Breaking News
Home / featured / ಶಿವಾಜಿ ಕಾಗಣಿಕರರಿಗೆ ರಾಜ್ಯೋತ್ಸವ ಪ್ರಶಸ್ತಿ

ಶಿವಾಜಿ ಕಾಗಣಿಕರರಿಗೆ ರಾಜ್ಯೋತ್ಸವ ಪ್ರಶಸ್ತಿ

ಉತ್ತಮ ಆಯ್ಕೆ

ಬೆಳಗಾವಿ : ಬೆಳಗಾವಿಯ ಪರಿಸರ ಸಂರಕ್ಷಕ, ಸಾವಿರಾರು ಕೆರೆಗಳನ್ನು ಕಾಪಾಡಿದವ, ಯಾವತ್ತೂ ಪ್ರಚಾರ ಬಯಸದ ಕಾಯಕಜೀವಿ ಶರಣ ಶಿವಾಜಿ ಕಾಗಣಿಕರ ಅವರಿಗೆ ಈ ಸಲದ ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವದು ಅತ್ಯಂತ ಯೋಗ್ಯವೆಂದೇ ಹೇಳಬೇಕು.
ಮಹಾರಾಷ್ಟ್ರದ ಗಡಿಭಾಗವಾದ ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ಶಿವಾಜಿ ಅವರು ಅನೇಕ ಗ್ರಾಮಗಳಲ್ಲಿ ಕೆರೆಗಳ ಪುನಶ್ಚೇತನಕ್ಕೆ ಶ್ರಮಿಸಿದ ಹಿರಿಯ ಪರಿಸರವಾದಿ. ಖಾದಿ ಹಾಫ್ ಪ್ಯಾಂಟ, ಖಾದಿ ಶರ್ಟ ಧರಿಸುವ ಶಿವಾಜಿ ಅವರ ಬಗಲಲ್ಲಿ ಖಾದಿ ಚೀಲವೊಂದು ಸದಾ ನೇತಾಡುತ್ತಿರುತ್ತದೆ. ಗಡ್ಡಧಾರಿ ಬೇರೆ. ತಲೆಯ ಮೇಲೊಂದು ಗಾಂಧಿ ಟೊಪ್ಪಿಗೆ. ಅಪರೂಪದ ವ್ಯಕ್ತಿತ್ವ.
ಈ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಬಳಿ ಮೊಬೈಲ್ ಇಲ್ಲ. ನಾನು ಅವರನ್ನು ಹಲವಾರು ಬಾರಿ ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿಯೇ ಭೆಟ್ಟಿಯಾಗುತ್ತೇನೆ. ಮಾತೂ ಸಹ ಹೆಚ್ಚಿಗೆ ಆಡುವದಿಲ್ಲ.” ನಮಸ್ಕಾರ, ನಮಸ್ಕಾರ” ಅಷ್ಟೇ. ಅವರ ಮಾತೃ ಭಾಷೆಯಾದರೂ ಕನ್ನಡವನ್ನು ಚೆನ್ನಾಗಿ ಮಾತನಾಡುತ್ತಾರೆ.
ಅರ್ಜಿ ಹಾಕದ, ವಸೂಲಿ ಹಚ್ಚದ ವ್ಯಕ್ತಿಗೆ ಪ್ರಶಸ್ತಿ ದೊರೆತಿರುವದು ಒಳ್ಳೆಯ ಬೆಳವಣಿಗೆಯೆಂದೇ ಹೇಳಬೇಕು.
ನೂರಾರು ಪುಟಗಳ ” ಸಂಕ್ಷಿಪ್ತ ವಿವರಣೆ”,ಜೊತೆಗೆ ನೂರಾರು ಫೋಟೊಗಳು, ಮಂತ್ರಿಗಳ, ಶಾಸಕರ ಶಿಫಾರಸು ಪತ್ರಗಳು, ಜಗದ್ಗುರುಗಳ ಶಿಫಾರಸು, ಅವಕಾಶ ಸಿಕ್ಕರೆ ಉದ್ದಂಡ ನಮಸ್ಕಾರ. ಇವೆಲ್ಲವನ್ನೂ ಪ್ರಯೋಗಿಸಿ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪಡೆದವರಿಗೆ ಕೊರತೆಯೇನಿಲ್ಲ. ಪ್ರಶಸ್ತಿ ಸಿಗದೇ ಇದ್ದರೆ ಜೀವನವೇ ಹಾಳಾಗಿ ಹೋಯಿತೆನ್ನುವ ಮಾನಸಿಕ ಸ್ಥಿತಿ ಉಳ್ಳವರೂ ಇದ್ದಾರೆ.” ಮರಳಿ ಯತ್ನವ ಮಾಡು” ಎಂಬಂತೆ ಹತ್ತು ಹದಿನೈದು ವರ್ಷಗಳ ಕಾಲ ಪ್ರತಿವರ್ಷ ಅಗಷ್ಟ, ಸಪ್ಟೆಂಬರ್ ನಲ್ಲಿ ಪ್ರಯತ್ನ ಆರಂಭಿಸಿ ಕೊನೆಗೆ ಅಕ್ಟೋಬರ್ ಕೊನೆಯ ವಾರದಲ್ಲಿ ಪ್ರಶಸ್ತಿ ಪಟ್ಟಿಗಾಗಿ ಕಾದವರೂ ಇದ್ದಾರೆ!

