Breaking News
Home / featured / ಭಾರತೀಯ ಮೂಲದ ಡಾ. ನೀರಜ್ ಪಾಟೀಲ ಗೆ ಕರೋನ ಸೋಂಕು

ಭಾರತೀಯ ಮೂಲದ ಡಾ. ನೀರಜ್ ಪಾಟೀಲ ಗೆ ಕರೋನ ಸೋಂಕು

ಲಂಡನ್: ಲಂಡನ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ವೈದ್ಯ, ರಾಜಕಾರಣಿ ಡಾ.ನೀರಜ್ ಪಾಟೀಲ ಅವರಿಗೆ ಕೊರೋನಾ ಸೋಂಕು ತಗುಲಿದೆ. ಈ ಕುರಿತು ಅವರೇ ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ತಾವು ಮುನ್ನೆಚ್ಚರಿಕೆ ತೆಗೆದುಕೊಳ್ಳದೇ ಇರುವುದರಿಂದ ಕೊರೋನಾ ತಗುಲಿದೆ ಎಂದೂ ಅವರು ಹೇಳಿಕೊಂಡಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿತ್ತು, ಕೈಗಳನ್ನು ಆಗಾಗ ತೊಳೆದುಕೊಳ್ಳಬೇಕಿತ್ತು, ಪರ್ಸನಲ್ ಪ್ರೊಟೆಕ್ಷನ್ ಕಿಟ್ ಧರಿಸಬೇಕಿತ್ತು ಎಂದು ಹೇಳಿದ್ದಾರೆ.

ಆದರೆ ನನ್ನ ದೇಹ ಅತ್ಯಂತ ಬಲಿಷ್ಟವಾಗಿದೆ. ಆದಷ್ಟು ಬೇಗ ಗುಣಮುಖನಾಗುತ್ತೇನೆ. ಸಧ್ಯ ನನ್ನನ್ನು ನಾನೇ ಐಸೋಲೇಟ್ ಮಾಡಿಕೊಂಡಿದ್ದೇನೆ. ಜಿಮ್ ಗಳಿಗೆ ಹೋಗುತ್ತಿದ್ದೇನೆ. ನನಗೆ ಸಿಗರೇಟಿ ಸೇವನೆ ಸೇರಿದಂತೆ ಯಾವುದೇ ದುಶ್ಚಟಗಳಿಲ್ಲ. ನಿರಂತರ ವ್ಯಾಯಾಮ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸುತ್ತಿದ್ದೇನೆ ಎಂದು ನೀರಜ್ ಪಾಟೀಲ ಬರೆದುಕೊಂಡಿದ್ದಾರೆ. ನೀರಜ್ ಪಾಟೀಲ ಕಳೆದ ಫೆ.29ರಂದು ಬೆಂಗಳೂರಿಗೆ ಆಗಮಿಸಿದ್ದರು. ಆಗ ಮುಖ್ಯಮಂತ್ರಿಗಳ ಕಚೇರಿ ಮತ್ತು ವಿಧಾನಸೌಧದಲ್ಲಿ ಸಹ ಕಾಣಿಸಿಕೊಂಡಿದ್ದರು.

ನೀರಜ್ ಪಾಟೀಲ ಲಂಡನ್ ನಲ್ಲಿ ಮೇಯರ್ ಕೂಡ ಆಗಿದ್ದವರು. ಭಾರತದ ರಾಜಕಾರಣಿಗಳು ಸೇರಿದಂತೆ ಹಲವಾರು ಗಣ್ಯರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ.

ಲಂಡನ್ನಿನ ಲ್ಯಾಂಬೆತ್ ನಗರದಲ್ಲಿ ವಿಶ್ವಗುರು ಬಸವೇಶ್ವರರ ಪುತ್ಥಳಿ ನಿರ್ಮಿಸಿದ್ದ ಅಲ್ಲಿನ‌ ಮಾಜಿ ಮೇಯರ್ ಹಾಗು ವೈದ್ಯರು ಆತ್ಮೀಯ ಸ್ನೇಹಿತರಾದ ನೀರಜ್ ಪಾಟೀಲ್ ರವರು ಕೊರೋನಾ ಸೋಂಕಿಗೊಳಗಾಗಿದ್ದು, ಮನೆಯಲ್ಲಿಯೇ ಇದ್ದು ಐಸೋಲೇಶನ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಆದಷ್ಟು ಬೇಗ ಗುಣಮುಖರಾಗಲಿ‌ ಎಂದು ಪ್ರಾರ್ಥಿಸೋಣ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!