Breaking News
Home / featured / ಮಹಿಳಾ ಕಣ್ಮಣಿ ಅಕ್ಕ ಮಹಾದೇವಿ

ಮಹಿಳಾ ಕಣ್ಮಣಿ ಅಕ್ಕ ಮಹಾದೇವಿ

ಹನ್ನೆರಡನೇಯ ಶತಮಾನದ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಉಡುತಡಿ ಗ್ರಾಮದ ಸುಮತಿ, ನಿರ್ಮಲ ಶೆಟ್ಟಿಯವರ ಕುವರಿ “ಮಹಾದೇವಿ “—ತನ್ನದೇ ಆದ ವಿಶಿಷ್ಟ ವ್ಯಕ್ತಿತ್ವದಿಂದ, ಅಪಾರವಾದ ಜ್ಞಾನದಿಂದ ಇಡೀ ಮನುಕುಲಕ್ಕೆ “ಅಕ್ಕ “ಳಾಗಿ ಇತಿಹಾಸ ಮಹಿಳೆಯಾಗಿ ಹೊರಹೊಮ್ಮಿದಳು.

ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಅಧ್ಯಾತ್ಮದ ಅರಿವು, ಜ್ಞಾನದಅನುಭವ, ವೈರಾಗ್ಯವನ್ನು ಮೈಗೂಡಿಸಿಕೊಂಡಿರುವ ಅಕ್ಕ ತನ್ನ ಬದುಕನ್ನು ತಾನೆ ವಿಶಿಷ್ಟ ರೀತಿಯಲ್ಲಿ ರೂಪಿಸಿಕೊಂಡವಳು, ಮೊಟ್ಟ ಮೊದಲ ಬಾರಿಗೆ ಮಹಿಳೆಗೆ ಅಭಿವ್ಯಕ್ತ ಸ್ವತಂತ್ರವನ್ನು ದೊರಕಿಸುವಲ್ಲಿ ಪ್ರಮುಖವಾದಳು.
ಜೀವನದುದ್ದಕ್ಕೂ ವಿಸ್ಮಯಕಾರಿ ಬದುಕನ್ನು ಸವೆಸಿದಳು,ಕಾಮ ಕ್ರೋಧ, ಮೋಹ ಮದಮತ್ಸರಗಳನ್ನು ದೂರವಿಟ್ಟು, ತನಗೆ ಒದಗಿ ಬಂದ ರಾಜಭೊಗ ತ್ಯಜಿಸಿದ ಅಕ್ಕ ಕೌಶಿಕ್ ಮಹಾರಾಜರನ್ನು ಕಡೆಗಣಿಸಿ ಕೇಶಾಂಬಿರಿಯಾಗಿ ಹೊರಟ ದಿಟ್ಟ ಹೋರಾಟಗಾರ್ತಿ, ಆತ್ಮಸ್ಥೈರ್ಯವನ್ನು ಹೊಂದಿದ ಬಂಡಾಯಗಾರ್ತಿ.

ಶರಣರ ಸಂಗವನ್ನು ಬಯಸಿ ಉಡುತಡಿಯಿಂದ ಕಲ್ಯಾಣದವರೆಗೆ ಒಬ್ಬಂಟಿಯಾಗಿ ಸವೆಸಿದ ಪಯಣ ಸಾಮಾನ್ಯವಾದುದಲ್ಲ,

ಕಲ್ಯಾಣಕ್ಕೆ ಬಂದಾಗ ಶೂನ್ಯಪೀಠದ ಒಡೆಯ ಅಲ್ಲಮಪ್ರಭುದೇವರು ಒಡ್ಡಿದ ಅಸಾಮಾನ್ಯವಾದ ಎಲ್ಲಾ ಪ್ರಶ್ನೆಗಳಿಗೆ ದಿಟ್ಟತನದಿಂದ ಉತ್ತರಿಸಿ ಅವರಿಂದಲೇ ಅಕ್ಕ ಮಹಾದೇವಿಯಪಾದಕ್ಕೆ ನಮೋ ನಮೋ ಎನಿಸಿಕೊಂಡವಳು.

