Breaking News
Home / featured / ಅಕ್ಕ ಕಲಿಸಿದ ಪಾಠ ಸರ್ವರಿಗೂ ಮಾದರಿ

ಅಕ್ಕ ಕಲಿಸಿದ ಪಾಠ ಸರ್ವರಿಗೂ ಮಾದರಿ

ಬೆಳಗಾವಿ: ರೋಗ-ರುಜಿನಗಳು, ವಿರೋಧಿ ಅಲೆಗಳು, ನಿಂದೆ-ಅಪನಿಂದೆಗಳು, ಬಡತನ, ಸಂಕಷ್ಟಗಳನ್ನು ಎದುರಿಸುವ ಮೂಲಕ ಬದುಕು ಕಟ್ಟಿಕೊಳ್ಳುವದನ್ನು ಕಲಿಸಿರುವ ಬಸವಾದಿ ಶರಣರನ್ನು ನಾವು ಸ್ಮರಿಸಲೇಬೇಕು. ಮಾನವೀಯ ಸಂಸ್ಕೃತಿಯನ್ನು ಹೊಂದಿರುವ ಸಮಾಜದ ಅಸ್ಮಿತೆಯನ್ನು ಉಳಿಸಿಕೊಳ್ಳಬೇಕು.

ಬಸವ ಕ್ರಾಂತಿಯ ಮೇರು ನಕ್ಷತ್ರ ಅಕ್ಕಮಹಾದೇವಿಯವರ ಜಯಂತಿಯ ಈ ದಿನದಂದು ಅಕ್ಕಮಹಾದೇವಿಯವರ ಬದುಕು ಮತ್ತು ಬರಹಗಳು ನಮ್ಮ ಜೀವನಕ್ಕೆ ಪ್ರೇರಣೆಯಾಗಲಿದೆ. ಸಮಸ್ಯೆಗಳನ್ನು ಎದುರಿಸುವ ಮನೋಬಲ ಮತ್ತು ಆತ್ಮ ವಿಶ್ವಾಸವನ್ನು ತುಂಬಲಿದೆ. ಬೆಟ್ಟದ ಮೇಲೊಂದು ಮನೆಯ ಮಾಡಿ, ಮೃಗಗಳಿಗೆ ಅಂಜಿದೆಡೇ ಎಂತಯ್ಯ ಎಂಬ ಅಕ್ಕನ ವಚನವು ಸರ್ವ ಕಾಲಕ್ಕೂ ಮನುಕುಲಕ್ಕೆ ಆತ್ಮಸೈರ್ಯವನ್ನು ತುಂಬಲಿದೆ.
ಕರೋನಾ ಎಂಬ ಮಹಾಮಾರಿಯ ಹೊಡೆತದಿಂದಾಗಿ ಇಂದು ಬಹುದೊಡ್ಡ ಕಾಯಕ ಜೀವಿಗಳ ವರ್ಗ. ಬಹುದೊಡ್ಡ ರೈತ ಸಮುದಾಯ. ನಮ್ಮ ದಿನನಿತ್ಯದ ಬದುಕಿಗೆ ಆಧಾರ ಸ್ಥಂಭಗಳಾಗಿದ್ದ ಬಹುದೊಡ್ಡ ಅಸಂಘಟಿತ ಕಾರ್ಮಿಕರು ಹಸಿವಿನಿಂದ ಬಳಲುತ್ತಿರುವಾಗ, ವಿಜೃಂಭಣೆಯಿಂದ ಜಯಂತಿ ಅಥವಾ ಉತ್ಸವಗಳನ್ನು ಆಚರಿಸುವ ಸಮಯ ಇದಲ್ಲ. ಆದರೆ, ಬದುಕುವದನ್ನು ಕಲಿಸಿಕೊಟ್ಟಿರುವ ಬಸವಾದಿ ಶರಣರ ಸಂದೇಶಗಳನ್ನು ನೆನಪಿಸುವ ಮೂಲಕ ಸಮಾಜವನ್ನು ಉಳಿಸಬೇಕಾಗಿದೆ. ಬದುಕು ಕಟ್ಟಿಕೊಳ್ಳುವದನ್ನು ಕಲಿಸಿರುವ ಮಹಾ ಚೇತನಗಳನ್ನು ಸ್ಮರಿಸಬೇಕಾಗಿದೆ.
ಇಡಿ ಸಮಾಜವನ್ನು ಬಲಿ ತೆಗೆದುಕೊಳ್ಳುವ ತಾಕತ್ತು ಯಾವ ಶಕ್ತಿಗೂ ಇಲ್ಲ. ಹೆಣ್ಣು, ಹೊನ್ನು, ಮಣ್ಣಿಗಾಗಿ ಈ ದೇಶದಲ್ಲಿ ಮಹಾಯುದ್ದಗಳೇ ನಡೆದು, ಕೋಟಿ-ಕೋಟಿ ಜನರನ್ನು ಬಲಿ ತೆಗೆದುಕೊಂಡಿದ್ದರೂ ಜೀವಂತಿಕೆಯ ಸಮಾಜ ನಾಶವಾಗಲಿಲ್ಲ. ಈ ಸತ್ಯವನ್ನು ಬಸವಾದಿ ಶರಣರು ಚನ್ನಾಗಿ ಅರಿತಿದ್ದರು. ಸಮಾಜವನ್ನೆ ಜಂಗಮವೆಂದು ಕರೆದರು. ಸ್ಥಾವರಕ್ಕಳಿವುಂಟು ತುಂಬಿದ ಜಗತ್ತಿಗೆ ಅಳಿವಿಲ್ಲ ಎಂಬ ಸಾವ್ರರ್ತಿಕ ಸತ್ಯವನ್ನು ಪ್ರತಿಪಾದಿಸಿದರು.

