Breaking News
Home / featured / ಕೊರಾನಾ ಅಲ್ಲ, ಮನುಷ್ಯನೇ ಮನುಕುಲದ ಮಹಾಮಾರಿ.!

ಕೊರಾನಾ ಅಲ್ಲ, ಮನುಷ್ಯನೇ ಮನುಕುಲದ ಮಹಾಮಾರಿ.!

ಸಿರಿಗೆರೆ : ವಿಶ್ವದೆಲ್ಲೆಡೆ ಕೊರಾನಾ ವೈರಾಣು ವ್ಯಾಪಕವಾಗಿ ಹರಡಿ ಮನುಕುಲವನ್ನೇ ಹೈರಾಣಾಗಿಸಿದೆ. ಒಂದು ರೀತಿಯಲ್ಲಿ ಮೂರನೆಯ ಮಹಾಯುದ್ಧವೇ ಆರಂಭಗೊಂಡಿದೆ. ಆದರೆ ಬಾಂಬ್ ರಾಕೆಟ್ಟುಗಳ ಸ್ಫೋಟವಿಲ್ಲ, ಮದ್ದು ಗುಂಡುಗಳ ಆರ್ಭಟವಿಲ್ಲ, ದೇಶ ದೇಶಗಳ ಮಧ್ಯದ ಕಾಳಗವೂ ಅಲ್ಲ, ಈ ಎಲ್ಲ ದೇಶಗಳು ಒಟ್ಟಾಗಿ ಒಂದು ಸಣ್ಣ ವೈರಾಣುವಿನ ವಿರುದ್ಧ ನಡೆಸುತ್ತಿರುವ ಬಹುದೊಡ್ಡ ಹೋರಾಟ. ವೈದ್ಯಕೀಯ ಲೋಕದಲ್ಲಿ ಯಾವ ಪರಿಹಾರವೂ ಕಾಣದೆ ಜನರ ಸಾವು -ನೋವು. ನೆಲದಲ್ಲಿರುವ ತಗ್ಗು ಗುಂಡಿಗಳಿಗೆ ಕಲ್ಲು ಗುಂಡಿಗಳನ್ನು ದೂಡುವಂತೆ ಯಾವ ಧಾರ್ಮಿಕ ಸಂಸ್ಕಾರವೂ ಇಲ್ಲದೆ ಹೆಣಗಳನ್ನು ರಾಶಿ ರಾಶಿಯಾಗಿ ಜೆಸಿಬಿ / ಹಿಟಾಚಿಗಳ ದೂಡುತ್ತಿರುವ ಕರಾಳ ದೃಶ್ಯ! ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಈ ಭೂಮಿಯ ಮೇಲೆ ಮನುಕುಲವೇ ಅಳಿಸಿ ಹೋಗಬಹುದೆಂಬ ಭಯ ಆವರಿಸಿದೆ. ಲಾಕ್ ಡೌನ್ ಕಾರಣದಿಂದ ಭಾರತದಲ್ಲಿ ಹಸಿವಿನಿಂದ ಕಂಗಾಲಾದ ಬಡ ಜನರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನು ಕುರಿತಂತೆ ಅಷ್ಟಾದಶ ಪುರಾಣಗಳಲ್ಲಿ ಒಂದಾದ ಶಿವಪುರಾಣದಲ್ಲಿ ಬಹಳ ಹಿಂದೆಯೇ ಹೇಳಲಾಗಿದೆ ಎನ್ನಲಾದ ಈ ಕೆಳಕಂಡ ಸಂಸ್ಕೃತ ಶ್ಲೋಕಗಳು ವಾಟ್ಸಾಪ್ ಗುಂಪುಗಳಲ್ಲಿ ಹರಿದಾಡುತ್ತಿವೆ :

ಮೃತ್ಯುಂಜಯ ಮಹಾದೇವ! ಕೊರೋನಾಖ್ಯಾದ್ವಿಷಾಣುತಃ ।

ಮೃತ್ಯರೂಪಿ ಮಹಾ ನೃತ್ಯದ ಪಾಹಿ ಮಾಂ ಶರಣಾಗತಮ್ ।।2।।

ಮಾಂಸಾಹಾರಾತ್ಸಮುನ್ನಾಜಗತ್ ಸಂಹಾರಕಾರಕತ್।

ಕರುಣಾಖ್ಯಾದ್ವಿಷಾಣೋರ್ಮಾಂ ರಕ್ಷ ರಕ್ಷ ಮಹೇಶ್ವರ।।3।।

ಚಿನಾದೇಶೇ ಜನಿಂಲಬ್ದ್ವಾ ಭೂಮೌ ವಿಷ್ವಕ್ ಪ್ರಸರ್ಪತಃ।
ಜನಾತಂಕಾದ್ವಿಷಾಣೋರ್ಮಾಂ ಸರ್ವತಃ ಪಾಹಿ ಶಂಕರಪೋಳಿ।।4।।