ಶರಣರ ಸಂಗದಿಂದ ತನ್ನ ಅನುಭವವನ್ನು ಹೆಚ್ಚಿಸಿಕೊಂಡು,ಒಟ್ಟು 430ಕ್ಕಿಂತ ಅಧಿಕ ವಚನಗಳನ್ನೂ, ಅದ್ಭುತವಾದ ಯೋಗಾಂಗತ್ರಿವಿಧಿ, ಮಂತ್ರಗೌಪ್ಯಗಳನ್ನು ರಚಿಸಿ ಕನ್ನಡದ ಮೊಟ್ಟಮೊದಲ ವಿದ್ವತ್ಪೂರ್ಣ ವಚನಗಾರ್ತಿ,ಕವಿಯತ್ರಿಯಾಗಿ “ಜಗವೆಲ್ಲಾ ಹೆಣ್ಣು ನೋಡಾ”ಎಂದು ಹೇಳುವ ಅಕ್ಕ ಲಿಂಗ ಸಮಾನತೆಯನ್ನು ತಂದು, ಮುಖ್ಯವಾಗಿ ಮಹಿಳೆಯರಿಗೆ ಅಭಿವ್ಯಕ್ತ ಸ್ವತಂತ್ರವನ್ನು ದೊರಕಿಸುವಲ್ಲಿ ಯಶಸ್ವಿಗೊಂಡು ಇತಿಹಾಸ ಪುಟಗಳಲ್ಲಿ ಅಜರಾಮರಾದಳು.

ಶಾರೀರಿಕ,ಮಾನಸಿಕ ಶಕ್ತಿಯನ್ನು ಹೆಚ್ಚಿಸಿಕೊಂಡ ಅಕ್ಕ “ಈಜಗತ್ತಿಗಾಗಿ ನೀನು ಬದುಕಿದವಳಲ್ಲ, ಜಗದೊಡಯನಿಗಾಗಿ ಬದುಕಿದವಳು “ಎಂದು ಜಾಗೃತಮನಸ್ಸಿನಿಂದ ಜಗತ್ತು ಹಿಂದೆಂದೂ ಕಂಡರಿಯದ ಅಪೂರ್ವ ನಿರ್ಣಯವನ್ನು ತೆಗೆದುಕೊಂಡು, ಅಲೌಕಿಕ ಗಂಡನನ್ನು ಮಾಡಿಕೊಂಡು, ಸಾವಿಲ್ಲದ,ಕೇಡಿಲ್ಲದ, ರೂಹಿಲ್ಲದ, ಕುಲಸೀಮೆಯಿಲ್ಲದ, ನಿಸ್ಸೀಮ ಚೆಲುವನ ಜೋತೆಯಲ್ಲಿ ಪ್ರೇಮಾಂಕುರ ಬೆಳಿಸಿಕೊಂಡು —–
“ನಾನು ನೀನಗೊಲಿದೆ, ನೀನು ನನಗೊಲಿದೆ!
ನೀನೆನ್ನ ನಗಲದಿಪ್ಪ, ನಾನಿನ್ನನಗಲದಿಪ್ಪನಯ್ಯಾ!
ನಿನಗೆ, ನನಗೆ ಬೇರೊಂದು ಠಾವುಂಟೆ!
ನೀನು ಕರುಣೆಯೆಂಬುದು ನಾನು ಬಲ್ಲೆನು,
ನೀನರಿಸಿದ ಗತಿಯೊಳಗೆ ಇಪ್ಪಳಯ್ಯಾ, ನೀನೇ ಬಲ್ಲೇ ಚೆನ್ನಮಲ್ಲಿಕಾರ್ಜುನದೇವಾ!ಎಂದು ಹೇಳುತ್ತಾ—-

