Breaking News
Home / General News / ತಟ್ಟೆ ಬಾರಿಸುವದರೊಂದಿಗೆ ಇದನ್ನೂ ಮಾಡಿ

ತಟ್ಟೆ ಬಾರಿಸುವದರೊಂದಿಗೆ ಇದನ್ನೂ ಮಾಡಿ

G.B ಪಾಟೀಲ

ಬೆಂಗಳೂರು : ಕರೋನಾ ವೈರಸ್ ಹರಡದಿರಲು ೧೪ ತಾಸುಗಳ ಬಂದಮಾಡಿ ನಂತರ ಯುದ್ದ ಗೆದ್ದವರಂತೆ ಚಪ್ಪಾಳೆ ತಟ್ಟುವದು,ಗಂಗಾಳ ಬಾರಿಸುವದರಿಂದ ನಾವು ರೋಗದಿಂದ ಪಾರಾಗಲಾರೆವು. ಡಾಕ್ಟರ್ ಗಳ ಕೆಲಸ ಇನ್ನೂ ಪ್ರಾರಂಭವಾಗಬೇಕಾಗಿದೆ.(ಅವರ ಕ್ಷಮೆ ಕೇಳುತ್ತ, ನನ್ನಮಗಳು ಅಳಿಯ ಅಲ್ಲದೆ ನನ್ನ ಅನೇಕ ಹತ್ತಿರದ ಸಂಬಂಧಿಗಳು ಆ ವೃತ್ತಿಯಲ್ಲಿ ಇರುವರು).

 

ನಾವು ಈಗ ಎರಡನೆಯ ಘಟ್ಟದಿಂದ ಮೂರನೆಯ ಘಟ್ಟಕ್ಕೆ ಕಾಲಿಡುತ್ತಲಿದ್ದೆವೆ. ನಮ್ಮ ಕರೋನಾಯುದ್ದ ಇನ್ನೂ ಪ್ರಾರಂಭ. ನಮ್ಮ ಸುರಕ್ಷತೆ ನಮ್ಮ ಕೈಯಲ್ಲಿ. Prevention is better than cure, ಸುರಕ್ಷೇ ನಮ್ಮ ಮೊದಲ ಆದ್ಯತೆಯಾಗಲಿ. ನನಗೆ ತಿಳಿದಿರುವ ಕೆಲವು ವಿಚಾರ ತಮ್ಮೊಂದಿಗೆ.

೧. ಹಾಲಿನ ಪ್ಯಾಕೆಟ್‌ನ್ನು ಮನೆಗೆ ತಂದ ನಂತರ ಅದನ್ನು ಮತ್ತು ನಿಮ್ಮ ಕೈಗಳನ್ನು ಲಿಕ್ವಿಡ್ ಸೋಪ ಅಥವಾ ಸಾಬೂನಿನಿಂದ ತೊಳೆಯಿರಿ.

೨. ದಿನಪತ್ರಿಕೆಗಳಿಗೆ ಸೋಂಕು ನಿರೊಧಕ ಸಿಂಪಡಿಸಿದರೂ ಸಹ ಅವುಗಳನ್ನು ಹಂಚುವವರಿಂದ ವೈರಸ್ ಹರಡಬಹುದು. ಪೇಪರ ಕೊಳ್ಳುವ ಬಗ್ಗೆ ಯೋಚಿಸಿ. ಅಥವಾ e paper ಓದಿ

೩. ಕೋರಿಯರ್/ಪೊಸ್ಟ ಸ್ವಿಕರಿಸಲು ಅದಕ್ಕಾಗಿ ಬೇರೆ ಟ್ರೇ, ಚೀಲ, ಪೆಟ್ಟಿಗೆ ಉಪಯೋಗಿಸಿ, ಸ್ವಿಕರಿಸಿದ ತಕ್ಷಣ ಓದುವ ಬದಲು ಮುಂದಿನ ೧೪-೧೮ ಘಂಟೆಗಳ ಸಮಯ ಬಿಟ್ಟು ಓದಬಹುದು ಅಥವಾ ಉಪಯೋಗಿಸಬಹುದು

೪) ದಿನಸಿ ಸಾಮಾನುಗಳ ಹೆಚ್ಚಿನ ದಾಸ್ತಾನು ಮಾಡಿ, ಅವುಗಳನ್ನು ಅಂಗಡಿಯಿಂದ ಖರಿದಿಸಿದ ನಂತರ ನಿಮ್ಮ ಮನೆಯ ಒಂದು ಉಪಯೋಗಿಸದ ಕೋಣೆಯಲ್ಲಿ ಶೇಖರಿಸಿ ಇಡಿ, ೧೮-೨೦ಘಂಟೆಗಳ ನಂತರ ಉಪಯೋಗಿಸಿ.

