Breaking News
Home / featured / ನಾಳೆ ರಾಷ್ಟ್ರೀಯ ವೀರಶೈವ ಮಠಾಧೀಶರ ಪರಿಷತ್ ಮೀಟಿಂಗ್

ನಾಳೆ ರಾಷ್ಟ್ರೀಯ ವೀರಶೈವ ಮಠಾಧೀಶರ ಪರಿಷತ್ ಮೀಟಿಂಗ್

ಶಿವಯೋಗಿಮಂದಿರ : ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಶಿವಯೋಗಿಮಂದಿರದಲ್ಲಿ ರಾಷ್ಟ್ರೀಯ ವೀರಶೈವ ಮಠಾಧೀಶರ ಪರಿಷತ್ತಿನಿಂದ ದಿನಾಂಕ : 11-10-2019 ರಂದು ಶುಕ್ರವಾರ ಮುಂಜಾನೆ 11:00 ಗಂಟೆಗೆ ಮಹತ್ವಪೂರ್ಣ ವಿಷಯಗಳನ್ನು ಕುರಿತು ತುರಂತ್ ಮೀಟಿಂಗ್ ಕರೆಯಲಾಗಿದೆ. ತಾವುಗಳು ಎಷ್ಟೇ ಕೆಲಸಗಳಿದ್ದರೂ ಅವುಗಳನ್ನು ಮುಂದೂಡಿ ಈ ಮೀಟಿಂಗ್ ತಪ್ಪದೇ ಕಡ್ಡಾಯವಾಗಿ ಆಗಮಿಸುವರಾಗಿ ಕಳಕಳಿಯಿಂದ ನಿವೇದಿಸಲಾಗಿದೆ

ಮೀಟಿಂಗ್ ನಲ್ಲಿ ಚರ್ಚಿಸುವ ಮಹತ್ವಪೂರ್ಣ ವಿಷಯಗಳು..

1). ಸಾಭಾರಿಪೀಠದ ಹಾಗೂ ನಿರಾಭಾರಿ ಪೀಠದ ಪರಂಪರೆಯ ಆಚರಣೆಗಳಲ್ಲಿರುವ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ವೀರಶೈವ ಸಮಾಜದ ಸಂಘಟನೆಗಾಗಿ ಹಾಗೂ ಎಲ್ಲ ಮಠಾಧೀಶರಲ್ಲಿ ಸಾಮರಸ್ಯದ ಸದ್ಭಾವನೆಯನ್ನು ನಿರ್ಮಿಸುವ ಕುರಿತು.

2). ಲಿಂಗಾಯತ ಸ್ವತಂತ್ರ ಧರ್ಮವೆಂದು ಹೋರಾಟ ಮಾಡುವ ಆಂದೋಲನವು ಕ್ಷೀಣಗೊಂಡಿದೆ ಎಂದು ತಿಳಿದು ಸುಮ್ಮನೆ ಕೊಡುವುದು ಅಷ್ಟೊಂದು ಉಚಿತವಲ್ಲ.

3). ಲಿಂಗಾಯತ ಧರ್ಮದ ಹೋರಾಟವು ಗುಪ್ತವಾಹಿನಿಯಾಗಿ ಮುಂದೆವರೆದಿರುವ ಸಂಭವವಿದೆ.

4). ಆದ ಕಾರಣ ವೀರಶೈವ ಲಿಂಗಾಯತ ಒಂದೇ ಎನ್ನುವ ಮೂಲಕ ಕಾನೂನು ಹೋರಾಟವನ್ನು ಮುಂದೆವರೆಯಿಸುವುದು.

5). ಅಖಿತ ಭಾರತ ವೀರಶೈವ ಮಹಾಸಭೆಯು “ವೀರಶೈವ-ಲಿಂಗಾಯತ ” ಒಂದೇ ಎನ್ನುವ ದಿಟ್ಟ ನಿಲುವಿನೊಂದಿಗೆ ಬೆಂಬಲಿಸಬೇಕು.

6). ವೀರಶೈವ ಮಹಾಸಭೆಯು ಮಠಾಧೀಶರ ಪರಿಷತ್ತಿನೊಂದಿಗೆ ಸಮಾಲೋಚಿಸಿ ಹೋರಾಟದಲ್ಲಿ ಮುಂದಾಗುವುದು.

7). ಎಲ್ಲ ವೀರಶೈವ ಮಠಗಳಲ್ಲಿ ಬಸವ ಜಯಂತಿಯಂದು ಪಂಚಪೀಠದ ಜಗದ್ಗುರುಗಳ, ಬಸವಣ್ಣನವರ, ಯಡೆಯೂರು ಸಿದ್ಧಲಿಂಗೇಶ್ವರ ಹಾಗೂ ಹಾನಗಲ್ ಕುಮಾರ ಶಿವಯೋಗಿಗಳವರ ಜಯಂತಿ ಒಂದೇ ಸಮಯದಲ್ಲಿ ಆಚರಿಸುವಂತೆ ತಿಳಿಸುವುದು.

8). ಈ ಪರಿಷತ್ತಿನ ಆರ್ಥಿಕ ಸುಭದ್ರತೆಗಾಗಿ ಶ್ರೀಮಂತ ಮಠಾಧೀಶರು ದೇಣಿಗೆ ಸಲ್ಲಿಸುವುದರ ಚರ್ಚೆ.

9). ಜಿಲ್ಲಾವಾರು ವೀರಶೈವ ಮಠಾಧೀಶರಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಪ್ರಯತ್ನಿಸುವುದು.





About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

Leave a Reply

Your email address will not be published. Required fields are marked *

error: Content is protected !!