Breaking News
Home / featured / ಸೂಜಿಕಾಯಕದ ರಾಮಿತಂದೆ: ವಚನ ವಿಶ್ಲೇಷಣೆ

ಸೂಜಿಕಾಯಕದ ರಾಮಿತಂದೆ: ವಚನ ವಿಶ್ಲೇಷಣೆ

ತಲೆಗೆ ಮೂರು ಚಿಪ್ಪು,
ಅಂಗಕ್ಕೆ ಆರು ಚಿಪ್ಪು,
ಮಿಕ್ಕಾದ ಸರ್ವಾಂಗಕ್ಕೆಲ್ಲಕ್ಕೂ
ಒಂದೆ ಚಿಪ್ಪಿನ ಕುಪ್ಪಸ.

ಇದರಂಗದ ಆಚರಣೆಯ ಬಲ್ಲವ, ಪ್ರಸನ್ನ ಕಪಿಲಸಿದ್ಧ ಮಲ್ಲಿಕಾರ್ಜುನ ಲಿಂಗವ ಬಲ್ಲವ.

 ಸೂಜಿಕಾಯಕದ ರಾಮಿತಂದೆ.

ವಚನ ಅನುಸಂಧಾನ:-

ಶರಣರ ವಚನಗಳನ್ನು ಅನುಸಂಧಾನ ಮಾಡಲು ತೊಡಗುವವರಿಗೆ ಶರಣತತ್ವ ಸಿದ್ಧಾಂತಗಳ ಅರಿವು ಆಚರಣೆಯ ಬಗ್ಗೆ ಹಾಗೂ ವಚನಗಳ ಪರಿಭಾಷೆಯ ಬಗ್ಗೆ ಕನಿಷ್ಠ ಮಟ್ಟದ ಪ್ರಾಥಮಿಕ ತಿಳುವಳಿಕೆ ಯಾದರೂ ಖಂಡಿತಾ ಇರಬೇಕಾಗುತ್ತದೆ.

ಅಂದಾಗ ಮಾತ್ರವೇ ವಚನಗಳು ಅದರಲ್ಲೂ ಬೆಡಗಿನ ವಚನಗಳು ಒಳಗೆ ಬಿಟ್ಟು ಕೊಳ್ಳುತ್ತವೆ. ಇಲ್ಲದಿದ್ದರೆ ಒಳ ಪ್ರವೇಶವಿ ಲ್ಲದ ಗುಡಿಯನ್ನು ಹೊರಗಿಂದ ಹೊರಗೇ ಸುತ್ತು ಹಾಕಿ ಹೋದಂತಾಗುತ್ತದೆ. ಹೀಗೆ ಹೇಳುವ ಈ ಮಾತುಗಳ ಹೊಣೆಯನ್ನು ಅರಿತೂ ನಾನಿಲ್ಲಿ ಸೂಜಿ ಕಾಯಕದ ರಾಮಿತಂದೆಗಳ ಈ ಪ್ರಸ್ತುತ ಬೆಡಗಿನ ವಚನದ ಅನುಸಂಧಾನ ಮಾಡುವಂಥ ವಿನಯಪೂರ್ಣ ಧಾರ್ಷ್ಠ್ಯವನ್ನು ತೋರಿ ಸಿದ್ದು ಸಹೃದಯಿಗಳ ಔದಾರ್ಯ ಬೇಡಿ.

ಪ್ರಸ್ತುತ ಬೆಡಗಿನ ವಚನ ಚಿಕ್ಕದಿದ್ದರೂ ಅನುಸಂಧಾನದ ಅರ್ಥಾನುಕೂಲಕ್ಕಾಗಿ ಎರಡು ಭಾಗ ಮಾಡಲಾಗಿದೆ. ಮೊದಲ ಭಾಗವನ್ನು ಈಗ ಪರಿಶೀಲಿಸೋಣ.

ತಲೆಗೆ ಮೂರು ಚಿಪ್ಪು,
ಅಂಗಕ್ಕೆ ಆರು ಚಿಪ್ಪು,
ಮಿಕ್ಕಾದ ಸರ್ವಾಂಗಕ್ಕೆಲ್ಲಕ್ಕೂ
ಒಂದೆ ಚಿಪ್ಪಿನ ಕುಪ್ಪಸ.

