Breaking News
Home / featured / ಲಿಂಗಾಯತ ಮಹಾಸಭೆಯಿಂದ ಇಷ್ಟಲಿಂಗ ಪೂಜೆ

ಲಿಂಗಾಯತ ಮಹಾಸಭೆಯಿಂದ ಇಷ್ಟಲಿಂಗ ಪೂಜೆ

ಬೆಂಗಳೂರು: ಪ್ರಾಣವನ್ನೆ ತೆಗೆಯುವ ‘ಕರೋನ ವೈರಸ್’ ಇಂದು ಇಡೀ ಜಗತ್ತಿಗೆ ಮಹಾವಿಪತ್ತಾಗಿ ಕಾಡುತ್ತಿದೆ. ಈ ವೈರಸ್ ಸೋಂಕಿಗೆ ಯಾವುದೇ ರೀತಿಯ ನಿರ್ದಿಷ್ಟ ಚಿಕಿತ್ಸೆಗಳಿಲ್ಲ. ಹಾಗಾಗಿ ಪ್ರತಿದಿನವು ಜಗತ್ತಿನಾದ್ಯಂತ ಸಾವಿರಾರು ಜನರು ಸಾವಿಗೀಡಾಗುತ್ತಿದ್ದಾರೆ. ಬಡವರ ಬದುಕು ಬೀದಿಗೆ ಬಿದ್ದಿದೆ, ಈಗಾಗಲೇ ಆರ್ಥಿಕ ಸಂಕಷ್ಟದಿಂದ ನಮ್ಮ ನಾಡು ಕಂಗೆಟ್ಟಿದೆ. ಈ ವಿಪತ್ತಿನಿಂದ ಸಮಸ್ಯೆಗಳು ಉಲ್ಬನಗೊಳ್ಳುತ್ತಿವೆ. ಈ ಆರೋಗ್ಯದ ವಿಪತ್ತನ್ನು ನಾವು ದೈರ್ಯದಿಂದ ಎದುರಿಸಬೇಕಾಗಿದೆ. ಇದನ್ನು ಮಂತ್ರ-ತಂತ್ರ-ಯಂತ್ರಗಳಿಂದ ಎದುರಿಸಲು ಸಾಧ್ಯವಿಲ್ಲ. ಈ ವಿಷಮ ಸಂದರ್ಭದಲ್ಲಿ ನಮ್ಮ ಮನೋಬಲವನ್ನು ದೃಢಪಡಿಸಿಕೊಂಡು ಮಾನಸಿಕವಾಗಿ ನಾವು ಗಟ್ಟಿಯಾಗಬೇಕಿದೆ.

ಏಪ್ರೀಲ್ ೧೩ ರಂದು ಸಂಜೆ ೭ ಗಂಟೆಗೆ ಸಮಸ್ತ ಲಿಂಗಾಯತ ಸಮುದಾಯದವರು ತಮ್ಮ ತಮ್ಮ ಮನೆಗಳಲ್ಲಿ ಕುಟುಂಬದ ಸದಸ್ಯರೊಂದಿಗೆ ವಿಭೂತಿ ಧಾರಣೆ ಮಾಡಿ ಬಸವ ಪ್ರಣೀತ ಇಷ್ಟಲಿಂಗ ಸಂಕಲ್ಪದೊಂದಿಗೆ ಮಹಾಮಾರಿ ಕೊರೋನಾ ಹಾವಳಿಯಿಂದ ವಿಶ್ವವನ್ನು ಮುಕ್ತಗೊಳಿಸುವಂತೆ ಪ್ರಾರ್ಥಿಸಬೇಕೆಂದು ಜಾಗತಿಕ ಲಿಂಗಾಯತ ಮಹಾಸಭೆ ಸಮಸ್ತ ಲಿಂಗಾಯತ ಸಮಾಜದವರಿಗೆ ಪ್ರಕಟಣೆ ಹೊರಡಿಸಿದೆ .

ಇಷ್ಟಲಿಂಗೋತ್ಸವ ಲಿಂಗಾಯತ ಸಮಾಜದ ಸಮಸ್ತ ಮಠಾಧೀಶರ ಮಾರ್ಗದರ್ಶನದಲ್ಲಿ ನಡಯಲಿದ್ದು, ಲಿಂಗಾಯತ ಸಮಾಜದ ಪ್ರತಿಯೊಬ್ಬರು ಸೋಮವಾರ ಏಪ್ರಿಲ್ 13 ರಂದು ಸಂಜೆ 7 ಗಂಟೆಗೆ ತಮ್ಮ ಮನೆಗಳಲ್ಲಿಯೇ ಕುಟುಂಬ ಸಮೇತರಾಗಿ ಇಷ್ಟಲಿಂಗ ಸಂಕಲ್ಪ ಮಾಡುವ ಮೂಲಕ ಕೊರೋನಾ ವಿರುದ್ದದ ಹೋರಾಟದಲ್ಲಿ ಸಹಕರಿಸಬೇಕೆಂದು ಜಾಗತಿಕ ಲಿಂಗಾಯತ ಮಹಾಸಭೆಯು ಕರೆ ನೀಡಿದೆ, ಸಮಸ್ತ ಬಸವ ಪರ ಸಂಘಟನೆಗಳು ಬೆಂಬಲ ನೀಡಿವೆ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಡೊಂಗಿ ಮಂತ್ರವಾದಿ ಲಪಟಾಯಿಸಿದ್ದು 6 ಕೋಟಿ

  ಬೆಳಗಾವಿ: ಖ್ಯಾತ ಸಂಗೀತ ಸಂಯೋಜಕ ಕೆ.ಕಲ್ಯಾಣ ಅವರ ದಾಂಪತ್ಯ ವಿವಾದ ಹೊಸ ತಿರುವು ಪಡೆದುಕೊಂಡಿದ್ದು, ಡೊಂಗಿ ಮಂತ್ರವಾದಿ ಲಪಟಾಯಿಸಿದ …

Leave a Reply

Your email address will not be published. Required fields are marked *

error: Content is protected !!