Breaking News
Home / featured / ರಾಜ್ಯದಲ್ಲಿ 191ಕ್ಕೆ ಏರಿದ ಕರೋನ ಸೋಂಕಿತರ ಸಂಖ್ಯೆ

ರಾಜ್ಯದಲ್ಲಿ 191ಕ್ಕೆ ಏರಿದ ಕರೋನ ಸೋಂಕಿತರ ಸಂಖ್ಯೆ

ಬೆಂಗಳೂರು – ಇಂದು ಬಿಡುಗಡೆಯಾಗಿರುವ ಮೀಡಿಯಾ ಬುಲೆಟಿನ್ ಪ್ರಕಾರ ಬೆಳಗಾವಿಯ 50 ವರ್ಷದ ವ್ಯಕ್ತಿಗೆ ಹಾಗೂ ಬಾಗಲಕೋಟೆಯಲ್ಲಿ ಮೂವರು ಮಕ್ಕಳು ಸೇರಿದಂತೆ ನಾಲ್ವರಿಗೆ ಕೊರೋನಾ ಸೋಂಕಿರುವುದು ಪತ್ತೆಯಾಗಿದೆ.

ಬೆಳಗಾವಿಯ 128ನೇ ನಂಬರ್ ಸೋಂಕಿತನ 50 ವರ್ಷದ ತಂದೆಗೆ ಸೋಂಕಿರುವುದು ದೃಢಪಟ್ಟಿದೆ. 128ನೇ ನಂಬರ್ ಸೋಂಕಿತ ನಿಜಾಮುದ್ದೀನ್ ಧರ್ಮಸಭೆಯಲ್ಲಿ ಪಾಲ್ಗೊಂಡು ಬಂದಿದ್ದ.
ಇದೀಗ ಬೆಳಗಾವಿ ನಗರದಲ್ಲಿ ನಾಲ್ಕು ಹಾಗೂ ಕುಡಚಿಯಲ್ಲಿ ನಾಲ್ವರಿಗೆ ಕೊರೋನಾ ದೃಢಪಟ್ಟಂತಾಗಿದೆ. ಇವರೆಲ್ಲ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೆಲ್ಲರ ಟ್ರಾವೆಲ್ ಹಿಸ್ಟರಿ ಸಂಗ್ರಹಿಸಲಾಗುತ್ತಿದೆ. ಬಾಗಲಕೋಟೆಯಲ್ಲಿ ಓರ್ವ ವ್ಯಕ್ತಿಯಿಂದ ಮೂವರಿಗೆ ಸೋಂಕು ಹರಡಿದೆ. 165ರ ಸಂಖ್ಯೆ ಸೋಂಕಿತ ಮಹಿಳೆಯಿಂದ 9, 13, 4 ವರ್ಷದ ಮಕ್ಕಳು ಸೇರಿದಂತೆ ಮೂವರು ಮಕ್ಕಳಿಗೆ ಸೋಂಕು ತಗುಲಿದೆ. ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 191ಕ್ಕೇರಿದ್ದು, 6 ಜನರು ಸಾವನ್ನಪ್ಪಿದ್ದಾರೆ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಡೊಂಗಿ ಮಂತ್ರವಾದಿ ಲಪಟಾಯಿಸಿದ್ದು 6 ಕೋಟಿ

  ಬೆಳಗಾವಿ: ಖ್ಯಾತ ಸಂಗೀತ ಸಂಯೋಜಕ ಕೆ.ಕಲ್ಯಾಣ ಅವರ ದಾಂಪತ್ಯ ವಿವಾದ ಹೊಸ ತಿರುವು ಪಡೆದುಕೊಂಡಿದ್ದು, ಡೊಂಗಿ ಮಂತ್ರವಾದಿ ಲಪಟಾಯಿಸಿದ …

Leave a Reply

Your email address will not be published. Required fields are marked *

error: Content is protected !!