೫. ಮನೆಗೆಲಸದವರಗೆ ರಜೆ ಕೊಡುವದು ಉತ್ತಮ,ಇಲ್ಲವಾದಲ್ಲಿ ಅವರಿಗೆ ಸ್ವಚ್ಛತೆಯ ಬಗ್ಗೆ ಮನವರಿಕೆ ಮಾಡಿಕೊಡಿ,ಅವರು ಮನೆಯ ಒಳಗೆ ಬರುವಾಗ ಮುಂಬಾಗಿಲ ಹಿಡಿಕಿಯನ್ನು ಮುಟ್ಟದಂತೆ ತಿಳಿಸಿ.‌ ಕಾಲಿಂಗ್ ಬೆಲ್ ಉಪಯೋಗಿಸಲಿ, ಅವರ ಪ್ರವೇಶದ ನಂತರ ಮೊದಲು ಅವರು ಚೆನ್ನಾಗಿ ಸಾಬುನಿನಿಂದ (೨೦ಸೆಕೆಂಡ್) ಕೈ ತೊಳೆಯಲಿ. ದಿನಕ್ಕೆರಡು ಬಾರಿ ಕಾಲಿಂಗ್ ಬೆಲ್ ಸಹ ಡೆಟಾಲನಿಂದ ಒರೆಸಿರಿ.

೬. ಮನೆಯಲ್ಲಿಯೇ ಆಹಾರ ಬೇಯಿಸಿ, ಸಿದ್ದ ಆಹಾರ ಪೂರೈಸುವ ಸ್ವಿಗ್ಗಿ , ಮುಂತಾದ ಸಂಸ್ಥೆಗಳಿಂದ ಆಹಾರ ಪ್ರದಾರ್ಥಗಳನ್ನು ತರೆಸಿಕೊಳ್ಳದಿರುವದು ಸೂಕ್ತ .

೭. ಹಣ್ಣು ‌ಮತ್ತು ತರಕಾರಿಗಳನ್ನು ಕೊಳ್ಳುವಾಗ ಮುಖಗವಸು ಬಳಸಿರಿ, ಅವುಗಳನ್ನು ಮನೆಗೆ ತಂದ ತಕ್ಷಣ ಚನ್ನಾಗಿ ತೊಳೆಯಿರಿ. ಸಾದ್ಯವಾದರೆ ಡಾಕ್ಟರಗಳು ಬಳಸುವ ಕೈ ಗವಸುಗಳನ್ನು ಮಾರ್ಕೆಟಿಂಗ ಮಾಡುವಾಗ ಉಪಯೋಗಿಸಿ.

೮. T.V ರಿಮೋಟ್,ಕಾಂಪೂಟರ್ ಕೀ ಬೊರ್ಡ,ಮೊಬೈಲ್ ‌ಫೋನ್ ಗಳನ್ನು ಅನ್ಯರಿಗೆ ಉಪಯೋಗಿಸಲು ಕೊಡಬೇಡಿ. ಆಪತ್ಕಾಲದಲ್ಲಿ ಬೇರೆಯವರು ಬಳಸಿದರೆ ಸೆನಿಟೈಜರ್ ನಿಂದ ಚನ್ನಾಗಿ ಒರೆಸಿರಿ.

೯. ಮನೆಯಲ್ಲಿ ಅಥವಾ ಆಫೀಸ್ನಲ್ಲಿ, ಗಂಟೆಗೊಮ್ಮೆಯಾದರೂ ಸಾಬುನಿನಿಂದ ಕೈ ತೊಳೆಯಿರಿ.

೧೦. ಸಾಧ್ಯವಾದಷ್ಟು ಸಾರ್ವಜನಿಕ ವಾಹನಗಳಾದ ಬಸ್, ಟ್ರೈನ್, ಮೆಟ್ರೋ ಬಳಸಬೇಡಿ. ಅನಿವಾರ್ಯ ಸಮಯದಲ್ಲಿ ಟ್ಯಾಕ್ಸಿ ಬಳಸಿ.

೧೧. ಸ್ವಿಮ್ಮಿಂಗ್ ಪೂಲ್,ಜಿಮ್ ಗಳನ್ನು ಬಳಸಲೇಬೇಡಿ.ಅವು ರೋಗ ಹರಡುವ ತಾಣಗಳು,‌ ಸದ್ಯ ಆ ಕಡೆ ಹೋಗದಿರುವುದೆ ಸೂಕ್ತ.

