Breaking News
Home / featured / ಲಿಂಗಾಯತ ಸ್ವತಂತ್ರ ಧರ್ಮದ ಕಾವು ಮತ್ತೆ ಪೂಣೆಯಲ್ಲಿ

ಲಿಂಗಾಯತ ಸ್ವತಂತ್ರ ಧರ್ಮದ ಕಾವು ಮತ್ತೆ ಪೂಣೆಯಲ್ಲಿ

ವರದಿ ಶಿವಾನಂದ ಮೆಟ್ಯಾಲ

ಪೂನಾ :  ಕರ್ನಾಟಕದಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ಶಿಪಾರಸ್ಸು ಕೇಂದ್ರಕ್ಕೆ ಕಳುಹಿಸಿರುವ ಬೆನ್ನಲೆ ಮಹಾರಾಷ್ಟ್ರ ರಾಜ್ಯದಿಂದ ಕೂಡಾ ಕೇಂದ್ರಕ್ಕೆ ಶಿಪಾರಸ್ಸು ಮಾಡಬೇಕೆಂದು ಇಂದು ಪೂಣೆಯಲ್ಲಿ ಲಕ್ಷಾಂತರ ಬಸವ ಭಕ್ತರು ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಹೋರಾಟ ನಡೆಯಿತು.

ಮಹಾರಾಷ್ಟ್ರದ ಪೂಣೆಯ ಬಾಜಿರಾವ್ ರಸ್ತೆಯ ಬಸವೇಶ್ವರ ಸರ್ಕಲ್ ನಲ್ಲಿ ಜರುಗಿದ ಸಮಾವೇಶದಲ್ಲಿ ಲಿಂಗಾಯತ ಹೋರಾಟ ಇಂದು ನಿನ್ನೆಯದಲ್ಲಾ, ಬಸವಣ್ಣನವರ ಕಾಲದಿಂದಲೂ ಸ್ವತಂತ್ರವಾಗಿ ನಡೆದು ಬಂದಿದೆ. ಆದರೆ ಸ್ವತಂತ್ರ ಭಾರತದಲ್ಲಿ ಮಾನ್ಯತೆ ದೊರೆಯದಿರುವುದು ಶೋಚನೀಯ ಸಂಗತಿಯಾಗಿದೆ ಎಂದು ಮಹಾರಾಷ್ಟ್ರ ರಾಜ್ಯದ ಲಿಂಗಾಯತ ನಾಯಕ ಅವಿನಾಶ ಭೋಷಿಕರ ವಿಷಾದ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯದ ಕೂಡಲಸಂಗಮ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ, ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಬಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದ್ದೇವರು, ಬೀದರ ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ತಾಯಿ, ಅಕ್ಕ ಗಂಗಾಭಿಕಾ, ಚನ್ನಬಸವಾನಂದ ಸ್ವಾಮೀಜಿ, ಬಸವಕುಮಾರ ಸ್ವಾಮೀಜಿ, ಮಾತೆ ಸತ್ಯಕ್ಕ ಮತ್ತಿತ್ತರ ಪೂಜ್ಯರು ಸಾನಿದ್ಯ ವಹಿಸಿದ್ದರು.
ಮಹಾರಾಷ್ಟ್ರ ಲಿಂಗಾಯತ ನಾಯಕ ಅವಿನಾಶ ಭೋಷಿಕರ, ಸುಧೀರ್ ಕೋರೆ, ರಾಜು ಪಿಂಪ್ರೆ, ಕಿರಣ ಬೆಲ್ಲದ, ಸಿದ್ರಾಮ ಕವಳಿಕಟ್ಟಿ ಹಾಗೂ ಕರ್ನಾಟಕ ರಾಜ್ಯದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ದನ್ನೂರ, ಶಂಕರ ಗುಡಸ, ಕೆ. ಬಸವರಾಜ, ವಿರೇಶ ಹಲಕಿ, ಬಸನಗೌಡ ಗೌಡರ ಮತ್ತಿತ್ತರ ನೂರಾರು ಮುಖಂಡರು ಸಮಾವೇಶದ ನೇತೃತ್ವ ವಹಿಸಿದ್ದರು. ಸಮಾವೇಶ ಭಾಜಿರಾವ್ ರಸ್ತೆಯಿಂದ ಸುಮಾರು 5 ಕಿ.ಮಿಗಳ ವರೆಗೆ ಪಥಸಂಚಲನ ನಡೆದು ಜಿಲ್ಲಾಧಿಕಾರಿಗಳ ಕಛೇರಿ ತಲುಪಿಸಲಾಯಿತು.

