Breaking News
Home / featured / ರವಿ ಚನ್ನಣ್ಣವರ್ ವಿರುದ್ಧ ಡಿಸಿಎಂ ಲಕ್ಷ್ಮಣ ಸವದಿ ಸಿಎಂ ಗೆ ದೂರು.!

ರವಿ ಚನ್ನಣ್ಣವರ್ ವಿರುದ್ಧ ಡಿಸಿಎಂ ಲಕ್ಷ್ಮಣ ಸವದಿ ಸಿಎಂ ಗೆ ದೂರು.!

ಬೆಂಗಳೂರು: ಕೊರೊನಾ ಸೋಂಕು ಹಿನ್ನಲೆಯಲ್ಲಿ ದೇಶದಲ್ಲಿ ಲಾಕ್‌ಡೌನ್ ಜಾರಿಯಲ್ಲಿದೆ. ಈ ನಡುವೆ ಕಳೆದ ವಾರ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಚನ್ನಣ್ಣನವರ್ ಅವರು ಮಾರು ವೇಷದಲ್ಲಿ, ಚೆಕ್‌ಪೋಸ್ಟ್‌ನಲ್ಲಿ ಲಂಚ ಸ್ವೀಕರಿಸುತ್ತಿದ್ದ ಆರ್‌ಟಿಓ ಅಧಿಕಾರಿಗಳಿಬ್ಬರನ್ನು ಹಿಡಿದು ಜೈಲಿಗೆ ಅಟ್ಟಿದ್ದರು. ಆದರೆ, ರವಿ ಚನ್ನಣ್ಣವರ್‌ ರವರ ಈ ನಡೆಗೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಗರಂ ಆಗಿದ್ದಾರೆ. ಅವರು ಚನ್ನಣ್ಣನವರ್ ಬಗ್ಗೆ ಸಿಎಂ ಯಡಿಯೂರಪ್ಪ ಬಳಿ ದೂರು ನೀಡಿದ್ದಾರೆ ಎನ್ನಲಾಗಿದೆ.ಪೊಲೀಸ್ ಇಲಾಖೆ ಅಧಿಕಾರಿಯೊಬ್ಬರು ತಮಗೆ ಸಂಬಂಧ ಇರದ ಕೆಲಸ ಮಾಡಿದ್ದಲ್ಲದೇ, ಕಾರ್ಯಾಚರಣೆ ಬಗ್ಗೆ ಸುಳ್ಳು ಹೇಳಿ ಮಾಧ್ಯಮಗಳಲ್ಲಿ ಪ್ರಚಾರ ಪಡೆದುಕೊಂಡಿದ್ದಾರೆ ಎಂದು ಸವದಿ ಆರೋಪಿಸಿದ್ದಾರೆ ಎನ್ನಲಾಗಿದೆ.

ಲಾಕ್‌ಡೌನ್ ಜಾರಿಯಾದ ನಂತರ ಅಂತರ್‌ರಾಜ್ಯ ಗಡಿಗಳನ್ನು ಮುಚ್ಚಲಾಯಿತು. ಆಗ ಲಾಕ್‌ಡೌನ್ ಹೇಗೆ ಪರಿಪಾಲನೆ ಆಗುತ್ತಿದೆ ಎಂಬುದನ್ನು ಪರಿಶೀಲಿಸಲು ಎಸ್ಪಿ ರವಿ ಚನ್ನಣ್ಣವರ್ ಮಾರು ವೇಷದಲ್ಲಿ ಬೆಂಗಳೂರು ಗ್ರಾಮಾಂತರ ವಲಯದಲ್ಲಿ ಕಾರ್ಯಾಚರಣೆ ನಡೆಸಿದ್ದರು. ಚೆಕ್‌ಪೋಸ್ಟ್‌ನಲ್ಲಿ ಇಬ್ಬರು ಆರ್‌ಟಿಓ ಅಧಿಕಾರಿಗಳು ವಾಹನಗಳ ಮಾಲಿಕರಿಂದ ಹಣ ಪಡೆದು ವಾಹನ ಬಿಡುತ್ತಿದ್ದಾರೆ ಎಂದು ಆರೋಪಿಸಿ ಆ ಅಧಿಕಾರಿಗಳ ಮಲೆ ಪ್ರಕರಣ ದಾಖಲಿಸಿದ್ದರು ರವಿ ಚನ್ನಣ್ಣವರ್. ಇದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.