೧೨.ಮಕ್ಕಳಿಗೆ ಟ್ಯೂಷನ್, ಡ್ಯಾನ್ಸ್ ಕ್ಲಾಸ್ ಗಳಿಗೆ ಕಳಿಸಬೇಡಿ ಇವುಗಳಿಂದ ಸ್ವಲ್ಪ ದಿನಗಳ ಕಾಲ ದೂರವಿರಿ.

೧೩. ಬಹಳ ಸಮಯದ ನಂತರ ಹೊರಗಡೆಯಿಂದ,ಅಥವಾ ಕಚೇರಿಯಿಂದ ಬಂದ ನಂತರ ನೇರವಾಗಿ ಸ್ನಾನಕ್ಕೆ ಹೋಗಿ,ನಿತ್ಯ ಉಪಯೋಗಿಸಿದ ಬಟ್ಟೆಗಳನ್ನು ದಿನವೂ ತೊಳೆಯಲು ಹಾಕಿಬಿಡಿ.

೧೪. ಮುಖ್ಯವಾಗಿ ಮುಖವನ್ನು ಕೈಯಿಂದ ಮುಟ್ಟಬೇಡಿ. ಕೈ ವಸ್ತ್ರವನ್ನು ಬಳಸಿ, ಮಕ್ಕಳಿಗೆ ಮತ್ತು ಹಿರಿಯ ನಾಗರಿಕರ ಬಗ್ಗೆ ಹೆಚ್ಚಿನ ಗಮನವಿರಲಿ.

೧೫. ಹಿರಿಯ ನಾಗರಿಕರಿಗೆ ಬೆಳಗ್ಗೆ/ ಸಂಜೆ ವಾಕಿಂಗ್ ಹೋಗುವುದಕ್ಕೆ ನಿರ್ಭಂದ ಹಾಕಿ, ಅವರ ಮನವಲಿಸಿ ನಿಲ್ಲಿಸಲು ವಿನಂತಿಸಿ.

೧೬ ನಿಮ್ಮ ಕಾರಿನ ಅಥವಾ ನೀವು ಉಪಯೋಗಿಸುವ ವಾಹನಗಳ ಇಂದನ ಟ್ಯಾಂಕಗಳು ಯಾವಾಗಲೂ ತುಂಬಿರಲಿ.

೧೭. ಹಣದ ಅವಶ್ಯಕತೆ ಯಾವಾಗ ಬೇಕಾದರು ಬರಬಹುದು. ಮನೆಯಲ್ಲಿ ನಿಮ್ಮ ದಿನ ನಿತ್ಯದ ಅವಶ್ಯಕತೆಗಿಂತ ಹೆಚ್ಚಿನ ಮಟ್ಟದ ಹಣ ವಿರಲಿ.

೧೮. ನಿಮ್ಮ ಕುಟುಂಬ ವೈದ್ಯರ ಅವಶ್ಯಕತೆ ಈಗ ಹೆಚ್ಚು , ಅವರೊಂದಿಗೆ ಸಂಪರ್ಕದಲ್ಲಿರಿ.ನಿಮ್ಮ ಕಷ್ಟ ಸುಖ ಅವರೊಂದಿಗೆ ಹಂಚಿಕೊಳ್ಳಿ.

ನಮಗೇನು ಆಗಿಲ್ಲ,ಆಗುವದಿಲ್ಲವೆಂದು ದೈರ್ಯವಾಗಿರಿ. ಇದೊಂದು ಮನೆಯ ಎಲ್ಲ ಸದಸ್ಯರು ಒಟ್ಟಿಗೆ ಕಳೆಯುವ ಒಳ್ಳೆಯ ಅವಕಾಶವೆಂದು ಭಾವಿಸಿ. ಹಬ್ಬದಂತೆ ದಿನಗಳನ್ನು ಸಂತೋಷದಿಂದ ಕಳೆಯಿರಿ.

ಬಾರದು ಬಪ್ಪದು,ಬಪ್ಪುದು ತಪ್ಪದು.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

‘ಶರಣಾರ್ಥಿ’ ಗುರು ಪ್ರವೇಶ..!

  ಗಜೇಂದ್ರಗಡದ ಶರಣದಂಪತಿಗಳು ನೂತನ ಮನೆಗೆ ‘ಶರಣಾರ್ಥಿ’ ಎಂದು ವಿಶಿಷ್ಟ ರೀತಿಯಲ್ಲಿ ಮನೆ ನಾಮಕರಣ ಮಾಡಿ ಗುರುಪ್ರವೇಶ, ಅನುಭಾವ ಹಾಗೂ …

Leave a Reply

Your email address will not be published. Required fields are marked *

error: Content is protected !!