ಶ್ರೀಶೈಲದ ಕದಳಿಯ ಕಡೆಗೆ ನಿಜ ನಿಲುವಿನಾ ಬಯಲನ್ನು ಅರಸುತ್ತಾ ಗಿಡ,ಮರ,ಪ್ರಾಣಿ ನಿಸರ್ಗದ ಜೋತೆಯಾಗಿ-ಹಸಿವಾದೊಡೆ ಬಿಕ್ಷಾನ್ನಗಳುಂಟು, ತ್ರಷೆಯಾದೊಡೆ ಕೆರೆಹಳ್ಳ ಬಾವಿಗಳುಂಟು, ಶಯನಕ್ಕೆ ಹಾಳು ದೇಗಲುಗಳುಂಟು,ಆತ್ಮಸಂಗಾತಕ್ಕೆ ನೀನೆನಗುಂಟು ಚೆನ್ನಮಲ್ಲಿಕಾರ್ಜುನ–ಎಂದು ಹೇಳುತ್ತಾ ಅವನ ಹುಡಕಾಟದಲ್ಲಿ ಆವಳು ಹಾಕಿದ ಹೆಜ್ಜೆ ಹಿಂದೆಯಿಡದೇ ಎದೆಗುಂದದೇ,ತನಗೆ ಕಾಡುವ ಮಾಯೆಯನ್ನೂ ಸಹ ಎದುರಿಸಿದ ಅಕ್ಕ

“ಬಿಟ್ಟನೆಂದಡೆ ಬಿಡದೀ ಮಾಯೆ,
ಬಿಡದಿದ್ದಡೆ ಬೆಂಬತ್ತಿತ್ತು ಮಾಯೆ,
ಯೋಗಿಗೆ ಯೋಗಿಣಿಯಾಯಿತ್ತು ಮಾಯೆ ಮಾಯೆ,
ಸವಣಂಗೆ ಸವಣಿಯಾಯಿತ್ತು ಮಾಯೆ,
ನಿನ್ನ ಮಾಯೆಗೆ ನಾನಂಜುವಳಲ್ಲ,
ಚೆನ್ನಮಲ್ಲಿಕಾರ್ಜುನದೇವಾ ನಿಮ್ಮಾಣೆ”

ಮಾಯೆ ಯಾವ ಪರಿಯಲ್ಲೂ ಕಾಡಿದರೂ ನಾನು ಅಂಜುವಳಲ್ಲ ಎಂದು ಹೇಳುವ ಅಕ್ಕ ಅಧ್ಯಾತ್ಮದ ಉನ್ನತ ಶಿಖರವನ್ನು ಏರಿದವಳು, ಅಂಧಕಾರವಾಗಿ, ಅಜ್ಞಾನವಾಗಿ ಮಾಯೆಯನ್ನು ಧೈರ್ಯದಿಂದ ಎದುರಿಸಿ, ಅವಳಿಗೆ ಮಲ್ಲಿಕಾರ್ಜುನ ಮೇಲೆ ಇರುವ ಅಪಾರವಾದ ಪ್ರೀತಿ, ಎಣೆಇಲ್ಲದ ವಿಶ್ವಾಸದಿಂದ ಅವನನ್ನು ಹುಡುಕುವ ಬಯಕೆಯಿಂದ–
ಕಾಣುತ್ತಾ ಕಾಣುತ್ತಾ ಕಂಗಳ ಮುಚ್ಚಿವೆ ನೋಡವ್ವಾ,
ಕೇಳುತ್ತಾ ಕೇಳುತ್ತಾ ಮೈಮರೆದೊರಗಿದೆ ನೋಡವ್ವಾ,
ಹಾಸಿದ ಹಾಸಿಗೆಯ ಹಂಗಿಲ್ಲದೇ ಹೋಯಿತ್ತು ಕೆಳದಿ,
ನಾನೇನಂದರಿಯದೇ ಮರೆದೆ ನೋಡವ್ವಾ–