ಅಶೋಕ ಚಂದರಗಿ

ಕನ್ನಡ ಕ್ರಿಯಾ ಸಮಿತಿ ಅದ್ಯಕ್ಷರು ಬೆಳಗಾವಿ

About Shivanand

Admin : Lingayat Kranti Monthly news paper 8884000008 [email protected]

Check Also

ಮಠಾಧೀಶರಿಗೆ ರಾಜಕಾರಣದ ಉಸಾಬರಿ ಏಕೆ?

  ಬೆಂಗಳೂರು: ರಾಜ್ಯದಲ್ಲಿನ ಸ್ವಾಮೀಜಿಗಳ ಪೈಕಿ ಕೆಲವರು ರಾಜಕೀಯ ನಾಯಕರಂತೆ ವರ್ತಿಸುತ್ತಿರುವುದು ಅವರು ಪ್ರತಿನಿಧಿಸುವ ಸ್ಥಾನಗಳಿಗೆ ಶೋಭೆ ತರುವಂತಹದ್ದಲ್ಲ. ಸಮಾಜಕ್ಕೆ …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಯಾರಿಗೆ? ಹಾಗೂ ಮಹಾ ಮಾದರಿ ಶೇ.16ರ ವಿಶೇಷ ಮೀಸಲಾತಿ ಬೇಡವೇ….?

    ಬಸವಣ್ಣ ಬರುವಾಗ | ಬಿಸಿಲು ಬೆಳದಿಂಗಳು || ಮೊಗ್ಗು ಮಲ್ಲಿಗೆ | ಅರಳ್ಯಾವ || ಯಾಲಕ್ಕಿ ಗೊನೆಬಾಗಿ …

ಕರ್ನಾಟಕದ ಮ್ಯಾಕ್ಸ್ ಮುಲ್ಲರ್ ‘ವಚನ ಪಿತಾಮಹ’ ಡಾ. ಫ.ಗು.ಹಳಕಟ್ಟಿ

  ರಾಮದುರ್ಗ: ೧೯೫೬ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಪದವಿ ಪ್ರದಾನ ಸಮಾರಂಭ. ಡಾ.ಪಾವಟೆಯವರು ಕುಲಪತಿಗಳಾಗಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯದ …

ರಾಣಿ ಚನ್ನವೀರಮ್ಮ

  ಲಿಂಗಾಯತ ಕ್ರಾಂತಿ: ಚನ್ನಮ್ಮ ಮತ್ತು ವೀರಮ್ಮ ಇವರಿಬ್ಬರು ಕಿತ್ತೂರ ದೇಸಾಯಿಣಿಗಳು. ಇವರಿಬ್ಬರ ಹೆಸರು ಒಂದಾಗಿರುವ ಚನ್ನವೀರಮ್ಮಾಜಿ ಎನ್ನುವ ಕೆಳದಿಯ …

ಜನಪದವೇ ಲಿಂಗಾಯತ ಧರ್ಮ ಉಳಿವಿಗೆ ಆಧಾರ

  ಬೀದರ್: 12ನೆ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿ ನಂತರ ಲಿಂಗಾಯತ ಧರ್ಮದ ಶರಣರು ಚೆಲ್ಲಾಪಿಲ್ಲಿ ಆದರು, ಹಲವಾರು ಶರಣರು …

ಸಂವಿಧಾನ ಮತ್ತು ಕಾನೂನುಗಳ ಸಮರ್ಪಕ ಬಳಕೆಯೇ ಈ ದೇಶದ ಎಲ್ಲ ಸಮಸ್ಯೆಗಳಿಗೆ ಪರಿಹಾರ

  ~ ಡಾ. ಜೆ ಎಸ್ ಪಾಟೀಲ. ವಿಜಯಪುರ: ಭಾರತವು ಧಾರ್ಮಿಕ ಮೂಢನಂಬಿಕೆಗಳ ತವರು ಮನೆ. ಇಲ್ಲಿ ಧಾರ್ಮಿಕ ನಂಬಿಕೆಗಳ …

ಗ್ರಾಮ ಸ್ವರಾಜ್ಯ ಸಾಕಾರಗೊಳಿಸಿದ: ರಾಮಪ್ಪ ಬಿದರಿ

ವಿಜಯಪುರ: 1952-1962 ಹತ್ತು ವರ್ಷಗಳ ಕಾಲ ಲೋಕಸಭಾ ಸದಸ್ಯರಾಗಿದ್ದ ರಾಮಪ್ಪ ಬಿದ್ರಿ ಈ ಹುದ್ದೆಯನ್ನು ಎಂದೂ ತಮ್ಮ ಸ್ವಂತದ ಲಾಭಕ್ಕಾಗಿ …

