Breaking News
Home / featured / ವೀರಶೈವ ಒಂದು ಖೊಟ್ಟಿ ಧರ್ಮ !

ವೀರಶೈವ ಒಂದು ಖೊಟ್ಟಿ ಧರ್ಮ !

ಪಂಚಪೀಠಗಳು, ರೇಣುಕಾಚಾರ್ಯ, ಸಿದ್ಧಾಂತ ಶಿಖಾಮಣಿ ಇವುಗಳ ಉಲ್ಲೇಖ…

 • ಅಪ್ಪಿ ತಪ್ಪಿಯೂ ಬಸವಾದಿ ಶರಣರ ೨೦,೦೦೦ ಕ್ಕಿಂತಲೂ ಅಧಿಕ ಇರುವ ವಚನಗಳಲ್ಲಿ ಇಲ್ಲ…
 • ೧೩ ನೇ ಶತಮಾನದ ಮಹಾಕವಿ ಹರಿಹರ , ಮಹಾಕವಿ ರಾಘವಾಂಕರು ಇವರ ಕುರಿತು ಉಲ್ಲೇಖಿಸಿಲ್ಲ…
 • ೧೪ ,೧೫ನೇ ಶತಮಾನದ ಚಾಮರಸ, ಲಕ್ಕಣದಂಡೇಶರು, ಯಡೇಯೂರು ಸಿದ್ಧಲಿಂಗೇಶ್ವರರು ಇವರ ಬಗ್ಗೆ ಉಲ್ಲೇಖಿಸಿಲ್ಲ…
 •  ೧೬ ನೇ ಶತಮಾನದ ಸರ್ವಜ್ಞ ಕೂಡ ಇವರ ಬಗ್ಗೆ ಎನೂ ಹೇಳಿಲ್ಲ…
 • ೧೭ ನೇ ಶತಮಾನದ ಷಣ್ಮುಖ ಶಿವಯೋಗಿ ಗಳು, ಕಲಬುರ್ಗಿ ಶರಣಬಸವೇಶ್ವರರು ಇವರು ಕುರಿತು ಏನೂ ಹೇಳಿಲ್ಲ…
 • ೧೮ನೇ ಶತಮಾನದ ತತ್ವಪದಕಾರರು ಇವರ ಬಗ್ಗೆ ಚಕಾರ ಎತ್ತಿಲ್ಲ….
 • ಆದರೆ ಮುಂದೆ ಮೈಸೂರು ಒಡೆಯರ ಕಾಲದಲ್ಲಿ ಬ್ರಾಹ್ಮಣರು ಶೂದ್ರರೆಂದು ಕರೆಯುವಾಗ, ಗುಡಿಯಲ್ಲಿ ಪೂಜಿಸುವ ಹಕ್ಕಿಲ್ಲ ಎಂದು ಜರಿದಾಗ ವೀರಶೈವ ವಾದ ಹುಟ್ಟಿತು.
 • ಲಿಂಗಾಯತ ಎಂದರೆ ಅಲ್ಲಿ ಹೂಗಾರ, ಕುಂಬಾರ, ನೇಕಾರ , ಬಣಕಾರ, ಹಡಪದ ಮುಂತಾದವರು ಇರುವಾಗ ,ಇವರಿಗಿಂತಲೂ ಸರ್ವಶ್ರೇಷ್ಠ ಎಂದು ಗುರುತಿಸಿಕೊಳ್ಳಲು ಬ್ರಾಹ್ಮಣರಿಗೆ ಸರಿಸಮಾನರು ಎಂದು ಸಾರಲು ವೀರಶೈವ ಎಂದೂ ಅಥವಾ ಲಿಂಗಿ ಬ್ರಾಹ್ಮಣರು ಎಂದು ಕರೆದುಕೊಳ್ಳಲು ಆರಂಭಿಸಿದರು. ಅದೇ ರೀತಿ ದಾಖಲಿಸಲು ಒತ್ತಾಯಿಸಿದರು.
 • ಮೈಸೂರು ಒಡೆಯರ ಆಸ್ಥಾನ ಶಿಲ್ಪಿ ಸಿದ್ಧಲಿಂಗ ಶಾಸ್ತ್ರಿಗಳಿಂದ ರೇಣುಕಾಚಾರ್ಯ ಲಿಂಗೋದ್ಭವ ಮೂರ್ತಿ ಮೊಟ್ಟ ಮೊದಲ ಬಾರಿಗೆ ಸೃಷ್ಟಿಸಿದರು.
 • ಬ್ರಾಹ್ಮಣರಿಗೆ ಶಂಕರ , ರಾಮಾನುಜ, ಮಧ್ವ ಎಂಬ ಮೂವರು ಆಚಾರ್ಯ ಪುರುಷರಿದ್ದಂತೆ ತಮಗೆ ನಾಲ್ಕು ಆಚಾರ್ಯರು, ನಂತರ ಪಂಚಾಚಾರ್ಯರು ಇದ್ದಾರೆಂದು ಕಲ್ಪಿಸಿಕೊಂಡರು…
