Breaking News
Home / featured / ಶರಣ ಎಂ ಬಿ ಪಾಟೀಲರು ಎಂಬ ಧೀಮಂತ ವ್ಯಕ್ತಿತ್ವ.

ಶರಣ ಎಂ ಬಿ ಪಾಟೀಲರು ಎಂಬ ಧೀಮಂತ ವ್ಯಕ್ತಿತ್ವ.

ವಿಜಯಪುರ: ದೇಶದಲ್ಲಿ, ರಾಜ್ಯದಲ್ಲಿ ಮತ್ತು ಪ್ರತಿ ಜಿಲ್ಲೆಯಲ್ಲಿ ಕೂಡಾ ಶ್ರೀಮಂತರು, ಉದ್ದಿಮೆಪತಿಗಳು, ಜನಪ್ರತಿನಿಧಿಗಳು, ಧಾರ್ಮಿಕ ಸಂಘಟನೆಗಳು ಇವೆ, ಆದರೆ ಅವುಗಳಲ್ಲಿ ಕೆಲಸ ಮಾಡುತ್ತಿರುವುದು ಬೆರಳೆಣಿಕೆಯಷ್ಟು ಮಾತ್ರ. ಈ ಸಂದರ್ಭದಲ್ಲಿ ಜನಸಾಮಾನ್ಯರ, ತೊಂದರೆಗೆ ಒಳಗಾದವರ ಪರವಾಗಿ ನಿಲ್ಲುವುದು ಮತ್ತು ನಿಲ್ಲಬೇಕಾದರೆ ದೇಶದ ಪ್ರತಿಯೊಬ್ಬ ಪ್ರಜ್ಞಾವಂತ, ನಾಗರಿಕನ ಆದ್ಯ ಕರ್ತವ್ಯವಾಗಿದೆ. ಆದರೆ ದೇಶಪ್ರೇಮ ಮತ್ತು ನಾಡಪ್ರೇಮ ಬಗ್ಗೆ ಭಾಷಣ ಬಿಗಿಯುವ, ಧರ್ಮರಕ್ಷಣೆಯ ಪೋಸು ಕೊಡುವ ಅದೆಷ್ಟು ಜನರು ಈ ಸಂದರ್ಭದಲ್ಲಿ ಜನಸಾಮಾನ್ಯರ ನೆರವಿಗೆ ಬಂದಿದ್ದಾರೆ ಹೇಳಿ. ಈ ತೊಂದರೆಗೊಳಗಾದ ಜನರಲ್ಲಿ ಕೇವಲ ಒಂದೆ ಜಾತಿ, ಧರ್ಮ, ಪ್ರದೇಶ, ಸಂಸ್ಕೃತಿಯ ಜನರಿಲ್ಲ. ಎಲ್ಲಾ ಸಮುದಾಯದ ಜನರು ಕೂಡ ಅದರಲ್ಲೂ ದಿನನಿತ್ಯದ ಕೂಲಿಕಾರ್ಮಿಕರು ಇದ್ದಾರೆ. ಆದರೆ ಇವರ ನೆರವಿಗೆ ಬಂದ ಸಮುದಾಯ ಮತ್ತು ಧಾರ್ಮಿಕ ಸಂಘಟನೆಗಳು ಎಷ್ಟು..? ಇಂತಹ ಸಂದರ್ಭದಲ್ಲಿಯೇ ಈ ಸಂಘಟನೆಗಳು ಮಾನವೀಯತೆಯ ನೆಲೆಯಲ್ಲಿ ಮಾಡಬೇಕಾದ ಕೆಲಸವಲ್ಲವೇ.? ಚುನಾವಣಾ ಸಂದರ್ಭದಲ್ಲಿ, ಹಾಗೂ ಇನ್ನುಳಿದ ಸಮಯದಲ್ಲಿ ಜಾತಿ ,ಧರ್ಮ ಎಂದು ಓಡಾಡುವ, ತೌಡು ಕುಟ್ಟುವ ಭಾಷಣ ಮಾಡುವ ಅದೆಷ್ಟು ಜನರು ಈ ಸಂದರ್ಭದಲ್ಲಿ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ..? ಕೆಲಸ ಮಾಡುತ್ತಿರುವವರ ಸಂಖ್ಯೆ ಅಪರೂಪವಾಗಿದೆ.

