Breaking News
Home / featured / ದೆಹಲಿ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ‘ಅನುಭವ ಮಂಟಪ’ ಸ್ತಬ್ಧಚಿತ್

ದೆಹಲಿ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ‘ಅನುಭವ ಮಂಟಪ’ ಸ್ತಬ್ಧಚಿತ್

ದೆಹಲಿ : ಪ್ರತಿ ವರ್ಷವೂ ಜನವರಿ 26ರಂದು ದೆಹಲಿಯಲ್ಲಿ ನಡೆಯುವ ಗಣರೋಜ್ಯೋತ್ಸವದ ಕೇಂದ್ರ ಬಿಂದುವೆಂದರೆ ಪಥಸಂಚಲನ. ಈ ಪಥಸಂಚಲನದಲ್ಲಿ ಎಲ್ಲ ರಾಜ್ಯಗಳ ಸ್ತಬ್ಧಚಿತ್ರಗಳು ಪ್ರದರ್ಶನಗೊಳ್ಳುತ್ತವೆ.2020 ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿರುವ ಕರ್ನಾಟಕದ ‘ಅನುಭವ ಮಂಟಪ’ ಸ್ತಬ್ಧಚಿತ್ರವು ಈ ಬಾರಿ ಎಲ್ಲರ ಮನೆಸೂರೆಗೊಳ್ಳುವುದು ಬಹುತೇಕ ನಿಶ್ಚಿತವಾಗಿದೆ.

ಭಾರತವು ಸಂವಿಧಾನವನ್ನು ಅಳವಡಿಸಿಕೊಂಡು 70 ವರ್ಷಗಳು ಪೂರ್ಣಗೊಂಡು ಹಾಗೂ ಸ್ವತಂತ್ರ ಗಣರಾಜ್ಯವಾಗಿರುವ ಈ ಸಂದರ್ಭದಲ್ಲಿ ಅನುಭವ ಮಂಟಪ ಸ್ತಬ್ಧಚಿತ್ರವು ವಿಶೇಷ ಮಹತ್ವ ಪಡೆದಿದೆ. ನವದೆಹಲಿಯ ಗಣರಾಜ್ಯೋತ್ಸವ ಪ್ರದರ್ಶನಕ್ಕೆ ಕರ್ನಾಟಕ ಸ್ತಬ್ಥಚಿತ್ರವು ಸತತ ಹನ್ನೊಂದನೇ ಬಾರಿಗೆ ಆಯ್ಕೆಗೊಂಡಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಎಸ್.ಎನ್. ಸಿದ್ದರಾಮಪ್ಪ ಅವರು ತಿಳಿಸಿದ್ದಾರೆ.

ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿ 12 ನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದ ಅನುಭವ ಮಂಟಪವು ಸಾಮಾಜಿಕ, ಧಾರ್ಮಿಕ, ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ಮಾನವ ಸಮಾಜದ ಅಭಿವೃದ್ಧಿಗಾಗಿ ಆಧ್ಯಾತ್ಮಿಕ, ತತ್ವಶಾಸ್ತ್ರ ಆಧಾರದ ಮೇಲೆ ಬಸವೇಶ್ವರರು ಹಾಕಿಕೊಟ್ಟ ಸಮಾನತೆಯ ದೃಷ್ಟಿಕೋನ, ಸೋದರತೆ ಮತ್ತು ಸಹಭಾಗಿತ್ವದ ಹಾದಿಯಲ್ಲಿ ಸಮಾಜದ ಸುಧಾರಕರಾಗಿ ಇಂದಿಗೆ ಒಂಭತ್ತು ಶತಮಾನದ ಹಿಂದೆಯೇ ಸಾಮಾಜಿಕ ದೃಷ್ಟಿಕೋನವುಳ್ಳ ಆ ಮಹಾನ್ ಮಾನವತಾವಾದಿಯ ಸಾಧನೆ ಅಪಾರವಾದದ್ದು.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!