ಕಲ್ಲು-ಮಣ್ಣಿನ ದೇವರುಗಳು ನಮ್ಮನ್ನು ರಕ್ಷಿಸುತ್ತಾರೆಂಬ ನಂಬಿಕೆ ಇಂದು ಹುಸಿಯಾಗಿದೆ. ಗುಡಿ-ಗುಂಡಾರಗಳು ಬಾಗಿಲು ಹಾಕಿಕೊಂಡಿರುವ ಈ ಸಂದರ್ಭದಲ್ಲಿ ಮನುಷ್ಯರೇ ಮನುಷ್ಯರನ್ನು ಬದುಕಿಸಿಕೊಳ್ಳಬೇಕಾಗಿದೆ. ನಾವು ಹುಟ್ಟಿದ್ದಾಗ ಜೋಗುಳ ಹಾಡಿದ್ದು, ನಮ್ಮ ಸುತ್ತಲಿನ ಸಮಾಜ. ನಾವು ಸತ್ತಾಗ, ನಮ್ಮ ಹೆಣಕ್ಕೆ ಹೆಗಲು ಕೊಡುವುದೇ ನಮ್ಮ ಸುತ್ತಲಿನ ಸಮಾಜ. ನಾವು ಹುಟ್ಟಿದಾಗಲೂ ದೇವರುಗಳು ಬರಲಿಲ್ಲ. ಸತ್ತಾಗಲೂ ಬರುವದಿಲ್ಲ.

