Breaking News
Home / featured / ಈ ದಿನದ ವಿಶೇಷ ವಚನ

ಈ ದಿನದ ವಿಶೇಷ ವಚನ

ವಿಷ್ಣು ಪರಿಪೂರ್ಣನಾದಡೆ,
ಸೀತೆ ಕೆಟ್ಟಳೆಂದು ಅರಸಲೇಕೊ ?
ವಿಷ್ಣು ಪರಿಪೂರ್ಣನಾದಡೆ,
ವಟಪತ್ರದ ಮೇಲೆ ಕುಳಿತು,
ಜಲಪ್ರಳಯದಲ್ಲಿ
ಅಡಗಿದನೆಂಬ ಮಾತೇಕೊ ?
ವಿಷ್ಣುವಿನ ಬಾಣ ಸಮುದ್ರಕಡ್ಡಕಟ್ಟಿಯಾದಡೆ,
ಕಪಿ ಕೋಡಗವ ಹಿಡಿತಂದು,
ಬೆಟ್ಟಗಟ್ಟಂಗಳ ಹಿಡಿತಂದು,
ಸೇತುವೆಯ ಕಟ್ಟಲೇಕೊ ?
ವಿಷ್ಣು ಪರಿಪೂರ್ಣನಾದಡೆ,
ರಾವಣನ ವಧೆಗಂಜಿ,
ಧರೆಯ ಮೇಲೆ ಲಿಂಗಪ್ರತಿಷ್ಟೆಗಳ
ಮಾಡಿ ಪೂಜಿಸಲೇಕೊ ?
ಇಂತು ಬ್ರಹ್ಮಾಂಡದೊಳಗೆ ಸಿಕ್ಕಿ
ಸತ್ತುಹುಟ್ಟುತ್ತಿಹ ದೇವತೆಗಳು
ಒಬ್ಬರೂ ಪರಿಪೂರ್ಣರಲ್ಲ.
ಮಹಾದಾನಿ ಸೊಡ್ಡಳನೊಬ್ಬನೆ ಪರಿಪೂರ್ಣನು.

~ ಶರಣ ಸೊಡ್ಡಳ ಬಾಚರಸ

ಸೊಡ್ಡಳ ಬಾಚರಸ

ಸಂಕ್ಷಿಪ್ತ ಪರಿಚಯ:-ಅಪ್ಪ ಬಸವಣ್ಣ ನವರಿಗೆ ತುಂಬ ಆಪ್ತರೆನಿಸಿದ್ದ ಸೊಡ್ಡಳ ಬಾಚರಸರ ಕಾಯಕ ಬಿಜ್ಜಳನರಮನೆ ಯಲ್ಲಿ ಧಾನ್ಯ ಅಳೆದು ಕೊಡುವುದರ ಲೆಖ್ಖ ಬರೆಯುವ ಕರಣಿಕನ(ಗುಮಾಸ್ತ) ಕೆಲಸ.ಇವರು ಸೌರಾಷ್ಟ್ರ ಸೋಮೇಶ್ವರ ನ ಭಕ್ತ. ಬಸವಪುರಾಣ, ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರ ರತ್ನಾಕರ ಈ ಮುಂತಾದ ಕೃತಿಗಳಲ್ಲಿವರ ಜೀವನಕ್ಕೆ ಸಂಬಂಧಿಸಿದ ಕೆಲವು ವಿವರಗಳು ಸಿಕ್ಕು ತ್ತವೆ. ಅನುಭವ ಮಂಟಪದ ೭೭೦ ಅಮರ ಗಣಂಗಳಲ್ಲಿ ಇವರೂ ಒಬ್ಬ ವಚನಕಾರ ಶರಣರು. ‘ಸೊಡ್ಡಳ’ ಅಂಕಿ ತದಲ್ಲಿವರು ರಚಿಸಿದ ೧೦೪ ವಚನಗಳು ಲಬ್ಯವಾಗಿವೆ. ಅವುಗಳಲ್ಲಿ; ತತ್ವ ವಿವೇ ಚನೆ, ನೀತಿ ಭೋಧೆ, ಶರಣರ ಸತ್ಸಂಗ, ದೈವನಿಷ್ಠೆ, ಜೀವನನಿಷ್ಠೆ, ಉತ್ಕಟ ಶಿವ ಭಕ್ತಿನಿಷ್ಠೆ ಅಭಿವ್ಯಕ್ತವಾಗಿದೆ. ಭಾಷಾ ಪ್ರಯೋಗ ಮತ್ತು ನಿರೂಪಣಾ ಶೈಲಿ ಉಳಿದ ಶರಣರಿಗಿಂತ ಭಿನ್ನವಾಗಿದೆ. “..ಕೂಡಲಸಂಗಮದೇವರ ಶರಣ ಸೊಡ್ಡಳ ಬಾಚರಸರು ನಿಜಲಿಂಗದ ಒಡಲೊಳಗೆ ಬಗಿದು ಹೊಕ್ಕಡೆ, ಉಪ ಮಿಸಬಲ್ಲವರ ಕಾಣೆನು.” ಎಂದಿದ್ದಾರೆ ಅಪ್ಪ ಬಸವಣ್ಣನವರು.

