Breaking News
Home / featured / 50 ಲಕ್ಷ ರೂ ದೇಣಿಗೆ ನೀಡಿದ ಬಿಎಲ್‌ಡಿಇ ಸಂಸ್ಥೆ

50 ಲಕ್ಷ ರೂ ದೇಣಿಗೆ ನೀಡಿದ ಬಿಎಲ್‌ಡಿಇ ಸಂಸ್ಥೆ

ವಿಜಯಪುರ: ದೇಶದಲ್ಲಿ ಮಾರಣಾಂತಿಕ ಕೊರೊನಾ ವೈರಸ್ ಹೆಚ್ಚುತ್ತಿದ್ದು, ಕೊವಿಡ್-19 ಸೋಂಕಿನ ವಿರುದ್ಧ ಹೋರಾಡಲು ಹಲವರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.

ಯಾವುದೇ ಸಂಕಷ್ಟ ಎದುರಾದಾಗ ಸಹಾಯ ಹಸ್ತ ಚಾಚುವ ಹೆಮ್ಮೆಯ ಬಿಎಲ್‌ಡಿಇ ಸಂಸ್ಥೆ ಕರೂನಾ ಕಾಯಿಲೆಯ ಸಂಕಷ್ಟದ ಈ ಸಮಯದಲ್ಲಿ ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ 25ಲಕ್ಷ, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25ಲಕ್ಷ ರೂಗಳನ್ನು, ಒಟ್ಟು 50ಲಕ್ಷ ರೂಗಳನ್ನು ಇಂದು ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚೆಕ್ ಮುಖಾಂತರ ನೀಡಲಾಯಿತು.

ಬಿ.ಎಲ್.ಡಿ.ಇ ಅಧ್ಯಕ್ಷ ಮಾಜಿ ಸಚಿವ ಎಂ.ಬಿ ಪಾಟೀಲ್, ಸಂಸ್ಥೆಯ ನಿರ್ದೇಶಕರಾದ ಶಾಸಕ ಸೋಮನಗೌಡ ಪಾಟೀಲ ಸಾಸನೂರ,ವಿಧಾನ ಪರಿಷತ್ ಸದಸ್ಯ ಸುನೀಲ್ ಗೌಡ ಪಾಟೀಲ್
ಜಿಪಂ ಮಾಜಿ ಅಧ್ಯಕ್ಷ ವಿ.ಎಸ್ ಪಾಟೀಲ್ ಬಬಲೇಶ್ವರ, ಸಂಗು ಸಜ್ಜನ್, ಎಂಎಸ್ ಹಿರೇಮಠ್ ಸೇರಿದಂತೆ ಸಂಸ್ಥೆಯ ನಿರ್ದೇಶಕರು ಉಪಸ್ಥಿತರಿದ್ದರು.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

‘ಶರಣಾರ್ಥಿ’ ಗುರು ಪ್ರವೇಶ..!

  ಗಜೇಂದ್ರಗಡದ ಶರಣದಂಪತಿಗಳು ನೂತನ ಮನೆಗೆ ‘ಶರಣಾರ್ಥಿ’ ಎಂದು ವಿಶಿಷ್ಟ ರೀತಿಯಲ್ಲಿ ಮನೆ ನಾಮಕರಣ ಮಾಡಿ ಗುರುಪ್ರವೇಶ, ಅನುಭಾವ ಹಾಗೂ …

Leave a Reply

Your email address will not be published. Required fields are marked *

error: Content is protected !!