ರಸ್ತೆಯುದ್ದಕ್ಕೂ ಬಸವ ಧ್ವಜ ಹಿಡಿದುಕೊಂಡು ಲಿಂಗಾಯತ ಧರ್ಮಾಚಿ ಸ್ವತಂತ್ರ ಧರ್ಮಾಚಿ ಮಾನ್ಯತಾ ಮಿಳಾಲಸ್ ಪೈಜೆ ಎಂಬ ಘೋಷಣೆ ಮೊಳಗಿತು.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಜಾತಿ ಲಿಂಗಾಯತರು ಮತ್ತು ಬೇಡ ಜಂಗಮ ಪಂಚಾಚಾರ್ಯರು ಸತ್ಯವೆಂದು ನಂಬಿ ಲಿಂಗಾಯತ ಧರ್ಮದ ಮಾನ್ಯತೆ ತಪ್ಪಿಸುತ್ತಿದ್ದಾರೆ. ಬಸವಕಲ್ಯಾಣ: 12ನೇ …

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

2 comments

  1. ಡಾ ರಾ ಮ ಹೊಸಮನಿ

    ಬಸವಾದಿಶರಣರ ವಚನಾಧರಿತ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಸಮಾವೇಶಗಳ ಸರಣಿಯ ಮುಂದುವರಿದ ಪುಣೆ ಸಮಾವೇಶ ಆಯೋಜಿಸಿದ ಮತ್ತು ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು.
    ಲಿಂಗಾಯತವು ಒಂಬತ್ತು ಶತಮಾನಗಳಿಂದ ಸ್ವತಂತ್ರ ಧರ್ಮವಾಗಿದ್ದು . ನಮ್ಮ ದೇಶದ ಸಿಖ್, ಜೈನ, ಬೌದ್ಧ, ಕ್ರೈಸ್ತ, ಇಸ್ಲಾಂ, ಪಾರ್ಸಿ, ಹಿಂದೂ ಧರ್ಮಕ್ಕಿಂತಲೂ ಲಿಂಗಾಯತ ಧರ್ಮ ಭಿನ್ನವಾದದು. ಭಾರತದಲ್ಲಿ ಬಸವತ್ವ ಹೊಂದಿರುವುದರಿಂದ ವಿಶ್ವ ಮಟ್ಟದಲ್ಲಿ ಗೌರವ ಹೆಚ್ಚುವುದಲ್ಲದೆ ದೇಶದಲ್ಲಿ ಸಹಿಷ್ಣುತೆ, ಸೌಹಾರ್ದತೆ, ವೈಜ್ಞಾನಿಕತೆ, ವೈಚಾರಿಕತೆ, ಸಹನೆ, ಪ್ರೀತಿ, ವಿಶ್ವಾಸ, ಸ್ಥೈರ್ಯ, ಸ್ವಾಭಿಮಾನ, ಪ್ರಗತಿ, ಭದ್ರತೆ ಇತ್ಯಾದಿ ಗಟ್ಟಿಯಾಗಿ ಬೇರೂರಿರುವಂತೆ ಮಾಡುವುದು.

    ವಚನಗಳೆ ಲಿಂಗಾಯತ ಧರ್ಮದ ಗ್ರಂಥ. ವಚನಗಳ ಆಶಯಗಳಗಳನ್ನು ಭಾರತ ದೇಶದ ಸಂವಿಧಾನ ಹೊಂದಿದೆ. ಲಿಂಗಾಯತ ಧರ್ಮದ ಮಾನ್ಯತೆ ದೇಶದ ಸಂವಿಧಾನಕ್ಕೆ ಗೌರವಿಸಿದಂತೆ ಮತ್ತು ಪ್ರಜಾಪ್ರಭುತ್ವ ಬೇರುಗಳನ್ನು ಗಟ್ಟಿಗೊಳಿಸಿದಂತೆ.
    ಮಾನ್ಯತೆ ಕಡೆಗಣಿಸುವುವೀಕೆ ಸಂವಿಧಾನಕ್ಕೆ ಅಪಚಾರಗೈದಂತೆ ಮತ್ತು ದೇಶಕ್ಕೆ ಧ್ರೋಹ ಬಗೆದಂತೆಯೆ ಸರಿ.

Leave a Reply

Your email address will not be published. Required fields are marked *

error: Content is protected !!