Breaking News
Home / featured / ಕನ್ನಡದ ಪ್ರಥಮ ಕವಿಯತ್ರಿ ಅಕ್ಕಮಹಾದೇವಿ

ಕನ್ನಡದ ಪ್ರಥಮ ಕವಿಯತ್ರಿ ಅಕ್ಕಮಹಾದೇವಿ

ಬೆಳಗಾವಿ: 12 ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಆರಂಭಿಸಿದ್ದ ಆ ಅಮೋಘ ಅಕ್ಷರ ಕ್ರಾಂತಿಯಲ್ಲಿ ಅಕ್ಷರ ಕಲಿತು, ನಿಬ್ಬೆರಗುಗೊಳಿಸುವ ವಚನಗಳನ್ನು ನೀಡಿರುವ ಜಗನ್ಮಾತೆ ಅಕ್ಕಮಹಾದೇವಿಯವರು ಜಗತ್ತಿನ ಪ್ರಪ್ರಥಮ ಸಾಕ್ಷರ ಮಹಿಳೆ, ಪ್ರಪ್ರಥಮ ಕವಯಿತ್ರಿ. ಇಡಿ ಜಗತ್ತಿನ ಮಹಿಳಾ ಸಂಕುಲಕ್ಕೆ ಅಧಿದೇವತೆ. ಲಿಂಗಾಯತ ಧರ್ಮದ ಮೇರು ನಕ್ಷತ್ರ. ಶಿವಮೊಗ್ಗದ ಉಡುತಡಿಯಿಂದ-ಬಸವ ಕಲ್ಯಾಣದ ಅನುಭವ ಮಂಟಪದವರೆಗೆ-ಅನುಭವ ಮಂಟಪದಿಂದ ಕದಳಿಯವರೆಗೆ ಆ ಮಹಾತಾಯಿಯ ದಿಗಂಬರ ಹೋರಾಟ, ಆ ದಿಟ್ಟ ನಡೆಯು ಮನುವಾದದ ಮೂಲಕ್ಕೆ ಇಟ್ಟ ಕೊಳ್ಳಿ. ಆ ಕೊಳ್ಳಿಯ ಉರಿಯು ಎಷ್ಟೆ ಹೋಮ-ಹವನ, ಎಷ್ಟೆ ಲಕ್ಷ ದೀಪೋತ್ಸವ ಮಾಡಿದರೋ ಎಂದಿಗೂ ಆರುವಂತಹದಲ್ಲ.

ಬಸವ ಕ್ರಾಂತಿಯಲ್ಲಿ ಅಕ್ಕಮಹಾದೇವಿಯವರು ಮಿನುಗು ತಾರೆ. ಕೋಟಿ ಸೂರ್ಯ ಪ್ರಕಾಶ ಮಾನ. ಅಕ್ಕಮಹಾದೇವಿಯೆಂಬ ಆ ದಿವ್ಯ ಚೇತನದ ಮಹಿಳಾ ಸಬಲೀಕರಣದ ಹೋರಾಟ ಎದೆಂದಿಗೂ ಮರೆಯುವಂತದದಲ್ಲ. ಆ ದಿವ್ಯ ಚೇತನದ ಸ್ಮರಣೆ ನಮ್ಮಲ್ಲಿ ಎಂಟಾನೆಯ ಬಲ ನೀಡುತ್ತದೆ. ಎಪ್ರಿಲ್ 8 ರಂದು ಅಕ್ಕಮಹಾದೇವಿಯವರ ಜಯಂತಿಯನ್ನು ಪ್ರತಿಯೊಬ್ಬರು ಆಚರಿಸಲೇ ಬೇಕು. ಎಪ್ರಿಲ್ 8 ರಂದು ಬೆಳಿಗ್ಗೆ ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳಲ್ಲಿ ದೀಪ ಹಚ್ಚಿರಿ, ಮನೆಗಳ ಮುಂದೆ ರಂಗೋಲಿಗಳನ್ನು ಹಾಕುವ ಮೂಲಕ ಅಕ್ಕಮಹಾದೇವಿಯರ ಜಯಂತಿಯನ್ನು ಆಚರಿಸಬೇಕು. ಇಷ್ಟಲಿಂಗ ಪೂಜೆ ಮಾಡಿಕೊಳ್ಳುವ ಮೂಲಕ ಧರ್ಮದ ಹೋರಾಟಕ್ಕೆ ಅಣಿಯಾಗಬೇಕು.
ಬಸವಣ್ಣನವರು ಆರಂಭಿಸಿದ್ದ ಅರಿವಿನ ಅಕ್ಷರ ಕ್ರಾಂತಿ. ಅಕ್ಷರ ಕ್ರಾಂತಿಯು ವಚನ ಚಳುವಳಯಾಯಿತು. ವಚನ ಚಳುವಳಿಯಿಂದ ಆರಂಭವಾದ ಬಸವಾದಿ ಶರಣರ ಕ್ರಾಂತಿಯು ಮಹೋನ್ನತ ಲಿಂಗಾಯತ ಧರ್ಮವಾಗಿ ಉದಯಿಸಿದ್ದು, ಅಗಣಿತ ಶರಣರ ತ್ಯಾಗ ಬಲಿದಾನಗಳಿಂದ.

ಬಸವಣ್ಣನವರು ಕಟ್ಟಿಕೊಟ್ಟಿರುವ ಧರ್ಮದ ರಕ್ಷಣೆಗಾಗಿ ಮೊದಲ ಬಲಿದಾನ ನೀಡಿದವರು ಸಮಗಾರ ಹರಳಯ್ಯ, ಹರಳಯ್ಯ ಕಲ್ಯಾಣಮ್ಮನವರ ಮಗ ಶೀಲವಂತ ಮತ್ತು ಮಧುವರಸರು. ಅಕ್ಕಮಹಾದೇವಿಯರ ಜಯಂತಿಯ ದಿನದಂದು ಆ ಎಲ್ಲ ಹುತಾತ್ಮ ಶರಣರನ್ನು ನೆನೆಯುವದು ನಮ್ಮ ಕರ್ತವ್ಯ. ಜಗತ್ತಿಗೆ ಜ್ಞಾನದ ಬೆಳಕು ನೀಡಿರುವ ಆ ಬಸವಾದಿ ಶರಣರಿಗೆ, ಜ್ಯೋತಿಗಳನ್ನು ಬೆಳಗಿಸುವ ಹಾಗೂ ಇಷ್ಟಲಿಂಗ ಪೂಜೆ ಮಾಡಿಕೊಳ್ಳುವ ಮೂಲಕ ಕೃತಜ್ಞತೆ ಸಲ್ಲಿಸಬೇಕಾಗಿ ವಿನಂತಿ
ಶರಣು ಶರಣಾರ್ಥಿಗಳು.
ಆರ್.ಎಸ್.ದರ್ಗೆ, ಪತ್ರಕರ್ತರು

ಬೆಳಗಾವಿ.

 

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

‘ಶರಣಾರ್ಥಿ’ ಗುರು ಪ್ರವೇಶ..!

  ಗಜೇಂದ್ರಗಡದ ಶರಣದಂಪತಿಗಳು ನೂತನ ಮನೆಗೆ ‘ಶರಣಾರ್ಥಿ’ ಎಂದು ವಿಶಿಷ್ಟ ರೀತಿಯಲ್ಲಿ ಮನೆ ನಾಮಕರಣ ಮಾಡಿ ಗುರುಪ್ರವೇಶ, ಅನುಭಾವ ಹಾಗೂ …

Leave a Reply

Your email address will not be published. Required fields are marked *

error: Content is protected !!