ಚೆನ್ನಮಲ್ಲಿಕಾರ್ಜುನದೇವನನ್ನು ಹುಡುಕುವ ಉತ್ಕಟತೆಯಿಂದ ದಾರಿಯೂದ್ದಕ್ಕೂ ಬರುವ ಕಲ್ಲುಮುಳ್ಳುಗಳನ್ನು ತುಳಿಯುತ್ತಾ, ಏಳು ಬೆಟ್ಟಗಳನ್ನು ದಾಟಿ—,ಕೃಷ್ಣೆಯಲ್ಲಿ ಮಿಂದು, ಕದಳಿ ಬನದಲ್ಲಿ ಮಲ್ಲಿಕಾರ್ಜುನವೆಂಬ ಬಯಲನ್ನು ಕಂಡು ಬಿಗಿದಪ್ಪಿ, ಹೃದಯ ಕಮಲದಲ್ಲಿ ಒಂದಾಗಿ ಉಸಿರನ್ನು ಕೊನೆಯದಾಗಿ ಬಯಲಲ್ಲಿ-ಬಯಲಾಗಿ ಲೀನವಾಯಿತು.

ಅಕ್ಕ ಮಹಾದೇವಿ ಜಯಂತಿಯ ಈ ದಿನದಂದು ಅವಳ ಆದರ್ಶ ಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಧೈರ್ಯದಿಂದ ಮುಂದುವರೆದು ಜೀವನವನ್ನು ಸುಂದರಾಗಿರಿಸೋಣ ಎಂದು ಹೇಳುವ ಮೂಲಕ ಸರ್ವರಿಗೂ ಅಕ್ಕ ಮಹಾದೇವಿಯ ಜಯಂತಿಯ ಶುಭಾಶಯಗಳು.

ಶರಣು-ಶರಣಾರ್ಥಿಗಳು

ಶರಣೆ ಡಾ.ಲತಾ ಶಿವಬಸಪ್ಪ ಹೆಸರೂರು

About Shivanand

Admin : Lingayat Kranti Monthly news paper 8884000008 [email protected]

Check Also

ಲಿಂಗಾಯತ ದಿಟ್ಟ ಶರಣೆ: ಪ್ರೇಮಕ್ಕಾ ಅಂಗಡಿ

  ಬೈಲಹೊಂಗಲ: ಪ್ರೇಮಕ್ಕ ಅಂಗಡಿ ನಮ್ಮ ಸಮಾಜದ ದಿಟ್ಟ ಹೆಣ್ಣುಮಗಳು ಇಂದು ಇಡೀ ರಾಜ್ಯದಲ್ಲಿ ಲಿಂಗಾಯತ ಸಮಾಜದ ಮಹಿಳೆಯರು ಸಂಘಟಿತ …

ಮಠಾಧೀಶರಿಗೆ ರಾಜಕಾರಣದ ಉಸಾಬರಿ ಏಕೆ?

  ಬೆಂಗಳೂರು: ರಾಜ್ಯದಲ್ಲಿನ ಸ್ವಾಮೀಜಿಗಳ ಪೈಕಿ ಕೆಲವರು ರಾಜಕೀಯ ನಾಯಕರಂತೆ ವರ್ತಿಸುತ್ತಿರುವುದು ಅವರು ಪ್ರತಿನಿಧಿಸುವ ಸ್ಥಾನಗಳಿಗೆ ಶೋಭೆ ತರುವಂತಹದ್ದಲ್ಲ. ಸಮಾಜಕ್ಕೆ …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಯಾರಿಗೆ? ಹಾಗೂ ಮಹಾ ಮಾದರಿ ಶೇ.16ರ ವಿಶೇಷ ಮೀಸಲಾತಿ ಬೇಡವೇ….?

    ಬಸವಣ್ಣ ಬರುವಾಗ | ಬಿಸಿಲು ಬೆಳದಿಂಗಳು || ಮೊಗ್ಗು ಮಲ್ಲಿಗೆ | ಅರಳ್ಯಾವ || ಯಾಲಕ್ಕಿ ಗೊನೆಬಾಗಿ …

ಕರ್ನಾಟಕದ ಮ್ಯಾಕ್ಸ್ ಮುಲ್ಲರ್ ‘ವಚನ ಪಿತಾಮಹ’ ಡಾ. ಫ.ಗು.ಹಳಕಟ್ಟಿ

  ರಾಮದುರ್ಗ: ೧೯೫೬ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಪದವಿ ಪ್ರದಾನ ಸಮಾರಂಭ. ಡಾ.ಪಾವಟೆಯವರು ಕುಲಪತಿಗಳಾಗಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯದ …

ರಾಣಿ ಚನ್ನವೀರಮ್ಮ

  ಲಿಂಗಾಯತ ಕ್ರಾಂತಿ: ಚನ್ನಮ್ಮ ಮತ್ತು ವೀರಮ್ಮ ಇವರಿಬ್ಬರು ಕಿತ್ತೂರ ದೇಸಾಯಿಣಿಗಳು. ಇವರಿಬ್ಬರ ಹೆಸರು ಒಂದಾಗಿರುವ ಚನ್ನವೀರಮ್ಮಾಜಿ ಎನ್ನುವ ಕೆಳದಿಯ …

ಜನಪದವೇ ಲಿಂಗಾಯತ ಧರ್ಮ ಉಳಿವಿಗೆ ಆಧಾರ

  ಬೀದರ್: 12ನೆ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿ ನಂತರ ಲಿಂಗಾಯತ ಧರ್ಮದ ಶರಣರು ಚೆಲ್ಲಾಪಿಲ್ಲಿ ಆದರು, ಹಲವಾರು ಶರಣರು …

ಸಂವಿಧಾನ ಮತ್ತು ಕಾನೂನುಗಳ ಸಮರ್ಪಕ ಬಳಕೆಯೇ ಈ ದೇಶದ ಎಲ್ಲ ಸಮಸ್ಯೆಗಳಿಗೆ ಪರಿಹಾರ

  ~ ಡಾ. ಜೆ ಎಸ್ ಪಾಟೀಲ. ವಿಜಯಪುರ: ಭಾರತವು ಧಾರ್ಮಿಕ ಮೂಢನಂಬಿಕೆಗಳ ತವರು ಮನೆ. ಇಲ್ಲಿ ಧಾರ್ಮಿಕ ನಂಬಿಕೆಗಳ …

ಗ್ರಾಮ ಸ್ವರಾಜ್ಯ ಸಾಕಾರಗೊಳಿಸಿದ: ರಾಮಪ್ಪ ಬಿದರಿ

ವಿಜಯಪುರ: 1952-1962 ಹತ್ತು ವರ್ಷಗಳ ಕಾಲ ಲೋಕಸಭಾ ಸದಸ್ಯರಾಗಿದ್ದ ರಾಮಪ್ಪ ಬಿದ್ರಿ ಈ ಹುದ್ದೆಯನ್ನು ಎಂದೂ ತಮ್ಮ ಸ್ವಂತದ ಲಾಭಕ್ಕಾಗಿ …

ಲಿಂಗಾಯತ ಧರ್ಮದ ಹೋರಾಟ ಸರಣಿ-2 ಭಾಗ-4

  ಲಿಂಗಾಯತ ಧರ್ಮ ಮಾನ್ಯತೆಯ ಹೊರಾಟದಲ್ಲಿ ಲಿಂಗಾಯತ ಸಮನ್ವಯದ ಸಮಿತಿ ಪಾತ್ರ. ಬಸವಕಲ್ಯಾಣ: ಬೆಂಗಳೂರಿನ ಕುಂಬಳಗೋಡಿನ ಬಸವ ಗಂಗೋತ್ರಿಯಲ್ಲಿ ಜೂನ್ …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಜಾತಿ ಲಿಂಗಾಯತರು ಮತ್ತು ಬೇಡ ಜಂಗಮ ಪಂಚಾಚಾರ್ಯರು ಸತ್ಯವೆಂದು ನಂಬಿ ಲಿಂಗಾಯತ ಧರ್ಮದ ಮಾನ್ಯತೆ ತಪ್ಪಿಸುತ್ತಿದ್ದಾರೆ. ಬಸವಕಲ್ಯಾಣ: 12ನೇ …

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

Leave a Reply

Your email address will not be published. Required fields are marked *

error: Content is protected !!