Breaking News
Home / featured / ಕರ್ನಾಟಕದ ಚಂದ್ರಶೇಖರ ಆಜಾದ್ ಮೈಲಾರ ಮಹಾದೇವಪ್ಪನವರು: ಹುತಾತ್ಮ ದಿವಸ ಏಪ್ರಿಲ್-೧

ಕರ್ನಾಟಕದ ಚಂದ್ರಶೇಖರ ಆಜಾದ್ ಮೈಲಾರ ಮಹಾದೇವಪ್ಪನವರು: ಹುತಾತ್ಮ ದಿವಸ ಏಪ್ರಿಲ್-೧

ಚನ್ನಮ್ಮನ ಕಿತ್ತೂರು: ಕರ್ನಾಟಕದ ಚಂದ್ರಶೇಖರ ಆಜಾದ ಎಂದೆ ಖ್ಯಾತಿಯಾದ ಮತ್ತು ಚಂದ್ರಶೇಖರ ಆಜಾದ ಮಾದರಿಯಲ್ಲಿ ಬ್ರೀಟಿಷರ ವೀರುದ್ದ ಹೋರಾಡುತ್ತ ಬ್ರೀಟಿಷಗುಂಡಿಗೆ ಮೈಲಾರ ಮಹಾದೇಪ್ಪ ಬಲಿಯಾದದ್ದು ಎಪ್ರೀಲ್ ೧ ೧೯೪೩ .ಆಗ ಆ ದೇಶ ಭಕ್ತನ ವಯಸ್ಸು ಕೇವಲ ೩೨..ಆ ಕಾರಣ ಮೈಲಾರ ಮಹಾದೆವಪ್ಪ ಮತ್ತು ಆತನ ಸಹಚರರ ಸ್ಮರಣಾರ್ಥ ವಿಶೇಷ ಲೇಖನ..

1930 ಪೇಬ್ರುವರಿ ೧೩ರಂದು ಸಬರಮತಿ ಆಶ್ರಮದಿಂದ ದಂಡಿವರೆಗೆ ನಡೆಸುವ ಪಾದಯಾತ್ರೆಗೆ ಕನ್ನಡಿಗನೂರ್ವನನ್ನುಕಳುಹಿಸಲು ಗಾಂದಿಜೀಯವರು ತಿಳಿಸಿದಾಗ ಆಯ್ಕೆಯಾದದ್ದು ಹಾವೇರಿಯ ಮೈಲಾರ ಮಹಾದೇವಪ್ಪ.ಐದು ಅಡಿ ಹತ್ತು ಇಂಚು ಎತ್ತರದ ಗಂಬೀರ ನಿಲುವಿನ ವ್ಯಕ್ತಿತ್ವ….ಗಾಂದೀಜೀಯವರು ಆಯ್ಕೆ ಮಾಡಿದ ೭೯ ಜನರಲ್ಲಿ ಆಯ್ಕೆಯಾದ ಎಕಮೇವ ಕನ್ನಡಿಗ…೩೦೦ ಕೀ ಮಿ ದಂಡಿಪಾದಯಾತ್ರೆಯಲ್ಲಿ ಗಾಂದಿಜಿಯವರ ಬಲಗಡೆ ಮುಂದಿನ ಸರತಿಯಲ್ಲಿ ನಿಂತು ದಂಡಿ ಯಾತ್ರೇ ಯಶಸ್ವಿಗೂಳಿಸಿದರು..ಇದನ್ನು ಅಂದಿನ ಕಾಲದ ಭಾವಚಿತ್ರಗಳಲ್ಲಿ ಕಾಣಬಹುದು.ದಂಡಯಾತ್ರೆಯಲ್ಲಿ ಭಾಗವಹಿಸಿದ ಅತಿ ಕಿರಿಯ ವ್ಯಕ್ತಿ ಮೈಲಾರ ಮಹಾದೇವಪ್ಪ.

.ಆ ಕಾರಣಕ್ಕಾಗಿ ಮೈಲಾರ ಮಹದೇವಪ್ಪನವರ ಜೀವನವನ್ನು ಮಹಾರಾಷ್ಟ್ರ ಸರಕಾರದ ಪಠ್ಯಪುಸ್ತಕದ ನಾಲ್ಕನೇಯ ತರಗತಿಯಲ್ಲಿ ವಿಷಯ ವಸ್ತುವಾಗಿದೆ.ಆದರೆ ಕರ್ನಾಟಕದ ಪಠ್ಯದಲ್ಲಿ ಅಳವಡಿಸಿದರೆ ಯುವಕರಿಗೆ ಪ್ರೇರಣೆಯಾಗಬಲ್ಲದು.ದಂಡಿ ಸಮುದ್ರದ ದಡ ಅಂದು ಮಹಾರಾಷ್ಟ್ರ ರಾಜ್ಯದಲ್ಲಿ ಬರುತಿತ್ತು.೧೯೬೬ರಲ್ಲಿ ಗುಜರಾತ್ ಮತ್ತು ಮಹರಾಷ್ಟ್ರ ಪ್ರತ್ತಕ ರಾಜ್ಯಗಳಾದವು..ಅದಕ್ಕೂ ಮಂಚೆ ಗುಜರಾತ್ ಮಹಾರಾಷ್ಟ್ರದ ಭಾಗವಾಗಿತ್ತು. ದಂಡಿಯಾತ್ರೇಯಲ್ಲಿ ಭಾಗವಹಿಸಿದಕ್ಕೆ ಆರು ತಿಂಗಳಕಾಲ ಅಹಮದಾಭಾದನಲ್ಲಿ ಜೈಲು ಶಿಕ್ಷೆ ಅನುಭವಿಸಿದರು ಮೈಲಾರ ಮಹಾದೇವಪ್ಪ..

