ಅಂಬಡಗಟ್ಟಿ (ಚನ್ನಮ್ಮನ ಕಿತ್ತೂರು) : ಮಹಾಮಾರಿ ಕರೋನ ವೈರಸ್ ಜಗತ್ತಿನಾದ್ಯಂತ ಲಕ್ಷಾಂತರ ಜನರ ಜೀವ ತೆಗೆದುಕೊಂಡಿದೆ, ಸುಮಾರು 16 ಲಕ್ಷಕ್ಕೂ ಅಧಿಕ ಜನರಿಗೆ ಅಂಟಿಕೊಂಡಿರುವ ಕೊರೊನಾ ವೈರಸ್ ಜಗತ್ತನ್ನೇ ಲಾಕ್ಡೌನ್ ಮಾಡಿದೆ ಇದರಿಂದ ಕೋಟ್ಯಾಂತರ ಜನರಿಗೆ ಅನ್ನ, ನೀರು, ಆಹಾರ ವಸತಿ ದೊರೆಯದೆ ಹಸುವಿನಿಂದ ಬಳಲುತ್ತಿದ್ದಾರೆ. ದಿನಗೂಲಿ ಕಾರ್ಮಿಕರು ಒಂದು ಹೊತ್ತಿನ ಆಹಾರಕ್ಕಾಗಿ ಪರದಾಡುವ ಪರಿಸ್ಥಿತಿ ಎದುರಾಗಿದ್ದು, ಅಂತಹ ಜನರಿಗೆ ಕೈಲಾದ ಸಹಾಯಹಸ್ತ ಚಾಚುವ ಉದ್ದೇಶದಿಂದ ಕಿತ್ತೂರು ನಾಡಿನಾದ್ಯಂತ ಸುಮಾರು 600 ಆಹಾರ ಧಾನ್ಯಗಳ ಕಿಟ್ (ಅಕ್ಕಿ, ಬೆಳೆ, ಅವಲಕ್ಕಿ, ಸೊಪು, ಎಣ್ಣಿ ತರಕಾರಿ, ಇತರೆ 12 ವಿವಿಧ ಜೀವನಾಂಶಕ ವಸ್ತುಗಳ) ವಿತರಣೆ ಮಾಡುತ್ತಿದ್ದೇನೆ ಎಂದು ಸಾಮಾಜಿಕ ಕಾರ್ಯಕರ್ತ ಶ್ರೀ ಸತೀಶಣ್ಣಾ ಜಾರಕಿಹೊಳಿ ಅಭಿಮಾನಿ ಬಳಗ ಅಧ್ಯಕ್ಷ ಹಬೀಬ ಶಿಲ್ಲೇದಾರ ತಿಳಿಸಿದ್ದಾರೆ.
ಕಿತ್ತೂರು ವಿಧಾನಸಭಾ ಮತಕ್ಷೇತ್ರದ ಪೋಲಿಸ್ ಇಲಾಖೆ, ಆರೋಗ್ಯ ಇಲಾಖೆ, ಹಾಲು, ತರಕಾರಿ, ಹಣ್ಣು ಇತರೆ ದಿನನಿತ್ಯ ಸೇವೆಯಲ್ಲಿರುವ ಜನರಿಗೆ ಸುಮಾರು 10,000 ಮಾಸ್ಕ ಹಾಗೂ ಸ್ಯಾನಿಟೈಸರ್, ಉಚಿತ ವಿತರಣೆ ಮಾಡಿದ್ದಾರೆ.
ಸತೀಶ ಜಾರಕಿಹೊಳಿ ಅಭಿಮಾನಿ ಬಳಗದಿಂದ ಕಿತ್ತೂರು ಕಲ್ಮಠದ ಪೂಜ್ಯ ಮಡಿವಾಳ ರಾಜಯೋಗೇಂದ್ರ ಸ್ವಾಮಿಗಳ ಸಾನಿಧ್ಯದಲ್ಲಿ. ಸಮಾಜ ಸೇವಕ ಬಸವಾಭಿಮಾನಿ ಹಬೀಬ ಶಿಲೇದಾರ ಇವರ ನೇತೃತ್ವದಲ್ಲಿ ಕಿತ್ತೂರು ಕ್ಷೇತ್ರದಲ್ಲಿ ದಿನಗೂಲಿ ಕೂಲಿ ಕಾರ್ಮಿಕರ ಸುಮಾರು 600 ಬಡ ಕುಟುಂಬಗಳಿಗೆ ದಿನ ನಿತ್ಯದ ಆಹಾರ ಕಿಟ್ ವಿತರಿಸಿದರು.
ದೇವರಶೀಗಿಹಳ್ಳಿ, ಮಾಗ೯ನಕೊಪ್ಪ, ದಾಸ್ತಿಕೊಪ್ಪ, ಹೊಸಕಾದರವಳ್ಳಿ, ತುರಮರಿ, ಕಲಬಾಂವಿ, ಹಿರೇನಂದಿಹಳ್ಳಿ, ಚಿಕ್ಕನಂದಿಹಳ್ಳಿ, ಎತ್ತಿನಕೇರಿ, ಮಲ್ಲಾಪೂರ, ಅವರಾದಿ, ನಿಚ್ಚಣಕಿ, ಡೊಂಬರಕೊಪ್ಪ ಗ್ರಾಮಗಳಲ್ಲಿ ಗುರು ಹಿರಿಯರ ಹಾಗೂ ಆತ್ಮೀಯ ಯುವಕರ ಮುಂದಾಳತ್ವದಲ್ಲಿ
ಜೀವನಾವಶ್ಯಕ ವಸ್ತುಗಳ ವಿತರಣೆ ಮಾಡಲಾಯಿತು.
ವಿಜಯಕುಮಾರ ಶಿಂಧೆ , ಮಡಿವಾಳಯ್ಯ ಗುರುವೈನವರಮಠ , ವೀರಬದ್ರಯ್ಯ ಹಿರೇಮಠ , ವಿಜಯಕುಮಾರ ಪಟೇದ, ಅಬ್ದುಲ ಮುಲ್ಲಾ, ಸಂತೋಷಕುಮಾರ ಲಕ್ಕುಂಡಿ , ಸಾವಂತಪ್ಪ ಸಂಗ್ರೇಸಕೊಪ್ಪ , ರವಿ ಎಮ್ಮಿ , ಉಪಸ್ಥಿತರಿದ್ದರು.
ನೆರೆ ಪ್ರವಾಹ ಸಂದರ್ಭದಲ್ಲಿ ಕಿತ್ತೂರು ವಿಧಾನಸಭಾ ಮತಕ್ಷೇತ್ರದ ಗಂಜಿ ಕೇಂದ್ರಗಳಿಗೆ ಆಹಾರ ಸಾಮಗ್ರಿ, ಬಟ್ಟೆ, ಹಾಸಿಗೆ ಹೊದಿಕೆಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದರು. ಇವರಿಂದ ಹತ್ತು ಹಲವಾರು ಸಮಾಜಿಕ ಕಳಕಳಿಯ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ.