Breaking News
Home / featured / ಇಷ್ಟಲಿಂಗ ಪೂಜೆ ಆತ್ಮಶುದ್ಧಿಗೆ ಹೊರತು ವೈರಸ್ ನಾಶಕ್ಕಲ್ಲ

ಇಷ್ಟಲಿಂಗ ಪೂಜೆ ಆತ್ಮಶುದ್ಧಿಗೆ ಹೊರತು ವೈರಸ್ ನಾಶಕ್ಕಲ್ಲ

ಲಿಂಗಸೂರು: ಅಂದು ಬಹುಸಂಖ್ಯಾತ ಶೂದ್ರರಿಗೆ ದೇವಸ್ಥಾನದ ಒಳಗೆ ಪ್ರವೇಶವಿಲ್ಲದಿದ್ದಾಗ ದೇಗುಲ ಸಂಸ್ಕೃತಿಯನ್ನೇ ಬಹಿಷ್ಕರಿಸಿ ಜನರ ಅಂಗೈಯಲ್ಲೇ ದೇವರನ್ನಿತ್ತವರು ಬಸವಣ್ಣ. ದೇವರು, ಭಕ್ತನ ನಡುವೆ ಪೂಜಾರಿ ಎಂಬ ದಲ್ಲಾಳಿಯನ್ನು ಹೊಡೆದು ಹಾಕುವುದರ ಜೊತೆಗೆ ‌ತಮ್ಮ ದೇವರ ಪೂಜೆಯನ್ನು ತಾವೇ ಮಾಡಿಕೊಳ್ಳಲಿ ಎಂಬ ಉದ್ದೇಶವಿತ್ತು.‌ ಇಷ್ಟಲಿಂಗವನ್ನು ಯಾರಾದರೂ ಧರಿಸಿ ಲಿಂಗವಂತರಾಗಬಹುದು.

ಅದಕ್ಕೆ ಹೆಣ್ಣು-ಗಂಡು, ಬಡವ-ಶ್ರೀಮಂತ, ಜಾತಿ,ಧರ್ಮಗಳ ಭೇದವಿಲ್ಲ. ಲಿಂಗ, ವರ್ಗ, ಜಾತಿ ಹೊಡೆದು ಹಾಕುವ ಸಾಧನ ಇಷ್ಟಲಿಂಗ. ಅದನ್ನು ಪ್ರತಿದಿ‌ನ ಪೂಜಿಸಿ ಆತ್ಮಶುದ್ಧಿ ಮಾಡಿ ಕೊಳ್ಳಬಹುದೇ ವಿನಹಃ ಇದರಿಂದ ಕೊರೊನಾದಂತಹ ಮಹಾಮಾರಿಯನ್ನು ನಾಶ ಮಾಡಬಹುದು ಎಂಬುದು ಮೌಢ್ಯ ಎನಿಸುತ್ತೆ. ಇಂತಹ ಹೇಳಿಕೆ ಯಾರೇ ನೀಡಿದರೂ ಅದು ಬಸವಪ್ರಣೀತರು ಒಪ್ಪುವ ಮಾತಲ್ಲ.

ಶರಣ ಅಮರ ಪಾಟೀಲ

ಲಿಂಗಸೂರು

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!