ವಿಜಯಪುರ: ಭರತಖಂಡದ ಬಹುಸಂಖ್ಯಾತ ಸಮುದಾಯ ತನ್ನ ಅಜ್ಞಾನˌ ಅನಕ್ಷರತೆˌ ಬಡತನಗಳಿಂದ ಬಳಲಿ ಸಾಯುತ್ತಿತ್ತು. ರಾಜ ಮಹಾರಾಜರ ಸಂಪರ್ಕವಿಲ್ಲದೆˌ ಬದುಕಿಗೆ ಭದ್ರತೆ ಇಲ್ಲದೆˌ ಹೋಗಲಿ ಸಮಾಜದಲ್ಲಿ ಕನಿಷ್ಟ ಗೌರವವೂ ಇಲ್ಲದೆ ಒಂದಿಡೀ ಬಹುಸಂಖ್ಯಾತ ಸಮಾಜ ಶೋಷಣೆಯನ್ನು ಅನುಭವಿಸುತ್ತಿದ್ದಾಗ ಕೇವಲ ಒಂದು ಸಣ್ಣ ಸಮುದಾಯ ಮಾತ್ರ ಜ್ಞಾನˌ ಶಿಕ್ಷಣˌ ಸಕಲ ಸೌಲಭ್ಯಗಳಿಂದ ಮೆರೆಯುತ್ತಿತ್ತು.
ಅಂದು ಗೌತಮ ಬುದ್ದ ಆ ನೊಂದ ಬಹುಸಂಖ್ಯಾತ ಸಮುದಾಯವನ್ನು ಶೋಷಣೆಯಿಂದ ವಿಮೋಚನೆಗೊಳಿಸಲು ಪ್ರಯತ್ನಿಸುತ್ತಿದ್ದ. ಬುದ್ದನೊಂದಿಗೆ ಇಡೀ ಬಹುಸಂಖ್ಯಾತ ಸಮುದಾಯ ಹೆಜ್ಜೆ ಹಾಕುವುದರಲ್ಲಿತ್ತು. ಆಗ ಬುದ್ದನ ವಿಚಾರಕ್ರಾಂತಿಯನ್ನು ವಿಫಲಗೊಳಿಸಲು ಮತ್ತದೆ ಸಣ್ಣ ಸಮುದಾಯ ಹುನ್ನಾರಗೈದಿತ್ತು.
ಮತ್ತೊಂದು ದಿನ ಬಸವಣ್ಣ ಮತ್ತು ಅಸಂಖ್ಯಾತ ಶರಣರು ಅದೇ ಬಹುಸಂಖ್ಯಾತ ಸಮುದಾಯದ ಬವಣೆಯನ್ನು ನೀಗಿಸಲುˌ ಅವರನ್ನು ಶೋಷಣೆಯಿಂದ ವಿಮುಕ್ತಿಗೊಳಿಸಿ ಬಾಳ ಹಸನುಗೊಳಿಸಲು ಕಲ್ಯಾಣದಲ್ಲಿ ಮಹಾ ವೈಚಾರಿಕ ಕ್ರಾಂತಿಯನ್ನೇ ಹೆಣೆಯುತ್ತಿದ್ದರು. ಅಗ ಅದೇ ಸಣ್ಣ ಸಮುದಾಯ ಮುಕುಂದ ಭಟ್ಟನ ಮುಖಂಡತ್ವದಲ್ಲಿ ಬಸವಾದಿ ಶರಣರ ವೈಚಾರಿಕ ಚಳುವಳಿಯನ್ನು ವಿಫಲಗೊಳಿಸಲು ಹಗಲಿರುಳು ತಂತ್ರ ಹೆಣೆದಿತ್ತು. ಕೊನೆಗೊಂದು ದಿನ ಅಸಂಖ್ಯಾತ ಶರಣರ ಕಗ್ಗೊಲೆ ಮಾಡಿˌ ಅವರು ಬರೆದಿಟ್ಟ ವಚನಗಳ ಕಟ್ಟುಗಳನ್ನು ಸುಟ್ಟುಹಾಕಿತ್ತು.
