Breaking News
Home / featured / ಗೋವಾ ಕನ್ನಡಿಗರ ಕುರಿತು ಕಾಳಜಿ ವಹಿಸಿದ ಎಂ. ಬಿ ಪಾಟೀಲ

ಗೋವಾ ಕನ್ನಡಿಗರ ಕುರಿತು ಕಾಳಜಿ ವಹಿಸಿದ ಎಂ. ಬಿ ಪಾಟೀಲ

ವಿಜಯಪುರ : ಜಿಲ್ಲೆಯಿಂದ ಸಾಕಷ್ಟು ಜನ ಗೋವಾ ರಾಜ್ಯಕ್ಕೆ ಗುಳೆ ಹೋಗಿದ್ದು, ಲಾಕ್‍ಡೌನ್ ನಿಮಿತ್ತ ಕನ್ನಡಿಗರಿಗೆ ಬಹಳಷ್ಟು ಕಷ್ಟ ಆಗಿದೆ ಎಂಬ ಕೂಗಿನ ಹಿನ್ನಲೆಯಲ್ಲಿ ಮಾಜಿ ಗೃಹ ಸಚಿವ, ಬಬಲೇಶ್ವರ ಶಾಸಕರಾದ ಎಂ.ಬಿ ಪಾಟೀಲ ಪೋನ್ ಮೂಲಕ ಕರೆ ಮಾಡಿ ಗೋವಾದಲ್ಲಿರುವ ಕನ್ನಡಿಗರ ಸ್ಥಿತಿಗತಿ ಕುರಿತು ಹಾಗೂ ಕೊರೊನಾ ವೈರಸ್ ನಿಂದ ರಕ್ಷಿಸಲು ಸೂಕ್ತ ಕ್ರಮಗಳನ್ನು ವಹಿಸುವಂತೆ ಹಾಗೂ ವಸತಿ, ಆಹಾರ, ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸುವಂತೆ ತಿಳಿಸಿದರು. ಇಂದು ಗೋವಾ ರಾಜ್ಯದ ವಿಜ್ಞಾನ ತಂತ್ರಜ್ಞಾನ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಮೈಕಲ್ ಲೋಬೊ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದ್ದು, “ಕನ್ನಡಿಗರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ನಾನು ಖುದ್ದಾಗಿ ಈ ಕುರಿತು ಮುತುವರ್ಜಿ ವಹಿಸುತ್ತೇನೆ. ಕರ್ನಾಟಕದ ಯಾರು ಕೂಡ ಈ ಕುರಿತು ಗಾಬರಿಯಾಗಬಾರದು” ಎಂದು ಮೈಕಲ್ ಲೋಬೊ ತಿಳಿಸಿದ್ದಾರೆ.

