Breaking News
Home / featured / ಯುಗಪುರುಷ : ಅರಟಾಳ ರುದ್ರಗೌಡ್ರು

ಯುಗಪುರುಷ : ಅರಟಾಳ ರುದ್ರಗೌಡ್ರು

ಮಾರ್ಚ್ 22 ರಂದು ಜಯಂತಿ

ಚನ್ನಮ್ಮನ ಕಿತ್ತೂರು : ರಾವಬಹೂದ್ದುರ್ ಅರಟಾಳ್ ರುದ್ರಗೌಡರ 1910ರವರೆಗೆ ಉತ್ತರ ಕರ್ನಾಟಕ ದಲ್ಲಿ ಒಂದೂ ಕಾಲೇಜು ಇರಲಿಲ್ಲಾ.ಅರಟಾಳ ರುದ್ರಗೌಡ್ರು ಅಂದಿನ ಆಂಗ್ಲ ಕಲೆಕ್ಟರ್ ಗಳಿಗೆ ಮನವರಿಕೆ ಮಾಡಿದರು.

ಅಂದಿನ ಶಿಕ್ಷಣ ಕಾರ್ಯದರ್ಶಿ “ಮಿಸ್ಟರ್ ಹಿಲ್” ಅವರಿಗೆ ಕಾಲೇಜು ಸ್ತಾಪನೆಯ ಮಹತ್ವ ಮತ್ತು ಅವಶ್ಯಕತೆ ತಿಳಿಸಿದರು. ಮತ್ತು ಅದಕ್ಕಿರುವ ಅಡ್ಡಿ ಆತಂಕಗಳನ್ನು ತಿಳಿಸಿದರು. ಇದು ನಡೆದುದು 1913ರಲ್ಲಿ ಅದಕ್ಕೆ ಮೂರು ಲಕ್ಷ ರೂಪಾಯಿ ಗಳನ್ನು ಠೇವಣಿ ಇಡುವ ಷರತ್ತು ಹಾಕಿದರು ಮಿಸ್ಟರ್ ಹಿಲ್.

“”ಅರಟಾಳ ರುದ್ರಗೌಡ್ರ ಒಂದು ಲಕ್ಷ ಮತ್ತು ರೂದ್ದಶ್ರೀನಿವಾಸರಾಯರು ಇಂದು ಲಕ್ಷ “” ವಂತಿಗೆ ಸಂಗ್ರಹಿಸುವುದು ಮತ್ತು ಬ್ರಿಟಿಷ್ ಸರಕಾರ ಒಂದು ಲಕ್ಷ ಸೇರಿಸಿ ಕಾಲೇಜು ಸ್ತಾಪಿಸುವ ನಿರ್ಧಾರವಾಯಿತು.

ಅರಟಾಳ ರುದ್ರಗೌಡ್ರ ಕೇಲವೆ ದಿನಗಳಲ್ಲಿ ಹಣಕೂಡಿಸಿ ಬೆಳಗಾವಿಯ ಅಂದಿನ ಕಮೀಷನರ್ “”ಮಿ.ಶಪರ್ಡ “”ಅವರಿಗೆ ತಂತಿ ಕಳುಹಿಸಿದರು. ಸಂತುಷ್ಟರಾದ ಶೆಪರ್ಡ ತಾವೇ ಸ್ವತಃ ಕಾಲೇಜು ಸ್ಥಾಪನೆ ಕುರಿತು ಬಾಂಬೆ ಗೆಜೆಟಿಯರ್ ನಲ್ಲಿ ಪ್ರಕಟಿಸಿದರು. ಅರಟಾಳರನ್ನು “ಸರ್ವೂತ್ತಮ ಶ್ರೇಷ್ಠ ಆಡಳಿತಗಾರ” ಎಂದು ಹೂಗಳಿದರು.

ಆದರೆ ರೂದ್ದ ಶ್ರೀನಿವಾಸ ರಾಯ ಅವರು ಸಂಗ್ರಹಿಸಿದ ಮೂತ್ತ ಕೇವಲ ಮೂವತ್ತು ಸಾವಿರ ಮಾತ್ರ. ಅರಟಾಳ ರುದ್ರಗೌಡ್ರ ರು ಮಾಡಿದ ಕಾರ್ಯ ಕೀರ್ತಿಯನ್ನು ರೂದ್ದ ಶ್ರೀನಿವಾಸ ರು ಬಾಚಲು ಪ್ರಯತ್ನಿಸಿದರು.

ಉಳಿದ ಹಣವನ್ನು ಸಂಗ್ರಹಿಸಲು ಸರಕಾರ ಅರಟಾಳ ರುದ್ರಗೌಡ್ರ ಸಹಾಯ ಕೇಳಿತು. ಉಳಿದ ಹಣವನ್ನು ಕೇಲವೆ ದಿನಗಳಲ್ಲಿ ಕೂಡಿಸಿ ಸರಕಾರ ದಲ್ಲಿ ಠೇವಣಿ ಮಾಡಿದಾಗ ದಿನಾಂಕ 20/6/1917ರಲ್ಲಿ ಕಾಲೇಜು ವಿದ್ಯುಕ್ತವಾಗಿ ಅಸ್ತಿತ್ವಕ್ಕೆ ಬಂದಿತು.

ನಂತರ ಸರ ಸಿದ್ದಪ್ಪ ಕಂಬಳಿಯವರು ಮುಂಬೈ ಸರಕಾರದಲ್ಲಿ ಶಿಕ್ಷಣ ಮಂತ್ರಿಗಳಿದ್ದಾಗ ಗ್ರೆಡ ೨ ಕಾಲೇಜ್ ನ್ನು ಗ್ರೇಡ ೧ ಕಾಲೇಜ ಆಗಿ ಪರಿವರ್ತಿಸಿದರು..

