Breaking News
Home / featured / ಸತ್ತವರ ಹೆಸರಲ್ಲಿ ಬಿಲ್ ಪಾಸ್.!

ಸತ್ತವರ ಹೆಸರಲ್ಲಿ ಬಿಲ್ ಪಾಸ್.!

ದೇವರಹಿಪ್ಪರಗಿ/ಸಿಂದಗಿ: ಭಾರತವು ಹಳ್ಳಿಗಳಿಂದ ಕೂಡಿದ ರಾಷ್ಟ್ರವಾಗಿದ್ದು, ಶೇ 70 ರಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲಿ ನೆಲೆಸಿದ್ದಾರೆ. ಗಾಂದೀಜಿಯವರ ಹಳ್ಳಿಗಳ ಅಭಿವೃದ್ಧಿಯೇ ರಾಷ್ಟ್ರದ ಅಭಿವೃದ್ಧಿ ಎಂಬ ವಾಣಿಯಂತೆ, ಗ್ರಾಮೀಣ ಪ್ರದೇಶದ ಅಭಿವೃದ್ಧಿಯ ನಿಟ್ಟಿನಲ್ಲಿ 1992 ರಲ್ಲಿ ಸಂವಿಧಾನಕ್ಕೆ 73ನೇ ತಿದ್ದುಪಡಿ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ..ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಶ್ರಮೀಸಬೇಕಾದ ಅಧಿಕಾರಿಗಳು ಹೊಲ ಎದ್ದು ಬೇಲಿ ಮೇಯ್ದಂತೆ ಎಂಬ ನಾಣ್ಣುಡಿಯಂತೆ ಭ್ರಷ್ಟಾಚಾರದಲ್ಲಿ ಭಾಗವಹಿಸುತ್ತಿದ್ದಾರೆ. ಕೊಂಡಗೊಳಿ ಗ್ರಾಮ ಪಂಚಾಯತಿಯಲ್ಲಿ ವಿವಿಧ ಯೋಜನೆ ಮತ್ತು ಕಾಮಗಾರಿಗಳ ಹೆಸರಲ್ಲಿ ಸತ್ತವರ, ನೌಕರಸ್ತರ ಮತ್ತು ವಿದ್ಯಾರ್ಥಿಗಳ ಹೆಸರಲ್ಲಿ ಬಿಲ್ ಪಾಸ್ ಮಾಡುವ ಮೂಲಕ ಸರ್ಕಾರದ ಖಜಾನೆಯನ್ನು ಖಾಲಿ ಮಾಡುವಲ್ಲಿ  ಕೊಂಡಗೊಳಿ ಗ್ರಾಮ ಪಂಚಾಯತ್ ಅಧಿಕಾರಿಗಳು ಕಾರ್ಯನಿರತರಾಗಿದ್ದಾರೆ..

ವಿಪರ್ಯಾಸ ಎಂದರೆ 18/09/2018ರಲ್ಲಿ ಮರಣ ಹೊಂದಿದ ಈ ಮಹಿಳೆ ದಿನಾಂಕ 07/03/2019 ರಿಂದ 20/03/2019 ವರೆಗೆ ಮತ್ತೆ ದಿನಾಂಕ 18/04/2019 ರಿಂದ 01/05/2019ರ ವರೆಗೆ ಪಂಚಾಯತ್ ವಿವಿಧ ಕಾಮಗಾರಿಗಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿರುತ್ತಾರೆ ಎಂದು ಅವರ ಖಾತೆಗೆ ಹಣ ಜಮೆ ಮಾಡಲಾಗಿದೆ.

ಕುಮಾರಿ ರಾಜೇಶ್ವರಿ ಮಲ್ಲಪ್ಪ ಉಪ್ಪಾರ ಎಂಬ ವಿದ್ಯಾರ್ಥಿನಿಯು, ವಿಜಯಪುರದ ಹಾಸ್ಟೆಲ್ ದಲ್ಲಿ B com 4ನೇ ಸೇಮಿಸ್ಟರದಲ್ಲಿ ಓದುತಿದ್ದು, ಕೊಂಡಗೂಳಿ ಪಂಚಾಯತ್ ಉದ್ಯೋಗ ಖಾತ್ರಿ ಯೋಜನೆಯಡಿ ಈ ವಿದ್ಯಾರ್ಥಿನಿ ಕೆಲಸ ಮಾಡಿದ್ದಾಳೆ ಎಂಬ ನಕಲಿ ದಾಖಲೆ ಸೃಷ್ಟಿಸಿ ಹಣ ಕೊಳ್ಳೆ ಹೊಡಿಯಲಾಗಿದೆ.

ಅದೇ ರೀತಿ ಮಲ್ಲಿನಾಥ ಅಶೋಕ ಮಳ್ಳಿ ಎಂಬ BE ವಿದ್ಯಾರ್ಥಿಯ ಹೆಸರಲ್ಲಿಯೂ ಕೂಡಾ ಹಣ ದೋಚಲಾಗಿದೆ. ಇದಷ್ಟೆ ಅಲ್ಲದೇ ಇನ್ನೂ ಹಲವಾರು ಯೋಜನೆಗಳು ಮತ್ತು ಕಾಮಗಾರಿಗಳಲ್ಲಿ ಹಗರಣಗಳು ನಡೆದಿವೆ ಎಂದು ಮಾಹಿತಿ ಹಕ್ಕು ಹೋರಾಟಗಾರ ಶಿವಾನಂದ ಯಡಹಳ್ಳಿ ಆರೋಪಿಸಿದ್ದಾರೆ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!