ಸ್ವಾತಂತ್ರ ಪಡೆಯಬೇಕೆಂದರೆ ಸುಭಾಸಚಂದ್ರಬೋಸರ ಏದೆಗಾರಿಕೆ ಬೇಕು ಎಂಬುವುದನ್ನು ಅರಿತು ಅವರೂಂದಿಗೆ ಪತ್ರ ವ್ಯವಹಾರ ಹೊಂದಿದ್ದರು.

ಬ್ರೀಟಿಷರ ವಿರುದ್ದ ೭೪ ಲೂಟಿಗಳನ್ನು ಯಶಸ್ವಿಯಾಗಿ ಮುಗಿಸಿದರು.ಅದರಲ್ಲಿ ಪ್ರಮುಖವಾದುದು “೧೯೪೨ ಡಿಸೇಂಬರ ೨೮ ರಂದು ಹಾವೇರಿಯ ರೇಲ್ವೆ ಸ್ಟೇಷನನಲ್ಲಿ”” ಭಾಂಬ ಸ್ಪೂಟ ಮಾಡಿ ಅಂಚೆ ಕಚೇರಿ ಲೂಟಿ ಪ್ರಮುಖವಾದದು…ಹೀಗೆಯೇ ಮುಂದುವರೆಸಿ ಬ್ರೀಟಿಷರಿಗೆ ಸಿಂಹ ಸ್ವಪ್ನನಾಗಿದ್ದನುಮೈಲಾರ ಮಹಾದೇವಪ್ಪ..
ಮೈಲಾರ ಮಹಾದೇವಪ್ಪ ೮/೬/೧೯೧೧ರಲ್ಲಿ ಬ್ಯಾಡಗಿ ತಾಲೂಕಿನ ಮೂಟೆಬೇನ್ನುರ ಗ್ರಾಮದಲ್ಲಿ ಮಾತೆ ಬಸಮ್ಮನವರ ಪುತ್ರನಾಗಿ ಜನಿಸಿದರು.ಹದಿಮೂರನೇ ವಯಸ್ಸಿನಲ್ಲಿ ಸಿದ್ದಮ್ಮರೂಡನೆ ವಿವಾಹ ನೆರೆವೇರಿತು.

ಬ್ರೀಟಿಷರ ವಿರುದ್ದ ೭೪ ಲೂಟಿ ಮಾಡಿ ಯಶಸ್ವಿಯಾಗಿದ್ದ ಮೈಲಾರ ಮಹಾದೇವಪ್ಪ೭೫ನೇಯ ಲೂಟಿಯನ್ನು ಬ್ರೀಟಿಷರ ಕಂದಾಯ ಇಲಾಖೆಯನ್ನೆ ಹಗಲಿನಲ್ಲಿ ದರೋಡೆ ಮಾಡುವುದಾಗಿ ಘೋಷಿಸಿದರು.

ಹಾವೇರಿಯ ಹೋಸರಿತ್ತಿಯ
ವೀರಭದ್ರೇಶ್ವರ ದೇವಸ್ಥಾನವೇ ಕಂದಾಯವಸೂಲಿ ಕೇಂದ್ರವಾಗಿತ್ತು…ಕಾವಲಿಗೆ ಸರಕಾರ ಪೋಲಿಸರನ್ನು ನೇಮಕ ಮಾಡಿತ್ತು.೧೯೪೩ ಎಪ್ರೀಲ್ ೧ ರಂದು ಜೈ ಭಾರತ ಮಾತೆ ಘೋಷಣೆ ಕೂಗುತ್ತ ವೀರಬದ್ರೇಶ್ವರ ದೇವಸ್ಥಾನಕ್ಕೆ ನುಗ್ಗಿದ ,ಇತನ ಜೋತೆಗೆ “ತಿರಕಪ್ಪ ಮಡಿವಾಳರ ಮತ್ತುವೀರಯ್ಯ ಹೀರೆಮಠ “ಸಹ ಸೇರಿಕೂಂಡಿದ್ದರು..
ಮೈಲಾರ ಮಹಾದೇವಪ್ಪನ ಕೈಯಲ್ಲಿ ಪಿಸ್ತೂಲು ಇರುವುದನ್ನು ಕಂಡು ಹೇದರಿದ ಬ್ರೀಟಿಷರು ಬ್ರೀಟಿಷರ ಕೈಯಲ್ಕಿ ಇದ್ದ ಬಂದೂಕುಗಳನ್ನು ಮೈಲಾರ ಮಹಾದೇವಪ್ಪ ಕಸಿದುಕೂಂಡನು ಮತ್ತು ಒಳಗಡೆ ಇದ್ದ ಕಾಗದ ಪತ್ರಗಳನ್ನು ಸುಟ್ಟು ಹಾಕಿದನು ಮತ್ತು ಖಜಾನೆ ಪೆಟ್ಟಿಗೆ ಅಪಹರಿಸಲು ಸಿದ್ದತೆ ಮಾಡಿಕೂಂಡರು…ಇದರ ಮಾಹಿತಿ ಪಡೆದು ಬ್ರೀಟಿಷರಿಗೆ ದೇಶದ್ರೋಹಿಗಳು ಮೊದಲೆ ಮಾಹಿತಿ ನೀಡಿದ್ದರು ಹೀಗಾಗಿ ದೇವಸ್ಥಾನದ ಒಳಗೆ ಪೋಲಿಸರು ಅವಿತು ಕಳಿತು ಮಹಾದೇವಪ್ಪ ಗುಂಡಿಗೆ ಸಿಳುವ ಹಾಗೆ ಗುರಿ ಇಟ್ಟರು. 

