ಲಿಂಗಾಯತ ಧರ್ಮದ ಆಧಾರವಾಗಿಟ್ಟುಕೊಂಡು ನಮ್ಮ ಶರಣತತ್ವದ ನಿಜಾಚರಣೆಗಳು ಕುರಿತು ಮಾಹಿತಿ, ಶರಣರ, ಸಂತರ, ಮಹಾತ್ಮರ, ದಾರ್ಶನಿಕರ ಹಾಗೂ ಸ್ವತಂತ್ರ ಹೋರಾಟಗಾರರ ಜಯಂತಿಗಳು, ನಾಡ ಹಬ್ಬ, ರಾಷ್ಟ್ರೀಯ ಹಬ್ಬ ಹಾಗೂ ಅಂತರರಾಷ್ಟ್ರೀಯ ದಿನಾಚರಣೆಗಳ ಕುರಿತು ತಿಳಿಸಲಾಗಿದೆ.
ಸರಕಾರಿ ರಜಾ ದಿನಗಳು ಪ್ರತಿ ತಿಂಗಳು ನಡೆಯುವ ಕಾರ್ಯಕ್ರಮಗಳು, ಶರಣರ ಜಯಂತಿ ತಿಂಗಳಲ್ಲಿ ಶರಣರ ಸಂಕ್ಷಿಪ್ತ ವಿವರಣೆ ನೀಡಲಾಗಿದೆ.
ಶರಣರ ದೃಷ್ಟಿಯಲ್ಲಿ ವಾರ, ತಿಥಿ ನಕ್ಷತ್ರ, ಜ್ಯೋತಿಷ್ಯ, ಶುಭ-ಅಶುಭಗಳು, ಪಂಚಾಂಗದ ಕರಿತು ಬರೆದಿರುವ ವಚನಗಳನ್ನು ಹಾಕಲಾಗಿದೆ.
ಗುಗೆ-ಕಾಗೆ ಮನೆ ಹೊಕ್ಕರೆ, ಪಂಚಗದಲ್ಲಿ ಲಿಂಗೈಕ್ಯವಾದರೆ ಮನೆಯ ತೊರೆಯಬೇಕೆಂದು ತಿಳಿಸುವ ವೈದ್ಧಿಕ ಪಂಚಾಂಗದಿಂದ ಹೊರಗೆ ಬಂದು ಅಪ್ಪಟ ಶರಣ ಸಂಪ್ರದಾಯದಂತೆ ದಿನದರ್ಶಿಕೆ ಹೊರಬಂದಿದೆ.
ಪ್ರತಿಯೊಬ್ಬ ಲಿಂಗಾಯತರ ಮನೆಯಲ್ಲಿ ಇರಲೇಬೇಕಾದ ವಿನೂತನ ಲಿಂಗಾಯತ ದಿನದರ್ಶಿಕೆ ಆರಂಭಿಸಿದ್ದು ಈಗಾಗಲೇ ಬಹಳಷ್ಟು ಬೇಡಿಕೆ ಬಂದಿದ್ದು ತುಂಬಾ ಸಂತೋಷ ತಂದಿದೆ..
ಈಗಾಗಲೇ 20,000 ಪ್ರತಿಗಳು ಖಾಲಿಯಾಗಿದ್ದು
ಮತ್ತೆ 10,000 ಮುದ್ರಣಕ್ಕೆ ಸಿದ್ಧವಾಗುತ್ತಿದೆ..
ಮುಖಬೆಲೆ 30 ರೂ
24 ಕಲರ್ ಪುಟಗಳಲ್ಲಿ ಇದೆ.
ಪತ್ರಿಕೆಗೆ ಸಂಪೂರ್ಣ ಸಹಾಯ ಸಹಕಾರ ಮಾಡಿ ನನ್ನಿಂದ ಇತಂಹ ಒಂದು ಹೊಸ ಪ್ರಯತ್ನಕ್ಕೆ ಮಾರ್ಗದರ್ಶನ ನೀಡಿದ ಶಂಕರ ಕಾಕಾ ಗುಡಸ ಹಾಗೂ ಗುಡಸ ಕುಟುಂಬದ ಎಲ್ಲ ಸಹೋದರ ಸಹೋದರಿಗೂ ಅನಂತ ಕೃತಜ್ಞತೆಗಳು…
ಪತ್ರಿಕೆಗೆ ತಮ್ಮ ಅಮೂಲ್ಯವಾದ ಮಾರ್ಗದರ್ಶನ ಮಾಡಿದ ಪ್ರಕಾಶ ಕಶೆಟ್ಟಿ ಅಣ್ಣನಿಗೂ ಹೃದಯಪೂರ್ವಕ ಶರಣು-ಶರಣಾರ್ಥಿಗಳು..
ಲಿಂಗಾಯತ ದಿನದರ್ಶಿಕೆಗೆ ಮಾರ್ಗದರ್ಶನ ನೀಡಿದ ಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಪೂಜ್ಯ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು, ಬಸವ ಬೆಳವಿಯ ಶರಣ ಬಸವದೇವರು ಹಾಗೂ ನಾಡಿನ ಎಲ್ಲ ಪೂಜ್ಯರಿಗೂ ಅನಂತ ಶರಣು ಶರಣಾರ್ಥಿಗಳು…
ಲಿಂಗಾಯತ ದಿನದರ್ಶಿಕೆ ಆರಂಭಿಸಲು ಹತ್ತಾರು ಜನ ಖುದ್ದಾಗಿ ಜಾಹಿರಾತು ನೀಡಿ ಆರ್ಥಿಕ ಸಹಾಯ ಮಾಡಿದ ಸರ್ವ ಶರಣರಿಗೂ ಅನಂತ ಧನ್ಯವಾದಗಳು…
ಲಿಂಗಾಯತ ದಿನದರ್ಶಿಕೆ ಪ್ರತಿಯೊಬ್ಬರ ಮನೆ, ಮಠ, ಕಛೇರಿ, ಸಂಘ-ಸಂಸ್ಥೆಗಳಿಗೆ ಮುಟ್ಟಿಸುವ ಕಾರ್ಯ ಪ್ರತಿಯೊಬ್ಬ ಶರಣರಿಂದ ನಡೆಯಲಿ ಎಂದು ವಿನಂತಿಸಿಕೊಳ್ಳುತ್ತೇನೆ…
ಯಶಸ್ವಿಯಾಗಿ ಜಗವ ಬೆಳಗಲು ಬಸವ ಪ್ರಭೆ ವಿಶ್ವಬೆಳಗಲಿ
ನನಗೆ 20 ಕ್ಯಾಲೆಂಡರ್ ಬೇಕು..