Breaking News
Home / featured / ಲಿಂಗಾಯತರು ಜಾಗೃತರಾಗುತ್ತಿದ್ದಾರೆ

ಲಿಂಗಾಯತರು ಜಾಗೃತರಾಗುತ್ತಿದ್ದಾರೆ

ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಬಹಳಷ್ಟು ಗಟ್ಟಿಮುಟ್ಟಾಗಿ ಕಾರ್ಯ ಮಾಡುತ್ತಿದೆ ಎಂಬುವುದು ಎಲ್ಲರೂ ತಿಳಿಸಬೇಕಾದ ಒಂದು ಸಂಗತಿ ಹಂಚಿಕೊಳ್ಳುವೆ…

ಇಂದು ನಾಡಿನಾದ್ಯಂತ ಎಲ್ಲಿ ನೋಡಿದರಲ್ಲಿ ಪ್ರವಚನ, ಕಾರ್ಯಾಗಾರ, ಕಮ್ಮಟ, ಸ್ಪರ್ಧಾತ್ಮಕ ಕಾರ್ಯಕ್ರಮಗಳು ನಡೆಯುತ್ತಿರುವುದರ ಜೊತೆಗೆ ಬಸವತತ್ವ, ಶರಣ ದರ್ಶನ, ಲಿಂಗಾಯತ ಧರ್ಮದ ಕಾರ್ಯಕ್ರಮಗಳು ಬಹಳಷ್ಟು ನಿರಂತರವಾಗಿ ಬಹಳಷ್ಟು ಯಶಸ್ವಿಯಾಗಿ ಮುಂದೆವರೆದಿವೆ. ಇದು ಜನರಲ್ಲಿ ನಮ್ಮ ನಮ್ಮ ಸಮಾಜದ ಮಕ್ಕಳು, ಯುವಕರು ಹಾಗೂ ವಿದ್ಯಾವಂತರು, ಉನ್ನತ ಅಧಿಕಾರಿಗಳು, ಹಾಗೂ ಸಮಾಜಮುಖಿ ಕಾರ್ಯ ಮಾಡುವವರು ಹೆಚ್ಚಿದ್ದು ಇದು ಲಿಂಗಾಯತ ಧರ್ಮದ ಹೋರಾಟಕ್ಕೆ ಪೂರಕವಾಗಿದೆ.

ನಮ್ಮ ಧರ್ಮ ಹೋರಾಟದಲ್ಲಿ ಭಾಗವಹಿಸಿದ್ದ ನಾಯಕರು, ಮಠಾಧೀಶರು ಉದ್ಯಮಿಗಳು ಇಂದು ನಾವು ಸಂಘಟನೆಯಾಗಿಲ್ಲ ಎಂದು ಅರಿತುಕೊಂಡು ನಾವು ಹೇಗೆ ಇದರಲ್ಲಿ ಕಾರ್ಯ ಮಾಡಬೇಕು ನಮ್ಮ ಸಮಾಜಕ್ಕಾಗಿ ಹೇಗೆ ಸೇವೆಗೈಯಬೇಕೆಂದು ಪ್ರಾಮಾಣಿಕವಾಗಿ ಪ್ರಯತ್ನ ನಡೆಸಿದ್ದಾರೆ ಎಂದು ಹೇಳಲು ಬಹಳಷ್ಟು ಸಂತೋಷವೆನಿಸುತ್ತಿದೆ..

ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟದಲ್ಲಿ ನಮ್ಮ ಹೋರಾಟದ ಮುಖಂಡತ್ವ ವಹಿಸಿದವರು ಕೇವಲ ರಾಜಕಾರಣಿಗಳು ರಾಜಕೀಯ, ಮಠಾಧೀಶರು ಅನುದಾನಕ್ಕಾಗಿ, ಉದ್ಯಮಿಗಳು ತಮ್ಮ ಲಾಭಕ್ಕಾಗಿ ಭಾಗವಹಿಸಿದ್ದಾರೆ ಎಂದು ದೋಷಿಸುವ ಮನಸ್ಸುಗಳಿಗೆ ಒಂದು ಮಾತು, ನೀವು ಅಂದುಕೊಂಡಿದ್ದು ಎಷ್ಟು ಒಂದು ಕಡೆಯಾದರೆ ಅಷ್ಟೇ ಧರ್ಮದ ಮಾನ್ಯತೆಗಾಗಿ ದುಡಿಯುತ್ತಿರುವದು ಸತ್ಯವೆಂದು ನನಗೆ ವ್ಯಯಕ್ತಿಕವಾಗಿ ಬಹಳಷ್ಟು ಜನ ಕಂಡುಬಂದರು.
ನಾನು ಗಮನಿಸಿದಂತೆ ನಮ್ಮವರಲ್ಲಿ ವನ ಪ್ರತಿಷ್ಠೆ ಹೆಚ್ಚು ಹೀಗಾಗಿ ಒಬ್ಬರನ್ನು ಒಬ್ಬರು ದೋಷಿಸಿ ಹಿಂದುಳಿದರು. ಜೊತೆಗೆ ಹೋರಾಟಕ್ಕೆ ತಾವೇ ಅಡೆತಡೆ ಮಾಡಿದರು ಆದರೆ ಇತ್ತಿಚಿಗೆ ಎಲ್ಲರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವುದು, ಮಠ, ಪಕ್ಷಗಳ ಹಂಗುಹರಿದು ಲಿಂಗಾಯತ ಧರ್ಮಕ್ಕಾಗಿ ನಿಂತಿರುವ ನೂರಾರು ಜನ ಸ್ವಾಮೀಜಿಗಳ ನಾನು ಕಂಡುಕೊಳ್ಳುತ್ತಿದ್ದೇನೆ.
ಮುಂದಿನ ದಿನಗಳಲ್ಲಿ ಬಸವತತ್ವ ಒಪ್ಪಿಕೊಂಡು ಲಿಂಗಾಯತ ಧರ್ಮದ ಮಾನ್ಯತೆಗಾಗಿ ಬಹಳಷ್ಟು ಗಟ್ಟಿ ಆರಂಭವಾಗುತ್ತದೆ ಎಂಬುವುದರಲ್ಲಿ ಸಂಶಯವಿಲ್ಲಾ ಎಂದೆನಿಸಿದೆ…

ಶಿವಾನಂದ ಮೆಟ್ಯಾಲ
ಸಂಪಾದಕರು
ಲಿಂಗಾಯತ ಕ್ರಾಂತಿ

 

ಲಿಂಗಾಯತ ದಿನದರ್ಶಿಕೆ ಬಿಡುಗಡೆ ಗೊಳಿಸಿದ ಪೂಜ್ಯರು ಹಾಗೂ ಬಸವಭಕ್ತರು

 

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!