Breaking News
Home / featured / ಅಂಬೇಡ್ಕರರು ಮತ್ತು ಬೆಳಗಾವಿಯ ಶಿಷ್ಯವರ್ಗ

ಅಂಬೇಡ್ಕರರು ಮತ್ತು ಬೆಳಗಾವಿಯ ಶಿಷ್ಯವರ್ಗ

ಚನ್ನಮ್ಮನ ಕಿತ್ತೂರು: ಭಾರತದ ಸಂವಿಧಾನದ ಶಿಲ್ಪಿ ಜನ್ಮದಿನದ ಆಚರಣೆಯ ಸಂದರ್ಭದಲ್ಲಿ ಅಂಬೇಡ್ಕರರು ಮತ್ತು ಬೆಳಗಾವಿ ಜಿಲ್ಲೆಯ ನಂಟನ್ನು ಸಿಂಹಾವಲೋಕನ ಮಾಡವ ಹೆಬ್ಬಯಕೆ.

ಅಂಬೇಡ್ಕರ್ ಅವರ ಅತ್ಯಂತ ನಂಬಿಕಸ್ಥರಲ್ಲಿ ಕನ್ನಡಿಗರ ಪಾಲು ದೂಡ್ಡದು ಇತ್ತು.ಅವರಲ್ಲಿ ಪ್ರಮುಖರೆಂದರೆ ಶ್ರೀ ದೇವರಾಯ ಇಂಗಳೆ,ಡಿ.ಎ.ಕಟ್ಟಿ, ಬಿ.ಎಚ್.ವರಾಳೆ, ಪಿ.ಪಿ.ಹೆಗ್ರೆ ಮೊದಲಾದವರು ಪ್ರಮುಖರು.

“ದೇವರಾಯ ಇಂಗಳೆ “ಮತ್ತು “ಬಿ.ಎಚ್.ವರಾಳೆ “ಇವರು ಅಂಬೇಡ್ಕರ್ ಅವರ ಸಮಕಾಲಿನರು ಅವರ ಚಳುವಳಿ ಗಳಲ್ಲಿ ನೇರವಾಗಿ ಬಾಗವಹಿಸಿ ಅವುಗಳ ನೇತೃತ್ವ ವಹಿಸಿದವರು. ಇನ್ನು ಅಂಬೇಡ್ಕರ್ ಅವರ ಕಟ್ಟಾ ಅಭಿಮಾನಿ ಗಳೆಂದರೆ “ಶ್ರೀ ಡಿ.ಎ.ಕಟ್ಟಿ ಮತ್ತು ಪಿ.ಪಿ.ಹೆಗ್ರೆ”.

ದೇವರಾಯ ಇಂಗಳೆ ಅವರು ಜ್ಯೂತಿ ಬಾ ಪುಲೆ ಅವರ ಗ್ರಂಥಗಳಾದ “ಗುಲಾಮಗಿರಿ ಮತ್ತು ಬ್ರಹ್ಮನಾಂಚೆ ಕಸಬ” ಗ್ರಂಥ ಗಳಿಂದ ಪ್ರೇರಣೆ ಪಡೆದಿದ್ದರು. ‌

ಇವರು ಜಾತಿವಾಚಕ ಅಡ್ಡವಹೆಸರಿನ ನಿರ್ಮೂಲನೆ, ದೇವದಾಸಿ ಪದ್ದತಿ ನಿರ್ಮೂಲನೆ, ಸತ್ತದನಗಳ ಮಾಂಸ ಭಕ್ಷಣೆಯ ನೀರ್ಮೂಲನೆ,ಅಸ್ಪೃಶ್ಯತೆ ಆಚರಣೆ ವಿರೋಧ, ಇ ನಾಲ್ಕು ಅಂಶಗಳಿಗೆ ಒತ್ತು ನೀಡಿದರು..

“ಬಳವಂತರಾವ್ ವರಾಳೆ “ಬೆಳಗಾವಿಯಿಂದ ಬ್ಯಾರಿಸ್ಟರ ಮುಗಿಸಿದ ಮದಲ ದಲಿತ ವ್ಯಕ್ತಿ. ವರಾಳೆಯವರು “ದೇವರಾಯ ಇಂಗಳೆ”ಯವರ ಮಾರ್ಗದರ್ಶನದಲ್ಲಿ ಮುನ್ನಡೆದರು. ಅಂಬೇಡ್ಕರ್ ಅವರ ವಿಚಾರಗಳನ್ನು ಜನಮಾನಸಕ್ಕೆ ತಲುಪಿಸಲು ತಮ್ಮ ವಯಕ್ತಿಕ ಜೀವನವನ್ನು ತ್ಯಾಗ ಮಾಡಿದರು.ಅಂಬೇಡ್ಕರ್ ಅವರ ಯಶಸ್ವಿ ಯಲ್ಲಿ ವರಾಳೆಯವರ ಪಾತ್ರ ಬಹಳ ದೂಡ್ಡದು…