ಲಿಂಗಾಯತ ಧರ್ಮದ ಹೋರಾಟ ಸರಣಿ-2 ಭಾಗ-4

  ಲಿಂಗಾಯತ ಧರ್ಮ ಮಾನ್ಯತೆಯ ಹೊರಾಟದಲ್ಲಿ ಲಿಂಗಾಯತ ಸಮನ್ವಯದ ಸಮಿತಿ ಪಾತ್ರ. ಬಸವಕಲ್ಯಾಣ: ಬೆಂಗಳೂರಿನ ಕುಂಬಳಗೋಡಿನ ಬಸವ ಗಂಗೋತ್ರಿಯಲ್ಲಿ ಜೂನ್ …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಜಾತಿ ಲಿಂಗಾಯತರು ಮತ್ತು ಬೇಡ ಜಂಗಮ ಪಂಚಾಚಾರ್ಯರು ಸತ್ಯವೆಂದು ನಂಬಿ ಲಿಂಗಾಯತ ಧರ್ಮದ ಮಾನ್ಯತೆ ತಪ್ಪಿಸುತ್ತಿದ್ದಾರೆ. ಬಸವಕಲ್ಯಾಣ: 12ನೇ …

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

ರವಿ ಬೆಳಗೆರೆ ಒಂದು ಕನಸು ನನಸು ಮಾಡಲು ಆಗಲಿಲ್ಲ..!

  ಚನ್ನಮ್ಮನ ಕಿತ್ತೂರು: ಪಿ. ಲಂಕೇಶರ ನಂತರ ಕನ್ನಡ ಪತ್ರಿಕೋದ್ಯಮ ಮತ್ತೊಂದು ರೀತಿ ಕಲ್ಪನೆ ಮೀರಿ ಮುನ್ನಡಿಸಿದ್ದ ಕೀರ್ತಿ ರವಿಗೆ …

One comment

  1. ಶಂಭು ಬಣಕಾರ್

    ನನಗೆ ಶಿವಾಜಿ ರಾವ್ ರಾಜ್ಯೋತ್ಸವ ಪ್ರಶಸ್ತಿ ಯಾವಾಗಲೂ ಸಿಗಬೇಕಾಗಿತ್ತು ಆದರೂ ಕೂಡ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿರುವುದು ನನಗೆ ತುಂಬಾ ಖುಷಿ ತಂದಿದೆ ಸಂತೋಷದ ಸಂಗತಿ

    ಶಿವಾಜಿ ರವರು ನನಗೆ ಗೊತ್ತಿರುವ ಹಾಗೆ ಸುಮಾರು 20 ವರ್ಷಗಳ ಹಿಂದೆ ಅವರನ್ನು ಭೇಟಿಯಾಗಿದ್ದೆ ಅವರು ಅನೇಕ ವಿಷಯಗಳಲ್ಲಿ ನಮಗೆ ಮಾದರಿಯಾಗಿದ್ದಾರೆ ಅವರು ನಡೆಸಿದ ಆಂದೋಲನದ ಪರಿಸರ ಸಂರಕ್ಷಣೆ ರಕ್ಷಣೆ
    ೧) ಮುಖ್ಯವಾದ ಅಂದೋಲನ ಎಲ್ಲರೂ ಗೋಬರ್ ಗ್ಯಾಸ್ ಅನ್ನು ಬಳಸಿ ಪರಿಸರ ಮತ್ತು ಕಾಡನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದ್ದ ಇವರ ಆಂದೋಲನ ದೊಡ್ಡ ಕ್ರಾಂತಿಯನ್ನೇ ಮಾಡಿತು ಆಂದೋಲನದಲ್ಲಿ ಸಮಯದಲ್ಲಿ ಜನರ ಇವರ ಮೇಲೆ ಸಗಣಿಯನ್ನು ಎರಚಿದ್ದಾರೆ ಇದರ ಅರ್ಥ ನಮ್ಮ ಜನರು ಎಷ್ಟು ಮೌಢ್ಯಕ್ಕೆ ಒಳಗಾಗಿದ್ದರೂ ಎಂಬುದನ್ನು ತೋರಿಸುತ್ತದೆ

    ೨) ಮುಖ್ಯವಾಗಿ ಇವರು ಗಾಂಧಿವಾದಿಗಳು ಈಗಲೂ ಕೂಡ ಅವರು ಬಳಸುವುದು ಎರಡು ಜೊತೆ ಬಟ್ಟೆ ಮಾತ್ರ ಈ ಮಾದರಿಯನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳಲು ಬಹಳ ಪ್ರಯತ್ನ ಪಟ್ಟೆ ಸಾಧ್ಯವಾಗಲಿಲ್ಲ

Leave a Reply

Your email address will not be published. Required fields are marked *

error: Content is protected !!