Breaking News
Home / featured / ಅಂಗನವಾಡಿ ರೇಷನ್ ಕಳ್ಳತನಕ್ಕೆ ಯತ್ನ

ಅಂಗನವಾಡಿ ರೇಷನ್ ಕಳ್ಳತನಕ್ಕೆ ಯತ್ನ

ಮುಧೋಳ: ಇಡೀ ದೇಶ ಕೋವಿಡ್ 19 ಕೊರೊನಾ ವೈರಸ್ ಎಂಬ ಭಯಾನಕ ರೋಗದ ಆತಂಕದಲ್ಲಿದ್ದರು ಮುಧೋಳ ತಾಲೂಕಿನ ಬೆಳಗಲಿ ಪಟ್ಟಣದಲ್ಲಿ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಮಕ್ಕಳಿಗೆ ನೀಡುವ ಹಾಲಿನ ಪೌಡರ್. ಕಾಳುಗಳನ್ನು ಕಳ್ಳತನ ಮಾಡಲು ಯತ್ನಿಸಿ ಗ್ರಾಮಸ್ಥರ ಕೈಯಲ್ಲಿ ಸಿಕ್ಕಾಕಿಕೊಂಡಿದ್ದಾಳೆ

ಕೋವಿಡ್ 19 ಕೊರೊನಾ ವೈರಸ್ ಎಂಬ ಭಯಾನಕ ರೋಗವನ್ನು ತಡೆಗಟ್ಟಲು ಇಡೀ ದೇಶವನ್ನು ಲಾಕ್ ಡೌನ್ ಮಾಡಲಾಗಿದೆ ಇದನ್ನೇ ಬಂಡವಾಳ ಮಾಡಿಕೊಂಡ ಮುಧೋಳ ತಾಲೂಕಿನ ಬೆಳಗಲಿ ಪಟ್ಟಣದ ಮುತ್ತವ್ವ ದಡ್ಡಿನ ಎಂಬ ಅಂಗನವಾಡಿ ಮಹಿಳಾ ಶಿಕ್ಷಕಿ ಯೊಬ್ಬಳು ಅಂಗನವಾಡಿಗೆ ಸರ್ಕಾರ ನೀಡುವ ಪೌಷ್ಟಿಕ ಅಹಾರಗಳಾದ ಹಾಲಿನ ಪೌಡರ್ ಮತ್ತು ಕಾಳುಗಳನ್ನು ಕಳ್ಳತನ ಮಾಡಲು ಯತ್ನಿಸಿ ಗ್ರಾಮಸ್ಥರ ಕೈಯಲ್ಲಿ ಸಿಕ್ಕಿರುವ ಘಟನೆಯೊಂದು ನಮ್ಮ ರಾಜ್ಯದ ಉಪಮುಖ್ಯಮಂತ್ರಿಗಳಾದ ಗೋವಿಂದ ಎಂ. ಕಾರಜೋಳ ಅವರ ತವರು ಕ್ಷೇತ್ರವಾದ ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ಬೆಳಗಲಿ ಪಟ್ಟಣದಲ್ಲಿ ನಡೆದಿದೆ ವಿಪರ್ಯಾಸವೆಂದರೆ ಕಳೆದ ಮೂರನಾಲ್ಕು ತಿಂಗಳ ಹಿಂದೆ ಇದೆ ಪಟ್ಟಣದಲ್ಲಿ ಸರಕಾರಿ ಹೆಣ್ಣು ಮಕ್ಕಳ ಶಾಲೆಯೊಂದರಲ್ಲಿ ಅಡುಗೆ ಮಾಡುವ ಸಿಬ್ಬಂದಿಗಳ ನಿರ್ಲಕ್ಷ್ಯತನದಿಂದ ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ತವ್ಯಸ್ತ ಗೊಂಡು ಆಸ್ಪತ್ರೆ ಸೇರಿದ್ದರೂ ಆದರೆ ಅದು ಮಾಸುವ ಮುನ್ನವೇ ಚಿಕ್ಕ ಮಕ್ಕಳಿಗೆ ಬಾಣಂತಿಯರಿಗೆ ನೀಡುವ ಪೌಷ್ಟಿಕ ಆಹಾರ ಪದಾರ್ಥಗಳನ್ನು ಕಳ್ಳತನ ಮಾಡಲು ಯತ್ನಿಸಿರುವು .ಎಷ್ಟರಮಟ್ಟಿಗೆ ಸರಿ ಇಲ್ಲಿನ.ಅಧಿಕಾರಿಗಳ ಕುಮ್ಮಕ್ಕು ಅನ್ನಬೇಕೊ..? ಇಲ್ಲಾ ಇಲಾಖೆಗಳ ದೌರ್ಬಲ್ಯವೆನ್ನಬೇಕೊ…? ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು..

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!