ಸಮುದ್ರಮಥನೋದ್ಬತಾತ್ ಕಾಲಾಕೂಟಾಚ್ಚ ಬಿಭ್ಯತಃ।
ತ್ವಯೈವ ರಕ್ಷಿತಾ ದೇವಾ ದೇವ ದೇವ ಜಗತ್ಪತೇ ॥ 6॥

ಇದರ ಸಾರಾಂಶ:

ಮೃತ್ಯುವಿಗೂ ಮಹಾಮೃತ್ಯು ವೆನಿಸಿದ ಮೃತ್ಯುಂಜಯನಾದ ಮಹಾದೇವನೇ ಕೋರೋನಾ ಎಂಬ ವಿಷಾಣುವಿನಿಂದ ಶರಣಾಗತನಾದ ನನ್ನನ್ನು ಪಾರುಮಾಡು. ಈ ಭೂಮಿಯ ಮೇಲೆ ಎಲ್ಲೆಡೆ ಆವರಿಸಿ ಇಡೀ ಜಗತ್ತಿನ ಸಂಹಾರ ಮಾಡುತ್ತಿರುವ ಈ ವಿಷಾಣು ಚೀನಾ ದೇಶದಲ್ಲಿ ಮಾಂಸಾಹಾರ ಸೇವನೆಯಿಂದ ಹುಟ್ಟಿದ್ದು. ಸಮುದ್ರಮಥನದ ಸಂದರ್ಭದಲ್ಲಿ ಹುಟ್ಟಿಬಂದ ಭಯಾನಕವಾದ ಕಾಲಕೂಟ ವಿಷದಿಂದ ದೇವಾನುದೇವತೆಗಳನ್ನು ರಕ್ಷಿಸಿದವನು ಜಗದೊಡೆಯನಾದ ನೀನೇ ಅಲ್ಲವೇ ! ಹೇ ಶಿವನೇ ಈ ವಿಷಾಣುವಿನಿಂದ ನನ್ನನ್ನು ರಕ್ಷಿಸು, ರಕ್ಷಿಸು!”

ಕೋರನ ವೈರಾಣು ದಾಳಿಗೆ ತುತ್ತಾಗಿರುವ ವಿಶ್ವದ ಪ್ರಸ್ತುತ ಸಂದರ್ಭಕ್ಕೆ ಈ ಶ್ಲೋಕಗಳು ಕನ್ನಡಿ ಹಿಡಿದಂತಿವೆ. ಹಾಗಾದರೆ ಕೋರೊನ ವೈರಾಣು ಶಿವಮಹಾಪುರಾಣದಷ್ಟು ಹಳೆಯದೇ? ಆಗಿನ ಕಾಲದ ಜನರು ಇದನ್ನು ತಡೆಗಟ್ಟಲು ಮಾಡಿದ್ದೇನು? ಇಂದಿನಂತೆ ಅಂದು ಜನರನ್ನು 21ದಿನ ಕ್ವಾರಂಟೈನ್ ಮಾಡಲಾಗಿತ್ತೇ ? ಏಪ್ರಿಲ್ 14ಕ್ಕೆ ಈ ಕ್ವಾರಂಟೈನ್ ಮುಗಿಯುತ್ತದೆಯೇ ಅಥವಾ ಮುಂದುವರಿಯುತ್ತದೆಯೇ ಎಂಬ ಕಾತುರದಿಂದ ಕಾಯುತ್ತಿರುವ ಜನರಿಗೆ ಶಿವಪುರಾಣದ ಪುಟಗಳನ್ನು ತಿರುವಿ ಹಾಕಿದರೆ ಏನಾದರೂ ಉತ್ತರ ಸಿಕ್ಕೀತೆ? ವಾಸ್ತವವಾಗಿ ಶಿವಪುರಾಣದಲ್ಲಿ ಆಗಲಿ ಇನ್ನಾವುದೇ ಪುರಾಣದಲ್ಲಾಗಲಿ ಈ ಶ್ಲೋಕಗಳು ಇಲ್ಲವೇ ಇಲ್ಲ. ಇಂದಿನ ಕಾಲಕ್ಕೆ ಅರ್ಥಪೂರ್ಣವಾದ ಈ ಶ್ಲೋಕಗಳನ್ನು ಆಧುನಿಕ ಸಂಸ್ಕೃತ ಪಂಡಿತರು ಯಾರೋ ಶಿವಪುರಾಣದ ಹೆಸರಿನಲ್ಲಿ ಬರೆದು ಸೇರಿಸಿ ಸೇರಿಸಿದ್ದಾರೆ. ‘ಕವಿಗೋಷ್ಠಿಯೊಂದರಲ್ಲಿ ನಾನೇ ಬರೆದ ಒಂದು ಕವಿತೆ ಎಂದು ಹೇಳಿ ಬೇಂದ್ರೆಯವರ ಕವಿತೆಯನ್ನು ನಕಲು ಮಾಡಿಕೊಂಡು ಬೇಂದ್ರೆಯವರ ಎದುರಿಗೆ ಓದಿ ಹೇಳಿ ಸಭಿಕರ ಚಪ್ಪಾಳೆ ಗಿಟ್ಟಿಸಿದ ‘ಕವಿ ಪುಂಗವ ನಂತೆ’ ಈ ಪಂಡಿತರು ನಾನೇ ಬರೆದದ್ದು ಎಂದು ಜಂಭ ಕೊಚ್ಚಿಕೊಳ್ಳಲು ಸದ್ಯ ಹೋಗಿಲ್ಲ! ಅಷ್ಟರ ಮಟ್ಟಿಗೆ ಅವರು ಅಭಿನಂದನಾರ್ಹರು ‘ಪುರಾಣವೆಂಬುದು ಪುಂಡರ ಗೋಷ್ಠಿ’ ಎಂದು ಅಲ್ಲಮಪ್ರಭುಗಳು ಕಟುಟೀಕೆ ಮಾಡಿದ್ದು ಇದೇ ಕಾರಣಕ್ಕೆ ಇರಬಹುದೆ? ಇತ್ತೀಚೆಗೆ ಅಲ್ಲಮ ಪ್ರಭುಗಳ ಈ ಹೆಸರಿನಲ್ಲಿಯೂ ವಾಟ್ಸಾಪ್ ಗುಂಪುಗಳಲ್ಲಿ ಹರಿದಾಡುತ್ತಿರುವ ವಚನ ಹೀಗಿದೆ:

