Breaking News
Home / featured / ಪಂಚಪೀಠಾಧೀಶರಿಂದ ವೀರಶೈವ ಧರ್ಮಕ್ಕೆ ದ್ರೋಹ

ಪಂಚಪೀಠಾಧೀಶರಿಂದ ವೀರಶೈವ ಧರ್ಮಕ್ಕೆ ದ್ರೋಹ

ಬೆಳಗಾವಿ : ಲಿಂಗಾಯತ ಧರ್ಮದ ಹೋರಾಟದ ಸಂದರ್ಭದಲ್ಲಿ ಪಂಚಪೀಠಾಧೀಶರು ಹಾಗೂ ಕೆಲವು ಕುಂತಂತ್ರಿಗಳು ಲಿಂಗಾಯತ ಸ್ವತಂತ್ರ ಧರ್ಮಕ್ಕೆ ವಿರೋಧಿಸಿ ವೀರಶೈವ ಲಿಂಗಾಯತ ನಾವೆಲ್ಲರೂ ಒಂದೇ ಲಿಂಗಾಯತ ಸ್ವತಂತ್ರ ಧರ್ಮವೆಂದು ನಮ್ಮನ್ನು ಒಡೆಯುತ್ತಿದ್ದಾರೆ ಎಂದು ನೂರಾರು ಒಳಪಂಗಡಗಳಿಗೆ ಪ್ರಯೋಜನವಾಗಬೇಕಿದ್ದ ಲಿಂಗಾಯತ ಧರ್ಮದ ಹೋರಾಟಕ್ಕೆ ಅಡ್ಡಿಪಡಿಸಿದರು.
ಆದರೆ ಇಗ ಪಂಚಪೀಠಾಧೀಶರು ಹಾಗೂ ಕೆಲವು ಕುತಂತ್ರಿಗಳು ಸೇರಿಕೊಂಡು ಬೇಡಜಂಗಮರೆಂಬ ಎಸ್‌ಸಿ ವರ್ಗದ ಸವಲತ್ತುಗಳನ್ನು ಇಂದು ಮೀಸಲಾತಿಯ ರೂಪದಲ್ಲಿ ಪಡೆದಿದ್ದಾರೆ. ಇಗ ಇವರಿಗೆ ವೀರಶೈವ ಧರ್ಮ ಎಂದು ಹೇಳುತ್ತಿದವರು ವೀರಶೈವರಲ್ಲಿರುವ ಉಳಿದ ಸಮಾಜಗಳು ನೆನಪಾಗಲಿಲ್ಲವೇ. ನೆನಪಿಗೆ ಬರಲಿಲ್ಲ. ಇನ್ನುಳಿದವರಲ್ಲಿ ಬಡತನ ಕಾಣಲಿಲ್ಲವೇ.

ಜೊತೆಗೆ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದಲ್ಲಿ ಇಂದು ಸೊಲ್ಲಾಪುರ ಎಸ್‌ಸಿ ಮೀಸಲಾತಿ ಕ್ಷೇತ್ರದಲ್ಲಿ ಬೇಡಜಂಗಮರೆಂಬ ಜಾತಿಪ್ರಮಾಣ ಪಡೆದು ಇಗ ಸಂಸದರಾಗಿದ್ದಾರೆ.
ಹಾಗೆಯೇ ಕರ್ನಾಟಕದಲ್ಲಿ ಸಾವಿರಾರು ಜನರು ಇದೇ ಮೀಸಲಾತಿ ಪಡೆದು ಶಿಕ್ಷಣ, ಉನ್ನತ ಉದ್ಯೋಗಗಳಲ್ಲಿ ಮೀಸಲಾತಿ ಪಡೆಯುತ್ತಿದ್ದಾರೆ.

ಯಾಕೆ ಈ ರೀತಿಯ ಕುಂತಂತ್ರ ಬುದ್ಧಿ ಉಪಯೋಗಿಸಿದರು ಎಂಬುವುದು ಇನ್ನಾದರೂ ಲಿಂಗಾಯತ ಧರ್ಮದಲ್ಲಿರುವ ನೂರಾರು ಒಳಪಂಗಡದವರು ರಾಜಕಾರಣಿಗಳು ಹಾಗೂ ಮಠಾಧೀಶರು ಅರ್ಥಮಾಡಿಕೊಳ್ಳಬೇಕು.

ಲಿಂಗಾಯತ ಧರ್ಮದ ಹೋರಾಟ ವಿರೋಧ ಮಾಡುವುದು ಬಿಡಬೇಕು ಲಿಂಗಾಯತ ಸಮಾಜದ ಒಳತಿಗಾಗಿ ಮುಂದಾಗಬೇಕೆಂದು ಈ ಮೂಲಕ ವಿನಂತಿಸುವೆ..

ವರದಿ : ಶಂಕರ ಗುಡಸ
ಜಿಲ್ಲಾದ್ಯಕ್ಷರು ರಾಷ್ಟ್ರೀಯ ಬಸವ ಸೇನಾ ಬೆಳಗಾವಿ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಡೊಂಗಿ ಮಂತ್ರವಾದಿ ಲಪಟಾಯಿಸಿದ್ದು 6 ಕೋಟಿ

  ಬೆಳಗಾವಿ: ಖ್ಯಾತ ಸಂಗೀತ ಸಂಯೋಜಕ ಕೆ.ಕಲ್ಯಾಣ ಅವರ ದಾಂಪತ್ಯ ವಿವಾದ ಹೊಸ ತಿರುವು ಪಡೆದುಕೊಂಡಿದ್ದು, ಡೊಂಗಿ ಮಂತ್ರವಾದಿ ಲಪಟಾಯಿಸಿದ …

Leave a Reply

Your email address will not be published. Required fields are marked *

error: Content is protected !!