Breaking News
Home / featured / 2019-2020ರ ರಾಷ್ಟ್ರೀಯ ಬಸವ ಪುರಸ್ಕಾರ: ಡಾ ಬಸವಲಿಂಗ ಪಟ್ಟದ್ದೇವರಿಗೆ

2019-2020ರ ರಾಷ್ಟ್ರೀಯ ಬಸವ ಪುರಸ್ಕಾರ: ಡಾ ಬಸವಲಿಂಗ ಪಟ್ಟದ್ದೇವರಿಗೆ

ಬಾಲ್ಕಿ : ಕರ್ನಾಟಕ ಸರ್ಕಾರ 2019-2020 ರ ರಾಷ್ಟ್ರೀಯ ಬಸವ ಪುರಸ್ಕಾರವನ್ನು ಬೀದರ ಜಿಲ್ಲೆಯ ಬಾಲ್ಕಿ ಹಿರೇಮಠ ಸಂಸ್ಥಾನದ ಪೀಠಾದ್ಯಕ್ಷರಾದ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೆವರಿಗೆ ನೀಡಿರುವುದು ಅತ್ಯಂತ ಸಂತಸ ನೀಡಿದೆ.

ಕನ್ನಡಮಠದ ಜಂಗಮರಾದ ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತೃ ಹೃದಯದ ಸೃಜನಶೀಲ, ವೈಚಾರಿಕ ಬರಹಗಾರರು. ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಸ್ಥಾಪಿಸಿ ಪ್ರತಿವರ್ಷ ಸಾವಿರಾರು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವ ಶಿಕ್ಷಣ ಚಿಂತಕರು.
ನೂರಾರು ಅನಾಥ ಮಕ್ಕಳ ಸಂರಕ್ಷಕರು.
ವಚನ ವಿಶ್ವವಿದ್ಯಾಲಯದ ರೂವಾರಿಗಳು.
ಆಧುನಿಕ ಅನುಭವ ಮಂಟಪದ ಅಧ್ಯಕ್ಷರು.
ಕಲೆ, ಸಾಹಿತ್ಯ, ಶಿಕ್ಷಣ, ಧರ್ಮ, ಸಮಸಮಾಜದ ಏಳಿಗೆ, ವಿಶೇಷವಾಗಿ ದೀನ ದಲಿತರ, ಮಹಿಳೆಯರ ಸಂವರ್ಧನೆಗಾಗಿ ದುಡಿಯುತ್ತಿರುವ ಸಾಮಾಜಿಕ ಸಾಮರಸ್ಯದ ಹರಿಕಾರರು.
ಧರ್ಮ ಸಮನ್ವಯತೆ ಪ್ರತಿಪಾದಕರು.
ಬಸವತತ್ವವನ್ನು ನಾಡಿನಾಚೆಗೂ ಪಸರಿಸಲು, ಪ್ರಚೂರ ಪಡಿಸಲು ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶಗಳಲ್ಲಿ ಬಸವ ಪರಿಷತ್ತು ಸ್ಥಾಪಿಸಿದ ಬಸವತತ್ವದ ಸಾಂಸ್ಕøತಿಕ ರಾಯಭಾರಿಗಳು.
ನಾಡಿನ ವಿದ್ವಾಂಸರ ಕೃತಿಗಳನ್ನು ಪ್ರಕಟಿಸಿ ಅಕ್ಷರ ಪ್ರೀತಿ ಮೆರೆದವರು.
ಪೂಜ್ಯರ ಬಸವತತ್ವ ಪ್ರಸಾರ ಸೇವೆ ಸಾಧನೆಗಾಗಿ ಕರ್ನಾಟಕ ಘನ ಸರ್ಕಾರ 2019-20ರ ಬಸವ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಮಸ್ತ ನಾಡಿನ ಬಸವ ಅನುಯಾಯಿಗಳಿಗೆ ಹರ್ಷ ಉಂಟುಮಾಡಿದೆ.

 ನೂತನ ಅನುಭವ ಮಂಟಪ ನಿರ್ಮಾಣ ಕಾರ್ಯದಲ್ಲಿ ಮಹತ್ವದ ಪಾತ್ರ ವಹಿಸುತಿದಾರೆ.

 

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!