ಒಂದು ದಿನ ಶಿವಾಜಿ ಮಹಾರಾಜ ಸಮಾಜದ ಸರ್ವರನ್ನೊಳಗೊಂಡ ಆದರ್ಶ ರಾಜ್ಯ ನಿರ್ಮಾಣದ ಮಹಾ ಕಾರ್ಯ ಮಾಡುತ್ತಲಿದ್ದ. ಆಗ ಶಿವಾಜಿಯ ಜನಪ್ರೀಯತೆ ಸಹಿಸದ ಮತ್ತದೆ ಸಣ್ಣ ಸಮಾಜ ಅಫಜಲಖಾನನಿಗೆ ಪರೋಕ್ಷ ಬೆಂಬಲ ನೀಡುತ್ತ ಶಿವಾಜಿಯ ಸಮಾಜಮುಖಿ ಕಾರ್ಯವನ್ನು ವಿಫಲಗೊಳಿಸಲು ಯತ್ನಿಸುತ್ತಿತ್ತು. ಕ್ರಷ್ಣಾಜಿ ಕುಲಕರ್ಣಿಯ ನೇತ್ರತ್ವದಲ್ಲಿ ಶಿವಾಜಿಯ ಕೊಲೆಗೂ ಪ್ರಯತ್ನಿಸಿತ್ತು.
ಮತ್ತೊಂದು ದಿನ ಸ್ವಾಮಿ ವಿವೇಕಾನಂದರು ಭಾರತದ ನೆಲದಲ್ಲಿನ ಮೌಢ್ಯˌ ಶೋಷಣೆ ಮತ್ತು ತಾರತಮ್ಯದ ವಿರುದ್ಧ ಮಹಾ ಸಮರವನ್ನೇ ಸಾರಿದರು. ಆಗ ಸ್ವಾಮಿ ವಿವೇಕಾನಂದರನ್ನು ಒಂದು ಧರ್ಮದ ಸನ್ಯಾಸಿ ಎಂದು ಪರಿಗಣಿಸಬಾರದೆಂದು ಕಲ್ಕತ್ತ ನ್ಯಾಯಾಲಯದಲ್ಲಿ ದಾವೆ ಹೂಡುವ ಮೂಲಕ ಮತ್ತದೆ ಸಣ್ಣ ಸಮುದಾಯ ವಿವೇಕಾನಂದರ ವೈಚಾರಿಕ ವಿಚಾರಗಳ ಕತ್ತು ಹಿಸುಕಲು ಪ್ರಯತ್ನಿಸಿತ್ತು.
ಬಹು ಹಿಂದೆ ಮಹಾರಾಷ್ಟ್ರದಲ್ಲಿ ಸಂತ ತುಕಾರಾಮ ಈ ನೆಲದ ಸ್ಥಾಪಿತ ಸಿದ್ಧಾಂತವನ್ನು ತನ್ನ ಅಭಂಗಗಳ ಮೂಲಕ ಪ್ರಶ್ನಿಸಲಾರಂಭಿಸಿದ. ಆಗ ಆತ ಬರೆದ ಅಭಂಗಗಳ್ಳು ಹೊಳೆಯಲ್ಲಿ ಮುಳುಗಿಸಿ ನಾಶಪಡಿಸಲಾಯಿತು. ಅವು ಮತ್ತೆ ಜನರ ನಾಲಿಗೆಯ ಮೂಲಕ ಅಕ್ಷರ ರೂಪ ತಾಳಿದಾಗ ಮತ್ತದೇ ಸಣ್ಣ ಸಮುದಾಯ ತುಕಾರಾಮನನ್ನು ಪುಷ್ಪಕ ವಿಮಾನ ವೈಕುಂಠಕ್ಕೆ ಜೀವಂತ ಕೊಂಡೊಯ್ಯಿತೆಂದು ಕಥೆ ಕಟ್ಟಿ ಆತನನ್ನು ಮುಗಿಸಿತು.
ಅದೇ ಮಹಾರಾಷ್ಟ್ರದಲ್ಲಿ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ದಂಪತಿಗಳು ಶೋಷಿತರ ಮತ್ತು ಮಹಿಳೆಯರ ಶಿಕ್ಷಣದ ಸಲುವಾಗಿ ಪ್ರಯತ್ನಿಸುತ್ತಿದ್ದರು. ಆಗ ಮತ್ತದೆ ಸಣ್ಣ ಸಮುದಾಯ ಫುಲೆ ದಂಪತಿಗಳ ವಿರುದ್ಧ ಸಮರವನ್ನೆ ಸಾರಿತ್ತು.
