Breaking News
Home / featured / ಅನುಭವ ಮಂಟಪ ಉತ್ಸವದಲ್ಲಿ ಮಹಾಶರಣ ಹರಳಯ್ಯ ನಾಟಕ ಪ್ರದರ್ಶನ

ಅನುಭವ ಮಂಟಪ ಉತ್ಸವದಲ್ಲಿ ಮಹಾಶರಣ ಹರಳಯ್ಯ ನಾಟಕ ಪ್ರದರ್ಶನ

ಬಸವ ಕಲ್ಯಾಣ : ಬಸವಾದಿ ಶರಣರ ಜೀವನದ ಸನ್ನಿವೇಶ ಮತ್ತು ಅವರ ಜೀವನದ ಸಂದೇಶಗಳನ್ನು ಹೊಂದಿರುವ ನಾಟಕಗಳನ್ನು ಮಕ್ಕಳ ಮುಖಾಂತರ ಮಾಡಿಸಿ ತೋರಿಸುವುದು ಬಹಳಷ್ಟು ಹೆಮ್ಮೆಪಡುವಂತಹ ಕಾರ್ಯವಾಗಿದೆ ಇದರಲ್ಲಿ ಮಕ್ಕಳು ವಿಶೇಷವಾಗಿ ಸನ್ನಿವೇಶಗಳನ್ನು ಹಾಸ್ಯಮಯವಾಗಿ ಪ್ರಸ್ತುತ ಪಡಿಸಿರುವುದು ಬಹಳಷ್ಟು ಸಂತೋಷ ತಂದಿದೆ ಎಂದು ಬಾಲ್ಕಿ ಹಿರೇಮಠ ಸಂಸ್ಥಾನ ಡಾ. ಬಸವಲಿಂಗ ಪಟ್ಟದ್ದೆವರು ಹೇಳಿದರು.
ಅನುಭವ ಮಂಟಪ ಉತ್ಸವದ ಸಮಾರೋಪ ಸಮಾರಂಭದಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ಸಾಪುರ ಗ್ರಾಮದ ರಾಷ್ಟ್ರೀಯ ಬಸವ ಸೇನಾ ಮಕ್ಕಳಿಂದ ಪೂಜ್ಯ ಬಸವಾನಂದ ಸ್ವಾಮಿಗಳ ನಿರ್ದೇಶನ ಹಾಗೂ ಬೆಳಗಾವಿ ರಾಷ್ಟ್ರೀಯ ಬಸವ ಸೇನಾ ಅಧ್ಯಕ್ಷ ಶಂಕರ ಗುಡಸ ಅವರು ಮಾರ್ಗದರ್ಶನದಲ್ಲಿ ನಡೆದ ಮಹಾಶರಣ ಹರಳಯ್ಯ ಎಂಬ ನಾಟಕವನ್ನು ವೀಕ್ಷಿಸಿ ಮಾತನಾಡಿದರು.
ನಾಟಕದಲ್ಲಿ ಪುಟ್ಟ ಬಾಲಕರಾದ ಭಟ್ಟ ಹಾಗೂ ಶಟ್ಟಿಯ ಪಾತ್ರದಲ್ಲಿ ನಟಿಸಿದ ಮಕ್ಕಳು ಇಡೀ ನಾಟಕಕ್ಕೆ ಮೆರಗು ತಂದರು. ಸಂಗೀತಗಾರ ಹಾಗೂ ಪೂಜ್ಯಬಸವಾನಂದ ಸ್ವಾಮಿಗಳು ಕಾರ್ಯವನ್ನು ಪ್ರಶಂಸಿದರು. ಸುಮಾರು 70ಕ್ಕೂ ಅಧಿಕ ಮಕ್ಕಳು ಭಾಗಿಯಾಗಿದ್ದರು.
ಪೂಜ್ಯ ಬಸವ ಬೆಳವಿ ಶರಣ ಬಸವದೇವರು, ಪೂಜ್ಯ ಗಂಗಾಭಿಕಾ ಅಕ್ಕನವರು, ಬಾಲ್ಕಿ ಗುರುಬಸವ ಪಟ್ಟದ್ದೇವರು, ಗದಗ ಬಸವಾನಂದ ಸ್ವಾಮಿಗಳು, ಸುವರ್ಣ ಗುಡಸ, ಸಂತೋಷ ಗುಡಸ, ಶೃತಿ ಗುಡಸ, ಬೆಳಗಾವಿ ಹಾಗೂ ಬಸ್ಸಾಪುರ ಗ್ರಾಮದಿಂದ ಆಗಮಿಸಿದ ನೂರಾರು ಜನತೆ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಾವಿರಾರು ಜನ ನಾಟಕವನ್ನು ನೋಡಿ ಆನಂದಿಸಿದರು.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

‘ಶರಣಾರ್ಥಿ’ ಗುರು ಪ್ರವೇಶ..!

  ಗಜೇಂದ್ರಗಡದ ಶರಣದಂಪತಿಗಳು ನೂತನ ಮನೆಗೆ ‘ಶರಣಾರ್ಥಿ’ ಎಂದು ವಿಶಿಷ್ಟ ರೀತಿಯಲ್ಲಿ ಮನೆ ನಾಮಕರಣ ಮಾಡಿ ಗುರುಪ್ರವೇಶ, ಅನುಭಾವ ಹಾಗೂ …

Leave a Reply

Your email address will not be published. Required fields are marked *

error: Content is protected !!