Breaking News
Home / featured / 5000 ಉಚಿತ ಮಾಸ್ಕ್ ವಿತರಿಸಿದ ಸಮಾಜ ಸೇವಕ ಹಬೀಬ ಶಿಲ್ಲೇದಾರ

5000 ಉಚಿತ ಮಾಸ್ಕ್ ವಿತರಿಸಿದ ಸಮಾಜ ಸೇವಕ ಹಬೀಬ ಶಿಲ್ಲೇದಾರ

ಚನ್ನಮ್ಮನ ಕಿತ್ತೂರು: ಜಗತ್ತಿನಾದ್ಯಂತ ಹರಡಿರುವ ಮಹಾಮಾರಿ ಕೊರೂನಾ ವೈರಸ್ ಲಕ್ಷಾಂತರ ಜನರ ಜೀವಕ್ಕೆ ಕುತ್ತು ತಂದಿದ್ದು ಇವತ್ತಿನವರೆಗೂ ಸುಮಾರು 44000 ಜನರು ಮರಣ ಹೊಂದಿದ್ದು ಸಾರ್ವಜನಿಕರು ಇತಂಹ ಪರಿಸ್ಥಿತಿ ಅರೆತು ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಂಡು ಮುಖಕ್ಕೆ ಮಾಸ್ಕ ಧರಿಸಬೇಕೆಂದು ಕಿತ್ತೂರ ನಾಡಿನ ಸಮಾಜ ಸೇವಕ ಹಬೀಬ ಶಿಲ್ಲೇದಾರ ಹೇಳಿದರು.

ಚೆನ್ನಮ್ಮನ ಕಿತ್ತೂರು ಕ್ಷೇತ್ರದ ಅಂಬಡಗಟ್ಟಿ, ಇಟಗಿ ಕ್ರಾಸ್, ಚೆನ್ನಮ್ಮನ ಕಿತ್ತೂರ ಹಾಗೂ ವಿವಿಧ ಗ್ರಾಮಗಳಿಗೆ ಸತೀಶಣ್ಣಾ ಜಾರಕಿಹೊಳಿ ಅಭಿಮಾನಿ ಬಳಗದಿಂದ ಸುಮಾರು 5000 ಮಾಸ್ಕಗಳನ್ನು ಉಚಿತವಾಗಿ ಪೋಲಿಸ್ ಇಲಾಖೆ, ಆರೋಗ್ಯ ಇಲಾಖೆಗಳಿಗೆ, ತುರ್ತು ಸೇವೆಯ ವಾಹನ ಸವಾರರಿಗೆ, ಬೀದಿ ಬದಿ ಕಾಯಿಪಲ್ಯ ಸೊಪ್ಪುಗಳು ವ್ಯಾಪಾರಸ್ಥರಿಗೆ, ಕಿರಾಣಿ ವ್ಯಾಪಾರಿಗಳಿಗೆ ಹಾಗೂ ಗ್ರಾಮದ ಸಾರ್ವಜನಿಕರಿಗೆ ವಿತರಿಸಿ ಮಾತನಾಡಿದರು.
ಕೊರೊನಾ ವೈರಸ್ ತಡೆಗಟ್ಟುವ ಕುರಿತು ಜನರಲ್ಲಿ ಜಾಗೖತಿ ಮೂಡಿಸಿದರು.

ಪ್ರತಿದಿನ ಸುಮಾರು 50ಕ್ಕೂ ಅಧಿಕ ಕಾರ್ಮಿಕರು ಕೆಲಸ ನಿರ್ವಹಿಸುವ ತಮ್ಮ ಸತೀಶಣ್ಣಾ ಗಾರ್ಮೆಂಟ್ಸ್ ನಲ್ಲಿ ನಿರಂತರ ಮಾಸ್ಕ ತಯಾರಿಸುತ್ತಿದ್ದು ಸಾರ್ವಜನಿಕರ ಅನೂಕಲಕ್ಕಾಗಿ ಅತ್ಯಂತ ಕಡಿಮೆ ದರದಲ್ಲಿ ನೀಡುತ್ತಿದ್ದಾರೆ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!