ಮೂಡಲಗಿ: ಕೊರೊನ ಮಹಾಮಾರಿ ವೈರಸ್ ಅಪಯಕಾರಿಯಾಗಿರುವುದು ನಿಜ ಆದರೆ ನಮ್ಮ ಮಾದ್ಯಮಗಳು ಜನರಲ್ಲಿ ಜಾಗೃತಿ ಮುಡಿಸುವುದನ್ನು ಬಿಟ್ಟು ಜನರಲ್ಲಿ ಅದರ ಬಗ್ಗೆ ಭಯವನ್ನುಂಟುಮಾಡುವಂತಹ ಬ್ರೇಕಿಂಗ್ ನ್ಯೂಸ್ ಎಂಬಂತೆ ಬಿಂಬಿಸಿ ತಮ್ಮ TRP ಯನ್ನ ವೃದ್ದಿಮಾಡಿಕೊಳ್ಳುವಲ್ಲಿ ತಾ-ಮುಂದು ನಾ-ಮುಂದು ಎಂದು ಜನರಲ್ಲಿ ಮತ್ತಷ್ಟು ಆತಂಕ, ಭಯ ಹುಟ್ಟುಹಾಕುತ್ತಿವೆ.
ಲಾಕ್ಡೌನ್ ನಿಂದಾಗಿ ಜನರು ಹಸಿವು ತಾಳಲಾರದೆ ಒಪ್ಪತ್ತಿನ ಊಟಕ್ಕೂ ಪರದಾಡುವಂತಾಗಿದೆ, ವಯೋವೃದ್ದರು, ಹೃದಯ ಸಂಬಂದಿ ಕಾಯಿಲೆ, ಅಸ್ತಮಾ, ಹೀಗೆ ಹಲವು ದೀರ್ಘ ಕಾಯಿಲೆ ಇರುವ ರೋಗಿಗಳಿಗೆ ಸರಿಯಾದ ಔಷದಿ ಸಿಗದೆ ಸಾಯುತ್ತಿದ್ದಾರೆ ಇನ್ನೂ ಕೆಲವರು ತಮ್ಮ ಆರ್ಥಿಕ ಪರಿಸ್ಥಿತಿಯನ್ನ ನಿಭಾಯಿಸಲಿಕ್ಕಾಗದೆ ಆತ್ಮಹತ್ಯೆ ಗೆ ಶರಣಾಗುತ್ತಿದ್ದಾರೆ.
ಇನ್ನು ನಗರವಾಸಿಗಳಿಗೆ ತಿನ್ನಲು ಆಹಾರ ಇಲ್ಲದೆ ಪರದಾಡುತ್ತಿದ್ದಾರೆ.
ಇನ್ನು ನಮ್ಮ ರೈತರ ವಿಷಯಕ್ಕೆ ಬಂದರೆ ಅವರ ವರ್ಷದ ಬೆಳೆಗಳು ಹಾಳಾಗಿ ಹೋಗಿ ತಲೆಯಮೇಲೆ ಸಾಲದ ಮೂಟೆಯನ್ನಾ ಹೊತ್ತುನಿಂತಿದ್ದಾರೆ ಇನ್ನು ಈ ಲಾಕ್ ಡೌನ್ ನಿಂದ ಬೆಳೆದು ನಿಂತಿರುವ ದ್ರಾಕ್ಷಿ, ಹೂ-ಕೋಸು, ಕಲ್ಲಂಗಡಿ ಬೆಳೆಗಳು ಹಾಳಾಗಿ ಹೊಗುತ್ತಿವೆ. ಇನ್ನು ಹೈನುಗಾರಿಕೆಯನ್ನು ಅವಲಂಬಿಸಿದ ಎಷ್ಟೋ ರೈತ ಕುಟುಂಬಗಳು ತಮ್ಮ ಒಂದು ದಿನದ ಊಟಕ್ಕು ಗತಿ ಇಲ್ಲದಂತಾಗಿದ್ದಾರೆ.
ಇನ್ನು ಈ ನಮ್ಮ ಪೋಲಿಸರ ವಿಷಯಕ್ಕೆ ಬಂದರೆ ಸುಮಾರು 70% ಸಿಬ್ಬಂದಿಗೆ ಕರೋನಾ ಬಗ್ಗೆ ಸರಿಯಾದ ಅರಿವು ಇಲ್ಲಾ.
ಒಬ್ಬ ವ್ಯಕ್ತೀ ಹೊರಗೆ ಬಂದರೆ ಅವನ ಅವಶ್ಯಕತೆ ಏನು ಎಂಬುವುದನ್ನು ತಿಳಿಯುವಷ್ಟು ಶಾಂತಿಯುತವಾದ ಮನೋಭಾವ ಪೋಲಿಸರಲ್ಲಿ ಕಡಿಮೆಯಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಅವರ ಅವರು ತಮ್ಮ ಶಿಸ್ತನ್ನು ಮರೆತು ಹುಚ್ಚು ಕಾಯಕ ಮಾಡುತ್ತಿರುವುದು ಯಾರ ಗಮನಕ್ಕೂ ಬಂದಿಲ್ಲಾ.
ಹಲವು ಸಮಸ್ಯೆಗಳನ್ನ ಎದುರಿಸುತ್ತಿರುವ ನಮ್ಮ ದೇಶದ ಪ್ರಜೆಗಳ ಕಷ್ಟ ಈ ಮಾಧ್ಯಮದವರಿಗೆ ಗೋಚಿರುಸುತ್ತಿಲ್ಲ.
ಮಾದ್ಯಮಗಳು ಇನ್ನಾದರೂ ಸ್ಪರ್ದೆಗಿಳಿವುದನ್ನು ಬಿಟ್ಟು, ಕೊರೊನ ಮಹಾಮಾರಿಯ ಕುರಿತು ಜನರಲ್ಲಿ ಜಾಗೃತ ಮೂಡಿಸಬೇಕಿದೆ. ಅದೇ ರೀತಿ ಸಾರ್ವಜನಿಕರ ಕಷ್ಟ, ಅವಶ್ಯಕತೆಗಳನ್ನು ಅರಿತು ನಾಗರಿಕರ ಜೊತೆ ಮಾನವೀಯತೆಯಿಂದ ವರ್ತಿಸಬೇಕಾಗಿದೆ.
ಬಸವರಾಜ ಪುರವಂತ.
ಅರಳಿಮಟ್ಟಿ, ತಾ.ಮೂಡಲಗಿ