Breaking News
Home / featured / ಬಡ ಕುಟುಂಬಗಳಿಗೆ ಆಹಾರ ಧಾನ್ಯ ವಿತರಣೆ

ಬಡ ಕುಟುಂಬಗಳಿಗೆ ಆಹಾರ ಧಾನ್ಯ ವಿತರಣೆ

ಮಹಾಲಿಂಗಪುರ : ಕೊರೋನಾ ಕರ್ಮಕಾಂಡದಲ್ಲಿ ಸಿಕ್ಕಿ ಇಡೀ ಜಗತ್ತೇ ನಲುಗುತ್ತಿರುವಾಗ ಜನಸಾಮಾನ್ಯರು ತಲ್ಲಣಗೊಂಡಿದ್ದಾರೆ. ಇನ್ನು ಬಡವರು, ನಿರ್ಗತಿಕರ ಬವಣೆ ಹೇಳತೀರದು. ಈಗ ಅನಿವಾರ್ಯವಾಗಿ ವಿಧಿಸಿರುವ ಲಾಕ್ ಡೌನ್ ನಿಂದ ಆಹಾರ ಸಿಗದೇ ಹೊಸಪೇಟೆಯಲ್ಲಿ ನಿನ್ನೆ ಮೂರು ಜನ ಅಸುನೀಗಿದ ಘಟನೆ ನಡೆದಿರುವುದು ಜಗತ್ತಿನ ದೊಡ್ಡ ದುರಂತ.
ಕೊರೋನಾ ವಿಜ್ಞಾನ ಲೋಕಕ್ಕೆ ಸೆಡ್ಡು ಹೊಡೆದು ಜಗತ್ತನ್ನೇ ಅಲ್ಲೋಲಕಲ್ಲೋಲ ಮಾಡಿದೆ ಇಂಥ ಪರಿಸ್ಥಿತಿಯಲ್ಲಿ ಉಳ್ಳವರು ಮನೆಯಲ್ಲಿ ಸುಖವಾಗಿದ್ದರೆ ನಿರ್ಗತಿಕರು ದುಡಿಮೆ ಇಲ್ಲದೆ, ಊಟವೂ ಇಲ್ಲದೆ ಹಸಿವಿನಿಂದ ಸಾಯುತ್ತಿದ್ದಾರೆ. ಇಂಥ ಸಮಯದಲ್ಲಿ ಉಳ್ಳವರು ಮತ್ತು ನಿರ್ಗತಿಕರ ನಡುವೆ ಸೇತುವೆಯಾಗಿ ಕೆಲಸಮಾಡುವ ಸೇವಾ ಮನೋಭಾವವುಳ್ಳ ವ್ಯಕ್ತಿಗಳು ಶ್ರಮಿಸಿದಾಗ ಉಳ್ಳವರಿಂದ ಪಡೆದು ನಿರ್ಗತಿಕರಿಗೆ ನೀಡಿ ಅವರನ್ನು ಬದುಕಿಸಬಹುದೆಂಬ ಅತ್ಯಮೂಲ್ಯ ಕೆಲಸವನ್ನು ಮಹಾಲಿಂಗಪುರದ ಸಮಾನ ಮನಸ್ಕ ಗೆಳೆಯರ ಬಳಗ ಮಾಡಿದೆ, ಮೂಲಕ ನಾಡಿಗೆ ಮಾದರಿಯಾಗಿದೆ.

ಸ್ಥಳೀಯ ಪತ್ರಕರ್ತರಾದ ಮೀರಾ ತಟಗಾರ, ಶಿವಶಂಕರ ಕಡಬಲ್ಲವರ, ಯೂನುಸ್ ಪಠಾಣ, ಮತ್ತು ಮಹಾಲಿಂಗ ನಂದೆಪ್ಪನವರ ಇವರ ನೇತೃತ್ವದಲ್ಲಿ ಗೆಳೆಯರ ಬಳಗದ ಮನೋಜ ಮುಳ್ಳೂರ, ಮಾರುತಿ ಸಂಶಿ, ಪ್ರಕಾಶ ಢವಳೇಶ್ವರ, ರಾಜು ಲಾತೂರ ಇವರ ಸಹಕಾರದೊಂದಿಗೆ ಇಂತಹದೊಂದು ಸಮಾಜ ಸೇವೆ ನಡೆದಿರುವುದು ಶ್ಲಾಘನೀಯ.

ನಿರ್ಗತಿಕರನ್ನು ಕಂಡು ಮರುಗಿ ನಗರದ ಸ್ಥಿತಿವಂತರನ್ನು ಕಂಡು ಅವರನ್ನು ಸಂಪರ್ಕಿಸಿ ಮನವೊಲಿಸಿ ಅವರಿಂದ ಆಹಾರ ಪದಾರ್ಥಗಳನ್ನು ಪಡೆದು ಪ್ರತಿ ನಿರ್ಗತಿಕರ ಮನೆಮನೆಗೂ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.
ನಗರದ ಕಡುಬಡವರು, ನಿರ್ಗತಿಕರನ್ನು ಗುರುತಿಸಿ, ಪ್ರತಿ ಕುಟುಂಬದ ವಾರದ ನಿರ್ವಹಣೆಗೆ ಬೇಕಾಗುವಷ್ಟು ಗೋಧಿ, ಜೋಳ, ಅಕ್ಕಿ, ಸಕ್ಕರೆ, ಚಹಾ ಪುಡಿ, ಎಣ್ಣೆ ಉಪ್ಪು, ಕಡ್ಲಿಬೇಳೆ ಮುಂತಾದ ಆಹಾರ ಧಾನ್ಯಗಳ ಕಿಟ್ ತಯಾರಿಸಿ ಮನೆಮನೆಗೂ ವಿತರಿಸಿ ಬಡವರ ಬದುಕಲ್ಲಿ ಭರವಸೆ ಮೂಡಿಸಿದ್ದಾರೆ.

ಜಾವೇದ ಭಾಗವಾನ, ಕೆಎಲ್ಇ ಪ್ರಾಂಶುಪಾಲ ಎಸ್.ಐ. ಕುಂದಗೋಳ,ಸುರೇಶ ಹೊಸೂರ, ಶಶಿಧರ ಉಳ್ಳೇಗಡ್ಡಿ, ಹಾಜಿ ಕುತುಬುದ್ದೀನ್ ರೋಣ, , ಬಾಬು ಶೆಟ್ಟರ, ರಮೇಶ್ ಶೆಟ್ಟರ,ಚೆನ್ನಪ್ಪ ಹೊನ್ನೂರ, ಬಸು ಖೋತ, ಮಲ್ಲಪ್ಪ ಪತ್ತಾರ, ಅಲ್ಲಾಭಕ್ಷ್ ಬಂಡೇಬುರುಜ (ಬಕ್ರು ಬಾರೇಗಡ್ಡಿ) ,ರಾಘವೇಂದ್ರ ತೇಲಿ ಮುಂತಾದವರು ಗೆಳೆಯರ ಬಳಗದ ಮನವಿಗೆ ಸ್ಪಂದಿಸಿ ಉದಾರ ದಾನ ನೀಡಿ ಮಾನವೀಯತೆ ಮೆರೆದಿದ್ದಾರೆ.





About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

Leave a Reply

Your email address will not be published. Required fields are marked *

error: Content is protected !!