ಕಂಡು ಕಂಡದ್ದನ್ನೆಲ್ಲ ಕೊಂಡು
ಅಟ್ಟಹಾಸದ ಮೆರೆವ ಜನಕ್ಕೆ
ಕಾಣದ ಜೀವಿಯು ಬಂದು ತಲ್ಲಣಿಸುವ ಜಗವ ನೋಡಾ ಗುಹೇಶ್ವರ!

ಮೇಲ್ಕಂಡ ಸಂಸ್ಕೃತ ಶ್ಲೋಕಗಳಂತೆ ತೀರಾ ವಾಚ್ಯವಾಗಿರದೆ ಒಗಟಿನೋಪಾದಿಯಲ್ಲಿರುವ ಈ ವಚನ ಪ್ರಸ್ತುತ ಸನ್ನಿವೇಶದಲ್ಲಿ ಅರ್ಥ ಪೂರ್ಣವಾಗಿದೆ. ಯಾರೇ ಓದಿದರೂ ಅಲ್ಲಮಪ್ರಭುಗಳ ಕವಿತೆ ಇರಬಹುದು ಎಂದು ನಂಬುವಂತಿದೆ. ಇದನ್ನು ನಮ್ಮ ಆತ್ಮೀಯ ಶಿಷ್ಯರಾದ ಡಾ ಮಂಜುನಾಥ್ ಆಲೂರು ಅವರು ನಮ್ಮ ಮೊಬೈಲ್ ಗೆ ರವಾನಿಸಿದಾಗ ಎಲ್ಲಿಯೂ ಓದಿದ ನೆನಪಾಗಲಿಲ್ಲ. ಕುತೂಹಲದಿಂದ ಎಲ್ ಬಸವರಾಜು ಅವರು ಸಂಪಾದಿಸಿದ ‘ ಅಲ್ಲಮನ ವಚನ ಚಂದ್ರಿಕೆ’ ಮತ್ತು ಡಾ ಕಲಬುರ್ಗಿಯವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟಗೊಂಡ ಅಲ್ಲಮ ‘ಅಲ್ಲಮಪ್ರಭುದೇವರ ವಚನ ಸಂಪುಟ’ ಪುಸ್ತಕಗಳನ್ನು ತಿರುವಿ ಹಾಕಿದಾಗ ಎಲ್ಲಿಯೂ ಸಿಗಲಿಲ್ಲ. ಕೊನೆಗೆ ನಾವೇ ಸಿದ್ಧಪಡಿಸಿದ ‘ಗಣಕ ವಚನ ಸಂಪುಟ’ ಎಂಬ ತಂತ್ರಾಂಶದಲ್ಲಿ (softver) ಇದರ ಒಂದೊಂದು ಶಬ್ದವನ್ನು ಜಾಲಾಡಿದಾಗ ವಚನ ಸಾಹಿತ್ಯದಲ್ಲಿ ಇಂತಹ ವಚನ ಇಲ್ಲವೇ ಇಲ್ಲ ಎಂದು ದೃಢಪಟ್ಟಿತು.ಇದನ್ನು ಕಳುಹಿಸಿದ ವೈದ್ಯರಿಗೆ “It is a fake Vachana’ಎಂದು ಉತ್ತರಿಸಿ ಕರೆ ಮಾಡಿದಾಗ ಅವರಿಗೆ ಆಶ್ಚರ್ಯ ಉಂಟಾಯಿತು.