ಲೇಸೆನಿಸಿಕೊಂಡು ಐದು ದಿನ ಬದುಕಿದರೇನು ?
ಲೇಸೆನಿಸಿಕೊಂಡು ನಾಲ್ಕು ದಿನ ಬದುಕಿದರೇನು ?
ಲೇಸೆನಿಸಿಕೊಂಡು ಮೂರು ದಿನ ಬದುಕಿದರೇನು ?
ಲೇಸೆನಿಸಿಕೊಂಡು ಎರಡು ದಿನ ಬದುಕಿದರೇನು ?
ಲೇಸೆನಿಸಿಕೊಂಡು ಒಂದು ದಿನ ಬದುಕಿದರೇನು ಬಸವಾದಿ ಶರಣರ ವಚನದಲ್ಲಿ
ಲೇಸೆನಿಸಿಕೊಂಡು ಒಂದು ದಿನ ಬದುಕಿದರೆ ಸಾಕು ಎಂಬ ಶರಣರ ವಚನದಂತೆ
ಇಂತಹ ಎಲ್ಲಾ ಕಾರಣಗಳ ಮಧ್ಯೆ, ಇಂತಹ ವಿಷಮ ಪರಿಸ್ಥಿತಿಯಲ್ಲಿ ಎಲ್ಲವನ್ನೂ ಮೀರಿ ಜನಸಮುದಾಯದ ನೆರವಿಗೆ  ಶರಣ ಎಂ. ಬಿ. ಪಾಟೀಲರು ಶ್ರಮಿಸುತ್ತಿದ್ದಾರೆ. ಹಾಗೂ ಪ್ರಾಮಾಣಿಕವಾ ಗಿ ಸಹಾಯ ಮಾಡುತ್ತಾ ಜನರ ನೆರವಿಗೆ ನಿಂತಿದ್ದಾರೆ. ಹೀಗಾಗಿ ನಮ್ಮ ನಾಯಕರು  ಮಾದರಿಯಾಗಿದ್ದಾರೆ. ನಮ್ಮ ನಾಯಕರು ನಮಗೆ ಸದಾ ಸ್ಪೂರ್ತಿ ಮತ್ತು ಹೆಮ್ಮೆಯ ವ್ಯಕ್ತಿಯಾಗಿದ್ದಾರೆ.
1) ಪ್ರಸ್ತುತ ಕೋರೋನಾ ಸಂದರ್ಭದಲ್ಲಿ ಗೋವಾ ಕನ್ನಡಿಗರ ಹಿತವನ್ನ ರಕ್ಷಿಸಲು, ಅವರ ಯೋಗಕ್ಷೇಮ ಆಹಾರ ಸೇರಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಅವಿರತವಾಗಿ ಶ್ರಮಿಸಿ , ಗೋವಾ ಸರಕಾರದ ಸಚಿವರಾದ  ಲೋಬೋ ಅವರಿಗೆ ಕನ್ನಡಿಗ ಜನರ ಸಂರಕ್ಷಣೆ ಮಾಡುವಂತೆ, ಸಹಾಯ ನೀಡುವಂತೆ ಕೋರಿ, ಅಲ್ಲಿಯೂ ಯಶಸ್ವಿಯಾಗಿ, ಅಲ್ಲಿಯ ಕುಟುಂಬಗಳ ದಿನ ನಿತ್ಯ ಬದುಕಿಗೆ ಬೇಕಾದ ಅವಶ್ಯಕತೆ ವಸ್ತುಗಳನ್ನು ಸ್ವಂತ ಹಣದಲ್ಲಿ ತಲುಪಿಸಿದ್ದಾರೆ… 2) ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತುರ್ತು ಪರಿಹಾರ ನಿಧಿಗೆ ತಲಾ 25 ಲಕ್ಷ ರೂಪಾಯಿಯಂತೆ 50 ಲಕ್ಷ ಹಣವನ್ನು ದೇಣಿಗೆ ನೀಡಿದ್ದಾರೆ.3) ಬಬಲೇಶ್ವರ ಮತಕ್ಷೇತ್ರದ ಪ್ರತಿಯೊಂದು ಹಳ್ಳಿಗಳಲ್ಲಿ ರೋಗ ನಿರೋಧಕ ಔಷಧ ಸಿಂಪರಣೆ ಮಾಡಿಸಿದ್ದಾರೆ, ರಾಜ್ಯದಲ್ಲೇ ಇದು ಮಾದರಿ ಕಾರ್ಯವಾಗಿದೆ.

4) ಬಿಎಲ್‌ಡಿಇ ಫಾರ್ಮಸಿ ಕಾಲೇಜ್ ನ ಆಡಳಿತ ಅಧಿಕಾರಿ ರಾಘವೇಂದ್ರ ಕುಲಕರ್ಣಿ, ಮತ್ತು ಸಂಸ್ಥೆಯ ಸಾರ್ವಜನಿಕ ಅಧಿಕಾರಿ ಮಹಾಂತೇಶ ಬಿರಾದಾರ ಅವರ ಮೂಲಕ ವಿಜಯಪುರ ಜಿಲ್ಲಾಡಳಿತಕ್ಕೆ 20,000 ಸೇನಿಟೈಜರ ದ್ರಾವಣ ವನ್ನು ನೀಡಿದ್ದಾರೆ, ಜಿಲ್ಲೆಯ ಜನರ ಆರೋಗ್ಯ ಕಾಪಾಡುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ..