 • ಶಂಕರ, ರಾಮಾನುಜ, ಮಧ್ವ ರು ಸಂಸ್ಕೃತದಲ್ಲಿ ಸಿದ್ಧಾಂತ ಭೋಧಿಸಿರುವಾಗ ರೇಣುಕಾಚಾರ್ಯ ಭೋಧಿಸಿದರೆಂದು ಹೇಳುವ ಸಿದ್ಧಾಂತ ಶಿಖಾಮಣಿ ಎಂಬ ಸಂಕಲಿತ ಗ್ರಂಥವನ್ನು ಸಂಸ್ಕೃತದಲ್ಲಿ ರಚಿಸಲಾಯಿತು…
 • ಭಗವಾನ್ ಶ್ರೀ ಶಂಕರ‌ ಆಚಾರ್ಯರು ಭಾರತ ದೇಶದ ನಾಲ್ಕು ಮೂಲೆಗಳಿಗೆ ಪೀಠ ಸ್ಥಾಪಿಸಿದಂತೆ ಕೇದಾರದ ಊಖಿ ಮಠವನ್ನು ಕೇದಾರ ಪೀಠವೆಂತಲೂ, ಕಾಶಿಯ ಜಂಗಮವಾಡಿ ಮಠವನ್ನು ಕಾಶೀ ಪೀಠ ಎಂತಲೂ , ಉಜಿನಿ,ಶ್ರೀಶೈಲ , ಬಾಳೆಹಳ್ಳಿ ಮಠಗಳನ್ನು ಸೇರಿಸಿಕೊಂಡು ಪಂಚಪೀಠಗಳು ಎಂದು ಮಾಡಿಬಿಟ್ಟರು…
 • ಬ್ರಾಹ್ಮಣರಿಗೆ ಗೋತ್ರಗಳಿದ್ದಂತೆ ತಮ್ಮಲ್ಲೂ ಗೋತ್ರಗಳನ್ನು ಸೃಷ್ಟಿಸಿಕೊಂಡರು.ಯಜ್ಞ ಯಾಗಾದಿಗಳನ್ನು ಕೈಗೊಂಡರು…
 • ವೈದಿಕರಂತೆ ತಮ್ಮನ್ನು ತಾವು ವೇದ ಮೂರ್ತಿಗಳೆಂದು ಕರೆದುಕೊಂಡರು…
 • ಬ್ರಾಹ್ಮಣರ ಉಪನಯನದಂತೆ ಅಯ್ಯಾಚಾರ ಕಲ್ಪಿಸಿಕೊಂಡರು‌. ಬ್ರಾಹ್ಮಣರಂತೆ ತಾವು ಮಾತ್ರ ಮಠಾಧೀಶರಾಗುವ ಹಕ್ಕನ್ನು ಸ್ಥಾಪಿಸಿಕೊಂಡರು…
 • ಬ್ರಾಹ್ಮಣ ಮಠಾಧೀಶರಿಗೆ ಮಾತ್ರ ಇದ್ದ ಅಡ್ಡಪಲ್ಲಕ್ಕಿ ಮೆರವಣಿಗೆಯನ್ನು ಇವರು ಕಾಡಿ ಬೇಡಿ ಬ್ರಿಟಿಷ್ ರಿಂದ ಪಡೆದುಕೊಂಡರು…
 • ಬ್ರಾಹ್ಮಣ ಮಠಾಧೀಶರೇ ಅಡ್ಡಪಲ್ಲಕ್ಕಿ ಉತ್ಸವ ಬಿಟ್ಟರು ಇವರು ಬಿಡಲೊಲ್ಲರು…

ಹೀಗೆ ವೀರಶೈವ ಎಂದರೆ ಅದು ಬ್ರಾಹ್ಮಣರಾಗಲು ಹೊರಟ ಕೆಲವರ ಸೃಷ್ಟಿ.ಈಗ ಇವರು ಮೀಸಲಾತಿ ಗಾಗಿ ನಕಲಿ ದಲಿತರಾಗಲು ಹೊರಟಿದ್ದಾರೆ.

ಲೇಖನ: ಡಾ.ಜೆ.ಎಸ್.ಪಾಟೀಲ

ವಿಜಯಪುರ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

Leave a Reply

Your email address will not be published. Required fields are marked *

error: Content is protected !!