ಈ ವಚನವನ್ನು ಯಾರೇ ಬರದಿರಲಿ ಇಂದಿನ ಸಾಮಾಜಿಕ ಜೀವನದ ಸ್ಥಿತಿಗತಿಗಳನ್ನು ತುಂಬಾ ಮಾರ್ಮಿಕವಾಗಿ ಚಿತ್ರಿಸಿದ್ದಾರೆ. ಆದರೆ ಇಂತಹ ಒಳ್ಳೆಯ ಮಾತುಗಳನ್ನು ಬರೆದ ಅಲ್ಲಮಪ್ರಭುಗಳ ಈ ಹೆಸರಿಗೆ ಅಂಟಿಸಿದ್ದು ಏಕೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಮೇಲೆ ಉಲ್ಲೇಖಿಸಿದ ಸಂಸ್ಕೃತ ಶ್ಲೋಕಗಳಲ್ಲಿ ಈ ಆಧುನಿಕ ಕನ್ನಡ ವಚನವಾಗಿ ಇವುಗಳನ್ನು ಬರೆದವರ ಮನೋಭೂಮಿಕೆ ಒಂದೇ ಆಗಿದೆ. ಅದೆಂದರೆ ಈಗ ನಡೆಯುತ್ತಿರುವುದೆಲ್ಲ ನಮ್ಮ ಹಿರಿಯರು ಹಿಂದೆಯೇ ಭವಿಷ್ಯ ನುಡಿದಿದ್ದರು. ಹಿರಿಯರು ಹೇಳಿದ್ದೇ ಸರಿ, ಕಿರಿಯರು ಹೇಳುವುದು ತಪ್ಪು. ಇದು ಭಾರತೀಯರ ಒಂದು ಮನೋದೌರ್ಬಲ್ಯ. ಇದನ್ನು ಕುರಿತೇ ಅಲ್ಲಮ ಮತ್ತೆ ಅಲ್ಲಮಪ್ರಭುದೇವರು ಎಚ್ಚರಿಸಿದ್ದು: ಹಿರಿಯರಾದರೇನೂ? ಕಿರಿಯರಾದರೇನು, ಅರಿವಿಂಗೆ ಇರಿದು ಕಿರಿದುಂಟೆ ? ಮಹಾಕವಿ ಕಾಳಿದಾಸನೂ ಹಳೆಯ ಕಾಲದ ಸಾಹಿತ್ಯ ಕೃತಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ, ತಾನು ಬರೆದ ಹೊಸ ನಾಟಕಕ್ಕೆ ಮಾನ್ಯತೆ ಸಿಗುವುದೋ ಇಲ್ಲವೋ ಎಂಬ ಅಶಂಕೆಯನ್ನು ತನ್ನ ‘ಮಾಳವಿಕಾಗ್ನಿಮಿತ್ರ’ ನಾಟಕದ ಆರಂಭದ ಅಂಕದಲ್ಲಿ ‘ಪಾರಿಪಾರ್ಶಿಕ’ ಎಂಬ ಪಾತ್ರಧಾರಿಯ ಭಾಯಿಯಲ್ಲಿ ವ್ಯಕ್ತಪಡಿಸಿದ್ದಾನೆ. ತನ್ನ ನಿಲುವನ್ನು ಸೂತ್ರಧಾರನ ಮಾತಿನಲ್ಲಿ ಸ್ಪಷ್ಟಪಡಿಸಿದ್ದಾನೆ “ಪುರಾಣ ಮಿತ್ಯೇವನ ಸಾಧು ಸರ್ವಂ ನ ಚಾಪಿ ಕಾವ್ಯಂ ನವಮಿತ್ಯವದ್ಯಂ’ ಅಂದರೆ “ಹಳೆಯದೆಂದ ಮಾತ್ರಕ್ಕೆ ಎಲ್ಲವೂ ಶ್ರೇಷ್ಠವಲ್ಲ, ಹೊಸದೆಂದ ಮಾತ್ರಕ್ಕೆ ಎಲ್ಲವೂ ಕನಿಷ್ಠವಲ್ಲ”. ಕಾಳಿದಾಸನ ಈ ಮಾತಿಗೆ ಪೂರಕವಾಗಿ ದನಿಗೂಡಿಸಿ ಹೇಳುವುದಾದರೆ ಉಪ್ಪಿನಕಾಯಿ ಹಳೆಯದಾದಷ್ಟು ರುಚಿಯಾಗಿರುತ್ತದೆ.ನಿಜ ಉಪ್ಪಿನಕಾಯಿ ಶಬ್ದವನ್ನು ಕೇಳುತ್ತಿದ್ದಂತೆಯೇ ನಿಮ್ಮ ಬಾಯಿಯಲ್ಲಿ ನೀರೂರುತ್ತದೆ. ಆದರೆ ಇದೇ ಮಾತನ್ನು ನೀವು ದಿನನಿತ್ಯ ಓಡಾಡುವ ಮೋಟಾರ್ ಬೈಕ್ ಅಥವಾ ಕಾರು ಇತ್ಯಾದಿ ವಾಹನಗಳನ್ನು ಕುರಿತು ಹೇಳಲು ಸಾಧ್ಯವಿಲ್ಲ.ಹಳೆಯ ಕಾರನ್ನು ಮಾರಿ ಹೊಸತನ್ನು ಕೊಳ್ಳುತ್ತೀರಿ ಯಾರಾದರೂ ಕೇಳಿದರೆ ನಿಮ್ಮ ಹತ್ತಿರ Latest Model ಇದೆಯಂದು ಎಂದು ಬೀಗುತ್ತೀರಿ.