ಮುಂದೆ ಅರಟಾಳ ರುದ್ರಗೌಡ್ರ “”1916-17ರಲ್ಲಿ ಧಾರವಾಡ ದಲ್ಲಿ ದಿವಾನ ಬಹದ್ದೂರ್ ಮೆಣಸಿನಕಾಯಿ” ಮತ್ತು ಇನ್ನಿತರ ಮುಖಂಡರನ್ನು ಸಂಪರ್ಕಿಸಿ “‘ ಕರ್ನಾಟಕ ಸೆಂಟ್ರಲ್ ಕೋ ಬ್ಯಾಂಕ್ ಸ್ಥಾಪಿಸಿದರು. ಇದರ ಪ್ರೇರಕ ಶಕ್ತಿ ಯೇ ಅರಟಾಳ ರುದ್ರಗೌಡ್ರ..

ನಂತರ ಬೆಳಗಾವಿಯಲ್ಲಿ ಸಪ್ತಖುಷಿಗಳ ಮನಸ್ಸಿನ ಅಮೂರ್ತ ಸಂಕಲ್ಪ ವಾದ ಕೆ.ಎಲ್.ಇ. ಕಟ್ಟಲು ಸಪ್ತರ್ಷಿಗಳಿಗೆ ಬೆನ್ನೆಲುಬಾಗಿ ನಿಂತರು.ಮುಂಬೈ ಸರಕಾರದಲ್ಲಿ ಸಂಸ್ಥೆಯ ನೋಂದಣಿ ಕುರಿತು ನಾಯಕತ್ವ ವಹಿಸಿಕೂಂಡರು. ದೈತ್ಯ ಕೆ.ಎಲ್.ಇ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ ಸಂಸ್ಥೆಗೆ ಉತ್ತಮ ಮುನ್ನುಡಿ ಬರೆದರು. ಅರಟಾಳ ರುದ್ರಗೌಡ್ರ ಜೀವಸ್ಯ ಗೆಳೆಯ ಶಿರಸಂಗಿ ಲಿಂಗರಾಜ ರ ಮೃತ್ಯು ಪತ್ರದ ಅನುಷ್ಠಾನಕ್ಕೆ ಅವರ ತಾಯಿ ನಿರಾಕರಿಸಿದಾಗ ಸುಮಾರು ಹದಿನೈದು ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿ “”” ನವಲಗುಂದ ಶಿರಸಂಗಿ ಟ್ರಸ್ಟ್ “” ಕಾರ್ಯ ಪ್ರಾರಂಬಿಸಲು ಕಾರಣಿಭೂತರಾದರು..

1851 ಮಾರ್ಚ 22ರಂದು ಕುಂದಗೋಳ ತಾಲೂಕಿನ ಹಿರೆ ಹರಕುಣಿ ಗ್ರಾಮದಲ್ಲಿ ಜನಿಸಿದ ಇವರು ಧಾರವಾಡದ ಕಲೆಕ್ಟರ್ ಕಚೇರಿಯಲ್ಲಿ ಕಾರಕೂನರಾಗಿ ವೃತ್ತಿ ಆರಂಬಿಸಿ deputy district collector ವರೆಗೆ ಕೆಲಸ ನಿರ್ವಹಿಸಿದರು..

1901ರಲ್ಲಿ collector ಹುದ್ದೆ ಹೂಂದುವ ಅವಕಾಶ ಬಂದಿತ್ತು ಆದರೆ”” ಇಂಗ್ಲೆಂಡಿನ ಸೆಕ್ರೆಟರಿ ಆಪ್ ಸ್ಟೇಟ್ ಇಂಡಿಯಾ ” ವಿಭಾಗದಲ್ಲಿ ಶಿಪಾರಸ್ಸಿನ ವಿಳಂಬವಾದ ಆ ಹುದ್ದೆಯಿಂದ ವಂಚಿತರಾದರು…

ಇಷ್ಟೆಲ್ಲಾ ಮಾಡಿದ್ದು ಓರ್ವ ಸರಕಾರಿ ಅದಿಕಾರಿಯಾಗಿ ಅಂದರೆ ಆಶ್ಚರ್ಯ ವಾದರೂ ವಾಸ್ತವ. ಇಂದು ಧಾರವಾಡ ವಿದ್ಯಾಕಾಶಿ ಎನ್ನಿಸಿಕೂಳ್ಳಬೇಕಾದರೆ ಅರಟಾಳ ರುದ್ರಗೌಡ್ರ ಸ್ಥಾಪಿಸಿದ” KCD”ಪಾತ್ರ ಬಹಳ ಹಿರಿದಾಗಿದೆ.. ಮಾರ್ಚ೨೨ ಅರಟಾಳ ರುದ್ರಗೌಡ್ರ ಜನ್ಮದಿನದ ಸಂದರ್ಭದಲ್ಲಿ ಅವರನ್ನು ಸ್ಮರಿಸಲು ಅವರ ಸಾಧನ ಪಥವನ್ನು ಸಮಾಜಕ್ಕೆ ತಿಳಿಸುವ ಹಂಬಲವಷ್ಟೆ.

ಲೇಖಕರು: ಶರಣ : ಮಹೇಶ ಚನ್ನಂಗಿ KES
ಚನ್ನಮ್ಮನ ಕಿತ್ತೂರು

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!