ಬಿಡುವಿನ ಸಮಯದಲ್ಲಿ ಇಂತಹ ಅನೇಕ ವಿಷಯಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ನಮ್ಮ ಸುತ್ತಲಿನ ಸಮಾಜಕ್ಕೆ ಆವರಿಸಲಾಗಿರುವ ಮನಸ್ಥಿತಿ. ಆಳುವ ವರ್ಗದ ಮನಸ್ಥಿತಿಯ ಬಗ್ಗೆ ಅವಲೋಕನ ಮಾಡಿಕೊಳ್ಳಬೇಕಾಗಿದೆ. ನಾವು ಸಾಗಬೇಕಾದ ದಾರಿಯನ್ನು ಕಂಡುಕೊಳ್ಳಬೇಕಾಗಿದೆ.
ಅಕ್ಕಮಹಾದೇವಿ, ಅಲ್ಲಮಪ್ರಭುಗಳಂತ ಹತ್ತಾರು ಅಪ್ರತಿಮ ಶರಣ ಶರಣೆಯರನ್ನು ಬಸವ ಕ್ರಾಂತಿಗೆ, ಕನ್ನಡ ನೆಲಕ್ಕೆ ನೀಡಿರುವ ಶಿವಮೊಗ್ಗ ಎಂಬ ಪುಣ್ಯದ ನೆಲದಿಂದ ಬಂದಿರುವ ಈ ನಾಡಿನ ಮುಖ್ಯಮಂತ್ರಿಗಳಿಗೆ ಅಕ್ಕಮಹಾದೇವಿಯವರ ನೆನಪಾಗಲಿಲ್ಲ. ಅವರು ಇಂದು ನಾಡಿನ ಜನತೆಗೆ ಹನುಮನ ಜಯಂತಿಯ ಶುಭ ಕೋರಿದ್ದಾರೆ. ಇದೆಲ್ಲವನ್ನು ಹಾಗೇ ಸುಮ್ಮನೆ ನಿನಪಿನಲ್ಲಿ ಇಟ್ಟುಕೊಳ್ಳಬೇಕು.
ಅಕ್ಕಮಹಾದೇವಿಯವರ ಜಯಂತಿಯ ಈ ದಿನದಂದು ಆ ದಿವ್ಯ ಚೇತನಕ್ಕೆ ಅನಂತ ಕೋಟಿ ಶರಣು ಶರಣಾರ್ಥಿಗಳು. ಅಕ್ಕಮಹಾದೇವಿಯವರೊಂದಿಗೆ ಸಕಲ ಬಸವ ಸಂಕುಲಕ್ಕೂ ಕೋಟಿ ಕೋಟಿ ವಂದನೆಗಳು.
ಬಸವ ಜಯಂತಿಯ ದಿನದಂದು ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಬಸವ ಪ್ರೇಮವನ್ನು ಮೆರೆದ, ಎಲ್ಲ ಸರಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಕಡ್ಡಾಯವಾಗಿ ಅಳವಡಿಸುವ ಆದೇಶ ನೀಡಿದ್ದ, ವಿಜಯಪುರದ ಮಹಿಳಾ ವಿಶ್ವ ವಿದ್ಯಾಲಯಕ್ಕೆ ಅಕ್ಕಮಹಾದೇವಿಯವರ ನಾಮಕರಣ ಮಾಡಿರುವ, ಅಕ್ಕಮಹಾದೇವಿಯವರ ಜಯಂತಿಯನ್ನು ಸರಕಾರದ ಪರವಾಗಿ ಆಚರಿಸುವ ಘೋಷಣೆ ಮಾಡಿರುವ, ಕನ್ನಡ ಧ್ವಜದ ವಿನ್ಯಾಸ ಮಾಡಿದ್ದ, ಅಲ್ಲದೆ ಲಿಂಗಾಯತ ಧರ್ಮಕ್ಕೆ ಸಂವಿಧಾನದ ಮಾನ್ಯತೆ ನೀಡುವಂತೆ ಶಿಫಾರಸ್ಸು ಮಾಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಮತ್ತು ಮಾಜಿ ಸಚಿವ ಎಂ.ಬಿ.ಪಾಟೀಲರಿಗೂ ಇಂದು ಅನಂತ ಅನಂತ ಶರಣು ಶರಣಾರ್ಥಿಗಳು.
ಆರ್.ಎಸ್.ದರ್ಗೆ, ಪತ್ರಕರ್ತರು
ಬೆಳಗಾವಿ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಜಾತಿ ಲಿಂಗಾಯತರು ಮತ್ತು ಬೇಡ ಜಂಗಮ ಪಂಚಾಚಾರ್ಯರು ಸತ್ಯವೆಂದು ನಂಬಿ ಲಿಂಗಾಯತ ಧರ್ಮದ ಮಾನ್ಯತೆ ತಪ್ಪಿಸುತ್ತಿದ್ದಾರೆ. ಬಸವಕಲ್ಯಾಣ: 12ನೇ …

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

Leave a Reply

Your email address will not be published. Required fields are marked *

error: Content is protected !!