ಮುಂದೆ ಬ್ರಿಟೀಷರ ವಿರುದ್ಧ ಸ್ವತಂತ್ರ ಚಳುವಳಿಯ ಮುಂದಾಳತ್ವ ವಹಿಸಿದ ಗಾಂಧಿಜಿ ಇಡೀ ದೇಶದ ಜನರ ಮನ ಗೆದ್ದು ನಡೆಯುತ್ತಿರುವಾಗ ಘೋಡ್ಸೆ ಮುಂತಾದ ಆತನ ಮಾರ್ಗದರ್ಶಕರು ಮುಖಂಡತ್ವದಲ್ಲಿ ಮತ್ತದೇ ಸಣ್ಣ ಸಮುದಾಯ ಗಾಂಧಿ ಕೊಲೆಗೆ ಐದು ವಿಫಲ ಯತ್ನಗಳನ್ನು ಮಾಡಿ ಆರನೇ ಬಾರಿಗೆ ಗಾಂಧಿ ಹತ್ಯೆಯಲ್ಲಿ ಯಶಸ್ವಿಯಾಯಿತು.
ಅಂದು ಬಾಬಾಸಾಹೇಬ್ ಅಂಬೇಡ್ಕರ ಅವರು ಶೋಷಿತರ ಸ್ವಾಭಿಮಾನವನ್ನು ಎತ್ತಿ ಹಿಡಿಯಲು ಅನೇಕ ಸುಧಾರಣೆಗಳ ಪ್ರಸ್ಥಾಪ ಮಾಡಿದರು. ಆಗಲೂ ಈದೇ ಸಣ್ಣ ಸಮುದಾಯ ಅವರನ್ನು ಇನ್ನಿಲ್ಲದಂತೆ ವಿರೋಧಿಸಿತು.
ಇತ್ತೀಚಿಗೆ ಡಾ. ಕಲಬುರಗಿˌ ದಾಬೋಲ್ಕರ್ˌ ಗೋವಿಂದ ಪನ್ಸಾರೆˌ ಗೌರಿ ಲಂಕೇಶ್ ಮುಂತಾದವರು ಸಮಾದಲ್ಲಿನ ಅಜ್ಞಾನ ಕಳೆಯಲು ಜನಪರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ಆಗಲೂ ಅದೇ ಸಣ್ಣ ಸಮುದಾಯ ಇವರೆಲ್ಲರ ಹತ್ಯೆಗಳನ್ನು ಮಾಡುವ ವ್ಯವಸ್ಥಿತ ವಾತಾವರಣ ನಿರ್ಮಿಸುವಲ್ಲಿ ಯಶಸ್ವಿಯಾಯಿತು.
ಈಗಲೂ ಇದೇ ಸಣ್ಣ ಸಮುದಾಯ ಭಾರತ ದೇಶದಲ್ಲಿ ಎಲ್ಲ ಅರಾಜಕತೆಗಳ ತಾಯಿಬೇರಾಗಿ ಕೆಲಸ ಮಾಡುತ್ತಿದೆ. ಈ ಸಮುದಾಯ ಭಾರತಕ್ಕೆ ಅಂಟಿದ ನೈಜ ಶಾಪವಲ್ಲದೆ ಮತ್ತೇನೂ ಅಲ್ಲ !
ಲೇಖಕರು: ಡಾ. ಜೆ ಎಸ್ ಪಾಟೀಲ.
ವಿಜಯಪುರ
ದುಃಖದ ಬೆಳವಣಿಗೆ. ಇನ್ನೂ ಜೀವಂತ ಸಮಸ್ಯೆ . ಭಾರತದ ಹಿತ ದೃಷ್ಟಿಯಿಂದ ಇದು ಅಂತ್ಯವಾಗಲಿ. ಭಾರತೀಯರ ಏಳ್ಗಿಗಾಗಿ ಶ್ರಮಿಸಿ ಸುಧಾರಣೆ ಹೊಸತನ್ನು ಮಾಡಿದ್ದೆಲ್ಲಾ ಉಳಿದು ಸದೃಢರನ್ನಾಗಿಸಲು ಅವಶ್ಯಕ.