5) ಬಿಎಲ್‌ಡಿಇ ಸಂಸ್ಥೆಯ ಬಿಎಮ್ ಪಾಟೀಲ್ ಪಬ್ಲಿಕ್ ಶಾಲೆಯ ವತಿಯಿಂದ ವಿಜಯಪುರ ನಗರದಲ್ಲಿ ಕಾರ್ಯನಿರ್ವಹಿಸುವ ನೂರಾರು ಜನ ಪೊಲೀಸ್ ಇಲಾಖೆಯ ನೌಕರರರು, ಅಧಿಕಾರಿಗಳ ಕರ್ತವ್ಯಕ್ಕೆ ತೊಂದರೆ ಆಗದೇ ಇರಲು ಲಾಕ್ ಡೌನ್ ದಿನದಿಂದ ಸತತವಾಗಿ ಅನ್ನ ದಾಸೋಹ ಮಾಡಿದ್ದಾರೆ..

ಇದಕ್ಕೂ ಮುಂಚೆ ಬಿಎಲ್‌ಡಿಇ ಸಂಸ್ಥೆಯ ವತಿಯಿಂದ ಶಾಶ್ವತ ಯೋಜನೆಗಳ ಮೂಲಕ ಎಲ್ಲಾ ಸಮುದಾಯದ ಹಿತ ಕಾಯಲು ಹಲವಾರು ಕಾರ್ಯ ಮಾಡಿದ್ದಾರೆ…

ಅವುಗಳೆಂದರೆ

  •  ಅಧಿಲಾಶಾಹಿ ಅಧ್ಯಯನ ಕೇಂದ್ರ.
    ಕೋಮು ಸಾಮರಸ್ಯ ಸಾರುವ ಆಧಿಲ್ ಶಾಹಿ ಕಾಲದ ಸಾಹಿತ್ಯ ಪ್ರಚಾರ, ಪ್ರಕಟಣೆ ಮತ್ತು ಪ್ರಸಾರ.
  •  ಪ. ಗು . ಹಳಕಟ್ಟಿ ವಚನ ಸಾಹಿತ್ಯ ಸಂಶೋದನಾ ಕೇಂದ್ರ.
    ಇದರ ಅಡಿಯಲ್ಲಿ ವಚನ ಸಾಹಿತ್ಯ, ಶರಣರ ವಚನಗಳನ್ನು ವಿವಿಧ ಭಾಷೆಗೆ ಅನುವಾದ, ಪ್ರಕಟಣೆ ಮತ್ತು ಪ್ರಸಾರ…

ಅಷ್ಟೆ ಅಲ್ಲದೆ ಬಬಲೇಶ್ವರ ಕ್ಷೇತ್ರವನ್ನು ಮಾದರಿಯಾಗಿ ಕುಡಿಯುವ ನೀರಿಗೆ ಪರದಾಡುವ ನೆಲವನ್ನು ನೀರಾವರಿ ಕ್ಷೇತ್ರವಾಗಿ ಜಲ ಸಂಪನ್ಮೂಲ ಸಚಿವರಾಗಿದ್ದಾಗ ಪೂರ್ಣ ನೀರಾವರಿ ಒಳ ಪಡಿಸಿದ್ದಾರೆ.. ಜಿಲ್ಲೆಯ ನಾಗಠಾಣ, ದೇವರ ಹಿಪ್ಪರಗಿ, ಬಸವನ ಬಾಗೇವಾಡಿ, ಮುದ್ದೆ ಬಿಹಾಳ , ಸಿಂದಗಿ ಸೇರಿ ಎಲ್ಲಾ ಕಡೆ ಹಲವಾರು ನೀರಾವರಿ ಯೋಜನೆ ಅನುಷ್ಠಾನಕ್ಕೆ ಬಂದದ್ದು, ಅದಕ್ಕೆ ಇಚ್ಛಾ ಶಕ್ತಿ ಪ್ರದರ್ಶನ ಮಾಡಿದ್ರು.. ಹಾಗೆಯೇ ಜಿಲ್ಲೆಯ ಎಲ್ಲಾ ಮತಕ್ಷೇತ್ರಗಳಲ್ಲಿ ಕೆರೆಗೆ ನೀರು ತುಂಬುವ ಕೆಲಸ ಮಾಡಿದರು..

ಬಸವಾದಿ ಶರಣರ ಸಾಹಿತ್ಯದ ಓದು, ನಿಷ್ಠುರ ನಡೆ, ಶ್ರೀಮಂತಿಕೆಯ ಸುಪ್ಪತ್ತಿನಲ್ಲಿ ಸರಳ ವಾಗಿ ಬದುಕುವ ಎಂ ಬಿ. ಪಾಟೀಲರು ಸದಾ ನಮಗೆ ಮಾದರಿ.

ಶರಣ : ಭೀಮನಗೌಡ ಪರಗೊಂಡ
ಅಥಣಿ (ಕಲಬುರ್ಗಿ)

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!