ಈಗೀಗ ಸಾಮಾಜಿಕ ಜಾಲತಾಣಗಳಲ್ಲಿ ಕರೋನಾ ವೈರಸ್ ನದೇ ಮಾತು! ಸುದ್ದಿ ಚಾನೆಲ್ ಗಳಲ್ಲಿ 24×7 ಪ್ರಸಾರವಾಗುತ್ತಿರುವ ತೊಂದರೆಗೆ ಸಿಲುಕಿದವರ, ಪ್ರಾಣ ತೆತ್ತವರ ಸುದ್ದಿಗಳು ಮತ್ತು ದೃಶ್ಯಾವಳಿಗಳು ಕರುಳು ಹಿಂಡುತ್ತವೆ. ಕೋರೊನ ಯೋಧರಾದ ಡಾಕ್ಟರ್ ಗಳು , ವೈದ್ಯಕೀಯ, ಅರೆ ವೈದ್ಯಕೀಯ ಮತ್ತು ಪೊಲೀಸ್ ಸಿಬ್ಬಂದಿಗಳ ಸೇವೆಯಂತೂ ಈ ಸಂದರ್ಭದಲ್ಲಿ ಶ್ಲಾಘನೀಯ. ದೇವಾಲಯ ಚರ್ಚು ಮತ್ತು ಮಸೀದಿಗಳು ಬಾಗಿಲು ಹಾಕಿವೆ ಆದರೆ ಆಸ್ಪತ್ರೆಗಳ ಬಾಗಿಲು ಸದಾ ತೆರೆದಿವೆ. ಸದ್ಯದ ಜಾತ್ಯತೀತ ದೇವಾಲಯಗಳೆಂದರೆ ಆಸ್ಪತ್ರೆಗಳೇ ರೋಗಿಗಳ ಆರೈಕೆಯಯಲ್ಲಿ ಹಗಲಿರುಳು ತೊಡಗಿರುವ ವೈದ್ಯರು ಮತ್ತು ನರ್ಸ್ ಗಳೇ ಮಾನವ ಸ್ವರೂಪಿ ದೇವರುಗಳು ಎನ್ನಬಹುದು.

