Breaking News
Home / General News / ವಿರೋಧಿಗಳ ಕೈಗೊಂಬೆಯಾಗಿ ಹೋರಾಟಕ್ಕೆ ಇಳಿಯಬೇಡಿ

ವಿರೋಧಿಗಳ ಕೈಗೊಂಬೆಯಾಗಿ ಹೋರಾಟಕ್ಕೆ ಇಳಿಯಬೇಡಿ

RBD ವಿರೋಧಿಗಳ ಕೈಗೊಂಬೆಯಾಗಿ ಹೋರಾಟಕ್ಕೆ ಇಳಿಯಬೇಡಿ

ಕಲ್ಯಾಣ ಪರ್ವಕ್ಕೆ ಚಪ್ಪಲಿ ತೋರಿಸಿದ್ದು ಅಕ್ಷಮ್ಯ ಅಪರಾದ..

ಬಸವ ಕಲ್ಯಾಣ : ಕ್ರಾಂತಿಭೂಮಿ ಬಸವಕಲ್ಯಾಣದ ಹೃದಯ ಭಾಗದಲ್ಲಿರುವ ಬಸವೇಶ್ವರ ದೇವಸ್ಥಾನದ ಪದಾಧಿಕಾರಿಗಳು ಮತ್ತು ಕಲ್ಯಾಣದ ಯುವಕರು ‘ವಚನಾಂಕಿತ ತಿರುಚಿದ ವಿರುದ್ಧ ಮತ್ತು ಕಲ್ಯಾಣ ಪರ್ವದ’ ವಿರುದ್ಧ ಮೊನ್ನೆ ಕಲ್ಯಾಣದಲ್ಲಿ ದಾಖಲಿಸಿದ ಹೋರಾಟ ಪಡೆದ ದಿಕ್ಕು ನೋಡಿದರೆ ಅವರು ಜಿಲ್ಲೆಯ ರಾಷ್ಟ್ರೀಯ ಬಸವದಳದ ವಿರೋಧಿಗಳ ಕೈಗೊಂಬೆಯಾಗಿ ಹೋರಾಟಕ್ಕೆ ಧುಮುಕಿದ್ದಾರೆ ಎನ್ನುವ ಅನುಮಾನ ಬರುವಂತಹದು.

ಅವರು ಪ್ರತಿವರ್ಷ ಹೋರಾಟವನ್ನು ದಾಖಲಿಸುತ್ತಿದ್ದಾರೆ. ಆದರೆ ಯಾವತ್ತೂ ಸಹ ಅವರು ಚಪ್ಪಲಿ ತೋರಿಸುವಂತಹ ಕೀಳುಮಟ್ಟಕ್ಕೆ ಇಳದಿರಲಿಲ್ಲ. ಈ ವರ್ಷ ಮಾತ್ರ ಹೋರಾಟ ಗುಂಪಿನ ಮೂವರು ಯುವಕರು ಚಪ್ಪಲಿ ತೋರಿಸುವ ಹೀನ ಸಂಸ್ಕೃತಿಗೆ ಅವರು ಇಳದಿದ್ದು ಕೌತುಕ. ಅದಕ್ಕೆ ಪ್ರತಿಕಾರವಾಗಿ ಪಥಸಂಚಲನದಲ್ಲಿದ್ದ ಒಬ್ಬ ಮಹಿಳೆ ಹೋರಾಟಗಾರರಿಗೆ ಚಪ್ಪಲಿ ತೋರಿಸಿದ್ದು ಸ್ಪಷ್ಟವಾಗಿ ವಿಡಿಯೋ ಚಿತ್ರೀಕರಣದಲ್ಲಿ ದಾಖಲಾಗಿದ್ದು ಸುಳ್ಳಲ್ಲ.
ರಾಷ್ಟ್ರೀಯ ಬಸವ ದಳದ ವಿರುದ್ಧ ಜಿಲ್ಲೆಯಲ್ಲಿರುವ ಕೆಲವರು ದೇವಸ್ಥಾನದ ಮತ್ತು ಕಲ್ಯಾಣದ ಬೀಸಿರಕ್ತದ ಯುವಕರನ್ನು ತಮ್ಮ ಕೈಗೊಂಬೆಯಾಗಿ ಮಾಡಿಕೊಂಡು ಅವರನ್ನು ಹುರಿದುಂಬಿಸಿ ಈ ವರ್ಷ ಹೋರಾಟಕ್ಕೆ ಇಳಿಸಿದ್ದಾರೆಯೇ ಎಂಬ ಅನುಮಾನಗಳು ನಿಜವಾಗಿಸುವಂತೆ ಅವರ ಹೋರಾಟದ ಸ್ವರೂಪ ಎದ್ದು ಕಾಣುತ್ತಿತ್ತು. ಅವರ ಹೋರಾಟ ಚಪ್ಪಲಿ ತೋರಿಸುವಷ್ಟು ದ್ವೇಷಕ್ಕೆ ತಿರಗಿದ್ದು ಯಾಕೆ ಎನ್ನುವ ಪ್ರಶ್ನೆ ಕಾಡುತ್ತಿದೆ. ಹೋರಾಟದ ಮುಂಚೂಣಿಯಲ್ಲಿರುವ ಕೆಲವು ಯುವಕರು ನಿಜಕ್ಕೂ ಒಳ್ಳೆಯ ಚಳವಳಿಗಾರರು. ಯಾವುದೇ ದ್ವೇಷ-ನಂಜು ಇಟ್ಟುಕೊಳ್ಳದೆ ತಾತ್ವಿಕ ನೆಲೆಯಲ್ಲಿ ನಿಂತು ಪ್ರತಿವರ್ಷ ಹೋರಾಟಕ್ಕೆ ಇಳಿಯುತ್ತಿದ್ದರು. ಅವರ ಬದ್ಧತೆ, ತ್ಯಾಗ, ಪ್ರಮಾಣಿಕತೆ, ಅವರ ಮೊನಚು, ವಚನ ಸಾಹಿತ್ಯದ ಮೇಲಿನ ಅವರ ನಿಷ್ಠೆ, ಅವರು ದಾಖಲಿಸುತ್ತಿರುವ ಹೋರಾಟ ಮೆಚ್ಚಲೇಬೇಕು. ಆದರೆ ಈ ಸಲದ ಅವರ ಹೋರಾಟದಲ್ಲಿ ದ್ವೇಷ-ನಂಜು ಢಾಳಾಗಿ ಕಾಣುತ್ತಿತ್ತು.

