುವ ಶಕ್ತಿ ಇರುತ್ತೆ ಎನ್ನುವ ವಿವೇಕ ವಾಣಿಯಂತೆ ಶರಣ ಸಂಸ್ಕೃತಿಯು ಸಹಿತ ಹೊರತಾಗಿಲ್ಲ. ಆದ್ದರಿಂದ ಕಲ್ಯಾಣ ಕರ್ನಾಟಕವೆಂದು ಮರು ನಾಮಕರಣ ಮಾಡಿ ಸನ್ಮಾನ್ಯ ಶ್ರೀ ಯಡಿಯೂರಪ್ಪನವರ ನೇತೃತ್ವದ ಸರಕಾರ ಬಸವಭಕ್ತರ ಗೌರವಕ್ಕೆ ಪಾತ್ರವಾಗಿದೆ.

ಪೂಜ್ಯ ಶ್ರೀ ಮಹಾಜಗದ್ಗುರು ಡಾ. ಮಾತೆ ಮಹಾದೇವಿಯವರು ಬಸವಕಲ್ಯಾಣದಲ್ಲಿ ನಡೆಸುವ 2007ರ 6ನೇ ಕಲ್ಯಾಣ ಪರ್ವದಲ್ಲಿ ಹೈ-ಕಕಕ್ಕೆ ಕಲ್ಯಾಣ ಕರ್ನಾಟಕವೆಂದು ಮರುನಾಮಕರಣ ಮಾಡಬೇಕೆಂದು ನಿರ್ಣಯ ಮಂಡಿಸಿ ಆಗಿನ ಸರಕಾರಕ್ಕೆ ಮನವಿ ಸಲ್ಲಿಸಿದ್ದರು.

ಅಂತು ಬಹುದಿನದ ಬೇಡಿಕೆಯಂತೆ ಮುಖ್ಯಮಂತ್ರಿಯಾದ ಸನ್ಮಾನ್ಯ ಶ್ರೀ ಯಡಿಯೂರಪ್ಪನವರು ಸಚಿವ ಸಂಪುಟದಲ್ಲಿ ತೀರ್ಮಾನಿಸಿ ಹೈದರಾಬಾದ್ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಗೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿ ಆದೇಶ ಹೊರಡಿಸಿದ್ದು ಅಭಿನಂದನೀಯ ಇಷ್ಟಾದರೂ ಕೊನೆಗೆ ಬಸವಣ್ಣನವರು ಮೆಚ್ಚುವ ಕಾರ್ಯ ಮಾಡಿದರಲ್ಲ ಎಂಬ ಸಂತಸ ನಮಗಿದೆ.

ಅವರೂ ಲಿಂಗಾಯತರಾಗಿದ್ದರಿಂದ ತಮ್ಮ ಲಿಂಗಾಯತ ಧರ್ಮದ ಮಾನ್ಯತೆಗೆ ಕೇಂದ್ರ ಸರಕಾರಕ್ಕೆ ಒತ್ತಡ ತಂದು ಸ್ವಧರ್ಮದ ಗೌರವ ಎತ್ತಿ ಹಿಡಿಯಬೇಕೆಂಬ ಆಸೆ ಕೋಟ್ಯಾಂತರ ಬಸವಭಕ್ತರಲ್ಲಿದೆ ಕಾದು ನೋಡೋಣ. ಸದ್ಯಕ್ಕೆ ಎಲ್ಲಾ ಬೇಧಗಳನ್ನು ಮರೆತು ಬಸವಪರ ಸಂಘಟನೆಯವರೆಲ್ಲ ಸೇರಿ ಕಲ್ಯಾಣ ಕರ್ನಾಟಕ ಸ್ವತಂತ್ರ್ಯ ದಿನಾಚರಣೆ ಅರ್ಥ ಪೂರ್ಣವಾಗಿ ಆಚರಿಸೋಣ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

Leave a Reply

Your email address will not be published. Required fields are marked *

error: Content is protected !!