Breaking News
Home / featured / 509 ವಚನಗಳಿಂದ ಬೆಳಗಾವಿ ದೃಷ್ಟಿವಿಕಲಚೇತನೆ ಬಸಮ್ಮ ಪ್ರಥಮ,

509 ವಚನಗಳಿಂದ ಬೆಳಗಾವಿ ದೃಷ್ಟಿವಿಕಲಚೇತನೆ ಬಸಮ್ಮ ಪ್ರಥಮ,

ಬೀದರ : ದೃಷ್ಟಿ ವಿಕಲಚೇತನರು ಇಂದು ಹಲವಾರು ರಂಗಗಳಲ್ಲಿ ತಮ್ಮ ಸಾಧನೆ ಮಾಡುತ್ತಿದ್ದಾರೆ ಅದರಲ್ಲಿ ಬೆಳಗಾವಿಯ ಕುಮಾರಿ ಬಸಮ್ಮ ಎಂಬುವವರು ಜಗತ್ತಿನ ಪ್ರತಿಯೊಂದು ಜೀವಿಗಳ ಲೇಸಿಗಾಗಿ 12 ನೆಯ ಶತಮಾನದಲ್ಲಿ ಬಸವಾದಿ ಶರಣರಿಂದ ರಚಿತವಾದ ವಚನ ಸಾಹಿತ್ಯವನ್ನು ಸರಳ ಹಾಗೂ ಸರಾಗವಾಗಿ 509 ವಚನಗಳನ್ನು ಪ್ರಸ್ತುತ ಪಡಿಸಿದು ಈ ವರ್ಷದ ವಿಶೇಷವಾಗಿದೆ.

ಬಸವಕಲ್ಯಾಣದಲ್ಲಿ ದಿನಾಂಕ 17/11/2019ರಂದು ನಡೆದ ರಾಜ್ಯಮಟ್ಟದ ವಚನ ಕಂಠಪಾಠ ಸ್ಪರ್ಧೆಯಲ್ಲಿ 509 ವಚನ ಹೇಳಿ ದೃಷ್ಟಿ ವಿಕಲಚೇತನ ಬೆಳಗಾವಿಯ ವಿದ್ಯಾರ್ಥಿನಿ ಕುಮಾರಿ ಬಸಮ್ಮ ಮಠದ ರಾಜ್ಯಮಟ್ಟದಲ್ಲಿ ಅತೀ ಹೆಚ್ಚು ವಚನಗಳ‌ ಹೇಳುವ ಮೂಲಕ ಪ್ರಥಮ ಬಹುಮಾನ ₹10000ಗೆ ಆಯ್ಕೆಯಾಗಿದ್ದಾರೆ .

ಇನ್ನೋರ್ವ ಬೆಳಗಾವಿಯ ಕುವರಿ ಮಹಾಲಕ್ಷ್ಮಿ ರಾಜು ಕುಂದಗೊಳ 375 ವಚನ ಹೇಳಿ ದ್ವಿತೀಯ ಬಹುಮಾನ ₹5000ಗೆ ಆಯ್ಕೆಯಾಗಿದ್ದಾರೆ. ಇವರಿಗೆ ಸಂಚಾರಿ ಗುರು ಬಸವ ಬಳಗ ಬೆಳಗಾವಿ ಇವರಿಂದ ತುಂಬು ಹೃದಯದ ಅಭಿನಂದನೆಗಳ ಸಲ್ಲಿಸಿ ಸತ್ಕರಿಸಿದರು. ಬೀದರ ಜಿಲ್ಲೆಯ ಬಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧ್ಯಕ್ಷರಾದ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೆವರು ಹಾಗೂ ಬೆಳಗಾವಿಯ ಶರಣರು ಉಪಸ್ಥಿತರಿದ್ದರು.





About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

One comment

  1. ಇಂಥಹ ಕಾರ್ಯಗಳು ಸ್ತೃತ್ಯಾಹ೯. ವಚನ ಜೀವಂತವಾಗಿ ಉಳಿಯಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮಗಳು ಅತ್ಯಂತ ಅವಶ್ಯಕ. ಧನ್ಯವಾದಗಳು.

Leave a Reply

Your email address will not be published. Required fields are marked *

error: Content is protected !!