ಇಲ್ಲಿ ರಾಮಿತಂದೆ ತಮ್ಮ ವೃತ್ತಿ ಜೀವನದ ಪರಿಭಾವದಲ್ಲಿ ವಚನದ ಪರಿಭಾಷೆಯ ನ್ನು ಹೊಲಿಗೆ ಮಾಡಿದ್ದಾರೆ. ಲೌಕಿಕದಲ್ಲಿ ತೊಟ್ಟುಕೊಳ್ಳುವ ಕುಪ್ಪಸದ ಸ್ವರೂಪವು ಇಲ್ಲಿ ವಚನ ಪರಿಭಾಷೆಯಲ್ಲಿ ಮೈದಾಳಿ ದರೂ ಒಳಗೆ ಅನುಭಾವಿಕ ನೆಲೆಯಲ್ಲಿನ ಅರ್ಥವನ್ನು ಇಂಬಿಟ್ಟುಕೊಂಡಿದೆ. ಅದು ಹೇಗೆಂಬುದನ್ನು ಬಿಡಿಸಿನೋಡೋಣ.

ಇಲ್ಲಿ ಒಂದೇ ಚಿಪ್ಪಿನ ಕುಪ್ಪಸ ಅಂದರೆ ಸರ್ವಾಂಗದ ದೇಹ. ತಲೆಗೆ ಮೂರು ಚಿಪ್ಪು , ಅಂಗಕ್ಕೆ ಆರು ಚಿಪ್ಪು, ಅಂದರೆ ಶರಣರ ತಾತ್ವಿಕದಲ್ಲಿ ದೇಹವನ್ನು ಒಂಭ ತ್ತು(ನವ)ಚಕ್ರಗಳಲ್ಲಿ ಗುರುತಿಸುವರು. ತಲೆಯಲ್ಲಿ ಮೂರು ಚಕ್ರ, ‘ಅಂಗ'(ದಿಡ) ದಲ್ಲಿ ಆರು ಚಕ್ರ. ಇಲ್ಲಿ ತಲೆಯಲ್ಲಿ; ಪಶ್ಚಿಮಚಕ್ರ, ಶಿಖಾಚಕ್ರ, ಬ್ರಹ್ಮಚಕ್ರ ಎಂಬ ಮೂರು ಚಕ್ರಗಳಿವೆ. ಅವನ್ನೇ ಇಲ್ಲಿ ಮೂರು ಚಿಪ್ಪು ಎನ್ನಲಾಗಿದೆ. ಇನ್ನು ‘ಅಂಗ'(ದಿಡ)ದಲ್ಲಿ;ಮೂಲಾಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞಾ ಎಂಬ ಆರು ಚಕ್ರಗಳಿವೆ.
ಅವುಗಳನ್ನೇ ಆರು ಚಿಪ್ಪು ಎನ್ನಲಾಗಿದೆ. ಸರ್ವಾಂಗ ದೇಹಕ್ಕೆ ಒಂದೇ ಚಿಪ್ಪು ಎನ್ನ ಲಾಗಿದೆ. ಮುಂದಿನ ಭಾಗ ನೋಡೋಣ.

ಇದರಂಗದ ಆಚರಣೆಯ ಬಲ್ಲವ, ಪ್ರಸನ್ನ ಕಪಿಲಸಿದ್ಧ ಮಲ್ಲಿಕಾರ್ಜುನ ಲಿಂಗವ ಬಲ್ಲವ.

ಈ ರೀತಿಯಲ್ಲಿ ಇರುವ ದೇಹದ ಅಂಗ ತತ್ವವನ್ನು ತಿಳಿದು,ಅದರ ಆಚರಣೆಯ ಮಾಡ ಬಲ್ಲವ ಪ್ರಸನ್ನ ಕಪಿಲಸಿದ್ಧ ಮಲ್ಲಿ ಕಾರ್ಜುನಲಿಂಗವ ಬಲ್ಲವ ಎಂದು ಶರಣ
ಸೂಜಿಕಾಯಕದ ರಾಮಿತಂದೆ ಪ್ರಸ್ತುತ ಈ ವಚನದ ಮೂಲಕ ‘ಕಾಯ’ ತತ್ವದ ಮಹತ್ವ ವನ್ನು ಎತ್ತಿ ಹಿಡಿದಿದ್ದಾರೆ.