ಮಹಾದೇವಪ್ಪ ಕುಸಿದು ಬಿದ್ದ.ಮೈಲಾರ ಮಹಾದೇವಪ್ಪ ಗೋಡೆಗೆ ಒರಗಿದಾಗ ಬ್ರೀಟಿಷರು ತಿವಿದು,ತಿವಿದು ಕೂಂದರು,ಇತನ ಜೂತೆಗೆ “ವೀರಯ್ಯ ಹೀರೆಮಠ ಮತ್ತು ತೀರಕಪ್ಪ ಮಡಿವಾಳರ” ಪ್ರಾಣ ಪಕ್ಷಿ ಹಾರಿಹೋದವು..
ಚಂದ್ರ ಶೇಖರ ಆಜಾದ ಮತ್ತು ಮೈಲಾರ ಮಹಾದೇವಪ್ಪನವರ ಹೋರಾಟದ ರೂಪ ರೇಷು ಒಂದೇ ಇದೆ…ಅವರು ಸಾವಿನಲ್ಲಿ ಬ್ರಿಟಿಷರು ವುರುದ್ದರೂಪಿಸಿದ ರಣತಂತ್ರ ಒಂದೇ ಇದೆ..ಚಂದ್ರಶೆಖರ ಆಜಾದ ತನ್ನ ಬಂದೂಕಿನಿಂದ ತಾನೆ ಗುಂಡು ಹಾರಿಸಿಕೂಂಡು ಬ್ರಿಟಿಷರಿಗೆ ಸಿಗದೇ ಹುತಾತ್ಮನಾದರೇ” ಮೈಲಾರ ಮಹಾದೇವಪ್ಪ ಬ್ರೀಟಿಷರ ಗುಂಡಿಗೆ ಬಲಿಯಾಗಿ ಹುತಾತ್ಮ”ನಾಗುವನು.
ಆದರೆ ಚಂದ್ರಶೇಖರ್ ಆಜಾದ ನಿಗೆ ಇತಿಹಾಸಲ್ಲಿ ಸಿಕ್ಕ ಸ್ಥಾನ ಮೈಲಾರ ಮಹದೇವಪ್ಪನಿಗೆ ಸಿಗಬೇಕಾಗಿತ್ತು ಆದರೆ ಸಿಗದೇ ಇರುವುದು ಖಂಡನೀಯ..ಕಾರಣ ಇಷ್ಟೆ ದೇಶದ ಸ್ವತಂತ್ರ ಹೋರಾಟಕ್ಕೆ ದೇಶದ ಎಲ್ಲ ಭಾಗಗಳಿಂದ ಸ್ಪಂದನೆ ಸಿಕ್ಕಿದೆ..‌ಅದರೆ ಉತ್ತರ ಬಾರತದ ಹೋರಾಟಗರಿಗೆ ಸಿಕ್ಕ ಸ್ಥಾನ ದಕ್ಷೀಣ ಭಾರತದವರಿಗೆ ಅದರಲ್ಲೂ ವೀಶೆಷವಾಗಿ ಕರ್ನಾಟಕದವರಿಗೆ ಸಿಗದೇ ಇರುವುದು ಖೆದಕರ ವಿಷಯ..
ಮೈಲಾರ ಮಹಾದೇವಪ್ಪನ ಹೋರಾಟ ಬದುಕು ನಮಗೆ ಮಾದರಿಯಾಗಲಿ….

ಲೇಖಕರು:ಮಹೇಶ ನೀ ಚನ್ನಂಗಿ
ಮುಖ್ಯೋಪಾದ್ಯಯರು.
ಸರಕಾರಿ ಪ್ರೌಢಶಾಲೆ ತುರಕರ ಶಿಗಿಹಳ್ಳಿ.
ತಾ:ಬೈಲಹೂಂಗಲ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

One comment

  1. ಓದಿರುವೆ ಉತ್ತಮವಾದ ಮಾಹಿತಿ…..

Leave a Reply

Your email address will not be published. Required fields are marked *

error: Content is protected !!