ಮಾರ್ಚ್ ತಿಂಗಳ ಕೊನೆಯಲ್ಲಿ ಲಂಡನ್ ಮತ್ತು ನಾಟಿಂಗ್ ಹ್ಯಾಮ್ ನಗರಗಳಲ್ಲಿ ನಡೆಯಲಿದ್ದ ಎರಡು ಸಮ್ಮೇಳನಗಳಿಗೆ ಆಹ್ವಾನಿತರಾಗಿ ಹೋಗಬೇಕಾಗಿತ್ತು. ಮಾರ್ಚ್ ಆರಂಭದಲ್ಲಿ ದುಬೈನಿಂದ ಬೆಂಗಳೂರಿಗೆ ಬಂದ ಟೆಕ್ಕಿಯೊಬ್ಬರಿಗೆ ಕೋರನ ಸೋಂಕು ಉಂಟಾಗಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಬಂದ ತಕ್ಷಣವೇ ಮುಂಜಾ ಮುಂಜಾಗರೂಕತೆಯಿಂದ ನಮ್ಮ ವಿದೇಶ ಪ್ರಯಾಣವನ್ನು ರದ್ದು ಪಡಿಸುವ ತೀರ್ಮಾನ ಕೈಗೊಂಡಿದ್ದು ನಮ್ಮ ಗುರುವರ್ಯರ ಕೃಪಾಶೀರ್ವಾದ ವೆಂದೇ ನಮ್ಮ ಭಾವನೆ. ನಂತರ ಆ ಸಮ್ಮೇಳನಗಳ ಸಂಘಟಕರು ರದ್ದುಪಡಿಸಿಕೊಂಡರು. ಚಾನೆಲ್ ಗಳಲ್ಲಿ ಪ್ರಸಾರವಾಗುವ ಸುದ್ದಿಗಳನ್ನು ನೋಡಿ ಕೇವಲ ಅಯ್ಯೋ ಪಾಪ ಎಂದರೆ ಸಾಲದು . ಬದಲಾಗಿ ನಾವೆಲ್ಲಿ ಇದ್ದೇವೆಯೋ ಅಲ್ಲಿ ಹೇಗೆ ಇಂತಹ ಸವಾಲುಗಳನ್ನು ಸ್ವೀಕರಿಸಬೇಕು. ನೊಂದವರ ಕಣ್ಣೀರನ್ನು ಹೇಗೆ ಒರೆಸಬೇಕು ಎಂಬುದನ್ನು ಎಲ್ಲರೂ ಯೋಚಿಸಬೇಕು. ಆಂಧ್ರಪ್ರದೇಶದ ನಂದ್ಯಾಲದಲ್ಲಿ ಓದಲು ಹೋಗಿ ಲಾಕ್ ಡೌನ್ ನಲ್ಲಿ ಸಿಕ್ಕಿಹಾಕಿಕೊಂಡಿರುವ ಸುಮಾರು 200 ಕರ್ನಾಟಕದ ವಿದ್ಯಾರ್ಥಿಗಳಿಗೆ ಅಲ್ಲಿಯ ಶಿಷ್ಯರನ್ನು ಸಂಪರ್ಕಿಸಿ ಕಳೆದ ಎಂಟು ದಿನಗಳಿಂದ ನಿತ್ಯ ದಾಸೋಹ ವ್ಯವಸ್ಥೆ ಮಾಡಿದ್ದು ನಮಗೆತೃಪ್ತಿಯನ್ನುಂಟು ಮಾಡಿದೆ.

ಸಾವಿರಾರು ಜನರು ಕೋರೋಣ ಮಹಾಮಾರಿಯಿಂದ ಸಾವು ನೋವಿಗೆ ಒಳಗಾಗುತ್ತಿರುವ ದೃಶ್ಯವನ್ನು ನೋಡಿಯೂ ನಮ್ಮ ಜನರು ಎಚ್ಚೆತ್ತುಕೊಳ್ಳದೆ ಅಡ್ಡಾದಿಡ್ಡಿ ತಿರುಗಾಡುತ್ತಿರುವುದು ತುಂಬಾ ವಿಷಾದನೀಯ ಸಂಗತಿ. ಇದು ಅಕ್ಷಮ್ಯ ಅಪರಾಧ.ಹೀಗೆ ಓಡಾಡುತ್ತಿರುವವರು ನಿಮ್ಮ ಕುಟುಂಬದ ಸದಸ್ಯರಿಗೂ ಮತ್ತು ನೆರೆಹೊರೆಯವರಿಗೂ ನೀವೇ ಮಹಾಮಾರಿ ಯಾಗುತ್ತಿರು ಎಂಬುದನ್ನು ಮರೆಯದಿರಿ ರಾತ್ರಿ ಕಂಡ ಬಾವಿಯಲ್ಲಿ ಹಗಲು ಬೀಳಬಹುದೇ? ಪೇಟೆ ಪಟ್ಟಣಗಳಲ್ಲಿ ಆಗುತ್ತಿರುವ ಸಾವು ನೋವು ಸುದೈವದಿಂದ ಹಳ್ಳಿಗಳಿಗೆ ವ್ಯಾಪಿಸಿಲ್ಲ ನಿಮ್ಮ ಜವಾಬ್ದಾರಿ ವರ್ತನೆಯಿಂದ ಈ ಸೋಂಕು ಹಳ್ಳಿ ಗಳಿಗಾದರೂ ಹರಡಿದರೆ ಇಡೀ ಊರಿಗೆ ಊರೇ ಸ್ಮಶಾನವಾಗಿ ವುದರಲ್ಲಿ ಸಂಶಯವಿಲ್ಲ.ಇನ್ನಾದರೂ ಎಚ್ಚೆತ್ತುಕೊಳ್ಳಿ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಆಗಿರುವಷ್ಟು ಅನಾಹುತ ನಮ್ಮ ದೇಶದಲ್ಲಿ ಆಗಿಲ್ಲ ನನಗೆ ಏನೂ ಆಗುವುದಿಲ್ಲವೆಂಬ ಒಣ ಜಂಬ ಬೇಡ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆದೇಶಗಳನ್ನು ಚಾಚೂ ತಪ್ಪದೆ ಪಾಲಿಸಿರಿ ಎಲ್ಲವನ್ನೂ ಸರಕಾರ ಮಾಡಲು ಆಗುವುದಿಲ್ಲ ಸ್ವಯಂ ನಿಯಂತ್ರಣ ಅತ್ಯವಶ್ಯಕ ಮನೆಯಲ್ಲಿಯೇ ಇದ್ದು ಮನೆಯ ದೀಪ ಬೆಳಗಿಸಿರಿ ನೀವು ಪುಣ್ಯ ಮಾಡಿ ಭಾರತದಲ್ಲಿ ಹುಟ್ಟಿದ್ದಾರೆ ರಾತ್ರಿ ದೀಪ ಬೆಳಗಿಸಿ ಬಳಗದೊಡನೆ ಅಡ್ಡಾದಿಡ್ಡಿ ತಿರುಗಾಡುವ ಪಾಪಕೃತ್ಯ ಮಾಡಬೇಡಿ ಮನುಕುಲದ ಮಹಾಮಾರಿ ಮನುಷ್ಯನೇ ಹೊರತು ಕೋರೋಣ ಅಲ್ಲ. ನೀವು ಬದುಕಿ ಬೇರೆಯವರಿಗೂ ಬದುಕಲು ಅವಕಾಶ ಮಾಡಿಕೊಡಿ.