“ಗೋವಾದಲ್ಲಿ ಕನ್ನಡಿಗರ ಸ್ಥಿತಿ ಅತಂತ್ರವಾಗಿದೆ. ಅವರ ನೆರವಿಗೆ ಯಾರು ಬರುತ್ತಿಲ್ಲ. ಈ ಕುರಿತು ಅಲ್ಲಿನ ನಮ್ಮ ಜನರ ಕುರಿತು ಆತಂಕಗಳು ನಿರ್ಮಾಣವಾಗಿವೆ. ಮಾಧ್ಯಮಗಳಲ್ಲಿಯೂ ಈ ಕುರಿತು ವರದಿಯಾಗಿದೆ. ಕಾರಣ ನೀವು ದಯವಿಟ್ಟು ಅಲ್ಲಿನ ಕನ್ನಡಿಗರ ರಕ್ಷಣೆಯನ್ನು ಮಾಡಿರಿ ಇದು ಕರ್ನಾಟಕದ ಪರವಾಗಿ ಕಳಕಳಿಯ ವಿನಂತಿ” ಎಂದು ಎಂ.ಬಿ.ಪಾಟೀಲ್‍ರು ತಮ್ಮ ಆಪ್ತಮಿತ್ರ ಗೋವಾ ಸರ್ಕಾರದ ಪ್ರಭಾವಿ ಸಚಿವ ಮೈಕಲ್ ಲೋಬೊ ಅವರಲ್ಲಿ ವಿನಂತಿಸಿದಾಗ “ಗೋವಾದಲ್ಲಿರುವ ಕನ್ನಡಿಗರ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ಎರಡು ಸ್ಥಳಗಳಲ್ಲಿ ಉಚಿತ ಭೋಜನಾಯಲಗಳನ್ನು ಆರಂಭಿಸಲಾಗಿದೆ. ಅಲ್ಲದೇ ದಿನನಿತ್ಯದ ರೇಷನ್ ಒಳಗೊಂಡ ಕಿಟ್‍ಗಳನ್ನು ಎಲ್ಲಾ ಕನ್ನಡಿಗರಿಗೆ ಒದಗಿಸಲಾಗುತ್ತಿದೆ. ಈಗಾಗಲೇ ವೈಯಕ್ತಿಕವಾಗಿ 400ಕ್ವಿಂಟಾಲ್ ಅಕ್ಕಿಯನ್ನು ಒಳಗೊಂಡ ರೇಷನ್‍ಗಳನ್ನು ಕಾರ್ಮಿಕರಿಗೆ ನೀಡಲಾಗಿದೆ. ನನ್ನ ಕಛೇರಿಯಲ್ಲಿ ಕನ್ನಡಿಗರೇ ಆದ ದಿನೇಶ ಅವರನ್ನು ಕರ್ನಾಟಕದ ಕನ್ನಡಿಗರ ರಕ್ಷಣೆಗಾಗಿ ವಿಶೇಷ ಉಸ್ತುವಾರಿ ಅಧಿಕಾರಿ ಎಂದು ಈ ಕೂಡಲೇ ನೇಮಿಸುತ್ತೇನೆ. ನಿಮ್ಮ ಬಬಲೇಶ್ವರ ಕ್ಷೇತ್ರವೂ ಸೇರಿದಂತೆ ಎಲ್ಲ ಕನ್ನಡಿಗರು ಅಗತ್ಯವಿದ್ದಾಗ ದಿನೇಶ ಅವರನ್ನು ಸಂಪರ್ಕಿಸಲು ಕೋರಿದೆ” ಎಂದು ದೂರವಾಣಿಯಲ್ಲಿ ತಿಳಿಸಿದರು.
ಇದೇ ವಿಷಯವನ್ನು ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರಿಗೆ ಎಂ.ಬಿ.ಪಾಟೀಲ್‍ರು ತಿಳಿಸಿದ್ದು, “ಜಿಲ್ಲೆಯ ಜನರು ಗೋವಾದಲ್ಲಿದ್ದು, ತೊಂದರೆಯಾದರೆ ಜಿಲ್ಲಾಡಳಿತದ ಗಮನಕ್ಕೆ ತರಲು ಸೂಚಿಸಿ, ಅಂತವರ ವಿವರಗಳನ್ನು ನೀಡಿದರೆ, ನನ್ನ ಪರವಾಗಿ ಬಿ.ಎಲ್.ಡಿ.ಇ ಸಂಸ್ಥೆ ಪ್ರಚಾರಾಧಿಕಾರಿ ಡಾ.ಮಹಾಂತೇಶ ಬಿರಾದಾರ ಮತ್ತು ಗೋವಾ ಸಚಿವ ಮೈಕಲ್ ಲೋಬೊ ಪರವಾಗಿ ದಿನೇಶ ಗೋವಾದ ಕನ್ನಡಿಗರ ಕುರಿತು ಉಸ್ತುವಾರಿ ನೋಡಿಕೊಳ್ಳುತ್ತಾರೆ. ಅಗತ್ಯವಿದ್ದವರು ಸ್ಥಳೀಯ ಆಡಳಿತಕ್ಕೆ ಸಂಪರ್ಕಿಸಿ” ಎಂದು ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಮಾಹಿತಿ : ಡಾ. ಮಹಾಂತೇಶ ಬಿರಾದಾರ.  ವಿಜಯಪುರ





About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಜಾತಿ ಲಿಂಗಾಯತರು ಮತ್ತು ಬೇಡ ಜಂಗಮ ಪಂಚಾಚಾರ್ಯರು ಸತ್ಯವೆಂದು ನಂಬಿ ಲಿಂಗಾಯತ ಧರ್ಮದ ಮಾನ್ಯತೆ ತಪ್ಪಿಸುತ್ತಿದ್ದಾರೆ. ಬಸವಕಲ್ಯಾಣ: 12ನೇ …

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

Leave a Reply

Your email address will not be published. Required fields are marked *

error: Content is protected !!