Breaking News
Home / featured / ಜಂಗಮ ಪರಿಕಲ್ಪನೆ ಮತ್ತು ಪಂಚಪೀಠಗಳು.!

ಜಂಗಮ ಪರಿಕಲ್ಪನೆ ಮತ್ತು ಪಂಚಪೀಠಗಳು.!

ಜಂಗಮ ಪರಿಕಲ್ಫನೆ ಎಷ್ಟು ಕಾಲದ ಹಿಂದಿನದ್ದು ಎನ್ನುವದ ಬಗ್ಗೆ ಜಿಜ್ಞಾಸೆಗಳಿವೆ. ಆದರೆ ಆ ಪದಕ್ಕೆ ವಿಶಾಲ ಅರ್ಥ ಮತ್ತು ಗೌರವಾನ್ವಿತ ವ್ಯಾಖ್ಯಾನ ಒದಗಿದ್ದು ಮಾತ್ರ ಬಸವಣ್ಣನವರ ಕಾಲಘಟ್ಟದಲ್ಲಿ.

ಬಸವಣ್ಣನವರು ಸ್ಥಾಪಿಸಿದ ಚಿಂತನಶೀಲ ಲಿಂಗಾಯತ ವಿಚಾರಧಾರೆಯನ್ನು ಮನೆಮನೆಗೆ ಮುಟ್ಟಿನಲು ಒಂದು ಸ್ವಯಂಸೇವಕರ ತಂಡದ ಅಗತ್ಯವಿತ್ತು. ಆಗ ಬಸವಣ್ಣನವರು ತತ್ವ ಪ್ರಚಾರದ ಕಾಯಕ ಮಾಡುವ ಶ್ರಮ ಜೀವಿಗಳನ್ನು ಜಂಗಮರೆಂದು ಹೆಸರಿಟ್ಟರು.

ಜಂಗಮ ಎಂದರೆ ವ್ಯಕ್ತಿಯು ಅಲ್ಲ ˌ ಪಂಗಡವೂ ಅಲ್ಲ ಅದೊಂದು ಚಲನಶೀಲ ತತ್ವ. ಜಡವಾಗಿದ್ದ ವ್ಯವಸ್ಥೆಗೆ ಹೊಸ ದಿಕ್ಕನ್ನು ತೋರಿದ್ದು ಶರಣರ ಜಂಗಮ ತತ್ವ. ಆಗ ಚಿಂತನಶೀಲ ತತ್ವ ಪ್ರಚಾರದ ಕಾಯಕ ಮಾಡುತ್ತಿದ್ದ ಜಂಗಮರಿಗೆ ಸಮಾಜದಲ್ಲಿ ಎಲ್ಲಿಲ್ಲದ ಗೌರವ ಸಿಗುತ್ತಿತ್ತು.

ಆದರೆ ಬಸವಯುಗ ನಂತರದ ಕಾಲಘಟ್ಟದಲ್ಲಿ ಸಮಾಜ ನೀಡುವ ಈ ಗೌರವವನ್ನು ಜಂಗಮರು ದುರುಪಯೋಗಪಡಿಸಿಕೊಂಡು ಶ್ರೇಷ್ಟತೆಯ ವ್ಯಸನಕ್ಕೆ ಬಲಿಯಾಗಿ ತಮ್ಮದೊಂದು ಪ್ರತ್ಯೇಕ ಪಂಗಡ ಮಾಡಿಕೊಂಡಂತೆ ಕಾಣಿಸುತ್ತದೆ.

ಮುಂದೆ ಹದಿನೇಳು-ಹದಿನೆಂಟನೇ ಶತಮಾನದಲ್ಲಿ ಈ ಶ್ರೇಷ್ಟತೆಯ ವ್ಯಸನ ಅಷ್ಟಕ್ಕೆ ವಿರಮಿಸದೆ ಬ್ರಾಹ್ಮಣ್ಯಕ್ಕೆ ಸೆಡ್ಡು ಹೊಡೆದು ಆಚಾರ್ಯ ಸಂಸ್ಕ್ರತಿಯ ಕ್ರತಕ ಸ್ರಷ್ಟಿಗೆ ಪ್ರಚೋದನೆ ನೀಡಿ ಪಂಚಾಚಾರ್ಯ ಪರಂಪರೆ ಹುಟ್ಟಿಕೊಂಡಿತು. ಅದು ಇಂದು ಬಸವಯುಗದ ಚಲನಶೀಲ ಲಿಂಗಾಯತ ತತ್ವಕ್ಕೆ ವಿರುದ್ಧವಾದ ಜಡ ಸ್ಥಾವರವಾಗಿ ಮಾರ್ಪಟ್ಟಿದೆ.

ಅಷ್ಟೇ ಅಲ್ಲದೆ ಒಂದುಕಡೆ ಶ್ರೇಷ್ಟತೆಯ ವ್ಯಸನಕ್ಕೆ ಬಲಿಯಾಗಿ ಆಚಾರ್ಯ ಸಂಸ್ಕ್ರತಿಯ ಪ್ರತಿಪಾದನೆ ಮಾಡುತ್ತಿದ್ದರೆ ಇನ್ನೊಂದುಕಡೆ ಮೀಸಲಾತಿಯ ಆಮೀಶಕ್ಕೆ ಬಲಿಯಾಗಿ ಅಲೆಮಾರಿ ಬೇಡ/ಬುಡುಗ ಜಂಗಮರ ಸೌಲಭ್ಯ ಕಸಿದು ತಿನ್ನುವಷ್ಟು ತತ್ವ ಮತ್ತು ನೀತಿ ಭ್ರಷ್ಟತೆಯನ್ನು ಈ ಸಮುದಾಯ ತಲುಪಿ ನಿಂತಿದೆ.

ಲೇಖನ: ಡಾ. ಜೆ ಎಸ್ ಪಾಟೀಲ.

ವಿಜಯಪುರ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!