ಚಳವಳಿಯ ಯುವಕರು ಯಾರದೋ ಮೋಡಿ ಮಾತಿಗೆ ಮರುಳಾಗಿ ದ್ವೇಷ-ನಂಜು ತುಂಬಿಕೊಂಡು ಯಾವುದೇ ಕಾರಣಕ್ಕೂ ಹೋರಾಟಕ್ಕೆ ಇಳಿಯಬಾರದು. ಹುರಿದುಂಬಿಸಿ ಹಿಂದೆ ನಿಂತು ಆಟ ಆಡಿಸುವವರ ದುರುದ್ದೇಶ ಬೇರೆಯದೇ ಆಗಿರುತ್ತದೆ. ಕಲ್ಯಾಣದ ಯುವಕರನ್ನು ಸಾಧನವಾಗಿಸಿಕೊಂಡು ಕಲ್ಯಾಣದ ನೆಲದಲ್ಲಿ ದ್ವೇಷ-ನಂಜು ಬಿತ್ತಿ. ಕಲ್ಯಾಣದ ಜನರನ್ನು ಮತ್ತು ರಾಷ್ಟ್ರೀಯ ಬಸವ ದಳದ ಕಾರ್ಯಕರ್ತರನ್ನು ಪರಸ್ಪರ ಹೊಡೆದಾಟಕ್ಕೆ ಇಳಿಸಿ. ರಕ್ತಪಾತ ಆದ ಮೇಲೆ ಹಿಂಬದಿಯ ಮೂಲಕ ಶಾಂತಧೂತರಂತೆ ಪ್ರವೇಶಿಸಿ ಕಲ್ಯಾಣದ ನೆಲದಲ್ಲಿ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುವ ಕುತಂತ್ರ ಇದರ ಹಿಂದೆ ಅಡಗಿದೆ.