ಸಂಕ್ಷಿಪ್ತ ಪರಿಚಯ:-

ಸೂಜಿಕಾಯಕದ ರಾಮಿತಂದೆ, ೧೨ನೇ ಶತಮಾನದ ಶರಣರು.’ಕಾಯಕ’ ದಿಂದ ಬಟ್ಟೆ ಹೊಲಿಯುವ ಶಿಂಪಿಗ (ಟೇಲರ).
ಇವರ ಜನ್ಮ ಸ್ಥಳದ ಬಗ್ಗೆ ಮಾಹಿತಿ ಇಲ್ಲ.
ಅನುಭವ ಮಂಟಪದ ೭೭೦ ಅಮರ ಗಣಂಗಳಲ್ಲಿ ಇವರೂ ಕೂಡ ಒಬ್ಬ ವಚ ನಕಾರ ಶರಣರು. ‘ಪ್ರಸನ್ನ ಸಿದ್ಧ ಮಲ್ಲಿ ಕಾರ್ಜುನ ಲಿಂಗ ‘ ವಚನಾಂಕಿತದಲ್ಲಿ ರಚಿಸಿದ ಇವರ ಹತ್ತು ವಚನ ಮಾತ್ರ ಲಭ್ಯವಾಗಿವೆ.

ಅವುಗಳಲ್ಲಿ; ರಾಮಿತಂದೆಯವರು ತಮ್ಮ ಬಟ್ಟೆ ಹೊಲಿಯುವ ಕಾಯಕಕ್ಕೆ ಬೇಕಾದ ಸೂಜಿ, ದಾರಗಳನ್ನು ಬಳಸಿ ಕೊಂಡು ತಮ್ಮ ಕಾಯಕದ ಅನುಭವವನ್ನು , ಆಧ್ಯಾತ್ಮಿಕದ ಪರಿಭಾಷೆಗೆ ಅತ್ಯಂತ ಜಾಣ್ಮೆಯಿಂದ ಹೊಂದಿಸಿಕೊಂಡು ಬಹು ಅರ್ಥಪೂರ್ಣವಾಗಿ ಬೆಡಗಿನ ವಚನಗ ಳನ್ನು ರಚಿಸಿದ್ದಾರೆ.ಇವುಗಳನ್ನು ಓದಿದರೆ ಇವರ ವಚನ ರಚನಾ ಕೌಶಲ್ಯವು ಎಂಥ ಮಹತ್ವದ್ದೆಂದು ತಿಳಿದುಬರುತ್ತದೆ. ಅದು ತನ್ನದೇ ಆದ ಸೋಪಜ್ಞತೆಯ ನುಡಿಗಳ ಬೆಡಗಿನಿಂದ ಸಹೃದಯನ ಗಮನವನ್ನು ಸೆಳೆಯುತ್ತದೆ.

ಇವರು ತಮ್ಮ ಒಂದು ವಚನದಲ್ಲಿ ‘ಹತ್ತು ಕಡೆಗೆ ಹರಿದ ಬಟ್ಟೆಯ ಹೊಲಿಯುವದು ಒಂದೇ ಸೂಜಿ, ಸರಗೆಂಟು ಮಡಿಸುವು ದೊಂದೇ ಕೈ’ ಎನ್ನುವಲ್ಲಿನ ಒಟ್ಟಾರೆ ಈ ರೂಪಕವು; ಓದಿನಲ್ಲಿ ಬಿಚ್ಚಿ ಕೊಳ್ಳುತ್ತಲೇ ಅದು ಮುಂದುವರಿದು ಆಧ್ಯಾತ್ಮಿಕ ಪರಿಭಾ ಷೆಯಲ್ಲಿ ತನ್ನಲ್ಲಿನ ಅಂತರಾರ್ಥದ ಅಪೂ ರ್ವವಾದ ಅನುಭಾವದ ಅನು ಭೂತಿಯ ನ್ನು ಪರಿಮಳಿಸಿ ಹೃನ್ಮನಗಳನ್ನು ಸೂರೆಗೊ ಳ್ಳುತ್ತದೆ.

ಶರಣ : ಅಂದಾನಯ್ಯ ಅಳಗುಂಡಿ
ಬೆಳಗಾವಿ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

Leave a Reply

Your email address will not be published. Required fields are marked *

error: Content is protected !!