1925ರ ಎಪ್ರಿಲ್ 12ರಂದು ನಿಪ್ಪಾಣಿಯಲ್ಲಿ ಮೂರನೇ ಬಹಿಷ್ಕ್ರತ ಸಮ್ಮೇಳನ ಜರುಗಿದಾಗ ಅದರ ಅಧ್ಯಕ್ಷತೆಯನ್ನು ಬಾಬಾ ಸಾಹೇಬರೆ ವಹಿಸಿಕೂಂಡಿದ್ದರು,ವರಾಳೆಯವರು ಸಭೆಯ ಸಂಘಟನೆಯ ಮಹತ್ವದ ಜವಾಬ್ದಾರಿ ನೀರ್ವಹಿಸಿದ್ದರು. 1935ರಲ್ಲಿ ಬಾಬಾ ಸಾಹೇಬ್ ರ “ಇಂಡಿಪೆಂಡೆಂಟ್‌ ಲೇಬರ್‌ ಪಾರ್ಟಿ “ಬೆಳಗಾವಿಯಿಂದ ಚುನಾವಣೆಗೆ ಸ್ಪರ್ದಿಸಿ ಗೆದ್ದಿದ್ದರು. ದೇವಸ್ಥಾನ ಪ್ರವೇಶ ನೀಷೆದ,ಹೋಟೆಲ್ ಗಳಲ್ಲಿ ನಿಷೇದ, ಕೆರೆ, ಬಾವಿಗಳ ನೀರಿನ ಬಳಕೆಗೆ ನೀಷೇದ ಕುರಿತು ಕಟುವಾಗಿ ಟೀಕಿಸಿದರು.ವರಾಳೆಯವರು “ಅಂಬೇಡ್ಕರಾಂಚಾ ಸಂಗಾತಿ” ಪುಸ್ತಕ ಬರೆಯುವುದರ ಮೂಲಕ ಮಹಾರರ ಸ್ತಿತಿಗತಿಗಳನ್ನು ತಾವು ಕಂಡಂತೆ ನಿರುಪಿಸಿದರು.

ದತ್ತಾ ಕಟ್ಟಿ ಅಂಬೇಡ್ಕರ್ ಅವರ ಅನುಯಾಯಿ, ವೃತ್ತಿ ಯಿಂದ ವಕೀಲರು,ಮತ್ತು ರಿಪಬ್ಲಿಕ್ ಪಾರ್ಟಿ ಆಪ್ ಇಂಡಿಯಾ ಸ್ಥಾಪನೆಯಲ್ಲಿ ಇವರು ಒಬ್ಬರು.1957ರಲ್ಲಿ ಚಿಕ್ಕೋಡಿ ಲೋಕಸಭಾ ಚುಣಾವಣೆಗೆ ಸ್ವತಂತ್ರವಾಗಿ ಸ್ಪರ್ಧಿಸಿ ಜಯಿಸಿ ಮೊದಲ ದಲಿತ ವ್ಯಕ್ತಿ ಎಂಬ ಕೀರ್ತಿ ಗೆ ಪಾತ್ರರಾದರು.”ಅಂಬೇಡ್ಕರ್ ಕಾಯ್ ಕೇಲೆ” ಎಂಬ ಮರಾಠಿ ಗ್ರಂಥ ಬರೆದರು..ಇವರು ಕರ್ನಾಟಕ ಮತ್ತು ಮಹಾರಾಷ್ಟ್ರ ದಲ್ಲಿ ಬಹಳ ಪ್ರಸಿದ್ದ ನಾಯಕರಾಗಿದ್ದರು.

ಪರುಶುರಾಮ ಹೆಗ್ರೆ ಅಂಬೇಡ್ಕರ್ ಅವರ ವಿಚಾರಗಳಿಂದ ಪ್ರೇರಿತರಾದ ಇವರು ಮೂಲತಃ ಸದಲಗಾ ಗ್ರಾಮದವರು.ಇವರು ರಾಮಕೃಷ್ಣ ಹೆಗಡೆಯವರ ಮಂತ್ರಿಮಂಡಲದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮಂತ್ರಿಯಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ…ಇವರೆಲ್ಲರೂ ಅಂಬೇಡ್ಕರ್ ಅವರ ಪ್ರತ್ಯೇಕ್ಷ ಮತ್ತು ಪ್ರೇರಿತ ಶಿಷ್ಯ ವರ್ಗಗಳಲ್ಲಿ ಪ್ರಮುಖರು…ಅವರ ವಿಚಾರಗಳನ್ನೆ ಹಾಸು ಹೂದ್ದು ಬಾಳಿ ಬದುಕಿದವರು…..

ಲೇಖನ: ಮಹೇಶ ನೀ ಚನ್ನಂಗಿ

ಚನ್ನಮ್ಮನ ಕಿತ್ತೂರ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

‘ಶರಣಾರ್ಥಿ’ ಗುರು ಪ್ರವೇಶ..!

  ಗಜೇಂದ್ರಗಡದ ಶರಣದಂಪತಿಗಳು ನೂತನ ಮನೆಗೆ ‘ಶರಣಾರ್ಥಿ’ ಎಂದು ವಿಶಿಷ್ಟ ರೀತಿಯಲ್ಲಿ ಮನೆ ನಾಮಕರಣ ಮಾಡಿ ಗುರುಪ್ರವೇಶ, ಅನುಭಾವ ಹಾಗೂ …

Leave a Reply

Your email address will not be published. Required fields are marked *

error: Content is protected !!