ವಿಶ್ವದೆಲ್ಲೆಡೆ ವ್ಯಾಪಿಸಿದೆ ಕೊರೋನಾ ವೈರಾಣು
ನರ್ತಿಸುತಿವೆ ನವಿಲುಗಳು ದಾರಿಯಲಿ
ಜಿಗಿಯುತಿವೆ ಜಿಂಕೆಗಳು ಕಡಲ ತೀರದಲಿ
ಪೊರೆಯುತಿದೆ ಪ್ರಕೃತಿಯು ಖಗಮೃಗಗಳನು ವನರಾಜಿಯನು
ದಂಡಿಸುತ ದುರುಳ ಮನುಜರನು ಅವರ ಪಾಪಕೃತ್ಯಗಳಿಗೆ
ಬೀದಿಗಿಳಿಯದಿರಿ ಮರುಳರೇ
ಮನುಕುಲದ ಮಹಾಮಾರಿ ನೀವೇ!
ಸಕುಟುಂಬ ಪರಿವಾರ ಮನೆಯೊಳಗಿದ್ದು ಹಚ್ಚಿರಿ ಹಣತೆಯನು ದಿನ ರಾತ್ರಿ
ಪರಿತಪಿಸುತ ಬೇಡಿಕೊಳ್ಳಿರಿ ಅಪರಾಧಗಳ ಮನ್ನಿಸೆಂದು
ರಕ್ಷಿಸೆಮ್ಮನು ಅನವರತ ಪ್ರಭುವೇ ಎಂದು!

ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು, ಜಗದ್ಗುರು ತರಳಬಾಳು ಬೃಹನ್ಮಠ ಸಿರಿಗೆರೆ.

About Shivanand

Admin : Lingayat Kranti Monthly news paper 8884000008 [email protected]

Check Also

ಮಠಾಧೀಶರಿಗೆ ರಾಜಕಾರಣದ ಉಸಾಬರಿ ಏಕೆ?

  ಬೆಂಗಳೂರು: ರಾಜ್ಯದಲ್ಲಿನ ಸ್ವಾಮೀಜಿಗಳ ಪೈಕಿ ಕೆಲವರು ರಾಜಕೀಯ ನಾಯಕರಂತೆ ವರ್ತಿಸುತ್ತಿರುವುದು ಅವರು ಪ್ರತಿನಿಧಿಸುವ ಸ್ಥಾನಗಳಿಗೆ ಶೋಭೆ ತರುವಂತಹದ್ದಲ್ಲ. ಸಮಾಜಕ್ಕೆ …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಯಾರಿಗೆ? ಹಾಗೂ ಮಹಾ ಮಾದರಿ ಶೇ.16ರ ವಿಶೇಷ ಮೀಸಲಾತಿ ಬೇಡವೇ….?

