Breaking News
Home / featured / ಗಡಿನಾಡ ಗಾಂಧಿ : ಹೆರ್ಡೇಕರ ಮಂಜಪ್ಪನವರ ನೆನಪಲಿ

ಗಡಿನಾಡ ಗಾಂಧಿ : ಹೆರ್ಡೇಕರ ಮಂಜಪ್ಪನವರ ನೆನಪಲಿ

ಚಿತ್ರ : ಗಡಿನಾಡ ಗಾಂಧಿ ಹೇರ್ಡೆಕರ್ ಮಂಜಪ್ಪ

ಗಾಂಧಿಜಿಯವರ  ಶಾಂತಿ ಬೇಡ ಅವರ ಸಂಘಟನೆ ಬೇಕು! ಕನ್ನಡಿಗರೇ! ನಮ್ಮವರು ಬಹಳಷ್ಟು ಜನ ನಮ್ಮತನ ಮರೆತಿದ್ದಾರೆ ನಮ್ಮ ಇತಿಹಾಸ ಪರಂಪರೆ ಬುಡಕಟ್ಟು ಸಂಸ್ಕೃತಿಯನ್ನ ಮರೆತಿದ್ದಾರೆ, ನಮ್ಮ ೯೦% ಜನರು ತಮ್ಮ ಆಂತರಿಕ ಸ್ವಾತಂತ್ರ್ಯವನ್ನ ಕಳೆದುಕೊಂಡಿದ್ದಾರೆ. ( ಪರ ಸಂಸ್ಕೃತಿಯ ಇತಿಹಾಸ ಸಂಸ್ಕೃತಿಗೆ ದಾಸರಾಗಿ ನಮ್ಮತನವನ್ನೆ ವಿರೋಧಿಸುವಷ್ಟು ಬುದ್ದಿ ಮಾಂದ್ಯರಾಗಿದ್ದಾರೆ, ಹಿಗಾದಲ್ಲಿ ಹಂತಹಂತವಾಗಿ ಕನ್ನಡ ಸೋಲುವ ಹಂತಕ್ಕೆ ಬರುತ್ತದೆ ಇತಿಹಾಸದುದ್ದಕ್ಕೂ ಇಂತಹ ಪರಿಸ್ಥಿತಿಗಳು ಬಹಳಷ್ಟು ಬಂದಿವೆ, ರಾಜಕೀಯವಾಗಿ ಅದೆಷ್ಟೊ ಸಲ ಪರತಂತ್ರದ ಮುಷ್ಟಿಗೆ ಸಿಕ್ಕು ಒದ್ದಾಡಿದ್ದೆವೆ! ಆದರೆ ಆಗ ಪಲ್ಲವರ ಸೊಲ್ಲಡಗಿಸಲು ಮಯೂರನಂತೆ, ಉತ್ತರದವರ ಕೊಬ್ಬಡಗಿಸಲು ಪುಲಕೇಶಿಯಂತೆ, ಪರದೇಶದವರ ಹಣಿಯಲು ಬಂದ ವಿಕ್ರಮಾದಿತ್ಯನಂತೆ ಹೀಗೆ ಇತಿಹಾಸದೂದ್ದಕ್ಕೂ ರಾಜಕೀಯವಾಗಿ ಕುಸಿದು ಹೋದಾಗ ಕನ್ನಡ ಕ್ರಾಂತಿಯ ಕಿಡಿಗಳು ಕಾಡ್ಗಿಚ್ಚಾಗಿ ವಿರೋಧಿಗಳನ್ನ ಸುಟ್ಟಿದ್ದು ಇದ್ದೆ ಇದೆ ಆದರೆ ನಮ್ಮ ಇಂದಿನ ತಲ್ಲಣಗಳು ಏನೆಂದರೆ ರಾಜಕೀಯ ಜೊತೆಗೆ ಇನ್ನಿತರ ನಮ್ಮ ಪ್ರಾದೇಶಿಕತೆಯ ಜೊತೆಗೆ ಆಂತರಿಕ ಸ್ವಾತಂತ್ರಯದ ದಾಸ್ಯವು ಬಲು ಬಯಂಕರ ಇದರಿಂದ ನಮ್ಮವರೆ ನಮಗೆ ವೈರಿಗಳಾಗಿರುವುದು ದುರಂತ, ಹಾಗಂತ ನಾವು ಕೈಕಟ್ಟಿ ಕುಳಿತುಕೊಳ್ಳುವುದು ಶಂಡತನದ ಪರಮಾವದಿಯಾದಿತು, ನಮ್ಮವರನ್ನ ಜಾಗೃತಿಗೊಳಿಸುವುದು ನಮ್ಮೆಲ್ಲರ ಹಕ್ಕು ಜೊತೆಗೆ ಕರ್ತ್ಯವ್ಯ ಇದೆಷ್ಟೆ ಕಠಿಣವಾಗರಲಿ ಅದೆಷ್ಠೆ ಸೋಲುಗಳಾಗಲಿ ದೃತಿಗೆಡುವುದು ಬೇಡ,ನಮ್ಮ ಇತಿಹಾಸ ನಮ್ಮ ಸಂಸ್ಕೃತಿಯನ್ನ ಜಾಗೃತಿಗೊಳಿಸುವುದರ ಜೊತೆಗೆ ನಮ್ಮ ಜನರ ಕಷ್ಠಗಳಿಗೆ ಸ್ಪಂದಿಸೋಣ, ನಮ್ಮವರ ಮನೋದಾಸ್ಯವನ್ನ ತೆಗೆದುಹಾಕಲು ಇಂದೆ ಪಣತೊಡೋಣ, ಏಳು ಜಾಗೃತಗೊಳ್ಳು ಕನ್ನಡಿಗ! ಜಾತಿ ಮತ ಪಂಥವನ್ನ ತೊರೆದು ನಿನ್ನವರ ಬಿಡುಗಡೆಗಡೆಗೆ ಸಿದ್ದನಾಗು ಗಾಂಧಿಯಂತೆ ಜಾಗೃತ ಮಂತ್ರವನ್ನ ಹಿಡಿದು ನಮ್ಮವರಿಗೆ ಹಿಡಿದಿರುವ ಅಂತರಂಗದ ಗುಲಾಮಿ ಜಾಗೃತಿಗೊಳಿಸೋಣ ಮತ್ತೆ ಕರುನಾಡು ಶಾಂತಿ ಸಮೃದ್ದೆತೆಯ ಬಿಡಾಗಿಸಲು ಕನ್ನಡ ರಾಜ್ಯಲಕ್ಮ್ಷೀಯ ಕೀರ್ತಿ ಎಲ್ಲೆಡಯಲ್ಲೂ ಠೇಂಕರಿಸಲು ಕಂಕಣಭದ್ದರಾಗೋಣ –
ಮೊಳಗಲಿ ಮೊಳಗಲಿ ಕನ್ನಡದ ಕ್ರಾಂತಿ ಗೀತೆ ಮೊಳಗಲಿ
ಸೋಲಲಿ ಸೋಲಲಿ ಕನ್ನಡದ ವಿರೋಧಿಗಳೆಲ್ಲ ಸೋಲಲಿ..

ಲೇಖನ : ಶಿವಾನಂದ ಗೂಡನವರ ಬೆಂಗಳೂರು

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!