Breaking News
Home / featured / ಗುರುಮಹಾಂತ ಸ್ವಾಮಿಗಳಿಂದ ರೇಡ್, ಮನೆಯಲ್ಲಿದ್ದ ಬೆಳ್ಳಿಯ ಮೂರ್ತಿಗಳ ವಶಕ್ಕೆ.

ಗುರುಮಹಾಂತ ಸ್ವಾಮಿಗಳಿಂದ ರೇಡ್, ಮನೆಯಲ್ಲಿದ್ದ ಬೆಳ್ಳಿಯ ಮೂರ್ತಿಗಳ ವಶಕ್ಕೆ.

ಕೊಪ್ಪಳ : ಇಳಕಲ್ ಮಹಾಂತ ಜೋಳಿಗೆಯ ಹರಿಕಾರ, ದುಷ್ಟ ಚಟಗಳಿಗೆ ಮಂಗಳ ಹಾಡಲು ಮನೆ-ಮನೆಗೆ ತೆರಳಿ ಮದ್ಯ, ಗುಟಕಾ ಹಾಗೂ ಅವರಲ್ಲಿರುವ ದುಷಚಟಗಳ ತಮ್ಮ ಜೋಳಿಗೆಯಲ್ಲಿ ಹಾಕಿಕೊಂಡು ಸರ್ವಜನಾಂಗದ ಒಳತಿಗಾಗಿ ಬದುಕಿದ ಲಿಂ ಪೂಜ್ಯ ಮಹಾಂತಪ್ಪಗಳ ದಾರಿಯಲ್ಲಿಯೇ ಗುರುಮಹಾಂತ ಸ್ವಾಮಿಗಳಿಂದ ಹಲವಾರು ವೈಚಾರಿಕ ಹಾಗೂ ಬಸವ ಸಂದೇಶದ ಕಾರ್ಯಗಳು ನಿರಂತರ ಆರಂಭವಾಗಿದ್ದು ಕೊಪ್ಪಳದ ನಿವಾಸಿಗಳ ಅವರ ಮನೆಯಲ್ಲಿರುವ ದೇವರುಗಳ ಮೇಲೆ ರೇಡ್ ಮಾಡಲಾಗಿದ್ದು ದಿಢೀರ್ ದಾಳಿಯಿಂದ ಪೂಜಾ ಮನೆಯಲ್ಲಿ ಬೆಳ್ಳಿಯ ಮೂರ್ತಿಗಳು, ಕಾಯಿ ಮತ್ತು ಇತರ ಪೂಜಾ ಸಾಮಗ್ರಿಗಳ‌ ವಶಕ್ಕೆ ಪಡೆದಿದ್ದಾರೆ. ಇನ್ನು ಮುಂದೆ ಪರಿವರ್ತನೆಯ ದಾರಿಯಲ್ಲಿ ಸಾಗಬೇಕೆಂದು ಆರ್ಶಿವಚನ ಮೂಲಕ ನೋಟಿಸ್ ನೀಡಿದ್ದಾರೆ..

ಮನೆಯ ಮಾಲಿಕರಾದ ಕೊಪ್ಪಳದ ನಿವಾಸಿಗಳ ಅವರು ಕೆಲ ಕ್ಷಣ ಶರಣಾರ್ಥಿಯಲ್ಲಿ ತೆಲೆತಗ್ಗಿಸಿ ಬಸವಪ್ರಜ್ಞೆಯನ್ನು ಸಂಪೂರ್ಣ ಬೆಳೆಸಿಕೊಂಡು ಮುನ್ನಡೆಯುತ್ತೇವೆ ಎಂಬ ವಚನ ಮಾಡಿದರು. ನಂತರ ಇಳಕಲ್ ಲಿಂ ಪೂಜ್ಯ ಮಹಾಂತ ಅಪ್ಪಗಳ ಬಸವ ಗರಡಿಯಲ್ಲಿ ಬೆಳೆದ ಗುರುಮಹಾಂತ ಸ್ವಾಮಿಗಳು ಭೇಟಿಯಿಂದ ಮನಸ್ಸು ಪುಳಕಗೊಂಡ ತುಂಬಾ ಸಂತೋಷದಿಂದ ಬಿಳ್ಕೊಟ್ಟರು. ಜೊತೆಯಲ್ಲಿ ಶಿರೂರ ಬಸವಲಿಂಗ ಸ್ವಾಮೀಜಿಗಳು ಮತ್ತೋರ್ವ ಸ್ವಾಮೀಜಿ ಉಪಸ್ಥಿತರಿದ್ದರು.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!