ಈ ಘಟನೆಯ ನಂತರ ಆರ್‌ಟಿಓ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳು ರವಿ ಅವರ ಮೇಲೆ ಗರಂ ಆಗಿದ್ದರು ಎನ್ನಲಾಗಿದೆ. ಪ್ರಕರಣದ ಬಗ್ಗೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರ ಬಳಿ ದೂರು ನೀಡಿದ್ದು, ಘಟನೆಯ ಬಗ್ಗೆ ಬೇರೆಯದೇ ರೀತಿ ಹೇಳಿದ್ದಾರೆ ಎನ್ನಲಾಗಿದೆ. ರವಿ ಚೆನ್ನಣ್ಣವರ್ ದಾಬಸಪೇಟೆ ಬಳಿ ಮಾರುವೇಷದ ಕಾರ್ಯಾಚರಣೆ ನಡೆಸಿದ್ದರು. ಆದರೆ, ಅತ್ತಿಬೆಲೆ ಬಳಿ ಇಬ್ಬರು ಆರ್‌ಟಿಓ ಅಧಿಕಾರಿಗಳು ಹಾಗೂ ಒಬ್ಬ ಹೋಂ ಗಾರ್ಡ್‌ ವಾಹನಗಳ ಮಾಲೀಕರಿಂದ ಲಂಚ ಸ್ವೀಕರಿಸುತ್ತಿದ್ದರು ಎಂಬುವುದನ್ನು ತಿಳಿದು ಅವರನ್ನು ಬಂಧಿಸಲು ಚೆನ್ನಣ್ಣವರ್ ಅಲ್ಲಿನ ಡಿವೈಎಸ್‌ಪಿಗೆ ಸೂಚಿಸಿದ್ದರು. ಆದರೆ, ಚನ್ನಣ್ಣವರ್ ಸುಳ್ಳು ಹೇಳಿ ಮಾಧ್ಯಮಗಳಲ್ಲಿ ಪ್ರಚಾರ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ರವಿ ಚನ್ನಣ್ಣವರ್ ವ್ಯಾಪ್ತಿ ಮೀರಿ ನಡೆದುಕೊಂಡಿದ್ದಾರೆ ಎಂದು ಸಾರಿಗೆ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಡಿಸಿಎಂ ಲಕ್ಷ್ಮಣ ಸವದಿ ಬಳಿ ದೂರು ನೀಡಿದ್ದಾರೆ. ಬಂಧಿಸುವುದಕ್ಕೂ ಮೊದಲು ಸಂಬಂಧಿಸಿದ ಇಲಾಖೆಯ ಮುಖ್ಯಸ್ಥರಿಗೆ ಅಥವಾ ಸಚಿವರ ಗಮನಕ್ಕೆ ತರಬೇಕಿತ್ತು ಎಂದು ಸವದಿ ಬಳಿ ಅವಲೊತ್ತಿಕೊಂಡಿದ್ದಾರೆ ಎನ್ನಲಾಗಿದೆ.ಸಾರಿಗೆ ಇಲಾಖೆಯ ಸಿಬ್ಬಂದಿ ಅಧಿಕಾರಿಗಳ ದೂರಿಗೆ ಸ್ಪಂದಿಸಿರುವ ಡಿಸಿಎಂ ಲಕ್ಷ್ಮಣ ಸವದಿ, ಸಿಎಂ ಯಡಿಯೂರಪ್ಪ ಬಳಿ ಚನ್ನಣ್ಣವರ್ ವಿರುದ್ಧ ದೂರು ನೀಡಿದ್ದಾರೆ. ನಡೆದಿರುವ ಘಟನೆ ಬಗ್ಗೆ ವಿವರಿಸಿದ್ದಾರೆ. ಅಲ್ಲದೇ ಚನ್ನಣ್ಣವರ್ ಅವರನ್ನು ವರ್ಗಾಯಿಸಬೇಕು ಎಂದು ಸಿಎಂ ಮುಂದೆ ಬೇಡಿಕೆ ಇಟ್ಟಿದ್ದಾರೆ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!