ಲೇಖನ: ಡಾ.ಜೆ.ಎಸ್.ಪಾಟೀಲ

ವಿಜಯಪುರ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ತಪೋವನ ಕುಮಾರಸ್ವಾಮಿಗಳು: ವಿದೇಶಿಯರಿಗೆ ಬಸವತತ್ವದ ಅರಿವು ಮೂಡಿಸಿದ ಮೊದಲಿಗರು

  ಲಿಂಗಾಯತ ಕ್ರಾಂತಿ: ಶಿವಯೋಗ ಮತ್ತು ಇಷ್ಟಲಿಂಗದ ಮಹತ್ವ ಕುರಿತು ಅರಿವು ಕೇವಲ ಕರ್ನಾಟಕದಲ್ಲಿರುವ ಲಿಂಗಾಯತರಿಗೆ ತಿಳಿಸುವದಷ್ಟೇ ಅಲ್ಲದೇ ವಿದೇಶಿಯರಿಗೆ …

ರೈತರ ಬಾಳು ‘ಹಾಂ’ ಅನ್ನುವದರೊಳಗೆ ತಿಂಗಳಾಗಿ ಪಗಾರ ಬಂದಂತಲ್ಲ!

ಸಿಂದಗಿ: ಅವರು ಆರು ತಿಂಗಳು, ಒಂದು ವರ್ಷ ಅವರೇ ದುಡಿದ ಅನ್ನಕ್ಕಾಗಿ ಕಾಯಬೇಕು. ಅದೂ ಯಾವ ಬೆಳೆಗೆ ಎಷ್ಟು ಬರುತ್ತೆ …

ವಿನಯ ಕುಲಕರ್ಣಿ ಎಂಬ ಹೋರಾಟಗಾರನ ಜೀವನ

ಧಾರವಾಡ ಜಿಲ್ಲೆ ಕರುನಾಡಿಗೆ ಅನೇಕ ರಾಜಕೀಯ ನಾಯಕರನ್ನು ನೀಡಿದೆ. ಬಂಡಾಯದ ನಾಡೇ ಎಂದು ಹೆಸರಾಗಿರುವ ಧಾರವಾಡ ಜಿಲ್ಲೆಯ ನವಲಗುಂದ ಮೂಲದ …

ಬೈಲೂರ ನಿಜಗುಣಾನಂದ ಶ್ರೀಗಳ ಸಾಮಾಜಿಕ ಕ್ರಾಂತಿ

  ಬೆಂಗಳೂರು/ಬೈಲೂರು: ತೋಂಟದಾರ್ಯ ಶಾಖಾಮಠ ಮುಂಡರಗಿ ಮತ್ತು ನಿಷ್ಕಲ ಮಂಟಪ ಬೈಲೂರಿನ ಶ್ರೀ ನಿಜಗುಣಪ್ರಭು ತೋಂಟದಾರ್ಯ (ನಿಜಗುಣಾನಂದ) ಸ್ವಾಮಿಗಳು ಅಂದ್ರೆ …

ವಿನಯ್ ಕುಲಕರ್ಣಿ ಜೊತೆಗೆ ಲಿಂಗಾಯತ ಸಮಾಜವಿದೆ : ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆ

ಬೆಂಗಳೂರು : ಲಿಂಗಾಯತ ಸಮಾಜದ ಹಿರಿಯ ಮುಖಂಡ,ಮಾಜಿ ಸಚಿವ ವಿನಯ ಕುಲಕರ್ಣಿ ಯವರನ್ನು ವಿಚಾರಣೆಯ ನೆಪದಲ್ಲಿ ಕರೆದುಕೊಂಡು ಹೋಗಿರುವ ಪೊಲೀಸರ …

Leave a Reply

Your email address will not be published. Required fields are marked *

error: Content is protected !!