ಈ ಹಿಂದೆ 1990ರಲ್ಲಿ ಕಲ್ಯಾಣದ ಯುವಕರು ಉತ್ಸಾಹದಿಂದ ವಚನಾಂಕಿತ ತಿರುಚಿದ ವಿರುದ್ಧದ ಹೋರಾಟದ ಭಾಗವಾಗಿ ಶರಣಮೇಳ ವಿರೋಧಿಸಲು ಕೂಡಲಸಂಗಮಕ್ಕೆ ಹೋದ ಸಂದರ್ಭದಲ್ಲಿ ಅವರು ಸಂಚರಿಸುತ್ತಿದ್ದ ವಾಹನ ಅಪಘಾತಕ್ಕೆ ಇಡಾಗಿ 05 ಜನರು ಪ್ರಾಣ ಕೊಟ್ಟಿದ್ದು ಮರಿಯಬಾರದು. ಸಾವಿಗೀಡಾದ ಮನೆಯವರ ಕಣ್ಣಲ್ಲಿ ಕಣ್ಣಿಟ್ಟು ನೋಡುವ ದೈರ್ಯ ಯಾರಿಗಿದೆ?
ಅವರ ಸಾವಿಗೆ ಕ್ಷಮೆ ಕೇಳಿದ್ದು ಯಾರು?
ಅದರ ಹೊಣೆಗಾರಿಕೆ ಯಾರು ಹೊತ್ತಿದ್ದಾರೆ?
ಅವರ ಕುಟುಂಬಕ್ಕೆ ಯಾರಾದರೂ ಸಹಾಯಹಸ್ತ ಒದಗಿಸಿದ್ದಾರೆಯೇ?
ಅವರ ಕುಟಂಬಕ್ಕೆ ಸಾಂತ್ವನ ಆದರೂ ಯಾರಾದರೂ ಹೇಳಿದ್ದಾರೆಯೇ?
ಎನ್ನುವುದು ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಯುವಕರ ತಲೆಯಲ್ಲಿ ವಿಷ ತುಂಬಿಸಿ ಅವರ ಹೆಗಲಮೇಲೆ ತುಪಾಕಿ ಇಟ್ಟು ಗುಂಡು ಹಾರಿಸಿ ತಮ್ಮ ಬೆಳೆ ಬೆಳಸಿಕೊಳ್ಳುವ ಹೀನ ಸಂಸ್ಕೃತಿಗೆ ಯಾರು ಇಳಿಯಬಾರದು. ಧರ್ಮ ಎನ್ನುವುದು ಒಂದು ಅಫೀಮು. ಧರ್ಮದ ನಶೆ ಏರಿಸಿಕೊಂಡವರು ಕೋತಿಗೆ ಹೆಂಡ ಕುಡಿಸಿದ ಹಾಗೆ ಕುಣಿಯುತ್ತಾರೆ ಎನ್ನುವುದು ಮರಿಯಬಾರದು. ಇವತ್ತು ಅರಬ್ ರಾಷ್ಟ್ರ ಗಳಲ್ಲಿ ಭಯೋತ್ಪಾದಕರು ಮುಗ್ಧ ಯುವಕರ ತಲೆಯಲ್ಲಿ ಧರ್ಮದ ಅಫೀಮು ತುರುಕಿ ಅವರನ್ನು ಭಯೋತ್ಪಾದಕರಾಗಿ ಪರಿವರ್ತಿಸುತ್ತಿರುವ ಉದಾಹರಣೆ ನಮ್ಮ ಕಣ್ಣೆದುರಿಗೆ ಇದೆ.

ಕಲ್ಯಾಣದ ಯುವಕರಲ್ಲಿ ಒಂದು ಮನವಿ:
ಮುಂದೆಯಾದರೂ ಯಾರದೋ ಗುರಾಣಿಯಾಗಿ ಹೋರಾಟಕ್ಕೆ ಇಳಿಯಬೇಡಿ. ತಾತ್ವಿಕ ನೆಲೆಯಲ್ಲಿ ಶಾಂತರೀತಿಯಾಗಿ ಸಂವಿಧಾನದ ಚೌಕಟ್ಟಿನಲ್ಲಿ ಹೋರಾಟ ರೂಪಿಸಿ. ಹೋರಾಟ ಮಾಡುವುದು,ನಿಮಗೆ ಅನಿಸಿದ್ದು ಬರೆಯುವುದು ಮಾತನಾಡುವುದು ಸಂವಿಧಾನ ನಿಮಗೆ ಹಕ್ಕು ಕೊಟ್ಟಿದೆ. ನಿಮ್ಮ ಹಕ್ಕನ್ನು ಕಿತ್ತುಕೊಳ್ಳಲು ಯಾರಿಂದಲೂ ಸಾದ್ಯವಿಲ್ಲ. ಆದರೆ ನಿಮ್ಮ ಹೋರಾಟದಲ್ಲಿ ದ್ವೇಷ-ನಂಜು ಮರುಕಳಿಸದಿರಲಿ. ಧರ್ಮಕ್ಕಿಂತ ನಿಮ್ಮ ಜೀವ ಶ್ರೇಷ್ಠವಾದದ್ದು. “ಮನುಷ್ಯನಿಗಾಗಿ ಧರ್ಮ ಇದೆಯೇ ಹೊರತು ಧರ್ಮಕ್ಕಾಗಿ ಮನುಷ್ಯರಲ್ಲ ಎನ್ನುವುದು ಮರಿಯಬೇಡಿ”. ಮುಂದೆ ಶಾಂತರೀತಿಯಲ್ಲಿ ಹೋರಾಟ ದಾಖಲಿಸಿ. ನಿಮ್ಮ ಹೋರಾಟ ಯಾರ ಮನಸ್ಸು ನೋಯಿಸದಂತೆ ಇರಲಿ. ಈ ದೇಶದ ಸರ್ವೋಚ್ಚ ನ್ಯಾಯಾಲಯ ಮತ್ತು ಸಂವಿಧಾನ ನಿಮ್ಮೊಂದಿಗಿದೆ.

ಸಿದ್ದಪ್ಪ ಮೂಲಗೆ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

Leave a Reply

Your email address will not be published. Required fields are marked *

error: Content is protected !!