    ಬಸವಣ್ಣ ಬರುವಾಗ | ಬಿಸಿಲು ಬೆಳದಿಂಗಳು || ಮೊಗ್ಗು ಮಲ್ಲಿಗೆ | ಅರಳ್ಯಾವ || ಯಾಲಕ್ಕಿ ಗೊನೆಬಾಗಿ …

ಕರ್ನಾಟಕದ ಮ್ಯಾಕ್ಸ್ ಮುಲ್ಲರ್ ‘ವಚನ ಪಿತಾಮಹ’ ಡಾ. ಫ.ಗು.ಹಳಕಟ್ಟಿ

  ರಾಮದುರ್ಗ: ೧೯೫೬ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಪದವಿ ಪ್ರದಾನ ಸಮಾರಂಭ. ಡಾ.ಪಾವಟೆಯವರು ಕುಲಪತಿಗಳಾಗಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯದ …

ರಾಣಿ ಚನ್ನವೀರಮ್ಮ

  ಲಿಂಗಾಯತ ಕ್ರಾಂತಿ: ಚನ್ನಮ್ಮ ಮತ್ತು ವೀರಮ್ಮ ಇವರಿಬ್ಬರು ಕಿತ್ತೂರ ದೇಸಾಯಿಣಿಗಳು. ಇವರಿಬ್ಬರ ಹೆಸರು ಒಂದಾಗಿರುವ ಚನ್ನವೀರಮ್ಮಾಜಿ ಎನ್ನುವ ಕೆಳದಿಯ …

ಜನಪದವೇ ಲಿಂಗಾಯತ ಧರ್ಮ ಉಳಿವಿಗೆ ಆಧಾರ

  ಬೀದರ್: 12ನೆ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿ ನಂತರ ಲಿಂಗಾಯತ ಧರ್ಮದ ಶರಣರು ಚೆಲ್ಲಾಪಿಲ್ಲಿ ಆದರು, ಹಲವಾರು ಶರಣರು …

ಸಂವಿಧಾನ ಮತ್ತು ಕಾನೂನುಗಳ ಸಮರ್ಪಕ ಬಳಕೆಯೇ ಈ ದೇಶದ ಎಲ್ಲ ಸಮಸ್ಯೆಗಳಿಗೆ ಪರಿಹಾರ

  ~ ಡಾ. ಜೆ ಎಸ್ ಪಾಟೀಲ. ವಿಜಯಪುರ: ಭಾರತವು ಧಾರ್ಮಿಕ ಮೂಢನಂಬಿಕೆಗಳ ತವರು ಮನೆ. ಇಲ್ಲಿ ಧಾರ್ಮಿಕ ನಂಬಿಕೆಗಳ …

ಗ್ರಾಮ ಸ್ವರಾಜ್ಯ ಸಾಕಾರಗೊಳಿಸಿದ: ರಾಮಪ್ಪ ಬಿದರಿ

ವಿಜಯಪುರ: 1952-1962 ಹತ್ತು ವರ್ಷಗಳ ಕಾಲ ಲೋಕಸಭಾ ಸದಸ್ಯರಾಗಿದ್ದ ರಾಮಪ್ಪ ಬಿದ್ರಿ ಈ ಹುದ್ದೆಯನ್ನು ಎಂದೂ ತಮ್ಮ ಸ್ವಂತದ ಲಾಭಕ್ಕಾಗಿ …

ಲಿಂಗಾಯತ ಧರ್ಮದ ಹೋರಾಟ ಸರಣಿ-2 ಭಾಗ-4

  ಲಿಂಗಾಯತ ಧರ್ಮ ಮಾನ್ಯತೆಯ ಹೊರಾಟದಲ್ಲಿ ಲಿಂಗಾಯತ ಸಮನ್ವಯದ ಸಮಿತಿ ಪಾತ್ರ. ಬಸವಕಲ್ಯಾಣ: ಬೆಂಗಳೂರಿನ ಕುಂಬಳಗೋಡಿನ ಬಸವ ಗಂಗೋತ್ರಿಯಲ್ಲಿ ಜೂನ್ …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಜಾತಿ ಲಿಂಗಾಯತರು ಮತ್ತು ಬೇಡ ಜಂಗಮ ಪಂಚಾಚಾರ್ಯರು ಸತ್ಯವೆಂದು ನಂಬಿ ಲಿಂಗಾಯತ ಧರ್ಮದ ಮಾನ್ಯತೆ ತಪ್ಪಿಸುತ್ತಿದ್ದಾರೆ. ಬಸವಕಲ್ಯಾಣ: 12ನೇ …

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

ರವಿ ಬೆಳಗೆರೆ ಒಂದು ಕನಸು ನನಸು ಮಾಡಲು ಆಗಲಿಲ್ಲ..!

  ಚನ್ನಮ್ಮನ ಕಿತ್ತೂರು: ಪಿ. ಲಂಕೇಶರ ನಂತರ ಕನ್ನಡ ಪತ್ರಿಕೋದ್ಯಮ ಮತ್ತೊಂದು ರೀತಿ ಕಲ್ಪನೆ ಮೀರಿ ಮುನ್ನಡಿಸಿದ್ದ ಕೀರ್ತಿ ರವಿಗೆ …

Leave a Reply

Your email address will not be published. Required fields are marked *

error: Content is protected !!